'ನಟ ಸಾಮ್ರಾಟ್' ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ನಟ ಸಾಮ್ರಾಟ್ ಶ್ರೀರಾಮ್ ಲಾಗೂ ನಿನ್ನೆ (ಡಿಸೆಂಬರ್ 17) ರಾತ್ರಿ ನಿಧನ ಹೊಂದಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ವಿಧಿವಶರಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಹುಟ್ಟಿದ ಶ್ರೀರಾಮ್ ಲಾಗೂ ನಾಟಕಗಳ ಮೂಲಕ ತಮ್ಮ ಕಲಾ ಬದುಕು ಪ್ರಾರಂಭ ಮಾಡಿದರು. ನಂತರ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದರು. ಎಂಬಿಬಿಎಸ್ ಹಾಗೂ ಎಂಎಸ್ ಮಾಡಿದರೂ ನಾಟಕದಿಂದ ದೂರ ಹೋಗಲಿಲ್ಲ.
ರಂಗಭೂಮಿಯ ಬಳಿಕ ಸಿನಿಮಾ ರಂಗಕ್ಕೆ ಶ್ರೀರಾಮ್ ಲಾಗೂ ಪ್ರವೇಶ ಪಡೆದರು. 1980 ರಲ್ಲಿ ಮರಾಠಿ ಸಿನಿಮಾ ಮಾಡಿದರು. ನಂತರ ಹಿಂದಿ ಸಿನಿಮಾಗಳಲ್ಲಿ ನಟಿಸಿದರು. 2016 ರಲ್ಲಿ ಬಂದ 'ಶಾಸನ್' ಅವರ ಕೊನೆಯ ಸಿನಿಮಾವಾಗಿತ್ತು.

'ಶ್ರೀಮಾನ್ ಶ್ರೀಮತಿ', 'ದಾಸ್ ಪ್ಯಾರಡೈಸ್' 'ಪಿಂಜಾರ', 'ಗಾಂಧಿ' ಹೀಗೆ ಸಾಕಷ್ಟು ಸಿನಿಮಾಗಳನ್ನು ಶ್ರೀರಾಮ್ ಲಾಗೂ ನೀಡಿದ್ದಾರೆ.
ಶ್ರೀರಾಮ್ ಲಾಗೂರಿಗೆ 92 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿ ಬಾಲಿವುಡ್ ನಲ್ಲಿ ದುಃಖ ಮೂಡಿಸಿದೆ. ನಟ ಪರೇಶ್ ರಾವಲ್, ರಿಷಿ ಕಪೂರ್ ಸೇರಿದಂತೆ ಅನೇಕರು ಶ್ರೀರಾಮ್ ಲಾಗೂ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು (ಡಿಸೆಂಬರ್ 18) ಟ್ವೀಟ್ ಮಾಡಿದ್ದು, ''ಶ್ರೀರಾಮ್ ಲಾಗೂ ವ್ಯಕ್ತಿಗತ ವರ್ಸಟೈಲಿಟಿ ಹಾಗೂ ಬ್ರಿಲಿಯನ್ಸ್ ಆಗಿದ್ದರು. ವರ್ಷಗಳಿಂದ ಅವರ ನಟನೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಅವರ ಕೆಲಸ ವರ್ಷಗಳ ಕಾಲ ನೆನಪಿನಲ್ಲಿ ಇರುತ್ತದೆ. ಓಂ ಶಾಂತಿ.'' ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.


Click it and Unblock the Notifications











