'ಪುಷ್ಪ' ಸಿನಿಮಾ ಪ್ರೇರಣೆ: ಭೀಕರ ಹತ್ಯೆ ಮಾಡಿದ ಬಾಲಕರು!

ಅಲ್ಲು ಅರ್ಜುನ್ ನಟಿಸಿರುವ 'ಪುಷ್ಪ' ಸಿನಿಮಾ ದೊಡ್ಡ ಹಿಟ್ ಆಗಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಮುನ್ನೂರು ಕೋಟಿಗೂ ಹೆಚ್ಚು ಹಣ ಗಳಿಸಿದೆ. ಲಕ್ಷಾಂತರ ಮಂದಿ ಸಿನಿಮಾವನ್ನು ನೋಡಿದ್ದಾರೆ.

'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್ ಮ್ಯಾನರಿಸಂ, ಸಿನಿಮಾದಲ್ಲಿನ ಹಾಡುಗಳು, ಡ್ಯಾನ್ಸ್ ಸ್ಟೆಪ್‌ಗಳನ್ನು ಜನರು ಅನುಕರಿಸುತ್ತಿದ್ದಾರೆ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ದೆಹಲಿಯ ಮೂವರು ಬಾಲಕರು 'ಪುಷ್ಪ' ಸಿನಿಮಾದಿಂದ ಪ್ರೇರಿತರಾಗಿ ಕೊಲೆಯೇ ಮಾಡಿಬಿಟ್ಟಿದ್ದಾರೆ!

ದೆಹಲಿಯ ಮೂವರು ಬಾಲಕರು 'ಪುಷ್ಪ' ಸಿನಿಮಾ ಹಾಗೂ 'ಬಹುಕಾಲ' ವೆಬ್ ಸರಣಿ ನೋಡಿ ಪ್ರಭಾವಿತರಾಗಿ, ತಾವೂ ಸಹ ಡಾನ್‌ಗಳಾಗಬೇಕು, ಜನಪ್ರಿಯತೆ ಗಳಿಸಬೇಕೆಂದುಕೊಂಡು ಅಮಾಯಕನೊಬ್ಬನನ್ನು ಕೊಂದು ಹಾಕಿದ್ದಾರೆ. ಈಗ ಮೂವರು ಬಾಲಕರು ಪೊಲೀಸರ ಅತಿಥಿಯಾಗಿದ್ದಾರೆ. ಅವರನ್ನು ಬಾಲಾಪರಾಧ ಕಾಯ್ದೆಯ ಅಡಿ ವಶಕ್ಕೆ ಪಡೆಯಲಾಗಿದೆ.

Inspired From Movie Pushpa Teens Kills A Boy

ನವದೆಹಲಿಯ ಜಹಾಂಗೀರ್‌ಪುರಿಯ ಮೂವರು ಬಾಲಕರು 'ಪುಷ್ಪ' ಸಿನಿಮಾ, 'ಬಹುಕಾಲ್' ವೆಬ್ ಸರಣಿಗಳನ್ನು ನೋಡಿ ತಾವೂ ಡಾನ್‌ಗಳಾಗಬೇಕು ಎಂದುಕೊಂಡು ತಮ್ಮ ಗ್ಯಾಂಗ್‌ಗೆ 'ಬದ್ನಾಮ್ ಗ್ಯಾಂಗ್' ಎಂದು ಹೆಸರಿಟ್ಟುಕೊಂಡಿದ್ದರು. ಬಳಿಕ ಸಿಭು ಎಂಬ ಟೀ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗನ ಮೇಲೆ ದಾಳಿ ಮಾಡಿದ ಬಾಲಕರು ಅವನನ್ನು ಚುಚ್ಚಿ ಕೊಂದಿದ್ದಾರೆ. ತಮ್ಮ ಈ ಭೀಕರ ಕೃತ್ಯವನ್ನು ಅವರೇ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.

ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜನಪ್ರಿಯತೆ ಗಳಿಸುವುದು ಆ ಮೂಲಕ ಡಾನ್ ಆಗುವುದು ಅವರ ಉದ್ದೇಶವಾಗಿತ್ತಂತೆ! ಬಾಲಕರು ಕೊಲೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳು ಸಹ ಪೊಲೀಸರಿಗೆ ಲಭ್ಯವಾಗಿದೆ. ಕೊಲೆ ಮಾಡಿದ ಬಳಿಕ ಮೂವರು ಯುವಕರು ಸೆಲ್ಫಿ ವಿಡಿಯೋ ಸಹ ಮಾಡಿಕೊಂಡಿದ್ದಾರೆ.

ಕೊಲೆಯಾದ ಬಾಲಕ ಸಿಭುಗೆ ಮೈಮೇಲೆ ತೀವ್ರ ಗಾಯಗಳಾಗಿತ್ತು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಬದುಕು ಉಳಿಯಲಿಲ್ಲವೆಂದು ಡಿಸಿಪಿ ಉಶಾ ರಂಗ್ನಾನಿ ಹೇಳಿದ್ದಾರೆ.

ಸಿನಿಮಾಗಳಿಂದ ಪ್ರಭಾವಿತರಾಗಿ ಅಪರಾಧಗಳನ್ನು ಮಾಡಿರುವ ಪ್ರಕರಣಗಳು ಈ ಹಿಂದೆಯೂ ಸಾಕಷ್ಟು ಆಗಿವೆ. 'ದೃಶ್ಯಂ' ಸಿನಿಮಾ ನೋಡಿ ಅದೇ ಮಾದರಿಯಲ್ಲಿ ಮಾಡಿದ ಕೊಲೆಯನ್ನು ಮುಚ್ಚಿಡುವ ಪ್ರಕರಣಗಳು ಕೆಲವು ವರದಿಯಾಗಿದ್ದವು.

ಪುಣೆಯಲ್ಲಿ ಬಾಲಕರಿಬ್ಬರು ಜನಪ್ರಿಯ ಹಿಂದಿ ಧಾರಾವಾಹಿ 'ಸಿಐಡಿ' ನೋಡಿ ವೃದ್ಧರನ್ನು ಕೊಲೆ ಮಾಡಿ ಹಣ, ಚಿನ್ನ ದೋಚಿ ಪರಾರಿಯಾಗಿದ್ದರು. ಸಿನಿಮಾ ನೋಡಿ ಅಪಹರಣ ಮಾಡಿದ, ಅಪಹರಣದ ನಾಟಕವಾಡಿದ ಪ್ರಕರಣಗಳು ಸಹ ಸಾಕಷ್ಟಿದೆ. ರೌಡಿಸಂ ಸಿನಿಮಾಗಳನ್ನು ನೋಡಿ ಡಾನ್ ಆಗಲು ಬೆಂಗಳೂರಿಗೆ ಬಂದವರೂ ಇದ್ದಾರೆ.

ಇತ್ತೀಚಿನ ಕಮರ್ಶಿಯಲ್ ಸಿನಿಮಾಗಳಲ್ಲಿ ನಾಯಕ ಸಾಮಾನ್ಯವಾಗ ರೌಡಿ, ಡಾನ್, ಕಳ್ಳ ಇಂಥಹುವೇ ಆಗಿರುತ್ತಾನೆ. ಹಾಗಾಗಿ ಯುವಕರು, ಬಾಲಕರು ಸಹ ನಾಯಕನ್ನು ಆದರ್ಶವಾಗಿ ಪರಿಗಣಿಸಿ ತಾವೂ ಅವರಂತೆ ಆಗುವ ಭರದಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾರೆ.

More from Filmibeat

English summary
Inspired movie Pushpa and Web Series Bahukula three boys in Delhi killed a boy. They shoot the incident in their phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X