twitter
    For Quick Alerts
    ALLOW NOTIFICATIONS  
    For Daily Alerts

    ರಿಯಾಲಿಟಿ ಶೋ ಸ್ಪರ್ಧಿಗೆ 1.7 ಲಕ್ಷ ವಂಚಿಸಿದ ಖತರ್ನಾಕ್ ಖದೀಮ

    |

    ಹಿಂದಿಯ ಖ್ಯಾತಿ ರಿಯಾಲಿಟಿ ಶೋ 'ಇಂಡಿಯನ್ ಐಡಲ್' ಸ್ಪರ್ಧಿಯೊಬ್ಬರಿಗೆ ವಂಚಿಸಿದ ಆರೋಪದಲ್ಲಿ 22 ವರ್ಷದ ವ್ಯಕ್ತಿಯೊಬ್ಬನನ್ನ ಸಿಯಾನ್ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಡೆಬೆಟ್ ಕಾರ್ಡ್ ಪರಿಶೀಲನೆ ಎಂಬ ನೆಪವೊಡ್ಡಿ ಆನ್ ಲೈನ್ ಮೂಲಕ 1.7 ಲಕ್ಷ ಹಣವನ್ನ ಲಪಟಾಯಿಸಿರುವ ಘಟನೆ ಸಿಯಾನ್ ನಲ್ಲಿ ನಡೆದಿದೆ.

    ಬಂಧಿತ ಆರೋಪಿ ರಾಜ್ ಕುಮಾರ್ ಜಯನಾರಾಯಣ್ ಮಂದಲ್ ಎಂಬ ವ್ಯಕ್ತಿಯನ್ನ ಮುಂಬೈನ ಸೈಬರ್ ಪೊಲೀಸರ ಸಹಾಯದಿಂದ ಝಾರ್ಖಂಡ್ ನಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ.

    ಇಂಡಿಯನ್ ಐಡಲ್ ಸ್ಪರ್ಧಿಯಾಗಿದ್ದ ಅವಂತಿ ಪಟೇಲ್ ಎಂಬುವರಿಗೆ ಫೋನ್ ಮಾಡಿದ್ದ ಮಂದಲ್, ಸಾರ್ವಜನಿಕ ವಲಯದ ಬ್ಯಾಂಕ್ ನಲ್ಲಿ ನಿಮ್ಮ ಸಹೋದರಿ ಕಾರ್ಯನಿರ್ವಾಹಕರಾಗಿ ನೇಮಕಗೊಂಡಿದ್ದಾರೆ ಎಂದು ಹೇಳಿದ್ದ. ಹೀಗೆ ಮಾತನಾಡುವಾಗ ಅವರ ಬ್ಯಾಂಕ್ ವಿವರವನ್ನ ಮತ್ತು ಪಾಸ್ ವರ್ಡ್ ಪಡೆದು, ಅವಂತಿ ಪಟೇಲ್ ಮತ್ತು ಸಹೋದರಿ ಖಾತೆಯಿಂದ 1.7 ಲಕ್ಷ ಹಣವನ್ನ ಬೇರೊಂದು ಖಾತೆಗೆ ವರ್ಗಾಯಿಸಿ ಹಣ ಲೂಟಿ ಮಾಡಿದ್ದಾನೆ.

    Indian Idol contestant Avanti Patel duped of Rs 1.75 lakh

    ಖಾತೆಯಲ್ಲಿ ಹಣ ಕಾಣೆಯಾಗಿರುವ ಬಗ್ಗೆ ಅವಂತಿ ಪಟೇಲ್ ಗೆ ಅರಿವಾಗಿ, ನಂತರ ಸಿಯಾನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂತರ ತನಿಖೆ ಆರಂಭಿಸಿದ ಪೊಲೀಸರು, ಆರೋಪಿಯ ದೂರವಾಣಿ ನಂಬರ್ ಟ್ರೇಸ್ ಮಾಡಿ, ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    English summary
    The Sion police on Saturday arrested a 22-year-old man from Jharkhand for cheating former Indian Idol contestantAvanti Patel and her sister of Rs 1.75 lakh
    Tuesday, March 19, 2019, 17:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X