For Quick Alerts
  ALLOW NOTIFICATIONS  
  For Daily Alerts

  ಕೃಷ್ಣ ಮೃಗ ಪ್ರಕರಣದಲ್ಲಿ ಸಲ್ಲು ಜೊತೆಗಿದ್ದ 4 ಕಲಾವಿದರ ಹಿಸ್ಟರಿ

  By Pavithra
  |

  ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆ ಪ್ರಕಟವಾಗಿದೆ. ಕೃಷ್ಣ ಮೃಗ ಬೇಟೆಯಾಡುವ ಸಮಯದಲ್ಲಿ ಸಲ್ಮಾನ್ ಜೊತೆಯಲ್ಲಿದ್ದ ಮಿಕ್ಕ ನಾಲಕ್ಕೂ ಜನ ಸೆಲಬ್ರೆಟಿಗಳಿಗೆ ಕೋರ್ಟ್ ಖುಲಾಸೆ ನೀಡಿದೆ. ಜೋಧ್ ಪುರ ನ್ಯಾಯಾಲಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿಯಲ್ಲಿ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆಯ ಜೊತೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

  'ಹಮ್ ಸಾಥ್ ಸಾಥ್ ಹೇ' ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ಈ ಘಟನೆ ನಡೆದಿತ್ತು. ಸಲ್ಮಾನ್ ಜೊತೆಯಲ್ಲಿ ಬಾಲಿವುಡ್ ನ ನಾಲ್ಕು ಸ್ಟಾರ್ ಕಲಾವಿದರು ಕೂಡ ಈ ಪ್ರಕರಣದಲ್ಲಿ ಬಾಗಿ ಆಗಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬಂದಿತ್ತು. ಆದರೆ ಕೋರ್ಟ್ ಇಂದು ಆ ನಾಲ್ಕು ಸ್ಟಾರ್ ಗಳನ್ನ ನಿರ್ದೋಷಿಗಳೆಂದು ತೀರ್ಪು ನೀಡಿದೆ.

  ಸಲ್ಮಾನ್ ನ ಜೈಲು ಪಾಲು ಮಾಡಿದ ಬಿಷ್ಣೋಯಿ ಸಮುದಾಯ: ಯಾರಿವರು?ಸಲ್ಮಾನ್ ನ ಜೈಲು ಪಾಲು ಮಾಡಿದ ಬಿಷ್ಣೋಯಿ ಸಮುದಾಯ: ಯಾರಿವರು?

  ಹಾಗಾದರೆ ಸಲ್ಮಾನ್ ಜೊತೆಯಲ್ಲಿ 'ಹಮ್ ಸಾಥ್ ಸಾಥ್ ಹೇ' ಚಿತ್ರೀಕರಣದಲ್ಲಿ ಭಾಗಿ ಆಗಿದ್ದ ಕಲಾವಿದರು ಯಾರು? ಈಗ ಆ ಕಲಾವಿದರುಗಳು ಏನು ಮಾಡುತ್ತಿದ್ದಾರೆ? ಅವರ ಹಿನ್ನಲೆ ಏನು ಎನ್ನುವುದ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

  ನಟಿ ಸೋನಾಲಿ ಬೇಂದ್ರೆ

  ನಟಿ ಸೋನಾಲಿ ಬೇಂದ್ರೆ

  ಸೋನಾಲಿ ಬೇಂದ್ರೆ ಪಂಚಬಾಷಾ ತಾರೆಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿಯೂ ಸೋನಾಲಿ ಬೇಂದ್ರೆ ಅಭಿನಯಿಸಿದ್ದಾರೆ. ಪ್ರೀತ್ಸೆ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಜೊತೆಯಲ್ಲಿ ಸೋನಾಲಿ ಬೇಂದ್ರೆ ಕಾಣಿಸಿಕೊಂಡಿದ್ದರು. 2013 ರ ನಂತರ ಸೋನಾಲಿ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

  ನಟ ಸೈಫ್ ಅಲಿ ಖಾನ್

  ನಟ ಸೈಫ್ ಅಲಿ ಖಾನ್

  'ಹಮ್ ಸಾಥ್ ಸಾಥ್ ಹೇ' ಚಿತ್ರದಲ್ಲಿ ನಟ ಸೈಫ್ ಅಲಿ ಖಾನ್ ಕೂಡ ಒರ್ವ ನಾಯಕನಾಗಿ ನಟಿಸಿದ್ದರು. ಆದ್ದರಿಂದ ಸೈಫ್ ಮೇಲೆಯೂ ಪ್ರಕರಣ ದಾಖಲಾಗಿತ್ತು. ಸೈಫ್ ಅಲಿ ಖಾನ್ ಬಾಲಿವುಡ್ ನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದು ಸದ್ಯ 'ಬಜಾರ್' ಸಿನಿಮಾದ ಚಿತ್ರೀಕರಣದಲ್ಲಿ ಸೈಫ್ ಬ್ಯುಸಿ ಆಗಿದ್ದಾರೆ. ಕೃಷ್ಣ ಮೃಗ ಪ್ರಕರಣ ಖುಲಾಸೆ ಆಗಿರುವು ಸೈಫ್ ಗೆ ಬಿಗ್ ರಿಲೀಫ್ ಸಿಕ್ಕಿದೆ.

  ಬಾಲಿವುಡ್ ನಟಿ ಟಬು

  ಬಾಲಿವುಡ್ ನಟಿ ಟಬು

  ಟಬು ಬಿಟೌನ್ ನಲ್ಲಿ ತಮ್ಮ ಅಭಿನಯದ ಮೂಲಕವೇ ಗುರುತಿಸಿಕೊಂಡ ನಟಿ. ಹಿಂದಿ, ತಮಿಳು, ಮಲೆಯಾಳಂ, ತೆಲುಗು, ಬೆಂಗಾಳಿ ಭಾಷೆಯ ಸಿನಿಮಾಗಳು ಸೇರಿದಂತೆ ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿ ಅಂತರಾಷ್ಟ್ರಿಯ ಮಟ್ಟದಲ್ಲಿಯೂ ಗುರುತಿಸಿಕೊಂಡವರು. ವಯಸ್ಸು 46 ಆದರೂ ಕೂಡ ಇಂದಿಗೂ ಸಾಕಷ್ಟು ಚಿತ್ರಗಳಲ್ಲಿ ಟಬು ಅಭಿನಯಿಸುತ್ತಿದ್ದಾರೆ.

  ಬಿ ಟೌನ್ ನಟಿ ನೀಲಂ ಕೊಥಾರಿ

  ಬಿ ಟೌನ್ ನಟಿ ನೀಲಂ ಕೊಥಾರಿ

  ನಟಿ ನೀಲಂ 'ಹಮ್ ಸಾಥ್ ಸಾಥ್ ಹೇ' ಸಿನಿಮಾ ಪ್ರಕರಣ ಆದ ನಂತರ ಕೆಲವೇ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರು ನಂತರ ಯಾವುದೇ ಸಿನಿಮಾಗಳಲ್ಲಿ ಅಭಿನಯ ಮಾಡದ ನೀಲಂ ಅವರಿಗೂ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿರುವುದು ಖುಷಿ ತಂದಿದೆ.

  ಏನಿದು ಕೃಷ್ಣಮೃಗ ಬೇಟೆ ಪ್ರಕರಣ? ನೀವು ತಿಳಿದುಕೊಳ್ಳಬೇಕಾದ ಸಂಗತಿಗಳುಏನಿದು ಕೃಷ್ಣಮೃಗ ಬೇಟೆ ಪ್ರಕರಣ? ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

  English summary
  Full information on artists involved in filming 'Hum Sath Sath Hai' with Bollywood star actor Salman Khan. while Saif Ali Khan, Tabu, Sonali Bendre and Neelam walk free
  Thursday, April 5, 2018, 17:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X