ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಬಾಲಿವುಡ್, ಟಾಲಿವುಡ್ ನಟಿಯರು ಇವರೇ ನೋಡಿ
ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಇತ್ತೀಚಿಗಿನ ಸಿನಿಮಾ ನಟಿಯರಿಗೆ ಟ್ರೆಂಡ್ ಆಗಿ ಬಿಟ್ಟಿದೆ. ಇರುವ ಸೌಂದರ್ಯವನ್ನು ಬಿಟ್ಟು ಮತ್ತಷ್ಟು ಆಕರ್ಷಕವಾಗಿ ಕಾಣಬೇಕು ಎಂಬ ಆಸೆಯಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ತಮ್ಮ ಅಂದದ ಮುಖವನ್ನು ಹಾಳು ಮಾಡಿಕೊಂಡ ಎಷ್ಟೋ ನಟಿ ಮಣಿಯರು ಭಾರತೀಯ ಚಿತ್ರರಂಗದಲ್ಲಿದ್ದಾರೆ.
ಲಕ್ಷಗಟ್ಟಲೇ ದುಡ್ಡು ಸುರಿದು ನಟಿಯರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಸಿನಿಮಾದಲ್ಲಿ ತಮಗೆ ಅವಕಾಶಗಳು ಸಿಗಬೇಕು ಎಂಬ ಹಂಬಲದಿಂದ ಹಲವು ನಟಿಯರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ನಂತರ ಸಿನಿಮಾ ಅವಕಾಶಗಳೇ ಸಿಗದೇ ಮೂಲೆಗುಂಪಾದ ಎಷ್ಟೂ ಘಟನೆಗಳು ನಮ್ಮ ಕಣ್ಣಮುಂದೆ ಇದೆ.
ಕಾಂಟ್ರವರ್ಸಿಗಳಿಂದಲೇ ಹೆಚ್ಚು ಸುದ್ದಿಯಾಗಿರುವ ನಟಿ ರಾಖಿ ಸಾವಂತ್ ಕೂಡ ತಮ್ಮ ದೇಹ ಸೌಂದರ್ಯವನ್ನು ಹೆಚ್ಚಿಸುಕೊಳ್ಳುವ ಸಲವಾಗಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದರು. ಆದರೆ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಮೇಲೆ ಗುರುತು ಸಿಗದಷ್ಟು ಭಿನ್ನವಾಗಿ ಕಾಣುತ್ತಿದ್ದರು. ಇದ್ದ ಅಂದವನ್ನು ವಿಕಾರಗೊಳಿಸಿಕೊಂಡು ಟ್ರೋಲ್‌ಗೆ ಒಳಗಾಗಿದ್ದರು. ನಟಿ ಶಿಲ್ಪಾಶೆಟ್ಟಿ ಕೂಡ ಆಕರ್ಷಕ ಮೂಗನ್ನು ಪಡೆಯಲು 90 ರ ದಶಕದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ಆದರೆ, ಅದು ಮೂಗನ್ನು ಮತ್ತಷ್ಟು ವಿಕಾರಗೊಳಿಸಿತ್ತು. ಹೀಗಾಗಿ ವಿಕಾರಗೊಂಡ ಮೂಗಿಗೆ ಮತ್ತೆ ಆಕರ್ಷಕ ರೂಪ ಕೊಡಲು ಮತ್ತೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರು.

ವಾಣಿ ಕಪೂರ್ ಕೂಡ ಲಿಪ್ ಸರ್ಜರಿ ಮಾಡಿಸಿಕೊಂಡಿದ್ದರು. ಆದರೆ, ಸರ್ಜರಿ ಬಳಿಕ ಲಿಪ್ ಸೌಂದರ್ಯವೇ ಹಾಳಾಗಿತ್ತು. ಈ ವೇಳೆ ನಟಿ ವಾಣಿ ಕಪೂರ್ ಭಾರೀ ಟ್ರೋಲ್ ಆಗಿದ್ದರು. ಇವರಷ್ಟೇ ಅಲ್ಲದೆ ನಟಿ ಕೊಯಿನಾ ಮಿತ್ರ, ಪಮೀಳಾ ಅಂಡ್ರೋಸನ್ ಕೂಡ ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಸರ್ಜರಿ ಮಾಡಿಸಿಕೊಂಡಿದ್ದರು.
ಬಣ್ಣದ ಲೋಕದಲ್ಲಿ ಆಕರ್ಷಕವಾಗಿ ಕಾಣುವ ನಟಿಯರಿಗೆ ಮಾತ್ರ ಅವಕಾಶಗಳು ಹೆಚ್ಚಿನದಾಗಿ ಹುಡುಕಿ ಬರುತ್ತವೆ ಎಂಬ ನಂಬಿಕೆ ಪ್ರಬಲವಾಗಿದೆ. ಹೀಗಾಗಿ ಮಾಡೆಲ್‌ಗಳು ಹಾಗೂ ಸಿನಿಮಾ ನಟಿಯರು ಹೆಚ್ಚಿನ ಅವಕಾಶಕ್ಕಾಗಿ ತಮ್ಮ ಸೌಂದರ್ಯವನ್ನೇ ಹಾಳು ಮಾಡಿಕೊಂಡು ಅವಕಾಶ ಸಿಗದೇ ಪರದಾಡಿದ್ದಾರೆ. ನಟಿ ಮಾಜಿ ಮಿಸ್ ಇಂಡಿಯಾ ನಟಿ ಜೂಹಿ ಚಾವ್ಲಾ ಕೂಡ ಭಾರತೀಯ ಚಿತ್ರರಂಗದಲ್ಲಿ ತಮ್ಮ ನಟನೆ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇವರು ಕೂಡ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಂತರ ತಮ್ಮ ಮುಖವನ್ನೇ ಹಾಳು ಮಾಡಿಕೊಂಡಿದ್ದಾರೆ. ಇದರಿಂದ ಅವರಿಗೂ ಅವಕಾಶಗಳು ಕಡಿಮೆಯಾದವು.
ನಟಿ ಕರೀನಾ ಕಪೂರ್ ಕೂಡ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ತೀರಾ ವಯಸ್ಸಾದವರಂತೆ ಕಾಣುತ್ತಿದ್ದರು ಇದರಿಂದ ಅವರಿಗೂ ಅವಕಾಶಗಳು ಕಡಿಮೆಯಾದವು. ಇದಾದ ಬಳಿಕ ಪ್ರೀತಿ ಜಿಂಟಾ, ಅನುಷ್ಕಾ ಶರ್ಮಾ, ಮೌನಿ ರಾಯ್, ಕಂಗನಾ ರನೌತ್ ಕೂಡ ಇದೇ ಸವಾಲನ್ನು ಎದುರಿಸಬೇಕಾಯಿತು

ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ನಟಿ ಸಮಂತಾ ಸಹ ನೂಸ್ ಜಾಬ್, ಚೀಕ್ ಮತ್ತು ಲಿಪ್ ಫಿಲ್ಟರ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ರಂಭಾ ಕನ್ನಡದಲ್ಲೂ ನಟಿಸಿದ್ದಾರೆ. ಇವರು ಕೂಡ ತಮ್ಮ ಮೂಗು ಮತ್ತು ತುಟಿಗಳನ್ನು ಸರ್ಜರಿ ಮೂಲಕ ಸರಿ ಮಾಡಿಸಿಕೊಂಡಿದ್ದಾರೆ.
ಕನ್ನಡ ಸೇರಿದಂತೆ ದಕ್ಷಿಣ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಪ್ರಿಯಾಮಣಿ ಚೀಕ್ಸ್ ಮತ್ತು ಲಿಪ್ಸ್ ಪಿಲ್ಲರ್ಸ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ತಮ್ಮ ತೂಕವನ್ನು ಕಳೆದುಕೊಳ್ಳಲು ಲಿಪೋ ಸಕ್ಷನ್ ಸರ್ಜರಿ ಮಾಡಿಸಿಕೊಂಡರು ಮತ್ತು ಚೀಕ್ ಆಗುಮೆಂಟೇಶನ್ ಕೂಡ ಮಾಡಿಸಿಕೊಂಡರು. ಮೂಲಗಳ ಪ್ರಕಾರ, ಕಾಜಲ್ ಅಗರ್ವಾಲ್ ಅಮೇರಿಕಾದಲ್ಲಿ ಮೂಗಿನ ಶಸ್ತ್ರ ಚಿಕಿತ್ಸೆ ಮಾಡಿಕೊಂಡರು. ಇವರೆಲ್ಲರೂ ಸರ್ಜರಿ ಬಳಿಕ ತಮ್ಮ ಸೌಂದರ್ಯ ಹೆಚ್ಚಿಸಿಕೊಂಡು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.


Click it and Unblock the Notifications











