twitter
    For Quick Alerts
    ALLOW NOTIFICATIONS  
    For Daily Alerts

    ಒಲಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡ ರೋಚಕ ಆಟ: 'ಚೆಕ್ ದೇ ಇಂಡಿಯಾ 2' ಆಫರ್?

    |

    ಟೋಕಿಯೊ ಒಲಂಪಿಕ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಸೇಮಿಫೈನಲ್ ಪ್ರವೇಶಿಸಿ, ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸೋಲು ಕಂಡಿತು. ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲಿ 3-4 ಅಂತರದಲ್ಲಿ ಸೋಲು ಅನುಭವಿಸಿತು. ಇದರೊಂದಿಗೆ ಒಲಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ತಂಡ ಪದಕ ಗೆಲ್ಲುವ ಅವಕಾಶ ಕೈ ತಪ್ಪಿತು.

    ಟೋಕಿಯೊ ಒಲಂಪಿಕ್ ಹಾಕಿ ಟೂರ್ನಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಭಾರತ ಬರಿಗೈನಲ್ಲಿ ಹಿಂತಿರುಗಿದೆ. ಆದರೆ, ಒಲಂಪಿಕ್‌ನಲ್ಲಿ ಭಾರತದ ಮಹಿಳಾ ತಂಡದ ಪ್ರದರ್ಶನಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

    ಪದಕ ಗೆಲ್ಲದಿದ್ದರೂ ನೀವು ಕೋಟ್ಯಂತರ ಹೃದಯ ಗೆದ್ದಿದ್ದೀರಿ: ಕೋಚ್ ಪ್ರಶಂಸೆ

    ಪದಕ ಗೆಲ್ಲದಿದ್ದರೂ ದೇಶ ಜನರ ಹೃದಯ ಗೆಲ್ಲುವಲ್ಲಿ ಮಹಿಳಾ ಹಾಕಿ ತಂಡ ಸಫಲವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಖುದ್ದು ದೂರವಾಣಿ ಕರೆ ಮಾಡಿ ಹಾಕಿ ತಂಡದ ಅಟಗಾರ್ತಿಯರು ಹಾಗೂ ಕೋಚ್‌ಗೆ ಅಭಿನಂದನೆ ಸಲ್ಲಿಸಿದರು.

    Indian Women Hockey Coach suggest to do Chak de India 2 To Sharukh khan

    ಟೋಕಿಯೊ ಒಲಂಪಿಕ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದ ಮಹಿಳಾ ಹಾಕಿ ತಂಡಕ್ಕೆ ನಟ ಶಾರೂಖ್ ಖಾನ್ ಸಹ ಅಭಿನಂದನೆ ವ್ಯಕ್ತಪಡಿಸಿದ್ದರು. ಪಂದ್ಯ ಸೋಲಿನ ಬಳಿಕ ಟ್ವೀಟ್ ಮಾಡಿದ್ದ ಶಾರೂಖ್ ಖಾನ್, ''ಹೃದಯ ಛಿದ್ರವಾಗಿದೆ'' ಎಂದು ಬೇಸರ ಹಂಚಿಕೊಂಡಿದ್ದರು. ''ನಿಜಕ್ಕೂ ಬಹಳ ಅದ್ಭುತವಾಗಿ ಆಟ ಆಡಿದ್ರಿ. ಕೋಟ್ಯಾಂತರ ಭಾರತೀಯರನ್ನು ನೀವು ಉತ್ತೇಜಿಸಿದ್ರಿ. ಇದು ನಿಮ್ಮ ಗೆಲುವು'' ಎಂದು ಶಾರೂಖ್ ಶುಭಾಶಯ ತಿಳಿಸಿದರು.

    ಶಾರೂಖ್ ಖಾನ್-ಅಟ್ಲಿ ಚಿತ್ರದ ಅಪ್‌ಡೇಟ್: ಆಗಸ್ಟ್ ತಿಂಗಳಲ್ಲಿ ಸರ್ಪ್ರೈಸ್ಶಾರೂಖ್ ಖಾನ್-ಅಟ್ಲಿ ಚಿತ್ರದ ಅಪ್‌ಡೇಟ್: ಆಗಸ್ಟ್ ತಿಂಗಳಲ್ಲಿ ಸರ್ಪ್ರೈಸ್

    ಮಹಿಳಾ ಹಾಕಿ ತಂಡದ ವೀರೋಚಿತ ಆಟದ ನಂತರ ಸಾಮಾಜಿಕ ಜಾಲತಾಣದಲ್ಲಿ 'ಚೆಕ್ ದೇ ಇಂಡಿಯಾ 2' ಟ್ರೆಂಡ್ ಆಯ್ತು. ಶಾರೂಖ್ ಖಾನ್ ಚೆಕ್ ದೇ ಇಂಡಿಯಾ ಸೀಕ್ವೆಲ್ ಮಾಡಲಿ ಎಂದು ಫ್ಯಾನ್ಸ್ ಒತ್ತಾಯಿಸಿದರು. ಕೇವಲ ಬಾದ್‌ಶಾ ಅಭಿಮಾನಿಗಳು ಮಾತ್ರವಲ್ಲ, ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಸ್ಜೋರ್ಡ್ ಮರಿಜ್ನೆ ಸಹ ಚೆಕ್ ದೇ ಇಂಡಿಯಾ 2 ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ.

    Indian Women Hockey Coach suggest to do Chak de India 2 To Sharukh khan

    ಶಾರೂಖ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕೋಚ್, ''ನಿಮ್ಮ ಈ ಪ್ರೀತಿಗೆ ಧನ್ಯವಾದ ಶಾರೂಖ್ ಖಾನ್. ಬಾಲಿವುಡ್‌ನಿಂದ ಸಿಕ್ಕಿರುವ ಬೆಂಬಲ ಬಹಳ ದೊಡ್ಡದು. ಈಗ ಚೆಕ್‌ ದೇ ಇಂಡಿಯಾ 2 ಸಮಯ. ಏನು ಹೇಳ್ತೀರಾ'' ಎಂದು ಟ್ವೀಟ್ ಮಾಡಿ ಚರ್ಚೆ ಹುಟ್ಟುಹಾಕಿದ್ದಾರೆ.

    2007ರಲ್ಲಿ 'ಚೆಕ್ ದೇ ಇಂಡಿಯಾ' ಸಿನಿಮಾ ಬಿಡುಗಡೆಯಾಗಿತ್ತು. ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಭಾಗವಹಿಸಿ, ಪ್ರಶಸ್ತಿ ಗೆಲ್ಲುವ ಕುರಿತಾದ ಸಿನಿಮಾ ಇದಾಗಿತ್ತು. ಶಾರೂಖ್ ಖಾನ್ ಮಹಿಳಾ ಹಾಕಿ ತಂಡದ ಕೋಚ್ ಕಬೀರ್ ಖಾನ್ ಪಾತ್ರದಲ್ಲಿ ನಟಿಸಿದ್ದರು. ಶಿಮಿತ್ ಅಮೀನ್ ನಿರ್ದೇಶಿಸಿದ್ದ ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಯ್ತು.

    Indian Women Hockey Coach suggest to do Chak de India 2 To Sharukh khan

    ಕೋಟ್ಯಾಂತರ ಮಹಿಳಾ ಕ್ರೀಡಾಪಟುಗಳಿಗೆ ಈ ಚಿತ್ರ ಸ್ಫೂರ್ತಿಯಾಗಿದೆ ಅಂದ್ರು ತಪ್ಪಾಗಲ್ಲ. ಈ ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಮನರಂಜನಾ ಚಿತ್ರ ರಾಷ್ಟ್ರ ಪ್ರಶಸ್ತಿ ಸಹ ಸಿಕ್ಕಿದೆ.

    ಮೋದಿ ಅಭಿನಂದನೆ

    ಭಾರತೀಯ ಮಹಿಳಾ ತಂಡದ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ''ಮಹಿಳಾ ಹಾಕಿಯಲ್ಲಿ ಸ್ವಲ್ಪದರಲ್ಲೇ ಪದಕ ನಮ್ಮ ಕೈತಪ್ಪಿದೆ. ಆದರೆ ಈ ತಂಡವು ನವ ಭಾರತದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ- ಇಲ್ಲಿ ನಾವು ನಮ್ಮ ಗರಿಷ್ಠ ಶಕ್ತಿ-ಸಾಮರ್ಥ್ಯಗಳೊಂದಿಗೆ ಪ್ರಯತ್ನಿಸುತ್ತೇವೆ ಮತ್ತು ಹೊಸ ಎತ್ತರಗಳನ್ನು ತಲುಪುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ #Tokyo2020 ಮಹಿಳಾ ಹಾಕಿ ತಂಡದ ಯಶಸ್ಸು ಭಾರತದ ಯುವ ಹೆಣ್ಣುಮಕ್ಕಳನ್ನು ಹಾಕಿಯತ್ತ ಸೆಳೆಯುತ್ತದೆ ಮತ್ತು ಅದರಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ಈ ತಂಡದ ಬಗ್ಗೆ ಹೆಮ್ಮೆ ಪಡುತ್ತೇನೆ." ಎಂದು ಹೇಳಿದ್ದಾರೆ.

    'ಪಠಾಣ್' ಚಿತ್ರದಲ್ಲಿ ಶಾರೂಖ್ ಖಾನ್ ನಟನೆ

    2018ರಲ್ಲಿ 'ಜೀರೋ' ಸಿನಿಮಾ ಬಳಿಕ ಶಾರೂಖ್ ಖಾನ್ ಅವರ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಪಠಾಣ್' ಸಿನಿಮಾದಲ್ಲಿ ಶಾರೂಖ್ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಸಹ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಬಳಿಕ ರಾಜ್ ಕುಮಾರ್ ಹಿರಾನಿ ಹಾಗೂ ಅಟ್ಲಿ ಜೊತೆ ಸಿನಿಮಾ ಮಾಡಲಿದ್ದಾರೆ.

    English summary
    Indian Women Hockey Chief Coach Sjoerd Marijne suggest to do 'Chak de India 2' movie to Bollywood actor Sharukh khan.
    Saturday, August 7, 2021, 20:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X