For Quick Alerts
  ALLOW NOTIFICATIONS  
  For Daily Alerts

  ಭಾರತೀಯ ಸೇನೆಯಿಂದ ಅತ್ಯುನ್ನತ ಗೌರವ ಪಡೆದ ವಿದ್ಯಾ ಬಾಲನ್

  |

  ಭಾರತೀಯ ಚಿತ್ರರಂಗಕ್ಕೆ ನಟಿ ವಿದ್ಯಾ ಬಾಲನ್ ನೀಡಿರುವ ಕೊಡುಗೆ ಗೌರವಿಸಿ ಭಾರತೀಯ ಸೇನೆ ಬಹಳ ವಿಶೇಷವಾಗಿ ಗೌರವಿಸಿದೆ. ಕಾಶ್ಮೀರದ ಗುಲ್ಮಾರ್ಗ್ನಲ್ಲಿರುವ ಮಿಲಟರಿ ಫೈರಿಂಗ್ ರೇಂಜ್‌ಗೆ (ಸೈನಿಕರು ಫೈರಿಂಗ್ ತರಬೇತಿ ಪಡೆಯುವ ಸ್ಥಳ) ವಿದ್ಯಾ ಬಾಲನ್ ಹೆಸರು ನಾಮಕರಣ ಮಾಡಲಾಗಿದೆ.

  ಮಿಲಟರಿ ಫೈರಿಂಗ್ ರೇಂಜ್‌ಗೆ ವಿದ್ಯಾ ಬಾಲನ್ ಹೆಸರು ನಾಮಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾ ಬಾಲನ್‌ಗೆ ಶುಭಾಶಯ ಹರಿದು ಬರುತ್ತಿದೆ. ನಟಿ ವೃತ್ತಿ ಜೀವನದಲ್ಲಿ ಇದು ಬಹಳ ಹೆಮ್ಮೆಯ ವಿಚಾರ ಎಂದು ಶ್ಲಾಘಿಸುತ್ತಿದ್ದಾರೆ. ಇದುವರೆಗೂ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ಹುಲಿ 'ಅವನಿ'ಯ ಕೊಂದ ಶೂಟರ್‌ನಿಂದ 'ಶೇರ್ನಿ' ಸಿನಿಮಾ ವಿರುದ್ಧ ದೂರುಹುಲಿ 'ಅವನಿ'ಯ ಕೊಂದ ಶೂಟರ್‌ನಿಂದ 'ಶೇರ್ನಿ' ಸಿನಿಮಾ ವಿರುದ್ಧ ದೂರು

  ಈ ವರ್ಷದ ಆರಂಭದಲ್ಲಿ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಆಯೋಜಿಸಿದ್ದ 'ಗುಲ್ಮಾರ್ಗ್ ವಿಂಟರ್ ಫೆಸ್ಟಿವಲ್'ನಲ್ಲಿ ವಿದ್ಯಾ ಬಾಲನ್ ಭಾಗವಹಿಸಿದ್ದರು. ತನ್ನ ಪತಿ ಸಿದ್ದಾರ್ಥ್ ರಾಯ್ ಕಪೂರ್ ಜೊತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

  ಇತ್ತೀಚಿಗಷ್ಟೆ ಆಸ್ಕರ್ ಆಡಳಿತ ಮಂಡಳಿಯ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ & ಸೈ ನ್ಸ್‌ನಲ್ಲಿ ಕಾರ್ಯನಿರ್ವಾಹಕ ಸದಸ್ಯರ ಹೊಸ ಬ್ಯಾಚ್‌ಗೆ ವಿದ್ಯಾ ಬಾಲನ್ ಆಯ್ಕೆಯಾಗಿದ್ದರು. ವಿದ್ಯಾ ಜೊತೆ ನಿರ್ಮಾಪಕರಾದ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್‌ಗೂ ಸಹ ಆಹ್ವಾನ ಬಂದಿದೆ.

  ವಿದ್ಯಾ ಬಾಲನ್‌ಗೆ ಸಕ್ಸಸ್ ತಂದು ಕೊಟ್ಟ 'ಶೆರ್ನಿ'

  Rachita Ram Biography | ಬಿಂದಿಯಾ ರಾಮ್ ರಚಿತಾ ರಾಮ್ ಆದ ಕಥೆ | Rachita Ram real Life story | Filmibeat

  ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದ 'ಶೆರ್ನಿ' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಶಸ್ವಿ ಪ್ರದರ್ಶನ ಕಾಣ್ತಿದೆ. ಅರಣ್ಯ ಅಧಿಕಾರಿ ಪಾತ್ರದಲ್ಲಿ ವಿದ್ಯಾ ನಟನೆ ಮೆಚ್ಚುಗೆ ಪಡೆದುಕೊಂಡಿದೆ. ನಿರ್ದೇಶಕ ಸುರೇಶ್ ತ್ರಿವೇಣಿ ಜೊತೆ 'ತುಮ್ಹಾರಿ ಸುಲು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  The Indian Army has named a firing range after vidya balan in Gulmarg, Kashmir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X