ಮಾಜಿ ಪತಿಯ ಆಸ್ತಿಯ ಮೇಲೆ ಕಣ್ಣಾಕಿದ ಕರಿಷ್ಮಾ ಕಪೂರ್ ? ₹30,000 ಕೋಟಿ ಸಂಪತ್ತಿನಲ್ಲಿ ಪಾಲು ಕೇಳಿದ ನಟಿ ?
ಸಾಮಾನ್ಯಕ್ಕೆ ಚಿತ್ರರಂಗದಲ್ಲಿ ಹಣ, ಹೆಸರು, ಅಂತಸ್ತು ಗಳಿಸಿದರೂ ಕೂಡ ನಾಯಕಿಯರು ದೊಡ್ಡ ದೊಡ್ಡ ಶ್ರೀಮಂತ ಕುಳಗಳನ್ನೇ ಹುಡುಕಿ ಮದುವೆಯಾಗ್ತಾರೆ ಅನ್ನುವ ಮಾತು ಇದೆ. ಇದು ನಿಜಾನಾ.. ಸುಳ್ಳಾ.. ಗೊತ್ತಿಲ್ಲ. ಆದರೆ.. ಇಂಥಹದದ್ದೊಂದು ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ಇದ್ದೇ ಇದೆ. ಇನ್ನೂ .. ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು.
ಇಂತಹ ಕಾಲದಲ್ಲಿ ಎಂಥದ್ದೋ ತಿರುವುಗಳಲ್ಲಿ ಪ್ರೀತಿ ಅಂತ್ಯವಾದ ನಂತರ ಇಂಥದ್ದೊಂದು ಸಂಬಂಧವಿತ್ತು ಎನ್ನುವ ನೆನಪನ್ನು ಕೂಡ ಉಳಿಸದೆ ಹೋಗುವಷ್ಟು ಸಂಬಂಧಗಳು ವ್ಯವಹಾರಿಕವಾಗಿವೆ. ಇದಕ್ಕೆ ಕರಿಷ್ಮಾ ಕಪೂರ್ ಅವರ ವ್ಯೆಯಕ್ತಿಕ ಬದುಕು ಸದ್ಯದ ಉದಾಹರಣೆ ಎನ್ನುವುದು ಸದ್ಯಕ್ಕೆ ಕೇಳಿ ಬರುತ್ತಿರುವ ಮಾತು.

ಹೌದು, ವೃತ್ತಿ ಬದುಕಿನಲ್ಲಿ ಖ್ಯಾತಿಯ ಶಿಖರಕ್ಕೇರಿದ ಕರಿಷ್ಮಾ ಕಪೂರ್ ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಅನುಭವಿಸಿದ ನರಕಯಾತನೆ ಅಷ್ಟಿಷ್ಟಲ್ಲ. 2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆಯಾಗಿದ್ದ ಕರಿಷ್ಮಾ ಕಪೂರ್ ಆ ನಂತರ ಅನುದಿನ - ಅನುಕ್ಷಣ .. 07 ವರ್ಷ ಕಣ್ಣೀರಿನಲ್ಲಿಯೇ ಕೈ ತೊಳೆದರು. 2010ರಲ್ಲಿ ಇನ್ನು ಜೊತೆಯಲ್ಲಿ ಬದುಕಲು ಸಾಧ್ಯ ಇಲ್ಲ ಎಂದುಕೊಂಡು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಮರಳಿ ಬಂದರು. ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು. 2016ರಲ್ಲಿ ವಿಚ್ಛೇದನವನ್ನು ಕೂಡ ಪಡೆದರು.
ಆದರೆ ಈಗ ಸಂಜಯ್ ಕಪೂರ್ ಇಲ್ಲ. ಕಳೆದ ಜೂನ್‌ನಲ್ಲಿ ಸಂಜಯ್ ಕಪೂರ್ ಹಠಾತ್ ನಿಧನರಾದರು. ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಹೆಸರು ಮಾಡಿದ್ದ ಸಂಜಯ್ ಕಪೂರ್ ''ಸೋನಾ ಕಾಮ್‌ಸ್ಟಾರ್'' ಕಂಪನಿಗೆ ಅಧ್ಯಕ್ಷರಾಗಿದ್ದರು. 30,000 ಕೋಟಿಯ ಸಾಮ್ರಾಜ್ಯವನ್ನು ಕೂಡ ಸ್ಥಾಪಿಸಿದ್ದರು.
ಇನ್ನು ಆಗಲೇ ಹೇಳಿದಂತೆ ಸಂಬಂಧಗಳು ಹಣದ ಎದುರು ಕೊಚ್ಚಿಕೊಂಡು ಹೋಗುವಂತಹ ಕಾಲ ಇದು. ದುರಾಸೆಯಿಂದ ಅನೇಕರು ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದಾರೆ. ಹೀಗಿರುವಾಗ 30,000 ಕೋಟಿಯ ಸಾಮ್ರಾಜ್ಯದಲ್ಲಿ ಕಂಪನವಾಗದಿರಲು ಹೇಗೆ ಸಾಧ್ಯ..?
ಇದಕ್ಕೆ ಕೈಗನ್ನಡಿ ಎಂಬಂತೆ ಸಂಜಯ್ ಕಪೂರ್ ಅವರ ತಾಯಿ ರಾಣಿ ಕಪೂರ್ ತಮ್ಮಿಂದ ಬಲವಂತವಾಗಿ ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಆಸ್ತಿ ಕಬಳಿಸಲು ಹಲವರು ಷಡ್ಯಂತ್ರ.. ಪಿತೂರಿ ಮಾಡುತ್ತಿದ್ಧಾರೆ ಎಂದು ಹೇಳಿದ್ದಾರೆ. ಸಂಜಯ್ ಕಪೂರ್ ಅವರ ''ಮೂರನೇ ಪತ್ನಿ'' ಪ್ರಿಯಾ ಸಚ್‌ದೇವ್ ಅವರನ್ನು ''ಸೋನಾ ಕಾಮ್‌ಸ್ಟಾರ್''ನ ಮಂಡಳಿಗೆ ನೇಮಿಸುವ ನಿರ್ಧಾರವನ್ನು ಪ್ರಶ್ನೆ ಮಾಡಿದ್ಧಾರೆ.

''ಸೋನಾ ಕಾಮ್‌ಸ್ಟಾರ್''ನ ಬಹುಪಾಲು ಷೇರುದಾರಳು ತಾನೇ ಆಗಿದ್ದೇನೆ. ಆದರೂ ತನ್ನನ್ನು ಕಡೆಗಣಿಸಲಾಗಿದೆ ಎಂದು ಕಣ್ಣೀರನ್ನು ಹಾಕಿದ್ದಾರೆ. ನನ್ನ ಮಗನ ಅಗಲಿಕೆಯ ದುಃಖದಲ್ಲಿರುವಾಗಲೇ ಕುಟುಂಬದ ಆಸ್ತಿಯನ್ನು ಕಬಳಿಸಲು ಪ್ರಯತ್ನ ಮಾಡಲಾಗುತ್ತಿದ್ದು ಕುಟುಂಬದ ಪ್ರತಿನಿಧಿಗಳ ನೇಮಕದ ಬಗ್ಗೆ ತಮ್ಮೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಹೇಳಿದ್ದಾರೆ. ಕಂಪನಿಯ ಷೇರುದಾರರಿಗೆ ಭಾವನಾತ್ಮಕವಾದ ಪತ್ರವನ್ನು ಬರೆದಿದ್ದಾರೆ.
ಇದರ ನಡುವೆ ಇದೀಗ ಕರಿಷ್ಮಾ ಕಪೂರ್ ತಮ್ಮ ಮಾಜಿ ಪತಿ ಸಂಜಯ್ ಕಪೂರ್ ಅವರ 30,000 ಕೋಟಿಯ ಮೇಲೆ ಕಣ್ಣು ಹಾಕಿದ್ದಾರೆ, ಸಂಜಯ್ ಕಪೂರ್ ಅವರ ಕಂಪನಿಯಲ್ಲಿ ಪಾಲನ್ನು ಬಯಸುತ್ತಿದ್ದಾರೆ ಎಂದು ''ಫ್ರೀ ಪ್ರೆಸ್ ಜರ್ನಲ್'' ವರದಿಯನ್ನು ಮಾಡಿದೆ.
''ಫ್ರೀ ಪ್ರೆಸ್ ಜರ್ನಲ್''ನ ಈ ವರದಿಗೆ ಕರಿಷ್ಮಾ ಕಪೂರ್ ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲವಾದರು ಮುಂಬೈನಲ್ಲಿ ಈ ಕುರಿತು ವ್ಯಾಪಕವಾದ ಚರ್ಚೆ ಸದ್ಯ ನಡೆಯುತ್ತಿದೆ. ₹30,000 ಕೋಟಿಯ ಉದ್ಯಮದಲ್ಲಿ ಎದ್ದ ಈ ಬಿರುಗಾಳಿ ಈಗ ಹಲವರ ಕುತೂಹಲವನ್ನು ಕೂಡ ಕೆರಳಿಸಿದೆ.
ಇನ್ನು ಇದೇ ವಿಚಾರಕ್ಕೆ ''ETimes''ಗೆ ಕರಿಷ್ಮಾ ಆಪ್ತರು ಪ್ರತಿಕ್ರಿಯೆಯನ್ನು ನೀಡಿದ್ದು ಸುದ್ದಿಯನ್ನು ಅಲ್ಲಗೆಳೆದಿದ್ದಾರೆ. ಅಂದ್ಹಾಗೇ ಮಾಧ್ಯಮ ವರದಿಗಳ ಪ್ರಕಾರ ಸಂಜಯ್ ಕಪೂರ್ ಅವರಿಂದ 2016ರಲ್ಲಿ ಡಿವೋರ್ಸ್ ಪಡೆದ ಕರಿಷ್ಮಾ ಕಪೂರ್ ಆ ನಂತರ ಮುಂಬೈನ ಖಾರ್‌ನಲ್ಲಿರುವ ಸಂಜಯ್ ಕಪೂರ್ ಅವರ ಮನೆಯನ್ನು ತಮ್ಮದಾಗಿಸಿಕೊಂಡರು. ಇಷ್ಟೇ ಅಲ್ಲ ತಮ್ಮ ಇಬ್ಬರು ಮಕ್ಕಳ ಹೆಸರಿನಲ್ಲಿ 14 ಕೋಟಿ ಮೌಲ್ಯದ ಬಾಂಡ್‌ಗಳನ್ನು ಕೂಡ ಖರೀದಿ ಮಾಡಿದರು. ಈ ಬಾಂಡ್‌ಗಳಿಂದ ಪ್ರತಿ ತಿಂಗಳು ಸುಮಾರು ಹತ್ತು ಲಕ್ಷ ಬಡ್ಡಿ ಕರಿಷ್ಮಾ ಕಪೂರ್‌ಗೆ ಬರುತ್ತೆ.


Click it and Unblock the Notifications











