Shahid Kapoor: ಶೂ ಧರಿಸಲು ಅನುಮತಿ.. ಮನೆಯ '2 ಸತ್ಯ 1 ಸುಳ್ಳು'; ಹೇಗಿದೆ ನಟ ಶಾಹಿದ್ ಕಪೂರ್ ಮನೆ?
ಶಾಹಿದ್ ಕಪೂರ್ ಬಾಲಿವುಡ್‌ನ ಡ್ಯಾಶಿಂಗ್ ಹೀರೋ. ಭಾರತೀಯ ಚಿತ್ರರಂಗದ ಜನಪ್ರಿಯ ನಟರಾದ ನಟ ಪಂಕಜ್ ಕಪೂರ್ ಹಾಗೂ ನಟಿ-ನೃತ್ಯಗಾರ್ತಿ ನೀಲಿಮಾ ಅಜೀಮ್ ಅವರ ಪುತ್ರ. ಶಾಹಿದ್ ಕಪೂರ್ ಬಾಲ್ಯದಿಂದಲೇ ನೃತ್ಯದ ಬಗ್ಗೆ ಆಸಕ್ತಿ ಹೊಂದಿದ್ದರು. ಶಿಮಾಕ್ ಡ್ಯಾನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದರು. ರಕ್ತದಲ್ಲೇ ನಟನೆಯ ಗೀಳು ಇದ್ದಿದ್ದರಿಂದ ಆಕ್ಟಿಂಗ್ ಅನ್ನೇ ವೃತ್ತಿಯಾಗಿ ತೆಗೆದುಕೊಂಡಿದ್ದಾರೆ.
ಶಾಹಿದ್ ಕಪೂರ್‌ಗೆ ಸಿನಿಮಾ ನಂಟಿದ್ದರೂ, ಚಿತ್ರರಂಗದ ಹಾದಿ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಸಿನಿಮಾ ರಂಗಕ್ಕೆ ಬರುವ ಮುನ್ನ ಶಾಹಿದ್ ಕಪೂರ್ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿದ್ದರು. 'ದಿಲ್ ತೋ ಪಾಗಲ್ ಹೈ' ಮತ್ತು 'ತಾಲ್' ಅಂತಹ ಸಿನಿಮಾಗಳಲ್ಲಿ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ ಆಗಿದ್ದರು. ಇದರೊಂದಿಗೆ ಜಾಹೀರಾತು ಮತ್ತು ಮ್ಯೂಸಿಕ್ ವಿಡಿಯೋಗಳ ಮೂಲಕ ಬಾಲಿವುಡ್ ಮಂದಿಯ ಗಮನ ಸೆಳೆದರು. ಅದರಲ್ಲೂ 'ಆಂಖೋಂ ಮೇ ತೇರಾ ಹಿ ಚೆಹ್ರಾ' ಅನ್ನೋ ಅಲ್ಬಮ್ ಸಾಂಗ್ ಶಾಹಿದ್ ಕಪೂರ್ ಅನ್ನು ಇನ್ನೂ ಹೆಚ್ಚು ಜನಪ್ರಿಯಗೊಳಿಸಿತು.

ಬಾಲಿವುಡ್‌ಗೆ ಪಾದಾರ್ಪಣೆ ಮಾಡುವುದಕ್ಕೆ ಪರದಾಡುತ್ತಿದ್ದ ಸಮಯದಲ್ಲೇ, 2003ರಲ್ಲಿ 'ಇಷ್ಕ್ ವಿಷ್ಕ್' ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟೇ ಬಿಟ್ಟರು. ಈ ಸಿನಿಮಾದಿಂದ ಶಾಹಿದ್ ಕಪೂರ್ ಬಾಲಿವುಡ್ ಜರ್ನಿ ಯಶಸ್ಸಿನ ಹಾದಿಯತ್ತಾ ಸಾಗುವುದಕ್ಕೆ ಶುರುವಾಗಿತ್ತು. ಇದೇ ಸಿನಿಮಾದ ನಟನೆಗಾಗಿ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನೂ ಪಡೆದರು. ಆ ಬಳಿಕ 'ವಿವಾಹ್', 'ಜಬ್ ವಿ ಮೆಟ್', 'ಕಮಿನೆ', 'ಹೈದರ್' ಕೆಲವು ವರ್ಷಗಳ ಹಿಂದೆ ತೆರೆಕಂಡಿದ್ದ 'ಕಬೀರ್ ಸಿಂಗ್' ಸಿನಿಮಾಗಳು ಶಾಹಿದ್ ಕಪೂರ್‌ಗೆ ಯಶಸ್ಸು ಕೊಟ್ಟವು. ತಮ್ಮ ಪಾತ್ರಗಳ ಮೂಲಕ ಸದಾ ಗಮನ ಸೆಳೆಯುತ್ತಿರುವ ಶಾಹಿದ್ ಈಗ ತಮ್ಮ ಮನೆಯೊಳಗಿನ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.
'ಕಬೀರ್ ಸಿಂಗ್' ನಟನ ಲೈಫ್ ಸ್ಟೈಲ್ ರಹಸ್ಯವೇನು?
ಕಬೀರ್ ಸಿಂಗ್ ನಟ ಶಾಹಿದ್ ಕಪೂರ್ ಸದಾ ಸುದ್ದಿಯಲ್ಲಿ ಇರುತ್ತಾರೆ. ತಮ್ಮ ಸಿನಿಮಾ ಹಾಗೂ ವೃತ್ತಿ ಜೀವನದ ವಿಚಾರದಲ್ಲಿ ಅವರು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಆದರೆ ವೈಯಕ್ತಿಕ ಜೀವನದ ಬಗ್ಗೆ ಅವರು ಹೆಚ್ಚಾಗಿ ಎಲ್ಲೂ ಮಾತನಾಡುವುದಿಲ್ಲ.
ಆದರೆ, ಈಗ ಶಾಹಿದ್ ತಮ್ಮ ಮನೆಯ ಕೆಲವೊಂದು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಮನೆಯ ಕೆಲವು ಪ್ರಮುಖ ನಿಯಮಗಳನ್ನು ರಿವೀಲ್ ಮಾಡಿದ್ದಾರೆ. ಇದೂ ಕೇವಲ ಮಾತಿನ ಮೂಲಕ ಅಲ್ಲ. ತಮ್ಮ ಮನೆಯೊಳಗೆ ಕರೆದುಕೊಂಡು ಹೋಗಿ ಹೋಮ್ ಟೂಮ್ ಮಾಡಿಸಿದ್ದಲ್ಲದೆ. ಮನೆಯೊಳಗಿನ ನಿಯಮಗಳನ್ನು ರಿವೀಲ್ ಮಾಡಿದ್ದಾರೆ. ಈ ವೇಳೆ ಒಂದು ಮೋಜಿನ ಆಟದ ನಿಯಮಗಳನ್ನು ಬಹಿರಂಗಪಡಿಸಿದ್ದಾರೆ. ಆ ಆಟವೇ 'ಎರಡು ಸತ್ಯ ಒಂದು ಸುಳ್ಳು'. ಈ ಚಿಕ್ಕ ಇನ್‌ಸ್ಟಾಗ್ರಾಂ ರೀಲ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಕ್ಕೆ ವೈರಲ್ ಆಗಿದೆ. ನಟನ ಜೀವನ ಶೈಲಿಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಶಾಹಿದ್ ಕಪೂರ್ ಮನೆಯ ನಿಯಮಗಳು
ಖುದ್ದಾಗಿ ಇನ್‌ಸ್ಟಾಗ್ರಾಂ ಬಾಲಿವುಡ್ ನಟ ಶಾಹಿದ್ ಕಪೂರ್ ಮನೆಗೆ ಎಂಟ್ರಿ ಕೊಟ್ಟಿದೆ. ಇದು ಸೆಲೆಬ್ರೆಟಿಗಳ ಮನೆಯ ನಿಯಮಗಳ ಬಗ್ಗೆ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದೆ. ಈಗ ಶಾಹಿದ್ ಕಪೂರ್ ಮನೆಗೆ ಭೇಟಿ ಕೊಟ್ಟಿದ್ದು, ಅವರ ಮನೆಯ ಮೂರು ನಿಯಮಗಳನ್ನು (ಎರಡು ಸತ್ಯ..ಒಂದು ಸುಳ್ಳು) ಬಹಿರಂಗ ಪಡಿಸಿದೆ.
ಶಾಹಿದ್ ಹೇಳಿದ ಆ 3 ನಿಯಮಗಳು
-ಮನೆಯೊಳಗೆ ಶೂಗಳನ್ನು ಧರಿಸಲು ಅನುಮತಿ
-ಅವರು ಕೇಳುವ ಸಂಗೀತಕ್ಕೆ ಯಾರೂ ಅಡ್ಡಿಪಡಿಸುವ ಹಾಗಿಲ್ಲ
-ಬಡಿಸಿದ ಆಹಾರವನ್ನು ಸಂಪೂರ್ಣವಾಗಿ ಮುಗಿಸಲೇಬೇಕು.
ಈ ಮೂರು ನಿಯಮಗಳಲ್ಲಿ ಎರಡು ವಿಷಯಗಳು ನಿಜ. ಒಂದು ನಿಯಮ ಮಾತ್ರ ಸುಳ್ಳು ಎಂದು ಶಾಹಿದ್ ಕಪೂರ್ ಇನ್‌ಸ್ಟಾಗ್ರಾಂ ಹೌಸ್ ರೂಲ್ಸ್ ಎಡಿಷನ್‌ನಲ್ಲಿ ಹೇಳಿದ್ದಾರೆ. ಆ ಸುಳ್ಳಿನ ನಿಯಮ ಯಾವುದು ಎಂದು ಅಭಿಮಾನಿಗಳಿಗೆ ಊಹಿಸುವಂತೆ ಅವರಿಗೇ ಬಿಟ್ಟಿದ್ದಾರೆ.
ಶಾಹಿದ್ ಮನೆಯ ಅತಿ ಕಠಿಣ ರೂಲ್ಸ್
ಮೊದಲ ನಿಯಮ ಕೇಳಿ ಹಲವರು ಆಶ್ಚರ್ಯಗೊಂಡಿದ್ದಾರೆ. 'ಮನೆಯೊಳಗೆ ಶೂ ಧರಿಸಲು ಅನುಮತಿ' ಎಂಬ ನಿಯಮವು ಭಾರತೀಯ ಸಂಸ್ಕೃತಿಗೆ ತೀರಾ ವಿರುದ್ಧವಾಗಿದೆ. ಆದರೆ ನಟ ಶಾಹಿದ್ ಕಪೂರ್ ಜೀವನ ಶೈಲಿ ಬೇರೆ ಇರಬಹುದು ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
ಇನ್ನು ಎರಡನೇ ನಿಯಮವು ಸಂಗೀತಕ್ಕೆ ಸಂಬಂಧಿಸಿದ್ದಾಗಿದೆ. ಶಾಹಿದ್ ಕಪೂರ್‌ಗೆ ಸಂಗೀತ ಎಂದರೆ ಎಷ್ಟೊಂದು ಪ್ರೀತಿ. ಅವರ ಮನೆಯಲ್ಲಿ ಸಂಗೀತಕ್ಕೆ ಎಂತಹ ಮಹತ್ವ ಇದೆ ಎಂಬುದು ಇದರಿಂದ ತಿಳಿಯುತ್ತದೆ. ಸಂಗೀತದ ವಿಚಾರದಲ್ಲಿ ಶಾಹಿದ್ ಯಾರ ಮಾತೂ ಕೇಳುವುದಿಲ್ಲ ಎಂಬುದು ಈ ಮಾತಿನ ಅರ್ಥ. ಸಂಗೀತ ಕೇಳುವಾಗ ಅವರಿಗೆ ಅಡ್ಡಿಪಡಿಸಿದರೆ ಅವರು ಖಂಡಿತಾ ಸಹಿಸುವುದಿಲ್ಲ. ಮೂರನೇ ಹಾಗೂ ಕೊನೆಯ ನಿಯಮ ಆಹಾರಕ್ಕೆ ಸಂಬಂಧಿಸಿದೆ. 'ಬಡಿಸಿದ ಆಹಾರವನ್ನು ವ್ಯರ್ಥ ಮಾಡಬಾರದು' ಎಂಬ ಕಟ್ಟುನಿಟ್ಟಿನ ನಿಯಮ ಅವರ ಮನೆಯಲ್ಲಿ ಇದೆ. ಶಾಹಿದ್ ಆಹಾರ ವ್ಯರ್ಥ ಮಾಡುವುದನ್ನು ತೀವ್ರವಾಗಿ ವಿರೋಧಿಸುತ್ತಾರೆ ಎಂದು ಗೊತ್ತಾಗುತ್ತಿದೆ.
ಸುಳ್ಳು ಯಾವುದು? ಫ್ಯಾನ್ಸ್ ಊಹೆ ಏನು?
ಈ ಮೂರು ನಿಯಮಗಳನ್ನು ಕೇಳಿದ ನಂತರ ಅಭಿಮಾನಿಗಳಲ್ಲಿ ಒಂದು ಗೊಂದಲ ಶುರುವಾಗಿದೆ. ಈ ಮೂರರಲ್ಲಿ ಸುಳ್ಳು ಯಾವುದು ಎಂಬ ಚರ್ಚೆ ಶುರುವಾಗಿದೆ. ಬಹುತೇಕ ಅಭಿಮಾನಿಗಳು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರ ಪ್ರಕಾರ 'ಮನೆಯೊಳಗೆ ಶೂಗೆ ಅನುಮತಿ' ಎಂಬುದು ಸುಳ್ಳಾಗಿರಬಹುದು. ಇನ್ನು ಕೆಲವರು ಶಾಹಿದ್ ಅಷ್ಟು ಸ್ಟ್ರಿಕ್ಟ್ ಇಲ್ಲ. ಆದ್ದರಿಂದ ಆಹಾರವನ್ನು ಸಂಪೂರ್ಣವಾಗಿ ಮುಗಿಸಬೇಕು ಎಂಬ ನಿಯಮ ಸುಳ್ಳು ಆಗಿರಬಹುದು ಎಂದು ಊಹಿಸಿದ್ದಾರೆ. ಸದ್ಯ ನಟ ಈ ರೀಲ್ ಮೂಲಕ ಅಭಿಮಾನಿಗಳನ್ನು ಉತ್ತರವನ್ನು ಗೆಸ್ ಮಾಡುತ್ತಿದ್ದಾರೆ. ಯಾವುದು ಸುಳ್ಳು ಎಂಬ ಸತ್ಯವನ್ನು ನಟ ಶಾಹಿದ್ ಕಪೂರ್ ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವ ಸಾಧ್ಯತೆಯಿದೆ.


Click it and Unblock the Notifications











