twitter
    For Quick Alerts
    ALLOW NOTIFICATIONS  
    For Daily Alerts

    ಲಾಲ್‌ ಸಿಂಗ್ ಚಡ್ಡಾ, ಬ್ರಹ್ಮಾಸ್ತ್ರ, ಸಲಾರ್, ಆದಿಪುರುಷ್ ಎನ್‌ಎಫ್‌ಟಿಗೆ ಎಂಟ್ರಿ!

    By ಫಿಲ್ಮಿಬೀಟ್ ಡೆಸ್ಕ್
    |

    ಭಾರತೀಯ ಸಿನಿಮಾರಂಗದಲ್ಲಿ NFT ಜಮಾನ ಶುರುವಾಗಿದೆ. ಸ್ಟಾರ್ ಹೀರೊ ಸಿನಿಮಾಗಳು ಎನ್‌ಎಫ್‌ಟಿಗೆ ಒಗ್ಗಿಕೊಳ್ಳುತ್ತಿವೆ. ಅಂದರೆ, ಸಿನಿಮಾಗಳಲ್ಲಿ ಬಳಸಿದ ವಸ್ತುಗಳು ಎನ್‌ಎಫ್‌ಟಿಯಲ್ಲಿ ಮಾರಾಟವಾಗುತ್ತವೆ.

    'ಕೆಜಿಎಫ್ 2' ಸಿನಿಮಾದ ಬಳಿಕ ಕನ್ನಡದಲ್ಲೂ ಎನ್‌ಎಫ್‌ಟಿ ಬಗ್ಗೆ ಕ್ರೇಜ್ ಹೆಚ್ಚಾಗಿದೆ. ಈಗ ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ಸಿನಿಮಾಗಳು ಕೂಡ ಇದೇ ಹಾದಿಯನ್ನು ಹಿಡಿಯುತ್ತಿವೆ. ಬಾಲಿವುಡ್, ಟಾಲಿವುಡ್,ಸ್ಯಾಂಡಲ್‌ವುಡ್ ಸಿನಿಮಾಗಳು ಕೂಡ ಇದೇ ಹಾದಿ ಹಿಡಿದಿದೆ.

    Indian Movies Going Towards NFT Like Laal Singh Chaddha, Brahmastra, Salaar, Adipurush

    NFT? ಹೇಗೆ ಕೆಲಸ ಮಾಡುತ್ತೆ?

    ಪೇಂಟಿಂಗ್‌, ಫೋಟೊ, ವಿಡಿಯೋ, ಸಂಗೀತ, ಸೆಲ್ಫಿ, ಟ್ವೀಟ್‌ ಮುಂತಾದವುಗಳನ್ನು ಡಿಜಿಟಲ್‌ ಸ್ವರೂಪಕ್ಕೆ ಪರಿವರ್ತಿಸಬಹುದು. ಅಂದ್ಹಾಗೆ ಎನ್‌ಎಫ್‌ಟಿಗಳು ಬ್ಲಾಕ್‌ಚೈನ್‌ ವ್ಯವಹಾರದ ಮೂಲಕ ನಡೆಯುತ್ತವೆ. ಅಂದರೆ, ಒಂದು ಎಲ್ಲಾ ವಹಿವಾಟುಗಳೂ ನಡೆಯುವ ಡಿಜಿಟಲ್‌ ಲೆಡ್ಜರ್‌ ಎನ್ನಬಹುದು. ಇದಕ್ಕೆ ನೀವೆ ಮಾಲೀಕರು ಎನ್ನುವ ಪ್ರಮಾಣ ಪತ್ರವೂ ಸಿಗಲಿದೆ.

    ಎನ್‌ಎಫ್‌ಟಿಗಳನ್ನು ಕಾಫಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದು ಯೂನಿಕ್ ಆದ ಅಂಶಗಳನ್ನು ಒಳಗೊಂಡಿವೆ, ಹಾಗಾಗಿ ಅದನ್ನು ಬೇರೆ ಯಾವುದೇ ಇವುಗಳನ್ನು ಬೇರೆ ವಸ್ತುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಹಾಗೂ ಬದಲಾಯಿಸಲು ಸಾಧ್ಯವಿಲ್ಲ.

    ಮಾರ್ವೆಲ್ಸ್ ಸಿನಿಮಾ ಬಳಿಕ ಭಾರತೀಯ ಸಿನಿಮಾಗಳು NFT ಮಾರುಕಟ್ಟೆಯಲ್ಲಿ ರಾರಾಜಿಸಲು ಸಿದ್ಧವಾಗಿವೆ. ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ನಡಿ ಡಿಜಿಟಲ್ ಲೋಕದಲ್ಲಿ NFT ಹೊಸ ಕ್ರಾಂತಿಗೆ ನಾಂದಿ ಹಾಡಲು ಸಜ್ಜಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ವೊಬ್ಬರು ತಮ್ಮದೇ ಸ್ವತಃ ಮಾರುಕಟ್ಟೆಯಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ NFT ವಲಯದಲ್ಲಿ ಭಾರತೀಯ ಚಿತ್ರರಂಗ ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ.

    Indian Movies Going Towards NFT Like Laal Singh Chaddha, Brahmastra, Salaar, Adipurush

    NFTಯಲ್ಲಿ ಬಿಡುಗಡೆಯಾಲಿವೆ ಈ ಸಿನಿಮಾಗಳು?

    'ಕೆಜಿಎಫ್ 2' ಬಳಿಕ NFT ವಲಯಕ್ಕೆ ಸದ್ಯ ಪ್ಯಾನ್ ಇಂಡಿಯಾ ಸಿನಿಮಾ 'ರಾಕೆಟ್ರಿ' ಪ್ರವೇಶಿಸಿದೆ. ಇದಾದ ಬಳಿಕ 'ಲಾಲ್ ಸಿಂಗ್ ಚಡ್ಡಾ', 'ಸಲಾರ್', 'ಆದಿಪುರುಷ', 'ಬ್ರಹ್ಮಾಸ್ತ್ರ' ಸೇರಿದಂತೆ ಹಲವು ಸಿನಿಮಾಗಳು ಎಂಟ್ರಿ‌ ಕೊಡಲಿವೆ ಎನ್ನಲಾಗ್ತಿದೆ. ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಮಾತ್ರವಲ್ಲ ಸ್ಯಾಂಡಲ್ ವುಡ್ ಚಿತ್ರರಂಗ ಕೂಡ NFT ಮಾರುಕಟ್ಟೆಯನ್ನು‌ ನಿರೀಕ್ಷಿಸುತ್ತಿದೆ.

    ಮೆಟಾವರ್ಸ್ ಮೂಲಕ ತಮ್ಮ ನೆಚ್ಚಿನ ಸ್ಟಾರ್ಸ್ ಭೇಟಿಯಾಗಲು‌ ಫ್ಯಾನ್ಸ್ ಕಾತುರರಾಗಿದ್ದಾರೆ. ದುಬೈ ಟೆಕ್ ಕಂಪನಿಯೊಂದು ಇಂಡಿಯನ್ ಸ್ಟಾರ್ ಜೊತೆ ಕೈ ಜೋಡಿಸಿದ್ದು, NFT ಮಾರುಕಟ್ಟೆಗೆ ಕನ್ನಡ ಚಿತ್ರರಂಗ ಉತ್ತಮ ವೇದಿಕೆಯಾಗಿದೆ.

    English summary
    Indian Movies Going Towards NFT Like Laal Singh Chaddha, Brahmastra, Salaar, Adipurush, Know More.
    Saturday, July 16, 2022, 23:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X