ನಿರ್ಭಯಾ ಅತ್ಯಾಚಾರಿಗಳ ಜೊತೆ 'ಆಕೆ'ಯನ್ನು 4 ದಿನ ಜೈಲಿನಲ್ಲಿ ಬಿಡಿ: ಕಂಗನಾ ಆಕ್ರೋಶ.!
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕ್ಷಮಾಗುಣವನ್ನು ಅನುಸರಿಸುವ ಮೂಲಕ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಕ್ಷಮಿಸುವಂತೆ ನಿರ್ಭಯಾ ತಾಯಿ ಆಶಾ ದೇವಿಗೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಸಲಹೆ ನೀಡಿದ್ದರು. ಇದು ದೇಶದಾದ್ಯಂತ ವ್ಯಾಪಕ ಚರ್ಚೆ, ಟೀಕೆಗೆ ಗ್ರಾಸವಾಗಿದೆ.
ಇದೇ ವಿಚಾರದ ಕುರಿತಾಗಿ ಬಾಲಿವುಡ್ ನಟಿ ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪರಾಧಿಗಳನ್ನು ಕ್ಷಮಿಸಿ ಎಂದಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಗೆ ನಟಿ ಕಂಗನಾ ಛೀಮಾರಿ ಹಾಕಿದ್ದಾರೆ.
''ಆ ಹೆಂಗಸನ್ನು (ಇಂದಿರಾ ಜೈಸಿಂಗ್) ನಿರ್ಭಯಾ ಅಪರಾಧಿಗಳ ಜೊತೆಗೆ ನಾಲ್ಕು ದಿನ ಜೈಲಿನಲ್ಲಿ ಬಿಡಿ. ಅಂತಹ ಶಿಕ್ಷೆ ಅವರಿಗೆ ಕೊಡಬೇಕು'' ಎಂದು ಪ್ರೆಸ್ ಮೀಟ್ ವೊಂದರಲ್ಲಿ ನಟಿ ಕಂಗನಾ ಕಿಡಿಕಾರಿದ್ದಾರೆ. ಮುಂದೆ ಓದಿರಿ...

ಆಕ್ರೋಶಗೊಂಡ ಕಂಗನಾ
ತಮ್ಮ 'ಪಂಗಾ' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಕಂಗನಾಗೆ ಇಂದಿರಾ ಜೈಸಿಂಗ್ ವಿವಾದದ ಕುರಿತು ಪ್ರಶ್ನೆ ಎದುರಾಯಿತು. ಈ ವೇಳೆ ಪ್ರತಿಕ್ರಿಯೆ ಕೊಡಲು ಹಿಂದೆ ಸರಿಯದ ಕಂಗನಾ, ಇಂದಿರಾ ಜೈಸಿಂಗ್ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ಅತ್ಯಾಚಾರಿಗಳನ್ನು ಸೋನಿಯಾ ರೀತಿ ಕ್ಷಮಿಸಿ: ನಿರ್ಭಯಾ ತಾಯಿಗೆ ವಕೀಲೆ ಸಲಹೆ

ಕೋಪದಿಂದ ನುಡಿದ ಕಂಗನಾ
''ಆ ಹೆಂಗಸನ್ನು (ಇಂದಿರಾ ಜೈಸಿಂಗ್) ನಿರ್ಭಯಾ ಅಪರಾಧಿಗಳ ಜೊತೆಗೆ ನಾಲ್ಕು ದಿನ ಜೈಲಿನಲ್ಲಿ ಬಿಡಿ. ಆ ಶಿಕ್ಷೆ ಅವರಿಗೆ ಕೊಡಬೇಕು. ಅಪರಾಧಿಗಳ ಮೇಲೆ ಆಕೆಗೆ ಹೇಗೆ ತಾನೆ ಕರುಣೆ ಬರಲು ಸಾಧ್ಯ.? ಅಂತಹ ಮಹಿಳೆಯರೇ ರಾಕ್ಷಸರಿಗೆ ಜನ್ಮ ನೀಡುವುದು'' ಎಂದು ಕಂಗನಾ ಕೋಪದಿಂದ ನುಡಿದರು.
"ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದರಲ್ಲೂ ರಾಜಕೀಯ"

ನಿರ್ಭಯಾ ತಂದೆ-ತಾಯಿಗೆ ನ್ಯಾಯ ಸಿಗಬೇಕು.!
''ಅತ್ಯಾಚಾರ ಮಾಡುವವರನ್ನು ಮೈನರ್ (ಅಪ್ರಾಪ್ತ ವಯಸ್ಕ) ಅಂತ ಪರಿಗಣಿಸಲೇ ಬಾರದು. ಅತ್ಯಾಚಾರಿಗಳನ್ನು ಬಹಿರಂಗವಾಗಿ ನೇಣಿಗೇರಿಸಬೇಕು. ಆ ಮೂಲಕ ಅತ್ಯಾಚಾರ ಮಾಡುವುದರ ಪರಿಣಾಮ ಏನಾಗುತ್ತದೆ ಎಂಬುದು ಎಲ್ಲರಿಗೂ ಮನದಟ್ಟಾಗುತ್ತದೆ. ವರ್ಷಗಳಿಂದ ನಿರ್ಭಯಾ ತಂದೆ-ತಾಯಿ ಸಂಕಟ ಪಡುತ್ತಿದ್ದಾರೆ. ಅವರಿಗೆ ನ್ಯಾಯ ಸಿಗಲೇಬೇಕು'' ಎಂದಿದ್ದಾರೆ ನಟಿ ಕಂಗನಾ.
ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಫೆಬ್ರವರಿ.01ರಂದು ಗಲ್ಲುಶಿಕ್ಷೆ

'ಪಂಗಾ' ಚಿತ್ರದ ಕುರಿತು
ಅಂದ್ಹಾಗೆ, ನಟಿ ಕಂಗನಾ ಅಭಿನಯದ 'ಪಂಗಾ' ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆ ಆಗಿದೆ. ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶನದ 'ಪಂಗಾ' ಚಿತ್ರದಲ್ಲಿ ಕಂಗನಾ, ಜಸ್ಸಿ ಗಿಲ್, ರಿಚಾ ಚಡ್ಡಾ, ನೀನಾ ಗುಪ್ತ ಅಭಿನಯಿಸಿದ್ದಾರೆ. ಕಬ್ಬಡ್ಡಿ ಪ್ಲೇಯರ್ ಸುತ್ತ ನಡೆಯುವ ಕಥೆಯೇ 'ಪಂಗಾ' ಚಿತ್ರದ ಹೂರಣ.


Click it and Unblock the Notifications











