»   » 'ಇಂದು ಸರ್ಕಾರ್' ಚಿತ್ರದ 4 ದಿನದ ಕಲೆಕ್ಷನ್ ಎಷ್ಟು?

'ಇಂದು ಸರ್ಕಾರ್' ಚಿತ್ರದ 4 ದಿನದ ಕಲೆಕ್ಷನ್ ಎಷ್ಟು?

Posted By:
Subscribe to Filmibeat Kannada

ಮಧುರ್ ಭಂಡಾರ್ಕರ್ ನಿರ್ದೇಶನದ 'ಇಂದು ಸರ್ಕಾರ್' ಚಿತ್ರ ಪ್ರೇಕ್ಷಕರ ಆಕರ್ಷಣೆಯಿಂದ ದೂರ ಉಳಿದಿದೆ. ಬಹುವಿವಾದಗಳಿಂದ ಚರ್ಚೆಗೆ ಒಳಗಾಗಿದ್ದ ಈ ಚಿತ್ರವು ಬಾಕ್ಸ್ ಆಫೀಸ್ ನಿರೀಕ್ಷೆ ಮಟ್ಟ ತಲುಪುವಲ್ಲಿ ಫೇಲ್ ಆಗಿದೆ.

ವಿಮರ್ಶೆ: 'ಇಂದು ಸರ್ಕಾರ್' ಮಧುರ್ ಭಂಡಾರ್ಕರ್ ರವರ ಕುತೂಹಲಕಾರಿ ಚಿತ್ರ

ನೀಲ್ ನಿತಿನ್ ಮುಖೇಶ್ ಮತ್ತು ಕ್ರಿತಿ ಕುಲ್ಹರಿ ಮುಖ್ಯ ಭೂಮಿಕೆಯ ಈ ಚಿತ್ರವು ಭಾರತದಾದ್ಯಂತ 825 ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಿತ್ತು. ಆದರೂ ಸಹ ಮೊದಲ ವೀಕೆಂಡ್ ನಲ್ಲಿ ಕೇವಲ 3.55 ಕೋಟಿ ರೂ ಗಳಿಸಿತ್ತು. ಸೋಮವಾರವು ಸಹ ಸಿನಿಮಾ ಕೇವಲ 40 ಲಕ್ಷ ಗಳಿಸಿದ್ದು ಸಿನಿಮಾ ಅಟ್ಟರ್ ಫ್ಲಾಪ್ ಆಗಿದೆ.

Indu Sarkar Fails At The Box Office

ಈ ಹಿಂದೆ ಮಧುರ್ ಬಂಡಾರ್ಕರ್ ರವರ 'ಕ್ಯಾಲೆಂಡರ್ ಗರ್ಲ್ಸ್' ಚಿತ್ರ ಕೇವಲ 4.5 ಕೋಟಿ ರೂ ಗಳಿಸಿತ್ತು. ಈಗ ಆ ಚಿತ್ರದಷ್ಟು ಮೊತ್ತವನ್ನು 'ಇಂದು ಸರ್ಕಾರ್' ಚಿತ್ರ ಕಲೆಕ್ಟ್ ಮಾಡಿಲ್ಲ ಎಂಬುದು ಮೂಲಗಳಿಂದ ತಿಳಿದಿದೆ.

Bheema In Darshan's Kurukshetra Revealed

1975-1977 ರ ಅವಧಿಯ ತುರ್ತು ಪರಿಸ್ಥಿತಿ ಆಧರಿತ ಚಿತ್ರ ಎಂಬ ಹಿನ್ನಲೆಯಲ್ಲಿ ಚಿತ್ರವು ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು. ಅಲ್ಲದೇ ದೇಶದಾದ್ಯಂತದ ಕಾಂಗ್ರೆಸ್ ಕಾರ್ಯಕರ್ತರು ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿತರಕರು ಸಹ ಸಿನಿಮಾ ಖರೀದಿಸದ ಕಾರಣ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಫೇಲ್ ಆಗಲು ಕಾರಣವಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಚಿತ್ರದಲ್ಲಿ ತುರ್ತು ಪರಿಸ್ಥಿತಿ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಯಾವುದೇ ದೃಶ್ಯಗಳು ಇಲ್ಲ. ಆದರೂ ಸಹ ಸಿನಿಮಾ ಕುತೂಹಲಕಾರಿಯಾಗಿದೆ ಎಂದು ವಿಮರ್ಶೆಗಳು ಬಂದಿದ್ದವು.

English summary
Bollywood Director Madhur Bhandarkar directorial 'Indu Sarkar' movie fails at the box office. The Movie collected the total of 3.55 crores on first weekend and on monday film collected just 40 lacs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada