ಸ್ವಾತಂತ್ರ್ಯ ದಿನಾಚರಣೆ 2023: ಸ್ವಾತಂತ್ರ್ಯ ದಿನದ ನೆನಪಿನಲ್ಲಿ ನೋಡಬೇಕಾದ 10 ಚಲನಚಿತ್ರಗಳು ಇಲ್ಲಿವೆ
ಭಾರತ ಆಗಸ್ಟ್ 15 ರಂದು 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಿದ್ಧವಾಗಿದ್ದು, ಈ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ನಮ್ಮ ಪೂರ್ವಜರಿಗೆ ಗೌರವ ಸಲ್ಲಿಸುವ ಮೂಲಕ ಸ್ವಾತಂತ್ರ್ಯವನ್ನು ಆಚರಿಸಲು ಕರೆ ನೀಡಲಾಗಿದೆ. ಈ ದಿನದಂದು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವುದು, ಪರೇಡ್‌ಗಳಲ್ಲಿ ಭಾಗವಹಿಸುವುದು ಮತ್ತು ರಾಷ್ಟ್ರಧ್ವಜಾರೋಹಣದಲ್ಲಿ ಭಾಗವಹಿಸುವ ಜೊತೆಗೆ ದೇಶಭಕ್ತಿಯ ಸಂದೇಶವನ್ನು ಸಾರುವ ಚಲನಚಿತ್ರಗಳನ್ನು ನೋಡುವ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬಹಳಷ್ಟು ಮಾಹಿತಿ ತಿಳಿದುಕೊಳ್ಳಬಹುದು.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಸ್ವಾತಂತ್ರ್ಯ ಬರುವ ಮುನ್ನ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹೋರಾಟ ಬಗ್ಗೆ ವಿವರಿಸುವ ಹಲವಾರು ದೇಶಭಕ್ತಿಯ ಚಲನಚಿತ್ರಗಳಿದ್ದು, ಅದರಲ್ಲಿ ಹತ್ತು ಸಿನಿಮಾಗಳ ಪಟ್ಟಿ ಇಲ್ಲಿದೆ.
ಶಹೀದ್
1965 ರಲ್ಲಿ ಬಿಡುಗಡೆಯಾದ ಎಸ್ ರಾಮ್ ಶರ್ಮಾ ಅವರ ನಿರ್ದೇಶನದ ಶಹೀದ್ ಚಿತ್ರ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ. 13 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಿಂದಿಯಲ್ಲಿ ಅತ್ಯುತ್ತಮ ಚಲನಚಿತ್ರ ಎಂಬ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಈ ಚಿತ್ರದಲ್ಲಿ ಮನೋಜ್ ಕುಮಾರ್, ಪ್ರಾಣ್ ಮತ್ತು ಪ್ರೇಮ್ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಲಗಾನ್
2001ರಲ್ಲಿ ಬಿಡುಗಡೆಯಾದ 'ಲಗಾನ್' ಭಾರತೀಯ ಸಿನಿಮಾಗಳಲ್ಲಿ ಅತ್ಯುತ್ತಮ ಸ್ಥಾನ ಪಡೆದಿದೆ. ಬ್ರಿಟಿಷ್ ವಸಾಹತುಶಾಹಿ ವಿರುದ್ಧ ನಡೆಯುವ ಹೋರಾಟವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಆಕರ್ಷಕ ಕ್ರಿಕೆಟ್ ಪಂದ್ಯದ ಮೂಲಕ ಕಥೆಯನ್ನು ಹೆಣೆಯಲಾಗಿದೆ. ಅಮಿರ್ ಖಾನ್ ಮುಖ್ಯಭೂಮಿಕೆಯಲ್ಲಿದ್ದಾರೆ.

ರಂಗ್ ದೇ ಬಸಂತಿ
ರಂಗ್ ದೇ ಬಸಂತಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಚಲನಚಿತ್ರ ಮಾಡಲು ನಿರ್ಧರಿಸಿದ ಬ್ರಿಟಿಷ್ ಸಾಕ್ಷ್ಯಚಿತ್ರ ನಿರ್ಮಾಪಕರ ಬಗ್ಗೆಯಿದೆ. ಸಾಕ್ಷ್ಯಚಿತ್ರದಲ್ಲಿ ಕೆಲಸ ಮಾಡುವಾಗ, ನಟರು ತಮ್ಮ ಜೀವನದ ಘಟನೆಯನ್ನು ಬಿಚ್ಚಿಡುತ್ತಾರೆ, ಅದು ಅವರು ನಟಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಹೋಲುತ್ತದೆ. 2006 ರಲ್ಲಿ ಬಿಡುಗಡೆಯಾದ ಚಿತ್ರವನ್ನು ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿದ್ದಾರೆ. ಅಮೀರ್ ಖಾನ್, ಸೋಹಾ ಅಲಿ ಖಾನ್, ಸಿದ್ಧಾರ್ಥ್, ಮಾಧವನ್ ನಟಿಸಿದ್ದಾರೆ.
ಮಂಗಲ್ ಪಾಂಡೆ
ಅಮೀರ್ ಖಾನ್ ಅಭಿನಯದ ಮಂಗಲ್ ಪಾಂಡೆ 2005 ರಲ್ಲಿ ಬಿಡುಗಡೆಯಾಯಿತು. ಹೆಸರೇ ಸೂಚಿಸುವಂತೆ ಇದು ಮಂಗಲ್ ಪಾಂಡೆ ನೇತೃತ್ವದ 1857 ರ ಸಿಪಾಯಿ ದಂಗೆ ಮತ್ತು ಬ್ರಿಟಿಷ್ ಆಳ್ವಿಕೆಯ ವಿರುದ್ಧದ ಮೊದಲ ಸ್ವಾತಂತ್ರ್ಯ ಯುದ್ಧದ ಕುರಿತಾದ ಚಲನಚಿತ್ರವಾಗಿದೆ. ಚಿತ್ರವು ಸಿಪಾಯಿ ದಂಗೆಯ ಹಿನ್ನೆಲೆಯಲ್ಲಿ ನಡೆಯುವ ಸ್ನೇಹ, ದ್ರೋಹ ಮತ್ತು ತ್ಯಾಗದ ಮಹಾಕಾವ್ಯವಾಗಿದೆ.

ಸ್ವದೇಸ್
ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ, 2004 ರಲ್ಲಿ ಬಿಡುಗಡೆಯಾದ ಸ್ವದೇಸ್ ಅನ್ನು ಕಲ್ಟ್ ಕ್ಲಾಸಿಕ್ ಎಂದು ಪರಿಗಣಿಸಲಾಗಿದೆ. ಶಾರುಖ್ ಖಾನ್ ನಿರ್ವಹಿಸಿದ ಎನ್‌ಆರ್‌ಐ ಮೋಹನ್ ಭಾರ್ಗವ್ ಪಾತ್ರ ಎಲ್ಲರ ಮನಸ್ಸಿನಲ್ಲಿ ಉಳಿಯುವಂತಹದ್ದು.
ಕೇಸರಿ
2019 ರಲ್ಲಿ ಬಿಡುಗಡೆಯಾದ ಕೇಸರಿ ಒಂದು ಐತಿಹಾಸಿಕ ಚಲನಚಿತ್ರವಾಗಿದ್ದು, ಇದು 1897 ರ ಸಾರಾಗರ್ಹಿ ಕದನದ ಸುತ್ತ ಸುತ್ತುತ್ತದೆ. ಫ್ರಾಂಟಿಯರ್ ಪ್ರಾಂತ್ಯವನ್ನು ಆಕ್ರಮಿಸುತ್ತಿದ್ದ 10,000 ಆಫ್ಘನ್ನರ ಸೈನ್ಯದ ವಿರುದ್ಧ 21 ಸಿಖ್ಖರ ತುಕಡಿಯನ್ನು ನೇತೃತ್ವ ವಹಿಸಿದ್ದ ಹವಿಲ್ದಾರ್ ಇಶಾರ್ ಸಿಂಗ್ ಅವರ ಸಾಧನೆಯನ್ನು ಈ ಕಥೆಯನ್ನು ಎತ್ತಿ ತೋರಿಸುತ್ತದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಪರಿಣಿತಿ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಅನುರಾಗ್ ಸಿಂಗ್ ನಿರ್ದೇಶಿಸಿದ್ದಾರೆ.

ಉರಿ: ದಿ ಸರ್ಜಿಕಲ್ ಸ್ಟ್ರೈಕ್
ವಿಕ್ಕಿ ಕೌಶಲ್, ಪರೇಶ್ ರಾವಲ್, ಮೋಹಿತ್ ರೈನಾ, ಮತ್ತು ಯಾಮಿ ಗೌತಮ್ ನಟಿಸಿ, ಆದಿತ್ಯ ಧಾರ್ ನಿರ್ದೇಶಿಸಿದ ಉರಿ: ದಿ ಸರ್ಜಿಕಲ್ ಸ್ಟ್ರೈಕ್ 2016 ರ ಭಾರತದ ವಿಜಯಶಾಲಿ ಸರ್ಜಿಕಲ್ ದಾಳಿಯ ಕಥೆಯಾಗಿದೆ. ಈ ಚಿತ್ರದ ನಟನೆಗಾಗಿ ವಿಕ್ಕಿ ಕೌಶಲ್ ಮೊದಲ ರಾಷ್ಟ್ರೀಯ ಪ್ರಶಸ್ತಿ ಪಡೆದರು.
ಶೇರ್ಷಾ
ಶೇರ್ಷಾ ಕಾರ್ಗಿಲ್ ಯುದ್ಧದ ಹುತಾತ್ಮ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನಚರಿತ್ರೆಯಾಗಿದೆ. ಈ ಚಿತ್ರವನ್ನು ವಿಷ್ಣುವರ್ಧನ್ ನಿರ್ದೇಶಿಸಿದ್ದಾರೆ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸರ್ದಾರ್ ಉಧಮ್
ವಿಕ್ಕಿ ಕೌಶಲ್ ನಟನೆಯ ಈ ಚಿತ್ರವು ಭಾರತೀಯ ಕ್ರಾಂತಿಕಾರಿ ಸರ್ದಾರ್ ಉಧಮ್ ಸಿಂಗ್ ಅವರ ಕಥೆಯ ಸುತ್ತ ಸುತ್ತುತ್ತದೆ.ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಆದೇಶ ನೀಡಿದ ಪಂಜಾಬ್‌ನ ಲೆಫ್ಟಿನೆಂಟ್ ಗವರ್ನರ್ ಮೈಕೆಲ್ ಒಡ್ವೈರ್ ಅವರನ್ನು ಹತ್ಯೆ ಮಾಡುವ ಮೂಲಕ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಸಾವಿರಾರು ಜನರ ಸಾವಿಗೆ ಸೇಡು ತೀರಿಸಿಕೊಳ್ಳುವ ಕ್ರಾಂತಿಕಾರಿಯ ಕಥೆ.
ಆರ್‌ಆರ್‌ಆರ್
2022 ರಲ್ಲಿ ಬಿಡುಗಡೆಯಾದ, ಆರ್‌ಆರ್‌ಆರ್ ತೆಲುಗು ಸಿನಿಮಾ. ಎಲ್ಲಾ ಭಾಷೆಗಳಲ್ಲೂ ಲಭ್ಯವಿದೆ. ರಾಮ್ ಚರಣ್ ನಿರ್ವಹಿಸಿದ ನಿರ್ಭೀತ ಕ್ರಾಂತಿಕಾರಿ ಅಲ್ಲೂರಿ ಸೀತಾರಾಮ ರಾಜು ಮತ್ತು ಎನ್‌ಟಿ ರಾಮರಾವ್ ಜೂನಿಯರ್ ನಿರ್ವಹಿಸಿದ ಕೊಮರಂ ಭೀಮ್ ಅವರ ಪಾತ್ರಗಳ ಸುತ್ತ ಕಥೆ ಹೆಣೆಲಾಗಿದೆ.


Click it and Unblock the Notifications











