For Quick Alerts
  ALLOW NOTIFICATIONS  
  For Daily Alerts

  'ಭಾರತೀಯ ಪನೋರಮಾ-2021' ಸಿನಿಮಾಗಳಿಗೆ ಆಹ್ವಾನ: ಅಂತಿಮ ದಿನಾಂಕ?

  |

  ಭಾರತದ 52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು(ಐಎಫ್ಎಫ್ಐ) ʻಭಾರತೀಯ ಪನೋರಮಾ-2021ʼಕ್ಕೆ ಸಿನಿಮಾಗಳಿಗೆ ಆಹ್ವಾನ ನೀಡಿರುವುದಾಗಿ ಪ್ರಕಟಣೆ ಹೊರಡಿಸಿದೆ.

  ʻಭಾರತೀಯ ಪನೋರಮಾʼವು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಪ್ರಮುಖಘಟಕವಾಗಿದ್ದು, ಇದರ ಅಡಿಯಲ್ಲಿ ಸಮಕಾಲೀನ ಭಾರತೀಯ ಚಲನಚಿತ್ರಗಳಲ್ಲಿ ಅತ್ಯುತ್ತಮವಾದುದನ್ನು ಚಲನಚಿತ್ರ ಕಲೆಯ ಪ್ರಚಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಐಎಫ್ಎಫ್ಐನ 52ನೇ ಆವೃತ್ತಿಯು 2021ರ ನವೆಂಬರ್ 20ರಿಂದ 28ರವರೆಗೆ ಗೋವಾ ದಲ್ಲಿ ನಡೆಯಲಿದೆ.

  ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ 12 ಆಗಸ್ಟ್, 2021 ಆಗಿದ್ದು ಆನ್‌ಲೈನ್‌ ಮೂಲಕ ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿಯನ್ನು ಇತರ ಅಗತ್ಯ ದಾಖಲೆಗಳೊಂದಿಗೆ ಸ್ವೀಕರಿಸುವ ಕೊನೆಯ 23 ಆಗಸ್ಟ್, 2021 ಆಗಿರುತ್ತದೆ. 2021ನೇ ಸಾಲಿನ ʻಭಾರತೀಯ ಪನೋರಮಾʼಕ್ಕೆ ಚಲನಚಿತ್ರಗಳನ್ನು ಸಲ್ಲಿಸುವಾಗ ಮಾರ್ಗಸೂಚಿಗಳನ್ನು ಅನುಸರಿಸಬೇಕಿದೆ. ಪ್ರವೇಶಕ್ಕೆ ಸಲ್ಲಿಸಿದ ಚಿತ್ರದ ʻಸಿಬಿಎಫ್‌ಸಿʼ ದಿನಾಂಕ ಅಥವಾ ನಿರ್ಮಾಣ ಪೂರ್ಣಗೊಂಡ ದಿನಾಂಕವು ಚಿತ್ರೋತ್ಸವದ ಹಿಂದಿನ ಕೊನೆಯ 12 ತಿಂಗಳ ಒಳಗಿರಬೇಕು, ಅಂದರೆ ಆಗಸ್ಟ್ 1, 2020ರಿಂದ 31 ಜುಲೈ, 2021ರ ಅವಧಿಯಲ್ಲಿರಬೇಕು. ʻಸಿಬಿಎಫ್‌ಸಿʼಯಿಂದ ಪ್ರಮಾಣೀಕರಿಸದ ಆದರೆ, ಈ ಅವಧಿಯಲ್ಲಿ ನಿರ್ಮಿಸಲಾದ ಚಲನಚಿತ್ರಗಳನ್ನು ಸಹ ಸಲ್ಲಿಸಬಹುದು. ಎಲ್ಲಾ ಚಲನಚಿತ್ರಗಳು ಇಂಗ್ಲಿಷ್ ಸಬ್‌ ಟೈಟಲ್) ಹೊಂದಿರುವುದು ಕಡ್ಡಾಯ.

  ಭಾರತೀಯ ಚಲನಚಿತ್ರಗಳ ಮೂಲಕ ಭಾರತೀಯ ಸಿನಿಮಾ ಮತ್ತು ಅದರ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯನ್ನು ಉತ್ತೇಜಿಸಲು 1978ರಲ್ಲಿ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾಗವಾಗಿ ʻಭಾರತೀಯ ಪನೋರಮಾʼವನ್ನು ಪರಿಚಯಿಸಲಾಯಿತು. ಅಂದಿನಿಂದ ʻಭಾರತೀಯ ಪನೋರಮಾʼವು ಆಯಾ ವರ್ಷದ ಅತ್ಯುತ್ತಮ ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸಲು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  ಭಾರತ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯವು ʻಭಾರತೀಯ ಪನೋರಮಾʼವನ್ನು ಆಯೋಜಿಸುತ್ತದೆ. ಸಿನಿಮೀಯ, ವಿಷಯಾಧಾರಿತ ಮತ್ತು ಸೌಂದರ್ಯದ ಉತ್ಕೃಷ್ಟತೆ ಹೊಂದಿರುವ ಫೀಚರ್‌ ಮತ್ತು ನಾನ್‌ ಫೀಚರ್‌ ಚಲನಚಿತ್ರಗಳನ್ನು ಆಯ್ಕೆ ಮಾಡಿ, ಭಾರತ ಮತ್ತು ವಿದೇಶಗಳಲ್ಲಿನ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಲಾಭರಹಿತವಾಗಿ ಪ್ರದರ್ಶಿಸುವ ಮೂಲಕ ಚಲನಚಿತ್ರ ಕಲೆಯ ಪ್ರಚಾರ ಮಾಡುವುದು ಇದರ ಉದ್ದೇಶವಾಗಿದೆ. ದ್ವಿಪಕ್ಷೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳ ಅಡಿಯಲ್ಲಿ ನಡೆಯುವ ಭಾರತೀಯ ಚಲನಚಿತ್ರ ಸಪ್ತಾಹಗಳು, ಮತ್ತು ಸಾಂಸ್ಕೃತಿಕ ವಿನಿಮಯ ಶಿಷ್ಟಾಚಾರಗಳ ಹೊರಗೆ ನಡೆಯುವ ವಿಶೇಷ ಭಾರತೀಯ ಚಲನಚಿತ್ರೋತ್ಸವಗಳು ಮತ್ತು ಭಾರತದಲ್ಲಿ ನಡೆಯುವ ವಿಶೇಷ ಭಾರತೀಯ ಪನೋರಮಾ ಉತ್ಸವಗಳಲ್ಲೂ ಇಂತಹ ಚಿತ್ರಗಳನ್ನು ಪ್ರದರ್ಶಿಸಿ ಚಲನಚಿತ್ರ ಕಲೆಯ ಪ್ರಚಾರ ಮಾಡಲಾಗುತ್ತದೆ.

  English summary
  Indian Panorama calls for entries for 52nd edition of IFFI. last date to submit applications online is 12th August, 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X