For Quick Alerts
  ALLOW NOTIFICATIONS  
  For Daily Alerts

  ವಯಸ್ಸಿನಲ್ಲಿ ತನಗಿಂತ ಚಿಕ್ಕವರನ್ನು ಮದುವೆಯಾದ ನಟಿಯರು

  |

  ಮದುವೆಯಾಗಲು ವಯಸ್ಸಿನಲ್ಲಿ ಹುಡುಗಿ ಚಿಕ್ಕವಳು ಆಗಿರಬೇಕು, ಹುಡುಗ ದೊಡ್ಡವನಾಗಿರಬೇಕು ಎಂಬ ಸಂಪ್ರದಾಯ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಂಪ್ರದಾಯ ಮಾಯವಾಗುತ್ತಿದೆ. ಪ್ರೀತಿಗೆ ವಯಸ್ಸಿನ ಅಂತರವಿಲ್ಲ, ಮದುವೆಗೆ ಸಂಪ್ರದಾಯ ಬೇಕಾಗಿಲ್ಲ ಎನ್ನುವ ಜನರೇಷನ್ ಕೂಡ ಹುಟ್ಟಿಕೊಂಡಿದೆ.

  ಹಾಗಾಗಿಯೇ, ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾಗುತ್ತಿದ್ದಾರೆ. ಇದು ಸಿನಿಮಾ ಜಗತ್ತಿನಲ್ಲಿ ಹೆಚ್ಚು ಕಂಡು ಬರುತ್ತಿದೆ. ಹೀಗೆ ವಯಸ್ಸಿನ ಅಂತರ ಹೊಂದಿರುವ ಸೆಲೆಬ್ರಿಟಿಗಳು ಯಾರು ಎಂದು ಹೇಳಿದ ತಕ್ಷಣ, ಥಟ್ ಅಂತ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಎನ್ನುತ್ತಾರೆ.

  ಈ ಜೋಡಿಯನ್ನು ಬಿಟ್ಟು ಇನ್ನು ಹಲವು ಜೋಡಿಗಳು ಹೀಗೆ ವಯಸ್ಸಿನಲ್ಲಿ ಅಂತರ ಹೊಂದಿದೆ. ಅಭಿಷೇಕ್ ಮತ್ತು ಐಶ್ವರ್ಯ ರೈ ಬಿಟ್ಟು ಬೇರೆ ಯಾರೆಲ್ಲಾ ಇದ್ದಾರೆ ಮುಂದೆ ಓದಿ....

  ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್

  ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್

  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ನಡುವೆ ಹತ್ತು ವರ್ಷ ವಯಸ್ಸಿನ ಅಂತರ ಇದೆ. ಪ್ರಿಯಾಂಕಾಗೆ ವಯಸ್ಸು 37. ನಿಕ್ ವಯಸ್ಸು 27. ಪ್ರಿಯಾಂಕಾ ಚೋಪ್ರಾಗಿಂತ ಹತ್ತು ವರ್ಷ ಚಿಕ್ಕವನು ಆಕೆಯ ಪತಿ ನಿಕ್ ಜೋನಸ್.

  'ಮಹೇಶ್ ಬಾಬು ಹೊಸ ಚಿತ್ರಕ್ಕೆ ಆಕೆಯೇ ಹೀರೋಯಿನ್ ಆಗಲಿ': ಪ್ರಿನ್ಸ್ ಪತ್ನಿ ಸೂಚಿಸಿದ್ದು ಯಾರನ್ನು?'ಮಹೇಶ್ ಬಾಬು ಹೊಸ ಚಿತ್ರಕ್ಕೆ ಆಕೆಯೇ ಹೀರೋಯಿನ್ ಆಗಲಿ': ಪ್ರಿನ್ಸ್ ಪತ್ನಿ ಸೂಚಿಸಿದ್ದು ಯಾರನ್ನು?

  ಬಿಪಾಶ ಬಸು ಮತ್ತು ಕರಣ್ ಸಿಂಗ್

  ಬಿಪಾಶ ಬಸು ಮತ್ತು ಕರಣ್ ಸಿಂಗ್

  ಬಾಲಿವುಡ್ ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ನಡುವೆ ನಾಲ್ಕು ವರ್ಷದ ವಯಸ್ಸಿನ ಅಂತರ ಇದೆ. ಬಿಪಾಶಾಗೆ ಈಗ 41 ವರ್ಷ. ಆಕೆಯ ಪತಿ ಕರಣ್ ಸಿಂಗ್ ಗೆ 37 ವರ್ಷ.

  ಆದಿತ್ಯ ಪಾಂಚೋಲಿ ಮತ್ತು ಜರೀನಾ ವಯಾಬ್

  ಆದಿತ್ಯ ಪಾಂಚೋಲಿ ಮತ್ತು ಜರೀನಾ ವಯಾಬ್

  ನಿರ್ಮಾಪಕ, ಗಾಯಕಿ ಆದಿತ್ಯ ಪಾಂಚೋಲಿ ಅವರಿಗಿಂತ ಆಕೆಯ ಪತ್ನಿ ದೊಡ್ಡವರು. ಆದಿತ್ಯ ಪತ್ನಿ ಜರೀನಾ ವಯಾಬ್ ಅವರಿಗೆ 60 ವರ್ಷ ವಯಸ್ಸು. ಆದಿತ್ಯ ಪಾಂಚೋಲಿಗೆ 55 ವರ್ಷ ವಯಸ್ಸು. ಇವರಿಬ್ಬರ ನಡುವೆ 5 ವರ್ಷ ಅಂತರ.

  ಗ್ರಾಮಿ 2020: ರೆಡ್ ಕಾರ್ಪೆಟ್ ನಲ್ಲಿ ಪ್ರಿಯಾಂಕ ಚೋಪ್ರಾಗ್ರಾಮಿ 2020: ರೆಡ್ ಕಾರ್ಪೆಟ್ ನಲ್ಲಿ ಪ್ರಿಯಾಂಕ ಚೋಪ್ರಾ

  ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ

  ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ

  ಬಾಲಿವುಡ್ನ ಮತ್ತೊಬ್ಬ ನಟಿ ನೇಹಾ ಧೂಪಿಯಾ ಅವರಿಗಿಂತ ಆಕೆಯ ಪತಿ ಅಂಗದ್ ಬೇಡಿ ಚಿಕ್ಕವರು. ನೇಹಾಗೆ ವಯಸ್ಸು 39 ವರ್ಷ. ಪತಿ ಅಂಗದ್ ಬೇಡಿಗೆ 36 ವರ್ಷ ವಯಸ್ಸು. ಪತ್ನಿಗಿಂತ ಅಂಗದ್ ಬೇಡಿ ಮೂರು ವರ್ಷ ಚಿಕ್ಕವರು.

  ಮಹೇಶ್ ಬಾಬು ಮತ್ತು ನಮ್ರತಾ

  ಮಹೇಶ್ ಬಾಬು ಮತ್ತು ನಮ್ರತಾ

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ನಮ್ರತಾ ವಯಸ್ಸಿನ ಅಂತರದಲ್ಲೂ ವ್ಯತ್ಯಾಸವಿದೆ. ಮಹೇಶ್ ಬಾಬು ಅವರಿಗಿಂತ ಪತ್ನಿ ನಮ್ರತಾ ನಾಲ್ಕು ವರ್ಷ ದೊಡ್ಡವರು. ಮಹೇಶ್ ಬಾಬುಗೆ 44 ವರ್ಷ ವಯಸ್ಸು. ನಮ್ರತಾಗೆ 48 ವರ್ಷ ವಯಸ್ಸು.

  ಐಶ್ವರ್ಯ ರೈ ಕೆಣಕಿ ತಪ್ಪು ಮಾಡಿದ್ದ ವಿವೇಕ್ ಒಬೆರಾಯ್ ಕ್ಷಮೆಯಾಚನೆಐಶ್ವರ್ಯ ರೈ ಕೆಣಕಿ ತಪ್ಪು ಮಾಡಿದ್ದ ವಿವೇಕ್ ಒಬೆರಾಯ್ ಕ್ಷಮೆಯಾಚನೆ

  ಐಶ್ ಮತ್ತು ಅಭಿಷೇಕ್

  ಐಶ್ ಮತ್ತು ಅಭಿಷೇಕ್

  ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆಯೂ ವಯಸ್ಸಿನ ಅಂತರದಲ್ಲಿ ವ್ಯತ್ಯಾಸವಿದೆ. ಐಶ್ವರ್ಯ ವಯಸ್ಸು 46. ಅಭಿಷೇಕ್ ವಯಸ್ಸು 43. ಇವರಿಬ್ಬರಿಗೂ 3 ವರ್ಷ ಅಂತರವಿದೆ.

  English summary
  Indian Film stars who married younger men and younger women. check out in list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X