Ind vs Pak ; ಅಂತೆ-ಕಂತೆಗಳಿಗೆ ಬ್ರೇಕ್, ಹಾರ್ದಿಕ್ ಪಾಂಡ್ಯಗೆ ಫ್ಲೈಯಿಂಗ್ ಕಿಸ್ ನೀಡಿದ ಗಾಯಕಿ..!

ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಆ ನೋವು ಅನೇಕರಿಗೆ ವರ್ಷಾನುವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ.. ಪ್ರೀತಿ ಮರೆಯಲಾಗದೆ.. ಅನೇಕರು ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ಇದೆ.

ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಇವತ್ತು ದೂರವಾದಷ್ಟೇ ಬೇಗ ಬೇರೆಯವರಿಗೆ ಅನೇಕರು ಹತ್ತಿರವಾಗುತ್ತಾರೆ. ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಮುಖದಲ್ಲಿ ಈ ಯಾವ ಲವಲೇಶವೂ ಕಾಣಿಸುವುದಿಲ್ಲ. ಇದಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಮತ್ತೊಂದು ಉದಾಹರಣೆ.

India vs Pakistan Hardik Pandya s rumoured girlfriend Jasmin Walia blows flying kisses

ಹೌದು, ಅನೇಕರಿಗೆ ಗೊತ್ತಿರುವಂತೆ .. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಈಗ ದೂರವಾಗಿದ್ದಾರೆ. ಮೊದಲ ನೋಟ, ಮೊದಲ ಭೇಟಿ, ಮೊದಲ ಸ್ಪರ್ಶ ಮರೆತು ಅವರ ಅವರ ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ಎರಡೆರಡು ಬಾರಿ ಮದುವೆಯಾಗಿದ್ದನ್ನೂ ಕೂಡ ಇಬ್ಬರು ಮರೆತು ಖುಷಿಯಾಗಿದ್ದಾರೆ. ಇಷ್ಟೇ ಅಲ್ಲ ಹೊಸ ಜೀವನ ಸಂಗಾತಿಯನ್ನು ಕೂಡ ಇಬ್ಬರು ಹುಡುಕುತ್ತಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ನತಾಶಾ ಅವರ ಹೆಸರು ದಿಶಾ ಪಠಾಣಿಯ ಮಾಜಿ ಬಾಯ್‌ಫ್ರೆಂಡ್ ಅಲೆಕ್ಸಾಂಡರ್ ಅಲೆಕ್ಸ್ ಜೊತೆ ಥಳುಕು ಹಾಕಿಕೊಂಡಿದ್ದರೆ, ಹಾರ್ದಿಕ್ ಪಾಂಡ್ಯ ಹೆಸರು ಬ್ರಿಟನ್‌ನ ಬೆಡಗಿ ಜಾಸ್ಮಿನ್ ವಾಲಿಯಾ ಜೊತೆ ಕೇಳಿ ಬರುತ್ತಿದೆ. ಹಾರ್ದಿಕ್ ಮತ್ತು ಜಾಸ್ಮಿನ್ ಪ್ರೇಮ ಗೀತೆಯನ್ನು ಹಾಡುತ್ತಿದ್ದಾರೆ ಎನ್ನುವ ಅನುಮಾನ ಕೂಡ ಅನೇಕರಲ್ಲಿದೆ.

ಹೀಗಿರುವಾಗ ನಿನ್ನೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಪಂದ್ಯದಲ್ಲಿ ದುಬೈ ಕ್ರೀಡಾಂಗಣದಲ್ಲಿ ಜಾಸ್ಮಿನ್ ವಾಲಿಯಾ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರ ನಡುವೆ ಕುಂತು ಹಾರ್ದಿಕ್ ಪಾಂಡ್ಯಗೆ ಫ್ಲೈಯಿಂಗ್‌ ಕಿಸ್‌ ಮೇಲೆ ಕಿಸ್ ನೀಡಿದ್ದಾರೆ. ಸದ್ಯ ಜಾಸ್ಮಿನ್ ವಾಲಿಯಾ ಅವರ ಈ ಫ್ಲೈಯಿಂಗ್ ಕಿಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಾಸ್ಮಿನ್ ಜಾದೂದಿಂದ ಹಾರ್ದಿಕ್ ಬದುಕು ಬದಲಾಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇಬ್ಬರ ನಡುವೆ ಪ್ರೇಮಾಂಕುರವಾಗಿರುವ ಸುದ್ದಿ ನೂರಕ್ಕೆ ನೂರು ನಿಜಾ ಎನ್ನುವ ಮಾತು ಮಾತು ಕೂಡ ಕೇಳಿ ಬರುತ್ತಿದೆ.

ಅಂದ್ಹಾಗೇ ಜಾಸ್ಮಿನ್ ವಾಲಿಯಾ ಇಂಗ್ಲೆಂಡ್‌ನ ಎಸ್ಸೆಕ್ಸ್‌ ನಗರದಲ್ಲಿರುವವರು. ಇವರನ್ನು ಹೆತ್ತ ತಂದೆ ತಾಯಿ ಭಾರತೀಯ ಮೂಲದವರು. ಇನ್ನು, ಜಾಸ್ಮಿನ್ ಪ್ರಖ್ಯಾತ ಗಾಯಕಿ.2017ರಲ್ಲಿ ಬಿಡುಗಡೆಯಾಗಿದ್ದ ಇವರ "ಬೊಮ್ ಡಿಗ್ಗಿ" ಹಾಡನ್ನು ಕೇಳಿ ಅನೇಕ ಸಂಗೀತಪ್ರಿಯರು ಹುಚ್ಚೆದ್ದಿದ್ದರು. ಇದಕ್ಕೂ ಮುನ್ನ ಜಾಸ್ಮಿನ್ ವಾಲಿಯಾ ಬ್ರಿಟಿಷ್ ಟಿವಿ ರಿಯಾಲಿಟಿ ಸೀರಿಸ್ 'ದಿ ಒನ್ಲಿ ವೇ ಎಸ್ಸೆಕ್ಸ್' ನಲ್ಲಿ ಕಾಣಿಸಿಕೊಂಡಿದ್ದರು. ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾದರು. ಇಷ್ಟೇ ಅಲ್ಲ ಟಿವಿ ಕಾರ್ಯಕ್ರಮಗಳ ನಿರೂಪಕಿ ಕೂಡ ಹೌದು ಜಾಸ್ಮಿನ್ ವಾಲಿಯಾ.

ಇಂಥಾ ಜಾಸ್ಮಿನ್ ವಾಲಿಯಾ ಭಾರತದ ಸ್ಟಾರ್ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯಗೆ ಪರಿಚಯವಾಗಿದ್ದು ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲವಾದರೂ ನತಾಶಾ ಅವರಿಂದ ದೂರವಾದ ಕೆಲವೇ ದಿನಗಳಲ್ಲಿ, ಹಾರ್ದಿಕ್ ಪಾಂಡ್ಯ ಗ್ರೀಸನ್ ಐಶಾರಾಮಿ ಹೊಟೇಲ್‌ನಲ್ಲಿ ಜಾಸ್ಮಿನ್ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ ಎಂಬ ಸುದ್ದಿ ಹೊರ ಬಂದಿತ್ತು. ಸಾಕಷ್ಟು ಚರ್ಚೆಗೆ ಕೂಡ ಕಾರಣವಾಗಿತ್ತು. ಸದ್ಯ ಜಾಸ್ಮಿನ್ ನಿನ್ನೆಯ ಪಂದ್ಯದಲ್ಲಿ ಕಾಣಿಸಿಕೊಂಡ ಹಿನ್ನೆಲೆ ಹಾರ್ದಿಕ್ ಮತ್ತು ಇವರ ಸಂಬಂಧದ ಕುರಿತು ಮತ್ತೊಮ್ಮೆ ಪ್ರಶ್ನೆ ಎದ್ದಿದೆ. ನಿನ್ನೆ ಜಾಸ್ಮಿನ್ ನೀಡಿದ ಫ್ಲೈಯಿಂಗ್ ಕಿಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

More from Filmibeat

Read more about: love cricket filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X