ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ನಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳು
ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಪಾಲಿಗೆ ಆಗಸ್ಟ್ 18 ಮರೆಯಲಾರದ ದಿನ. ಯಾಕಂದ್ರೆ, ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು ಅವತ್ತೇ.!
ಮುಂಬೈನಲ್ಲಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ಪಾರ್ಟಿ ನಡೆಯಿತು. ಔಟ್ ಅಂಡ್ ಔಟ್ ಮಾರ್ಡನ್ ಔಟ್ ಫಿಟ್ ನಲ್ಲಿ ಹೊಸ ಜೋಡಿ ಮಿಂಚಿದರು.
ಈ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಆಲಿಯಾ ಭಟ್, ಪರಿಣಿತಿ ಛೋಪ್ರಾ, ಅರ್ಪಿತಾ ಖಾನ್, ಆಯುಷ್ ಶರ್ಮಾ, ಅಂಬಾನಿ ಕುಟುಂಬ ಸೇರಿದಂತೆ ಖ್ಯಾತನಾಮರು ಹಾಗೂ ಬಾಲಿವುಡ್ ದಿಗ್ಗಜರು ಪಾಲ್ಗೊಂಡಿದ್ದರು.
ಎಂಗೇಜ್ಮೆಂಟ್ ಪಾರ್ಟಿ ಒಳಗೆ ಬಾಲಿವುಡ್ ತಾರೆಯರು ಹೇಗೆಲ್ಲಾ ಮಿಂಚಿದರು ಅಂತ ನೀವೇ ನೋಡಿ ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ...

ಎಲ್ಲರ ಮೊಗದಲ್ಲೂ ಮಂದಹಾಸ
ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಪರಿಣಿತಿ ಛೋಪ್ರಾ, ಆಲಿಯಾ ಭಟ್ ಹಾಗೂ ಅರ್ಪಿತಾ ಖಾನ್ ಪಾಲ್ಗೊಂಡು ಹೊಸ ಜೋಡಿಗೆ ಶುಭ ಹಾರೈಸಿದರು.

ಸಹೋದರಿ ನಿಶ್ಚಿತಾರ್ಥ ಸಂಭ್ರಮದಲ್ಲಿ ಪರಿಣಿತಿ
ಪ್ರಿಯಾಂಕಾ ಛೋಪ್ರಾಗೆ ಪರಿಣಿತಿ ಛೋಪ್ರಾ ಸಹೋದರಿ (ಕಸಿನ್ ಸಿಸ್ಟರ್). ಅಕ್ಕ ನಿಶ್ಚಿತಾರ್ಥ ಮಾಡಿಕೊಂಡ ಸಂಭ್ರಮದಲ್ಲಿ ಪರಿಣಿತಿ ಛೋಪ್ರಾ ಈ ಫೋಟೋನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ಬೀಗಿತ್ತಿಯರು.!
ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಪ್ರಿಯಾಂಕಾ ಛೋಪ್ರಾ ತಾಯಿ ಹಾಗೂ ನಿಕ್ ಜೊನಾಸ್ ತಾಯಿ ಕಂಗೊಳಿಸಿದ್ದು ಹೀಗೆ...

ಭಾವಿ ಅತ್ತೆ-ಮಾವ ಜೊತೆಗೆ ಪ್ರಿಯಾಂಕಾ
ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಭಾವಿ ಅತ್ತೆ-ಮಾವನ ಜೊತೆಗೆ ಪ್ರಿಯಾಂಕಾ ಕಾಣಿಸಿಕೊಂಡಿದ್ದು ಹೀಗೆ...


Click it and Unblock the Notifications











