»   » 'ಇಂದು ಸರ್ಕಾರ್' ವಿರುದ್ಧ ಪ್ರತಿಭಟನೆ; ನಿರ್ದೇಶಕರಿಗೆ ಭದ್ರತೆ

'ಇಂದು ಸರ್ಕಾರ್' ವಿರುದ್ಧ ಪ್ರತಿಭಟನೆ; ನಿರ್ದೇಶಕರಿಗೆ ಭದ್ರತೆ

Posted By:
Subscribe to Filmibeat Kannada

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಧುರ್ ಭಂಡಾರ್ಕರ್ ರವರು 'ಇಂದು ಸರ್ಕಾರ್' ಚಿತ್ರ ಕೈಗೆತ್ತಿಕೊಂಡಾಗಿನಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ಕಾಂಗ್ರೆಸ್ ಕಾರ್ಯಕರ್ತರು ಈ ಚಿತ್ರ ಬಿಡುಗಡೆಗೆ ಆರಂಭದಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದಾರೆ.

'ಇಂದು ಸರ್ಕಾರ್' ಚಿತ್ರದಲ್ಲಿ 14 ಸೀನ್‌ ಕಡಿತಕ್ಕೆ ಸಿಬಿಎಫ್‌ಸಿ ಸೂಚನೆ

ಅಂದಹಾಗೆ ಲೇಟೆಸ್ಟ್ ಸುದ್ದಿ ಏನಂದ್ರೆ 'ಇಂದು ಸರ್ಕಾರ್' ಚಿತ್ರದ ಬಿಡುಗಡೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಧುರ್ ಭಂಡಾರ್ಕರ್ ಅವರಿಗೆ ಮಹಾರಾಷ್ಟ್ರ ಸರ್ಕಾರ ಅವರಿಗೆ ಭದ್ರತೆ ನೀಡಿದೆ. ಚಿತ್ರ ರಿಲೀಸ್ ಆರುವವರೆಗೆ ಭಂಡಾರ್ಕರ್ ಅವರ ರಕ್ಷಣೆಗಾಗಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನೇಮಿಸಿರುವ ಬಗ್ಗೆ ಮೂಲಗಳಿಂದ ತಿಳಿದಿದೆ.

'Indu Sarkar' film Director Madhur Bhandarkar To Get Police Protection

ಅಂದಹಾಗೆ 'ಇಂದು ಸರ್ಕಾರ್' ಚಿತ್ರದಲ್ಲಿ ಇಂದಿರಾಗಾಂಧಿ ಹಾಗೂ ಅವರ ಮಗ ಸಂಜಯ್ ಗಾಂಧಿ ಅವರ ಬಗ್ಗೆ ನಕಾರಾತ್ಮಕವಾಗಿ ಚಿತ್ರಿಸಲಾಗಿದೆ ಎಂದು ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಸಂಜಯ್ ನಿರುಪಮ್ ರವರು ಆರೋಪಿಸಿದ್ದಾರೆ. ಅಲ್ಲದೇ ನಿನ್ನೆ ನಾಗ್ಪುರದಲ್ಲಿ ಮತ್ತು ಮುಂಬೈನಲ್ಲಿ ನಡೆಯಬೇಕಿದ್ದ ಚಿತ್ರದ ಸುದ್ದಿಗೋಷ್ಠಿಯನ್ನು ಹಲವು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.

ಚಿತ್ರಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಮಧುರ್ ಭಂಡಾರ್ಕರ್ ರವರು, 'ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿರವರು ತಮ್ಮ ಪಾರ್ಟಿ ಕಾರ್ಯಕರ್ತರು ಚಿತ್ರ ರಿಲೀಸ್ ಗೆ ವಿರೋಧ ವ್ಯಕ್ತಪಡಿಸಿ ಮಾಡುತ್ತಿರುವ ಗೂಂಡಾಗಿರಿಯನ್ನು ಒಪ್ಪಿಕೊಂಡರೇ? 'ನನ್ನ ಅಭಿವ್ಯಕ್ತಿ ಸ್ವತಂತ್ರವನ್ನು ನಾನು ಹೊಂದಬಹುದೇ?' ಎಂದು ಇತ್ತೀಚೆಗೆ ಟ್ವೀಟ್ ಮಾಡಿದ್ದರು.

'Indu Sarkar' film Director Madhur Bhandarkar To Get Police Protection

'ಕಾಂಗ್ರೆಸ್ ಗೂಂಡಾಗಿರಿ ಅನುಮೋದಿಸ್ತೀರಾ?' ರಾಹುಲ್‌ಗೆ ಮಧುರ್ ಪ್ರಶ್ನೆ

'ಇಂದು ಸರ್ಕಾರ್' ಚಿತ್ರ ಜುಲೈ 28 ಕ್ಕೆ ಬಿಡುಗಡೆ ದಿನಾಂಕ ಪಡೆದಿದ್ದು, ಚಿತ್ರ ಯಾವುದೇ ತೊಂದರೆಯಿಲ್ಲದೇ ದೇಶದಾದ್ಯಂತ ರಿಲೀಸ್ ಆಗುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ.

English summary
Hindi Movie 'Indu Sarkar' Director Madhur Bhandarkar To Get Police Protection.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada