ದೀಪ್ವೀರ್ ಮದುವೆ: ಪ್ಲೇನ್ ಮೂಲಕ ಗ್ರ್ಯಾಂಡ್ ಎಂಟ್ರಿಕೊಟ್ಟ ವರ ರಣ್ವೀರ್

ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ, ಬಾಲಿವುಡ್ ನಟ ರಣ್ವೀರ್ ಸಿಂಗ್ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಕೊಂಕಣಿ-ಬ್ರಾಹ್ಮಣ ಸಂಪ್ರದಾಯದಂತೆ ನಟಿ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ವಿವಾಹ ಮಹೋತ್ಸವ ನಿನ್ನೆ ಇಟಲಿಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಇಟಲಿ ಕಾಲಮಾನದ ಪ್ರಕಾರ, ನಿನ್ನೆ ಬೆಳಗ್ಗೆ ಏಳು ಗಂಟೆಗೆ ಇದ್ದ ಶುಭ ಮುಹೂರ್ತದಲ್ಲಿ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆ ಮಂಟಪಕ್ಕೆ ನಟ ರಣ್ವೀರ್ ಸಿಂಗ್ ಪ್ಲೇನ್ ಮೂಲಕ ಆಗಮಿಸಿ ಸಿನಿಮೀಯ ರಂಗು ತುಂಬಿದರು. ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಂದೆ ಓದಿರಿ...

ಇದೇ ನೋಡಿ ವಿಡಿಯೋ...

ನಿಮಗೆಲ್ಲ ಗೊತ್ತಿರುವ ಹಾಗೆ, ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಮದುವೆ ಇಟಲಿಯ ಲೇಕ್ ಕೋಮೋದಲ್ಲಿ ನಡೆಯುತ್ತಿದೆ. ಲೇಕ್ ಕೋಮೋದಲ್ಲಿ ಇರುವ ವಿಲ್ಲಾ ವೊಂದರಲ್ಲಿ ವಿವಾಹ ಮಹೋತ್ಸವ ನಡೆದಿದ್ದು, ಮದುವೆ ಮಂಟಪಕ್ಕೆ ವರ ರಣ್ವೀರ್ ಸಿಂಗ್ ಪ್ಲೇನ್ ಮೂಲಕ ಎಂಟ್ರಿಕೊಟ್ಟಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ...

ವೈರಲ್ ಆಗಿರುವ ಫೋಟೋ ಇದೇ.!

ವೈರಲ್ ಆಗಿರುವ ಫೋಟೋ ಇದೇ.!

ಮದುವೆ ಸಮಾರಂಭದ ಫೋಟೋಗಳು ಮಾಧ್ಯಮಗಳ ಕೈಗೆ ಸಿಗದಂತೆ ಎಷ್ಟೇ ಎಚ್ಚರಿಕೆ ವಹಿಸಿದರೂ, ಕೆಲ ಫೋಟೋಗಳು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಇದೂ ಒಂದು. ಈ ಫೋಟೋದಲ್ಲಿ ವರ ರಣ್ವೀರ್ ಸಿಂಗ್ ಮತ್ತು ವಧು ದೀಪಿಕಾ ಪಡುಕೋಣೆಯನ್ನ ನೀವು ಕಾಣಬಹುದು.

ವರ ರಣ್ವೀರ್ ಸಿಂಗ್ ಫೋಟೋ

ವರ ರಣ್ವೀರ್ ಸಿಂಗ್ ಫೋಟೋ

ಬಿಳಿ ಮತ್ತು ಗೋಲ್ಡನ್ ಬಣ್ಣದ ಶೇರ್ವಾನಿ ತೊಟ್ಟಿರುವ ವರ ರಣ್ವೀರ್ ಸಿಂಗ್ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.

ಕೆಂಪು ಸೀರೆಯಲ್ಲಿ ಕಂಗೊಳಿಸಿದ ದೀಪಿಕಾ

ವಿವಾಹ ಮಹೋತ್ಸವದಲ್ಲಿ ವಧು ದೀಪಿಕಾ ಪಡುಕೋಣೆ ಕೆಂಪು ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ಮಿಂಚಿರುವುದು ಎ.ಬಿ.ಪಿ ನ್ಯೂಸ್ ಕ್ಯಾಮರಾದಲ್ಲಿ ಸೆರೆ ಆಗಿದೆ. ವಿಡಿಯೋ ಇಲ್ಲಿದೆ ನೋಡಿ...

ಕೊಂಕಣಿ ಸಂಪ್ರದಾಯದಂತೆ ಮದುವೆ

ಕೊಂಕಣಿ ಸಂಪ್ರದಾಯದಂತೆ ಮದುವೆ

ಕೊಂಕಣಿ ಬ್ರಾಹ್ಮಣ ಸಂಪ್ರದಾಯದಂತೆ ನಾಲ್ಕು ಗಂಟೆಗಳ ಕಾಲ ನಡೆದ ಮದುವೆ ಶಾಸ್ತ್ರದ ಮೂಲಕ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಹೊಸ ಜೀವನಕ್ಕೆ ಅಡಿಯಿಟ್ಟರು.

ಬೋಟ್ ಗಳಲ್ಲಿ ಆಗಮಿಸಿದ ಅತಿಥಿಗಳು

ಬೋಟ್ ಗಳಲ್ಲಿ ಆಗಮಿಸಿದ ಅತಿಥಿಗಳು

ಮದುವೆ ಮಂಟಪಕ್ಕೆ ಅತಿಥಿಗಳೆಲ್ಲಾ ಬೋಟ್ ಗಳಲ್ಲಿ ಆಗಮಿಸಿದರು. ಕೇವಲ ನಲವತ್ತು ಮಂದಿಗೆ ಮಾತ್ರ ದೀಪಿಕಾ-ರಣ್ವೀರ್ ಮದುವೆಗೆ ಆಹ್ವಾನ ನೀಡಲಾಗಿತ್ತು. ಎಲ್ಲರೂ ಬಿಳಿ ಮತ್ತು ಗೋಲ್ಡನ್ ಬಣ್ಣದ ಉಡುಗೆಗಳನ್ನು ತೊಟ್ಟು ಮಿಂಚಿದರು.

ವಧು ತಂದೆ

ವಧು ತಂದೆ

ಮದುವೆ ಮಂಟಪಕ್ಕೆ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ ಆಗಮಿಸಿದ ವೇಳೆ ಕ್ಲಿಕ್ ಆದ ಫೋಟೋ ಇದು. ವಿವಾಹ ಮಹೋತ್ಸವ ನಡೆಯುವ ಜಾಗದ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮಂಗಳೂರು ಶೈಲಿಯ ಊಟ

ಮಂಗಳೂರು ಶೈಲಿಯ ಊಟ

ಕೊಂಕಣಿ ಸಂಪ್ರದಾಯದಂತೆ ಮದುವೆ ನಡೆದ ಮೇಲೆ ಅತಿಥಿಗಳಿಗೆ ಪಕ್ಕಾ ಕೊಂಕಣಿ ಹಾಗೂ ಮಂಗಳೂರು ಶೈಲಿಯಂತೆ ಬಾಳೆ ಎಲೆ ಊಟ ಬಡಿಸಲಾಯಿತು.

ಇಂದು ಸಿಖ್ ಸಂಪ್ರದಾಯದಂತೆ ಮದುವೆ

ಇಂದು ಸಿಖ್ ಸಂಪ್ರದಾಯದಂತೆ ಮದುವೆ

ಇವತ್ತು ಸಿಖ್ ಸಂಪ್ರದಾಯದಂತೆ ದೀಪಿಕಾ ಮತ್ತು ರಣ್ವೀರ್ ವಿವಾಹ ಮಹೋತ್ಸವ ನಡೆಯಲಿದೆ. ನವೆಂಬರ್ 21 ರಂದು ಬೆಂಗಳೂರಿನಲ್ಲಿ ಹಾಗೂ ನವೆಂಬರ್ 28 ರಂದು ಮುಂಬೈನಲ್ಲಿ ದೀಪಿಕಾ-ರಣ್ವೀರ್ ಆರತಕ್ಷತೆ ನಡೆಯಲಿದೆ.

More from Filmibeat

English summary
Inside details about Deepika Padukone-Ranveer Singh Konkani Brahmin wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X