ಸುಶಾಂತ್ ಸಿಂಗ್ ಖಾತೆಯನ್ನು 'ಚಿರಸ್ಮರಣೀಯ'ಗೊಳಿಸಿದ ಇನ್‌ಸ್ಟಾಗ್ರಾಂ

By Avani Malnad

ಇತ್ತೀಚೆಗಷ್ಟೇ ಎಲ್ಲರನ್ನೂ ದುಃಖದ ಮಡುವಿನಲ್ಲಿ ಬಿಟ್ಟುಹೋದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಇನ್‌ಸ್ಟಾಗ್ರಾಂ ಗೌರವ ಸಲ್ಲಿಸಿದೆ. ಸುಶಾಂತ್ ಅವರ ಹೆಸರಿನ ಕೆಳಗೆ 'ರಿಮೆಂಬರಿಂಗ್' ಪದವನ್ನು ಇನ್‌ಸ್ಟಾಗ್ರಾಂ ಅಳವಡಿಸಿದೆ. ಅಂದರೆ ಸುಶಾಂತ್ ಸಿಂಗ್ ಅವರ ಖಾತೆಯನ್ನು ಕಾಯಂ ಆಗಿ ಸ್ಮರಣೀಯವಾಗಿ ಇರಿಸುವ ಮೂಲಕ ಅಗಲಿದ ನಟನಿಗೆ ಗೌರವ ಸಲ್ಲಿಸಿದೆ.

Recommended Video

ಎಲ್ಲಾ ಸೆಲೆಬ್ರಿಟಿಗಳನ್ನು ಅನ್ ಫಾಲೋ ಮಾಡಿದ ಕರಣ್ ಜೋಹರ್ | Karan johar | Filmibeat Kannada

ಸುಶಾಂತ್ ಸಿಂಗ್ ಸಾವಿನ ಬಳಿಕ ಅವರ ಇನ್‌ಸ್ಟಾಗ್ರಾಂ ಹಿಂಬಾಲಕರ ಸಂಖ್ಯೆ ಹೆಚ್ಚಾಗಿದೆ. ಸುಮಾರು ಮೂರು ಮಿಲಿಯನ್‌ನಷ್ಟು ಫಾಲೋವರ್‌ಗಳು ಹೆಚ್ಚಾಗಿದ್ದಾರೆ. ಹಾಗೆಯೇ ಅವರ ಹಳೆಯ ಫೋಟೊಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ. ಸುಶಾಂತ್ ತಮ್ಮ ಅನೇಕ ಹಳೆಯ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದರು ಎನ್ನಲಾಗಿದೆ. ಮುಂದೆ ಓದಿ...

ರಿಮೆಂಬರಿಂಗ್ ಫೀಚರ್

ರಿಮೆಂಬರಿಂಗ್ ಫೀಚರ್

ಮೃತಪಟ್ಟ ವ್ಯಕ್ತಿಯ ಜೀವನವನ್ನು ನೆನಪಿಸುವುದು ಇನ್‌ಸ್ಟಾಗ್ರಾಂನಲ್ಲಿನ ಮೆಮೋರಿಯಲ್ ಫೀಚರ್ ಆಗಿದೆ. ವ್ಯಕ್ತಿಯ ಹೆಸರಿನ ಕೆಳಗೆ 'ರಿಮೆಂಬರಿಂಗ್' ಎಂಬ ಪದ ಹಾಕುವ ಮೂಲಕ ಅವರ ಖಾತೆಯನ್ನು ಚಿರಸ್ಮರಣೀಯವಾಗಿರಿಸುವುದು ಇದರ ಉದ್ದೇಶ.

ಲಾಗಿನ್ ಆಗಲು ಸಾಧ್ಯವಿಲ್ಲ

ಲಾಗಿನ್ ಆಗಲು ಸಾಧ್ಯವಿಲ್ಲ

ಅಂದರೆ ಈ ಖಾತೆಯಲ್ಲಿನ ಹಳೆಯ ಪೋಸ್ಟ್‌ಗಳನ್ನು ಫಾಲೋವರ್‌ಗಳು ವೀಕ್ಷಿಸಬಹುದಾಗಿದೆ. ಆದರೆ ಈ ರೀತಿಯ 'ರಿಮೆಂಬರಿಂಗ್' ಫೀಚರ್ ಅಳವಡಿಸಿದ ಬಳಿಕ ಬೇರೆ ಯಾರೂ ಈ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ.

ವಿಜ್ಞಾನದ ಪೋಸ್ಟ್‌ಗಳು

ವಿಜ್ಞಾನದ ಪೋಸ್ಟ್‌ಗಳು

ಸುಶಾಂತ್ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವ ಮೂಲಕ ಸಕ್ರಿಯರಾಗಿರುತ್ತಿದ್ದರೂ, ಪೋಸ್ಟ್‌ಗಳನ್ನು ಹಾಕುತ್ತಿದ್ದದ್ದು ತೀರಾ ಕಡಿಮೆ. ಅವರು ಹಾಕುತ್ತಿದ್ದ ಹೆಚ್ಚಿನ ಪೋಸ್ಟ್‌ಗಳು ವಿಜ್ಞಾನದ ಕುರಿತಾಗಿಯೇ ಇರುತ್ತಿದ್ದವು.

ತಾಯಿಯ ಕುರಿತು ಪೋಸ್ಟ್

ತಾಯಿಯ ಕುರಿತು ಪೋಸ್ಟ್

ಮಾರ್ಚ್ 2019ರಿಂದ 2020ರ ಜೂನ್ 3ರವರೆಗೆ ಅವರು 87 ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿರುವುದು ಕಾಣಿಸುತ್ತದೆ. ಅವರು ಹಾಕಿದ್ದ ಕೊನೆಯ ಪೋಸ್ಟ್ ತಮ್ಮ ತಾಯಿಯ ಕುರಿತಾಗಿತ್ತು. ಆ ಪೋಸ್ಟ್‌ಗೆ 3 ಲಕ್ಷಕ್ಕೂ ಅಧಿಕ ಕಾಮೆಂಟ್‌ಗಳು ಬಂದಿವೆ.

More from Filmibeat

English summary
Sushant Singh Rajput's Instagram account is added by Remembering feature.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X