IND vs PAK match: ಕೊಹ್ಲಿಗಾಗಿ ಪಂದ್ಯ ವೀಕ್ಷಿಸಲು ಬಂದ ಅನುಷ್ಕಾ ಶರ್ಮಾ,ಸಚಿನ್ ತೆಂಡೂಲ್ಕರ್, ದಿನೇಶ್ ಕಾರ್ತಿಕ್ ಜೊತೆ ಫೋಸ್
ಅಕ್ಟೋಬರ್ 14 ರಂದು ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ಭಾರತ vs ಪಾಕಿಸ್ತಾನ ನಡುವಿನ ಪಂದ್ಯಗಳು ಯಾವಾಗಲೂ ಹೈ ವೋಲ್ಟೆಜ್ ಪಂದ್ಯಗಳಾಗಿಯೇ ಇರುವ ಕಾರಣ ಕ್ರಿಕೆಟ್ ಪ್ರೇಮಿಗಳಲ್ಲಿ ಇದು ಮಹತ್ವದ ದಿನ.
ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಜೊತೆಗೆ ಸೆಲಬ್ರಿಟಿಗಳು ಕಾಯುತ್ತಿದ್ದಾರೆ. ಎರಡು ತಂಡಗಳ ನಡುವಿನ ಪಂದ್ಯಕ್ಕೆ ರಾಷ್ಟ್ರದಾದ್ಯಂತ ಜನರು ಹೇಗೆ ಕಾಯುತ್ತಿದ್ದಾರೋ ಹಾಗೆ ನಟಿ ಅನುಷ್ಕಾ ಶರ್ಮಾ ಕೂಡ ಪಂದ್ಯವನ್ನು ವೀಕ್ಷಿಸಲು ಸಿದ್ಧರಾಗಿದ್ದಾರೆ. ಪಂದ್ಯಕ್ಕಾಗಿ ಮ್ಯಾಚ್ ನಡೆಯುತ್ತೊರುವ ಅಹಮದಾಬಾದ್‌ಗೆ ಆಗಮಿಸಿದ್ದಾರೆ.

ವಿರಾಟ್ ಕೊಹ್ಲಿಗಾಗಿ ಅಹಮದಾಬಾದ್‌ಗೆ ಬಂದ ನಟಿ ಅನುಷ್ಕಾ
ಉಭಯ ತಂಡಗಳ ನಡುವಿನ ವಿಶ್ವಕಪ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಬಹಳ ದಿನಗಳಿಂದ ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಭಾನುವಾರ ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂ ಈ ಹೈ ವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ತಮ್ಮ ಪತಿ ವಿರಾಟ್ ಕೊಹ್ಲಿಯನ್ನು ಬೆಂಬಲಿಸಲು ನಟಿ ಅನುಷ್ಕಾ ಶರ್ಮಾ ಅಹಮದಾಬಾದ್‌ಗೆ ಬಂದಿದ್ದು, ಈ ವೇಳೆ ಅವರು ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ದಿನೇಶ್ ಕಾರ್ತಿಕ್ ಅವರೊಂದಿಗೆ ಫೊಟೋಗೆ ಮುದ್ದು ಮುದ್ದಾಗಿ ಪೋಸ್ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ವಿರಾಟ್ ಕೊಹ್ಲಿ ತಂಡದೊಂದಿಗೆ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಪತ್ನಿ ಮತ್ತು ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಪತಿಯನ್ನು ಬೆಂಬಲಿಸಲು ಬಂದಿದ್ದಾರೆ. ನಟಿ ಬ್ಲಾಕ್ ಅಂಡ್ ಬ್ಲಾಕ್ ಡ್ರೆಸ್ ಮತ್ತು ಬ್ಲಾಕ್ ಸನ್ ಗ್ಲಾಸ್ ಧರಿಸಿ ಫೋಟೋಗೆ ಫೋಸ್ ನೀಡಿದ್ದಾರೆ.
ಸಚಿನ್ ತೆಂಡೂಲ್ಕರ್, ದಿನೇಶ್ ಕಾರ್ತಿಕ್ ಜೊತೆ ಪೋಸ್ ಕೊಟ್ಟ ಅನುಷ್ಕಾ ಶರ್ಮಾ
ಭಾನುವಾರದ ಬಹು ನಿರೀಕ್ಷಿತ ಪಂದ್ಯಕ್ಕೂ ಮೊದಲು, ಗುಜರಾತ್‌ನಲ್ಲಿ ಪಂದ್ಯ ನಡೆಯಲಿರುವ ಸ್ಥಳಕ್ಕೆ ಹೋಗುವ ವೇಳೆ ವಿಮಾನದಲ್ಲಿಯೇ ಅನುಷ್ಕಾ ಶರ್ಮಾ ಇಬ್ಬರು ದಿಗ್ಗಜ ಕ್ರಿಕೆಟಿಗರೊಂದಿಗೆ ಪೋಸ್ ನೀಡಿದ್ದಾರೆ. ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಈ ಮೂವರೂ ಸ್ಮೈಲ್ ನೀಡಿದ್ದಾರೆ.
ಈ ಹಿಂದೆ ಕ್ರಿಕ್‌ಬಜ್‌ಗೆ ನೀಡಿದ ಸಂದರ್ಶನದಲ್ಲಿ ದಿನೇಶ್ ಕಾರ್ತಿಕ್ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದರು. ವಿರಾಟ್ ಅವರ ಬೆಳವಣಿಗೆಗೆ ಅನುಷ್ಕಾ ಕೊಡುಗೆ ಹೆಚ್ಚಾಗಿದೆ ಎಂದು ದಿನೇಶ್ ಹೇಳಿದ್ದರು. "ನನಗೆ ವಿರಾಟ್ ಕೊಹ್ಲಿ ವೈಯಕ್ತಿಕವಾಗಿ ಗೊತ್ತು. ನಾವು ನಮ್ಮ ಕುಟುಂಬದೊಂದಿಗೆ ಹಲವಾರು ಬಾರಿ ಊಟಕ್ಕೆ ಸೇರಿದ್ದೇವೆ. ಅವರು ತುಂಬಾ ಎತ್ತರದ ವ್ಯಕ್ತಿತ್ವ ಹೊಂದಿದ್ದಾರೆ. ಅನುಷ್ಕಾ ಶರ್ಮಾ ಅವರ ಜೀವನದಲ್ಲಿ ಬಂದ ನಂತರ, ಅವರು ತೆಗೆದುಕೊಂಡ ನಿರ್ಧಾರಗಳು ಉತ್ತಮ. ಇದರಿಂದ ಅವರು ಪರಿಪೂರ್ಣ ವೃತ್ತಿಪರರಾಗಿದ್ದಾರೆ" ಎಂದು ಹೇಳಿದ್ದರು.
ಅನುಷ್ಕಾ ಶರ್ಮಾ
ನಟಿ ಅನುಷ್ಕಾ ಶರ್ಮಾ 2008 ರಲ್ಲಿ ರಬ್ ನೆ ಬನಾ ದಿ ಜೋಡಿ ಮೂಲಕ ನಟ ಶಾರುಖ್ ಖಾನ್ ಅವರೊಂದಿಗೆ ಕಾಣಿಸಿಕೊಂಡು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದಾದ ನಂತರ ಅವರು ಹಿಂರಿತುಗಿ ನೋಡಿಲ್ಲ. ಸಾಲು ಸಾಲು ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ ಅವರು ಚಕ್ಡಾ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಯೋಗ್ರಾಫಿಕಲ್ ಸ್ಪೋರ್ಟ್ಸ್ ಡ್ರಾಮಾ ಚಕ್ಡಾ ಎಕ್ಸ್‌ಪ್ರೆಸ್ ಚಿತ್ರವನ್ನು ಪ್ರೊಸಿತ್ ರಾಯ್ ನಿರ್ದೇಶಿಸಲಿದ್ದಾರೆ.


Click it and Unblock the Notifications










