''ಇಂದಿರಾ ಅಂದರೆ ಇಂಡಿಯಾ'', ಕಂಗನಾ ರಣಾವತ್ ಕಣ್ಣಲ್ಲಿ 'ಎಮರ್ಜೆನ್ಸಿ'..!

1975- ಜೂನ್ 25ರಂದು ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ಶಿಫಾರಿಸಿನ ಮೇರೆಗೆ ಆಗ ರಾಷ್ಟ್ರ ಪತಿಯಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಭಾರತೀಯ ಸಂವಿಧಾನದ 352ನೇ ವಿಧಿಯ ಅಡಿಯಲ್ಲಿ ಎಮರ್ಜೆನ್ಸಿಯನ್ನು ಘೋಷಿಸಿದರು. ಅವತ್ತು ಇಂದಿರಾ ಗಾಂಧಿ ಹೇರಿದ್ದ ಈ ತುರ್ತು ಪರಿಸ್ಥಿತಿಗೆ ಐವತ್ತು ವರ್ಷಗಳೇ ಆಗಿವೆ. ಆದರೆ, ಇವತ್ತು ಕೂಡ ಈ ವಿಚಾರದ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಾನೇ ಇರುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಎಮರ್ಜೆನ್ಸಿ ಚಿತ್ರದ ಟ್ರೇಲರ್.

ಹೌದು, ನಾಯಕಿ-ನಿರ್ದೇಶಕಿ ಮತ್ತು ಸದ್ಯದ ಬಿಜೆಪಿ ಸಂಸದೆ ಕಂಗನಾ ರಣಾವತ್, ರಾಜಕೀಯದ ಪಡಸಾಲೆಗೆ ಬರುವ ಮುನ್ನ ಎಮರ್ಜೆನ್ಸಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಖುದ್ದು ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದರು. ಆದರೆ, ಆ ನಂತರ ನಡೆದ ವಿದ್ಯಮ್ಯಾನಗಳಲ್ಲಿ ಕಂಗನಾ ಹಿಮಾಚಲದ ಮಂಡಿಯಿಂದ ಗೆದ್ದರು. ಲೋಕಸಭೆಯನ್ನು ಪ್ರವೇಶಿಸಿದರು. ಈ ಹಿನ್ನೆಲೆ ಕಂಗನಾ ಕನಸಿನ ಎಮರ್ಜೆನ್ಸಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಬಿಡುಗಡೆ ವಿಳಂಬವಾಯಿತು. ಆದರೆ ಈಗ ಆ ಯೋಜನೆ ಮರು ಜೀವ ಪಡೆದಿದೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಪ್ರಚಾರ ಕೂಡ ಆರಂಭವಾಗಿದೆ. ಇದರ ಮೊದಲ ಭಾಗವೆಂಬಂತೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

indira-is-india-kangana-unveiled-the-much-anticipated-trailer-for-her-directorial-film-emergency

ಇನ್ನೂ ..ಕಂಗನಾ ಕುರಿತು ಅಭಿಪ್ರಾಯಗಳು ಏನೇ ಇರಲಿ, ಆದರೆ ಕಂಗನಾ ಅತ್ಯುತ್ತಮ ಅಭಿನೇತ್ರಿ ಅನ್ನುವುದರಲ್ಲಿ ದೂಸ್ರಾ ಮಾತು ಇಲ್ಲ. ಇದಕ್ಕೆ ಅವರಿಗೆ ಸಿಕ್ಕ ನಾಲ್ಕು ರಾಷ್ಟ್ರ ಪ್ರಶಸ್ತಿಗಳೇ ಸಾಕ್ಷಿ. ಎಮರ್ಜೆನ್ಸಿ ಕೂಡ ಈ ಮಾತನ್ನು ಸಾಬೀತು ಮಾಡುತ್ತಿದೆ. ಟ್ರೇಲರ್‌ನಲ್ಲಿ ಕಂಗನಾ ಅವರನ್ನು ಕಣ್ತುಂಬಿಕೊಂಡ ಒಂದು ವರ್ಗ ಕಂಗನಾ ಅವರಿಗೆ ಉಘೇ ಉಘೇ ಅನ್ನುತ್ತಿದೆ. ಯಾರು ಏನೇ ಹೇಳಲಿ ಕಂಗನಾ ಅವರಿಗೆ ಮತ್ತೊಂದು ರಾಷ್ಟ್ರ ಪ್ರಶಸ್ತಿ ಖಚಿತ ಅನ್ನುವ ಅಭಿಪ್ರಾಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.

ಕಂಗನಾ ಹೊರತು ಪಡಿಸಿ ಮಿಲಿಂದ್ ಸೋಮನ್ ಈ ಚಿತ್ರದ ಇನ್ನೊಂದು ಅಚ್ಚರಿ. ಸ್ಯಾಮ್ ಬಹದ್ದೂರ್ ಪಾತ್ರವನ್ನು ನಿರ್ವಹಿಸಿರುವ ಮಿಲಿಂದ್ ಟ್ರೇಲರ್‌ನಲ್ಲಿ ಅನೇಕರ ಕಣ್ಣಿಗೆ ಬಿದ್ದಿದ್ದಾರೆ. ತಮ್ಮ ಲುಕ್ ಮೂಲಕ ಹೃದಯವನ್ನೂ ಗೆದ್ದಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಂಗನಾ ಜೊತೆ ಜೊತೆಯಲ್ಲಿ ಅನೇಕರು ಮಿಲಿಂದ್ ಅವರನ್ನು ಹಾಡಿ ಹೊಗಳುತ್ತಿದ್ಧಾರೆ.

indira-is-india-kangana-unveiled-the-much-anticipated-trailer-for-her-directorial-film-emergency

ಶ್ರೇಯಸ್ ತಲ್ಪಡೆ, ಮಹಿಮಾ ಚೌಧರಿ ಮತ್ತು ಅನುಪಮ್ ಖೇರ್ ಕೂಡ ಈ ಎಮರ್ಜೆನ್ಸಿಯ ಭಾಗವಾಗಿದ್ದಾರೆ. ರಿಂಕು ಪಿಟ್ಟಿ ನಿರ್ಮಾಣದಲ್ಲಿ ಕಂಗನಾ ಜೊತೆ ಕೈ ಜೋಡಿಸಿದ್ಧಾರೆ. ಉಮೇಶ್ ಬನ್ಸಲ್ ಚಿತ್ರದ ಮತ್ತೊಬ್ಬ ನಿರ್ಮಾಪಕರು.

ಇದೆಲ್ಲದರ ನಡುವೆ ಎಮರ್ಜೆನ್ಸಿ ಚಿತ್ರದ ವಿಚಾರದಲ್ಲಿ ಬಿಜೆಪಿಯ ತತ್ವ ಸಿದ್ಧಾಂತಗಳಿಂದ ಪ್ರಭಾವಿತರಾದ ಕಂಗನಾ ವಿರುದ್ಧ ಕಾಂಗ್ರೆಸ್ ಸಮರ ಸಾರುವ ಸಾಧ್ಯತೆ ಇದೆ. ಎಮರ್ಜೆನ್ಸಿ ಚಿತ್ರದ ಮೇಲೆ ನಿಷೇಧ ಹೇರುವಂತೆ ಒತ್ತಾಯ ಹೇರುವ ಸಾಧ್ಯತೆ ಕೂಡ ಇದೆ. ಯಾಕೆಂದರೆ ಎಮರ್ಜೆನ್ಸಿಯಲ್ಲಿ ಇಂದಿರಾ ಗಾಂಧಿ ಅವರನ್ನ ಕಂಗನಾ ನಾಯಕಿಯಂತೆ ತೋರಿಸಿದ್ದಾರಾ..? ಅಥವಾ ಖಳನಾಯಕಿಯಂತೆ ಬಿಂಬಿಸಿದ್ದಾರಾ..? ಎಂಬ ಜಿಜ್ಞಾಸೆ ಕೂಡ ಅನೇಕರಲ್ಲಿದೆ. ಈಗ ಟ್ರೇಲರ್ ಹೊರ ಬಂದ ಹಿನ್ನೆಲೆ ಈ ಸ್ವಾತಂತ್ರೋತ್ಸವದಂದು ಚಿತ್ರದ ಕುರಿತು ವಿವಾದ ಶುರುವಾದರು ಆಗಬಹುದು ಅನ್ನುವ ಮಾತು ಸದ್ಯ ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ.

ಅಂದ್ಹಾಗೇ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಈ ಟ್ರೇಲರ್‌ 24 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿದೆ. ಉಳಿದಂತೆ ಸದ್ಯ ಟ್ರೇಲರ್ ಬಿಡುಗಡೆ ಮಾಡಿರುವ ಕಂಗನಾ ತಮ್ಮ ಈ ಚಿತ್ರವನ್ನು ಸೆಪ್ಟೆಂಬರ್ ಆರರಂದು ಬಿಡುಗಡೆ ಮಾಡಲಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X