ಸ್ವಾತಂತ್ರ್ಯ ದಿನಾಚರಣೆ 2023: ಬಾಲಿವುಡ್‌ನಲ್ಲಿ ಮುಂಬರುವ ದೇಶಭಕ್ತಿಯ ಚಲನಚಿತ್ರಗಳ ಪಟ್ಟಿ ನೋಡಿ

ಆಗಸ್ಟ್ 15 ರಂದು ದೇಶದ ಇತಿಹಾದಲ್ಲಿ ಸ್ವರ್ಣ ಅಕ್ಷರಗಳಲ್ಲಿ ಬರೆದಿರುವ ದಿನ. ಜನ್ಮ ದಿನವನ್ನು ಮರೆತರು ಈ ದಿನವನ್ನು ಭಾರತ ಮಾತೆಯ ಮಕ್ಕಳು ಮರೆಯಲಾರರು. ಕೋಟ್ಯಾಂತರ ಮಂದಿಯ ಹೋರಾಟದ ಫಲವಾದ ಈ ಸ್ವಾತಂತ್ರ್ಯ ದಿನವನ್ನು ಮರೆಯಲುಂಟೆ?. ಈ ಬಾರಿಯೂ ಆಜಾದಿ ಕ ಅಮೃತ್ ಮಹೋತ್ಸವಕ್ಕೆ ದೇಶ ಸಜ್ಜಾಗುತ್ತಿದೆ. ಇದಕ್ಕೆ ಸಿನಿರಂಗವೂ ಹೊರತಲ್ಲ.

ಪ್ರತಿ ವರ್ಷದಂತೆಯೇ ಈ ವರ್ಷವೂ ಸಿನಿಮಾ ಉದ್ಯಮ ತನ್ನದೆ ರೀತಿಯಲ್ಲಿ ಸ್ವಾತಂತ್ರ್ಯ ಮಹೋತ್ಸವವನ್ನು ಆಚರಿಸಲು ಸಿದ್ಧವಾಗಿದೆ. ಹಲವು ಚಲನಚಿತ್ರಗಳನ್ನು ಘೋಷಿಸಲಾಗುತ್ತದೆ. ಹಲವು ಮಂದಿ ಹೊಸ ದೇಶಭಕ್ತಿಯ ಹಾಡುಗಳನ್ನು ಬಿಡುಗಡೆ ಮಾಡುತ್ತಾರೆ. ನಮಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದವರ ಬಗ್ಗೆ, ಹೋರಾಟಗಳನ್ನು ಮಾಡಿದವರ ಕುರಿತ ಚಿತ್ರಗಳನ್ನು ನೋಡಿದ್ದೇವೆ. ಇದರ ಜೊತೆಗೆ ಮುಂಬರುವ ದೇಶಭಕ್ತಿಯ ಚಲನಚಿತ್ರಗಳ ಬಗ್ಗೆ ವಿವರವಾಗಿ ತಿಳಿಯೋಣ.

list-of-upcoming-bollywood-patriotic-movies

ಮೇ ಅಟಲ್ ಹೂ (Main Atal Hoon)

ರವಿ ಜಾಧವ್ ನಿರ್ದೇಶನದ, ಮೇನ್ ಅಟಲ್ ಹೂ ಭಾರತದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರ್ ವಾಜಪೇಯಿ ಅವರ ಜೀವನಚರಿತ್ರೆಯಾಗಿದೆ. ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಅಟಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಅವರು ಸಿನಿಮಾದ ಭಾಗವಾಗಿದ್ದು, ಮೇ ಅಟಲ್ ಹೂ ಈ ವರ್ಷದ ಡಿಸೆಂಬರ್‌ನಲ್ಲಿ ಬೆಳ್ಳಿತೆರೆಗೆ ಬರಲಿದೆ.

list-of-upcoming-bollywood-patriotic-movies

ಪಿಪ್ಪಾ (Pippa)

ಪಿಪ್ಪಾ ತನ್ನ ಒಡಹುಟ್ಟಿದವರ ಜೊತೆಗೆ 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಹೋರಾಡಿದ 45 ನೇ ಕ್ಯಾವಲ್ರಿ ಟ್ಯಾಂಕ್ ಸ್ಕ್ವಾಡ್ರನ್‌ನ ಯುವ ಬ್ರಿಗೇಡಿಯರ್ ಬಲರಾಮ್ ಸಿಂಗ್ ಮೆಹ್ತಾ ಅವರ ಜೀವನವನ್ನು ಚಿತ್ರಿಸಲಿದೆ. ಇಶಾನ್ ಖಟ್ಟರ್ ಮತ್ತು ಮೃಣಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರವು ಡಿಸೆಂಬರ್ 2, 2023 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಸ್ಯಾಮ್ ಬಹದ್ದೂರ್ (Sam Bahadur)

ಸ್ಯಾಮ್ ಬಹದ್ದೂರ್ ಸಿನಿಮಾದಲ್ಲಿ 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಸೇನಾ ಮುಖ್ಯಸ್ಥರಾದ ಸ್ಯಾಮ್ ಮಾನೆಕ್ಷಾ ಅವರ ಜೀವನ ಕಥೆಯನ್ನು ತಿಳಿಸಲಿದೆ. ಮೇಘನಾ ಗುಲ್ಜಾರ್ ಅವರ ನಿರ್ದೇಶನದ ಈ ಚಲನಚಿತ್ರದಲ್ಲಿ ವಿಕ್ಕಿ ಕೌಶಲ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಫಾತಿಮಾ ಸನಾ ಶೇಖ್, ಸಾನ್ಯಾ ಮಲ್ಹೋತ್ರಾ ಮತ್ತು ಮನೋಜ್ ಬಾಜ್ಪೇಯಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

list-of-upcoming-bollywood-patriotic-movies

ಏ ವತನ್ ಮೇರೆ ವತನ್ (Ae Watan Mere Watan)

ಕಣ್ಣನ್ ಅಯ್ಯರ್ ಅವರ ನಿರ್ದೇಶನದ ಏ ವತನ್ ಮೇರೆ ವತನ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆಗಲಿದೆ. ಕ್ವಿಟ್ ಇಂಡಿಯಾ ಚಳವಳಿ ಕಾಲಘಟ್ಟದ ಕಾಲೇಜು ಹುಡುಗಿಯ ಜೀವನವನ್ನು ಕಥೆಯು ಹೇಳಲಿದೆ. ಚಿತ್ರದಲ್ಲಿ ಸಾರಾ ಅಲಿ ಖಾನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

list-of-upcoming-bollywood-patriotic-movies

ಮೈದಾನ್ (Maidaan)

ಮೈದಾನ್ ಚಲನಚಿತ್ರವು ಸೈಯದ್ ಅಬ್ದುಲ್ ರಹೀಮ್ ಅವರ ಜೀವನ ಮತ್ತು 1952-1962 ರ ಅವಧಿಯಲ್ಲಿ ಭಾರತೀಯ ಫುಟ್‌ಬಾಲ್‌ನ ಸುವರ್ಣ ಯುಗಕ್ಕೆ ಅವರು ನೀಡಿದ ಕೊಡುಗೆಗಳನ್ನು ಅನುಸರಿಸುತ್ತದೆ. ಚಿತ್ರವನ್ನು 2019 ರಲ್ಲಿ ಘೋಷಿಸಲಾಗಿತ್ತು. ಅಜಯ್ ದೇವಗನ್, ಪ್ರಿಯಾಮಣಿ ಮತ್ತು ಗಜರಾಜ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮಿತ್ ಶರ್ಮಾ ನಿರ್ದೇಶನದ ಮೈದಾನ್ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.

ಆಪರೇಷನ್ ವ್ಯಾಲೆಂಟೈನ್ (Operation Valentine)

ಶಕ್ತಿ ಪ್ರತಾಪ್ ಸಿಂಗ್ ಹಡಾ ನಿರ್ದೇಶನದ ಆಪರೇಷನ್ ವ್ಯಾಲೆಂಟೈನ್ ತೆಲುಗು ಸೂಪರ್ ಸ್ಟಾರ್ ವರುಣ್ ತೇಜ್ ಅವರ ಚೊಚ್ಚಲ ಬಾಲಿವುಡ್ ಚಿತ್ರವಾಗಿದೆ. ಮಾನುಷಿ ಚಿಲ್ಲರ್ ಸಹ ನಟಿಯಾಗಿ ನಟಿಸಿರುವ ಈ ಚಿತ್ರವು ಭಾರತೀಯ ವಾಯುಪಡೆಯ ಸುತ್ತ ಸುತ್ತುತ್ತದೆ. ಡಿಸೆಂಬರ್ 8, 2023 ರಂದು ತೆಲುಗು ಮತ್ತು ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

More from Filmibeat

English summary
Independence Day 2023: List of upcoming patriotic movies in Bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X