ಮದುವೆಗೂ ಮುನ್ನ ಗಾಯಕಿ ಗರ್ಭಿಣಿ? ಮೌನ ಮುರಿದ ಆಕೆ ಹೇಳಿದ್ದೇನು?

ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಆರಂಭವಾಗಿ ಎಲೆಮರೆಯ ಕಾಯಿಯಂತಿದ್ದ ಹಲವರಿಗೆ ಅವಕಾಶಗಳು ಸಿಗುವಂತಾಗಿದೆ. ಕೆಲವರು ರಾತ್ರೋರಾತ್ರಿ ಫೇಮಸ್ ಆಗುತ್ತಿದ್ದಾರೆ. ಕಿರುತೆರೆಯ ಸಿಂಗಿಂಗ್ ರಿಯಾಲಿಟಿ ಶೋನಿಂದ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಇಂತಹವರ ಪಟ್ಟಿಯಲ್ಲಿ ಅರುಣಿತಾ ಕಾಂಜಿಲಾಲ್ ಕೂಡ ಒಬ್ಬರು.

ಕೊಲ್ಕತ್ತಾ ಮೂಲದ ಅರುಣಿತಾ ಕಾಂಜಿಲಾಲ್ ತಮ್ಮ ಸುಮಧುರ ಗಾಯನದಿಂದ ಸಾಕಷ್ಟು ಸಂಗೀತ ಪ್ರೇಮಿಗಳ ಮನಗೆದ್ದಿದ್ದಾರೆ. ಚಿಕ್ಕಂದಿನಲ್ಲೇ ಹಾಡಲು ಕಲಿತ ಅರುಣಿತಾ ಮುಂದೆ ಬೆಂಗಾಲಿ 'ಸರಿಗಮಪ' ಶೋನಲ್ಲಿ ಹಾಡಿ ವಿಜೇತರಾದ್ದರು. 10ನೇ ವಯಸ್ಸಿನಲ್ಲೇ ತಮ್ಮ ಸುಮಧುರ ಕಂಠದಿಂದ ಮೋಡಿ ಮಾಡಿದರು. ಮುಂದೆ ಇಂಡಿಯನ್ ಐಡೆಲ್ 12 ಸ್ಪರ್ಧಿಯಾಗಿ ಆಯ್ಕೆ ಆಗಿದ್ದರು.

Indian Idol 12 Fame Singer Arunita Kanjilal pregnant Here s The Truth

2021ರ ಇಂಡಿಯನ್ ಐಡೆಲ್ ಶೋನಲ್ಲಿ ತಮ್ಮ ಗಾಯನದಿಂದ ತೀರ್ಪುಗಾರರು ಹಾಗೂ ವೀಕ್ಷಕರ ಪ್ರೀತಿ ಗಳಿಸಿದ ಅರುಣಿತಾ ರನ್ನರ್‌ ಅಪ್‌ ಪ್ರಶಸ್ತಿ ಪಡೆದಿದ್ದರು. ಅರುಣಿತಾ ಕಾಂಜಿಲಾಲ್ ಮದುವೆಗೂ ಮುನ್ನ ಗರ್ಭಿಣಿ ಆಗಿದ್ದಾರೆ ಎನ್ನುವ ಗುಸುಗುಸು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯಾರೋ ಕಿಡಿಗೇಡಿಗಳು ಆಕೆ ಗರ್ಭಿಣಿ ರೀತಿ ಕಾಣುವ ಫೇಕ್ ಫೋಟೊವನ್ನು ವೈರಲ್ ಮಾಡುತ್ತಿದ್ದಾರೆ.

ಡೀಪ್ ಫೇಕ್ ಫೋಟೊ, ವೀಡಿಯೋಗಳು ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ರಶ್ಮಿಕಾ ಮಂದಣ್ಣ, ಕಾಜೋಲ್, ಆಲಿಯಾ ಭಟ್, ಕತ್ರೀನಾ ಕೈಫ್ ಸೇರಿದಂತೆ ಸಾಕಷ್ಟು ನಟಿಯರ ಡೀಪ್‌ ಫೇಕ್‌ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚರ್ಚೆ ಹುಟ್ಟಾಕ್ಕಿದ್ದು ಗೊತ್ತೇಯಿದೆ. ನಟಿಯರನ್ನು ಅಶ್ಲೀಲವಾಗಿ ಚಿತ್ರಿಸಿ ಫೋಟೊ, ವೀಡಿಯೋ ಹರಿಬಿಡಲಾಗುತ್ತಿತ್ತು. ಆದರೆ ವಿಚಿತ್ರವಾಗಿ ಗಾಯಕಿ ಗರ್ಭಿಣಿ ರೀತಿ ಇರುವ ಫೋಟೊಗಳನ್ನು ಎಡಿಟ್ ಮಾಡಿ ಸುಳ್ಳು ಸುದ್ದಿ ಹರಡುವ ಪ್ರಯತ್ನ ನಡೀತಿದೆ.

ಇತ್ತೀಚೆಗೆ ತಮಿಳು ನಟಿ ಓವಿಯಾ ಫೇಕ್ ವೀಡಿಯೋ ಸಗ ವೈರಲ್ ಆಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಸಹ ನೀಡಿದ್ದರು. ಅದರ ಬೆನ್ನಲ್ಲೇ ಗಾಯಕಿ ಅರುಣಿತಾ ಗರ್ಭಿಣಿ ಎಂದು ಬಿಂಬಿಸುವ ಫೋಟೊಗಳನ್ನು ತೇಲಿ ಬಿಡಲಾಗಿದೆ. ಕೇವಲ ಆಕೆಯ ಬೇಬಿ ಬಂಪ್ ಫೇಕ್ ಫೋಟೊಗಳು ಮಾತ್ರವಲ್ಲ, ಸ್ನೇಹಿತ ಪವನ್‌ದೀಪ್ ರಾಜನ್ ಫೋಟೊಗಳನ್ನು ಒಟ್ಟಿಗೆ ಸೇರಿಸಿ ಹುಚ್ಚಾಟ ಮೆರೆಯುತ್ತಿದ್ದಾರೆ.

ಇಂಡಿಯನ್ ಐಡೆಲ್ 12ರಲ್ಲಿ ಪವನ್‌ದೀಪ್ ರಾಜನ್ ಗೆದ್ದಿದ್ದರು. ಶೋನಲ್ಲಿ ಪವನ್ ಹಾಗೂ ಅರುಣಿತಾ ಜೋಡಿ ಗಮನ ಸೆಳೆದಿತ್ತು. ಇಬ್ಬರೂ ಒಟ್ಟಿಗೆ ಹಾಡು ಹಾಡಿ ರಂಜಿಸಿದ್ದರು. ಇಬ್ಬರೂ ಆತ್ಮೀಯ ಸ್ನೇಹಿತರು ಆಗಿದ್ದರು. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಇದೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ನಾವಿಬ್ಬರು ಜಸ್ಟ್‌ ಫ್ರೆಂಡ್ಸ್ ಅಷ್ಟೇ ಎಂದು ಹೇಳಿದ್ದರು. ಇದೀಗ ಗರ್ಭಿಣಿ ಅರುಣಿತಾ ಜೊತೆ ಪತಿ ರೀತಿ ಪವನ್ ನಿಂತಿರುವ ಫೇಕ್ ಫೋಟೊಗಳನ್ನು ಮಾರ್ಪ್‌ ಮಾಡಲಾಗಿದೆ.

ಸದ್ಯ ವೈರಲ್ ಫೋಟೊಗಳ ಬಗ್ಗೆ ಗಾಯಕಿ ಅರುಣಿತಾ ಅವರ ಟೀಮ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದೆ. ಸದ್ಯ ಹರಿದಾಡುತ್ತಿರುವ ಫೋಟೊಗಳು ಎಲ್ಲವೂ ಫೇಕ್. ಆ ಫೋಟೊಗಳನ್ನು ನಮ್ಮ ಗಮನಕ್ಕೂ ಬಂದಿದೆ. ಇಂತಹ ಫೋಟೊ ಮೂಲಕ ತಪ್ಪು ಸುದ್ದಿ ಹರಡುವವರಿಗೆ ನಾಚಿಕೆ ಆಗಬೇಕು. ಈ ಫೋಟೊಗಳು ನಿಜವಲ್ಲ, ಇದಕ್ಕೂ ಅರುಣಿತಾಗೂ ಸಂಬಂಧವಿಲ್ಲ, ಯಾವುದೇ ಸುಳ್ಳು ಸುದ್ದಿ ಹರಡಬೇಡಿ ಎನ್ನುವುದು ನಮ್ಮ ಮನವಿ" ಎಂದು ತಿಳಿಸಿದ್ದಾರೆ.

More from Filmibeat

English summary
Indian Idol 12 Fame Singer reacts on her Her Fake Pregnancy Photos;
Read more about: bollywood hindi music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X