twitter
    For Quick Alerts
    ALLOW NOTIFICATIONS  
    For Daily Alerts

    ಅಶ್ಲೀಲ ವಿಡಿಯೋ ಪ್ರಕರಣ: ಬಂಧನದಿಂದ ತಾತ್ಕಾಲಿಕವಾಗಿ ಬಚಾವಾದ ಪೂನಂ ಪಾಂಡೆ

    |

    ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪ್ರಮುಖ ಆರೋಪಿ ಆಗಿದ್ದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪೂನಂ ಪಾಂಡೆ ಬಂಧನದಿಂದ ತಾತ್ಕಾಲಿಕವಾಗಿ ತಪ್ಪಿಸಿಕೊಂಡಿದ್ದಾರೆ. ನಿರೀಕ್ಷಣಾ ಜಾಮೀನಿಗೆ ಪೂನಂ ಪಾಂಡೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದ್ದು ಪೂನಂಗೆ ನಿರೀಕ್ಷಣಾ ಜಾಮೀನು ದೊರಕಿದೆ.

    ಈ ಮೊದಲು ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ನಿರೀಕ್ಷಣಾ ಜಾಮೀನು ನೀಡುವಂತೆ ಪೂನಂ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು ಪೂನಂ ಪಾಂಡೆ. ಆದರೆ ಅಲ್ಲಿ ಅವರಿಗೆ ನಿರೀಕ್ಷಣಾ ಜಾಮೀನು ದೊರಕಿದೆ.

    ''ಅಶ್ಲೀಲ ವಿಡಿಯೋ ಮಾರಾಟ ಮತ್ತು ಪ್ರಸಾರ ಪ್ರಕರಣದಲ್ಲಿ ನಾನು ಸಂತ್ರಸ್ತೆ ಆರೋಪಿಯಲ್ಲ. ನನ್ನ ಅಶ್ಲೀಲ ವಿಡಿಯೋಗಳಿದ್ದ ವೆಬ್‌ಸೈಟ್ ಅನ್ನು ಕೇಂದ್ರ ಸರ್ಕಾರವು 2015 ರಲ್ಲಿಯೇ ಮುಟ್ಟುಗೋಲು ಹಾಕಿಕೊಂಡು ಬಂದ್ ಮಾಡಿದೆ'' ಎಂದು ಪೂನಂ ಪಾಂಡೆ ನ್ಯಾಯಾಲಯಕ್ಕೆ ಹೇಳಿದ್ದಾರೆ.

    Indecent Video Case: Poonam Pandey Gets Interim Relief From Supreme Court

    ರಾಜ್ ಕುಂದ್ರಾ ಬಂಧನ ಆದಾಗಿನಿಂದಲೂ ಪೂನಂ ಪಾಂಡೆ, ಕುಂದ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ರಾಜ್ ಕುಂದ್ರಾ ಮಾಸ್ಟರ್ ಮೈಂಡ್, ನಮ್ಮ ವಿಡಿಯೋಗಳನ್ನೂ ಅವರು ಅಪ್‌ಲೋಡ್ ಮಾಡಿದ್ದಾರೆ. ನನ್ನ ಮೊಬೈಲ್ ನಂಬರ್ ಅನ್ನು ಲೀಕ್ ಮಾಡಿದರು, ನನಗೆ ಜೀವ ಬೆದರಿಕೆ ಹಾಕಿದರು, ನನಗೆ ಸಂಭಾವನೆ ನೀಡಲಿಲ್ಲ ಎಂದು ಪೂನಂ ಆರೋಪ ಮಾಡಿದ್ದರು.

    ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ ಕುಂದ್ರಾ ಬಿಡುಗಡೆ ಆಗಿ ಬಂದ ಬಳಿಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆ ಸಮಯದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಪೂನಂ ಪಾಂಡೆ ಹಾಗೂ ಶೆರ್ಲಿನ್ ಚೋಪ್ರಾ ವಿಷಯ ಪ್ರಸ್ತಾಪಿಸಿ, ಅವರು ತಮ್ಮ ಸ್ವ ಇಚ್ಛೆಯಿಂದ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಅವರ ಅಶ್ಲೀಲ ವಿಡಿಯೋಕ್ಕೂ ನನಗೂ ಸಂಬಂಧವಿಲ್ಲ'' ಎಂದಿದ್ದರು. ರಾಜ್‌ ಕುಂದ್ರಾ ಅರ್ಜಿಯಲ್ಲಿ ಈ ಅಂಶ ಉಲ್ಲೇಖಿಸಿದ ಬಳಿಕ ಪೂನಂ ಪಾಂಡೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು.

    ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಿರ್ಮಾಪಕ ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಕಳೆದ ವರ್ಷ ಜುಲೈ 19 ರಂದು ಬಂಧಿಸಿದ್ದರು. ರಾಜ್ ಕುಂದ್ರಾ ಮುಂಬೈನಲ್ಲಿ ಮಾಡೆಲ್‌ಗಳನ್ನು ಬಳಸಿಕೊಂಡು ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿ ಅವುಗಳನ್ನು ಹಾಟ್‌ ಶಾಟ್ಸ್ ಮತ್ತಿತರೆ ಪೇಯ್ಡ್ ಅಪ್ಲಿಕೇಶನ್‌ಗಳಿಗೆ ಲಂಡನ್ ಮೂಲದ ಸಂಸ್ಥೆಯೊಂದರ ಮೂಲಕ ಅಪ್‌ಲೋಡ್ ಮಾಡುತ್ತಿದ್ದರು. ಹಾಗೂ ಈ ಅಪ್ಲಿಕೇಶನ್‌ಗಳಿಂದ ಪ್ರತಿದಿನ ಲಕ್ಷಾಂತರ ಹಣವನ್ನು ಗಳಿಸುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪ ಹೊರಿಸಿದ್ದರು. ಆದರೆ ರಾಜ್‌ ಕುಂದ್ರಾ, ತಾವು ಅಶ್ಲೀಲ ವಿಡಿಯೋ ನಿರ್ಮಾಣ ಮಾಡಿಲ್ಲವೆಂದು ತಾವು ಮಾಡಿದ್ದು ಶೃಂಗಾರದ ವಿಡಿಯೋಗಳೆಂದು, ಆ ರೀತಿಯ ವಿಡಿಯೋಗಳು ಸಾಮಾನ್ಯ ಸಿನಿಮಾಗಳಲ್ಲಿಯೂ ಇರುತ್ತವೆ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು. 62 ದಿನಗಳ ಕಾಲ ಮುಂಬೈ ಜೈಲಿನಲ್ಲಿದ್ದ ರಾಜ್‌ ಕುಂದ್ರಾ ಸೆಪ್ಟೆಂಬರ್ 20ರಂದು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಹೊಂದಿದರು.

    English summary
    Indecent video case: actress Poonam Pandey get interim relief from supreme court. She said court that she is victim in this case not accused.
    Wednesday, January 19, 2022, 9:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X