₹250 ಕೋಟಿಯ ಭವ್ಯ ಅರಮನೆಗೆ ಕಾಲಿಟ್ಟ ಅಲಿಯಾ ಭಟ್ –ರಣಬೀರ್ ಕಪೂರ್

ಬಾಲಿವುಡ್‌ನ ಸುಂದರ ಜೋಡಿಗಳಲ್ಲೊಂದಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಹೊಸ ಮನೆಯನ್ನು ಪ್ರವೇಶಿಸಿದ್ದಾರೆ. ಕಳೆದ ನವೆಂಬರ್ ತಿಂಗಳಿನ ಕೆಲವು ಅಪರೂಪದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಲಿಯಾ ಭಟ್ ಹಂಚಿಕೊಂಡಿದ್ದು, ಈ ಚಿತ್ರಗಳಲ್ಲಿ ಅವರ ಪುತ್ರಿ ರಾಹಾ ಕಪೂರ್ ಅವರ ಮೂರನೇ ಹುಟ್ಟುಹಬ್ಬದ ಸಡಗರದ ಜೊತೆಗೆ ಅವರ ಹೊಸ ಮನೆ 'ಕೃಷ್ಣ ರಾಜ್'ನಲ್ಲಿ ನಡೆದ ಗೃಹ ಪ್ರವೇಶದ ಪೂಜಾ ವಿಧಿವಿಧಾನಗಳ ಝಲಕ್ ನೋಡಬಹುದು.

ಗೃಹ ಪ್ರವೇಶ ಪೂಜೆಯ ಫೋಟೋಗಳು ಎಲ್ಲರ ಗಮನ ಸೆಳೆದಿವೆ. ಆಲಿಯಾ ಭಟ್ ಅವರು ತಿಳಿ ಗುಲಾಬಿ ಮತ್ತು ಚಿನ್ನದ ಬಣ್ಣದ ಸುಂದರ ಸೀರೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಮಿಂಚಿದ್ದಾರೆ. ರಣಬೀರ್ ಕಪೂರ್ ಅವರು ಬಿಳಿ ಕುರ್ತಾ-ಪೈಜಾಮಾದಲ್ಲಿ ಸರಳವಾಗಿ ಕಾಣಿಸಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ದಂಪತಿಗಳು ಕಲಶ ಹಿಡಿದು ಮನೆಯೊಳಗೆ ಪ್ರವೇಶಿಸುವ ದೃಶ್ಯವಿದೆ.

Inside Alia-Ranbir s new home Emotional glimpses from Krishna Raj Griha Pravesh and Raha s b day

ಪೂಜಾ ವಿಧಿವಿಧಾನಗಳನ್ನು ಆಲಿಯಾ ಮತ್ತು ರಣಬೀರ್ ಅವರು ಬಹಳ ಶ್ರದ್ಧೆಯಿಂದ ನೆರವೇರಿಸಿದ್ದಾರೆ. ಇನ್ನೊಂದು ಹೃದಯಸ್ಪರ್ಶಿ ಫೋಟೋದಲ್ಲಿ ಅತ್ತೆ ನೀತೂ ಕಪೂರ್ ಅವರು ಆಲಿಯಾಳನ್ನು ಅಪ್ಪಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದಿವಂಗತ ನಟ ರಿಷಿ ಕಪೂರ್ ಅವರ ಫೋಟೋ ಮುಂದೆ ಕೈ ಮುಗಿದು ಗೌರವ ಸಲ್ಲಿಸುತ್ತಿರುವ ರಣಬೀರ್ ಅವರ ದೃಶ್ಯವೂ ಇದೆ. ಈ ಕ್ಷಣಗಳು ಕಪೂರ್ ಕುಟುಂಬದ ಪ್ರೀತಿ ಮತ್ತು ಸಂಪ್ರದಾಯದ ಮೌಲ್ಯವನ್ನು ಎತ್ತಿ ತೋರಿಸುತ್ತವೆ.

ಕ್ಯೂಟ್ ರಾಹಾಳ ಬರ್ತ್‌ಡೇ ಪಾರ್ಟಿ ಝಲಕ್

ಗೃಹ ಪ್ರವೇಶದ ಫೋಟೋಗಳೊಂದಿಗೆ ಆಲಿಯಾ ಅವರು ಮಗಳು ರಾಹಾಳ ಮೂರನೇ ವರ್ಷದ ಬರ್ತ್‌ಡೇ ಪಾರ್ಟಿಯ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಒಂದೇ ರೀತಿಯ ಗುಲಾಬಿ ಬಣ್ಣದ ಉಡುಪುಗಳನ್ನು ಧರಿಸಿ ಮಿಂಚಿದ್ದಾರೆ. ಇದು ತುಂಬಾ ಮುದ್ದಾಗಿ ಕಾಣಿಸುತ್ತಿದೆ.

Inside Alia-Ranbir s new home Emotional glimpses from Krishna Raj Griha Pravesh and Raha s b day

ಆಲಿಯಾ ಮಗಳನ್ನು ಪ್ರೀತಿಯಿಂದ ಎತ್ತಿಕೊಂಡು ನಿಂತಿರುವ ಪೋಸ್ ವೈರಲ್ ಆಗಿದೆ. ಪಾರ್ಟಿಯನ್ನು ಪೇಸ್ಟಲ್ ಬಣ್ಣದ ಅಲಂಕಾರ ಮತ್ತು ಸುಂದರವಾದ ಫ್ಲೋರಲ್ ಥೀಮ್ನ ಕೇಕ್ನಿಂದ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿತ್ತು. ಈ ಎಲ್ಲಾ ಫೋಟೋಗಳು ರಣಬೀರ್-ಆಲಿಯಾ ಅವರ ಖಾಸಗಿ ಬದುಕಿನ ಸಂತೋಷದಾಯಕ ಕ್ಷಣಗಳಾಗಿದ್ದು, ಆಲಿಯಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ "ನವೆಂಬರ್ 2025... ನೀನು ಒಂದುವರೆ ತಿಂಗಳುಗಳಷ್ಟು ಅಮೂಲ್ಯವಾಗಿದ್ದೆ" ಎಂದು ಕ್ಯಾಪ್ಷನ್ ನೀಡಿದ್ದಾರೆ.

ಬಾಲಿವುಡ್‌ನ ಸ್ಟಾರ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಹೊಸ ನಿವಾಸ 'ಕೃಷ್ಣ ರಾಜ್'ನಲ್ಲಿ ನಡೆಸಿದ ಗೃಹ ಪ್ರವೇಶ ಪೂಜೆಯ ಹಾಗೂ ಪುತ್ರಿ ರಾಹಾಳ ಮೂರನೇ ಹುಟ್ಟುಹಬ್ಬದ ವಿಶೇಷ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ವೈರಲ್ ಆಗುತ್ತಿವೆ. ಆಲಿಯಾ ಸೀರೆಯುಟ್ಟು ಸಾಂಪ್ರದಾಯಿಕ ನೋಟದಲ್ಲಿ ಮಿಂಚಿದ್ದರೆ, ರಣಬೀರ್ ಬಿಳಿ ಕುರ್ತಾದಲ್ಲಿ ಸರಳವಾಗಿ ಕಾಣಿಸಿದ್ದಾರೆ.

ಮನೆಯ ಪ್ರವೇಶದ ಧಾರ್ಮಿಕ ವಿಧಿಗಳಿಂದ ಹಿಡಿದು, ದಿವಂಗತ ರಿಷಿ ಕಪೂರ್ ಅವರಿಗೆ ಕುಟುಂಬವು ಗೌರವ ಸಲ್ಲಿಸಿದ ಭಾವನಾತ್ಮಕ ಕ್ಷಣಗಳೂ ಪೋಟೋಗಳಲ್ಲಿ ಸೆರೆಯಾಗಿವೆ. ನೀತೂ ಕಪೂರ್ ಅವರು ಆಲಿಯಾಳನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ದೃಶ್ಯ ಎಲ್ಲರ ಮನಸ್ಸನ್ನು ಗೆದ್ದಿದೆ. ಈ ಎಲ್ಲಾ ಪೋಟೋಗಳು ಅವರ "ನವೆಂಬರ್ 2025" ತಿಂಗಳ ಮಧುರ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿವೆ.

ಅಂದ್ಹಾಗೇ ಮುಂಬೈನ ಪಾಲಿ ಹಿಲ್ಸ್‌ನಲ್ಲಿ ಸುಮಾರು 250 ಕೋಟಿ ವೆಚ್ಚದಲ್ಲಿ ಈ ಮನೆ ನಿರ್ಮಾಣವಾಗಿದ್ದು, 6 ಅಂತಸ್ತಿನ ಮನೆಗೆ ನವೆಂಬರ್ 6ರಂದು ಮಗಳು ರಾಹಾ ಕಪೂರ್ ಹುಟ್ಟಿದ ದಿನ ಗೃಹ ಪ್ರವೇಶ ಮಾಡಿದ್ದರು. ಕಪೂರ್ ಕುಟುಂಬದ ಹಿಂದಿನ ಮನೆ ಕೃಷ್ಣ ರಾಜ್ ಬಂಗಲೆಯಿದ್ದ ಸ್ಥಳದಲ್ಲಿಯೇ ಈ ಮನೆಯನ್ನು ನಿರ್ಮಿಸಲಾಗಿರುವುದು ವಿಶೇಷ.

More from Filmibeat

Read more about: alia bhatt ranbir kapoor home
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X