'ಭಾರತ್' ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸಿದ ಟೀಂ ಇಂಡಿಯಾ

ಸದ್ಯ ಕ್ರಿಕೆಟ್ ವಿಶ್ವಕಪ್ ನ ಹವಾ ಜೋರಾಗಿದೆ. ಇದರ ನಡುವೆ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿವೆ. ಸಾಮಾನ್ಯವಾಗಿ ವಿಶ್ವಕಪ್, ಐಪಿಎಲ್ ಸಮಯದಲ್ಲಿ ಸಿನಿಮಾಗಳು ರಿಲೀಸ್ ಆದ್ರೆ ಜನರು ಹೆಚ್ಚು ಸಿನಿಮಾ ಕಡೆ ಗಮನ ಹರಿಸಿವುದಿಲ್ಲ, ಕಲೆಕ್ಷನ್ ಗೆ ಹೊಡೆದ ಬೀಳುತ್ತೆ ಅಂತ ಹೇಳಲಾಗುತ್ತದೆ.

ಆದ್ರೆ 'ಭಾರತ್' ಸಿನಿಮಾ ವಿಷಯದಲ್ಲಿ ಹಾಗಾಗಲಿಲ್ಲ. ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ 'ಭಾರತ್' ಸಿನಿಮಾ ವಿಶ್ವ ಕಪ್ ನಡುವೆಯು ಉತ್ತಮ ಪ್ರದರ್ಶನ ಕಾಣುತ್ತಾ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ.

ಹೀಗಿರುವಾಗ ಭಾರತಿಯ ಕ್ರಿಕೆಟ್ ಟೀಂ 'ಭಾರತ್' ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸಿದೆ. ಹೌದು, ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್ ನಲ್ಲಿ ಬೀಡು ಬಿಟ್ಟಿದೆ. ಬಿಡುವಿನ ವೇಳೆಯಲ್ಲಿ ದೋನಿ ಬಾಯ್ಸ್ 'ಭಾರತ್' ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.

Indian cricket team watched superstar Salman Khan starrer Bharat

ಇಂಗ್ಲೆಡ್ ನ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಆಚೆ ಬಂದ ಆಟಗಾರರು ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಎಮ್ ಎಸ್ ಧೋನಿ, ಕೆ ಎಲ್ ರಾಹುಲ್, ಕೇದಾರ್ ಜಾದವ್, ಶಿಖರ್ ಧವನ್ ಸೇರಿದಂತೆ ಇನ್ನು ಅನೇಕರು 'ಭಾರತ್' ಸಿನಿಮಾ ನೋಡಿದ್ದಾರೆ. ಈ ಬಗ್ಗೆ ಕೇದರ್ ಜಾದವ್ ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಟಿಂ ಇಂಡಿಯಾ ಸಿನಿಮಾ ನೋಡಿದ ವಿಚಾರ ಸಲ್ಮಾನ್ ಖಾನ್ ಗಮನಕ್ಕು ಬಂದಿದೆ. 'ಭಾರತ್' ಸಿನಿಮಾ ನೋಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ್ದಾರೆ. "ಸಿನಿಮಾ ನೋಡಿದ್ದಕ್ಕಾಗಿ ಭಾರತೀಯಾ ಕ್ರಿಕೆಟ್ ತಂಡಕ್ಕೆ ಧನ್ಯವಾದಗಳು. ಮುಂಬರುವ ಎಲ್ಲಾ ಪಂದ್ಯಗಳಿಗೂ ಆಲ್ ದಿ ಬೆಸ್ಟ್. ಇಡೀ ದೇಶ ನಿಮ್ಮ ಜೊತೆಗಿದೆ. ಭಾರತ ಖಂಡಿತ ಗೆಲ್ಲುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

ಭಾರತ್ ಸದ್ಯ ಬಾಲಿವುಡ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ಮೊದಲ ದಿನವೆ 42 ಕೋಟಿ ಬಾಚಿಕೊಂಡಿದ್ದ ಭಾರತ್ ಸದ್ಯದ ಕಲೆಕ್ಷನ್ 175 ಕೋಟಿ ಆಗಿದೆ. ಈ ಬಾರಿಗೆ ಈದ್ ಗೆ ರಿಲೀಸ್ ಆಗಿದ್ದ ಭಾರತ್ ಗೆ ಮೊದಲ ದಿನವೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಚಿತ್ರಕ್ಕೆ ಅಲಿ ಅಬ್ಬಾಸ್ ಜಾಫರ್ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
Indian cricket team took out time to watch superstar Salman Khan starrer Bharat. Cricketer Kedar Jadhav shared a photograph of the "Bharat team" MS Dhoni, Hardik Pandya, Shikhar Dhawan and KL Rahul.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X