For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ಆಯ್ತು ಇನ್ಸ್ಟಾಗ್ರಾಮ್ ನಿಂದ ಶಾಕ್: ಕಂಗನಾ ಪೋಸ್ಟ್ ಡಿಲೀಟ್ ಮಾಡಿದ ಇನ್ಸ್ಟಾಗ್ರಾಮ್

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಮತ್ತೊಂದು ಶಾಕ್ ಎದುರಾಗಿದೆ. ಇತ್ತೀಚಿಗಷ್ಟೆ ಟ್ವಿಟ್ಟರ್ ಸಂಸ್ಥೆ ಕಂಗನಾರನ್ನು ಹೊರದಬ್ಬಿದ ಬೆನ್ನಲ್ಲೇ ಈಗ ಇನ್ಸ್ಟಾಗ್ರಾಮ್‌ನಿಂದನೂ ಬ್ಯಾನ್ ಆಗುವ ಲಕ್ಷಣ ಕಾಣುತ್ತಿದೆ. ಟ್ವಿಟ್ಟರ್‌ನಿಂದ ಬ್ಯಾನ್ ಆದ ಬಳಿಕ ಕಂಗನಾ ಇನ್ಸ್ಟಾಗ್ರಾಮ್‌ಗೆ ಶಿಫ್ಟ್ ಆಗಿದ್ದಲ್ಲದೇ ಬಳಕೆ ಹೆಚ್ಚು ಮಾಡಿದ್ದರು.

  ಇತ್ತೀಚಿಗೆ ಕೊರೊನಾ ಬಗ್ಗೆ ಕಂಗನಾ ಮಾಡಿದ್ದ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ ಡಿಲೀಟ್ ಮಾಡುವ ಮೂಲಕ ಆಘಾತ ನೀಡಿದೆ. ಟ್ವಿಟ್ಟರ್ ನಿಯಮ ಪದೇ ಪದೇ ಉಲ್ಲಂಘನೆ ಮಾಡುತ್ತಿದ್ದ ಕಂಗನಾರನ್ನು ಟ್ವಿಟ್ಟರ್ ಸಂಸ್ಥೆ ಶಾಶ್ವತವಾಗಿ ಅಮಾನತು ಮಾಡಿದೆ. ಇದೀಗ ಇನ್ಸ್ಟಾಗ್ರಾಮ್‌ನಿಂದನೂ ಅಮಾನತು ಆಗುವ ಲಕ್ಷಣ ಕಾಣಿಸುತ್ತಿದೆ. ಮುಂದೆ ಓದಿ..

  ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಕೊರೊನಾ ಪಾಸಿಟಿವ್ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಕೊರೊನಾ ಪಾಸಿಟಿವ್

  ಕೊರೊನಾ ಸಣ್ಣ ಜ್ವರ ಅಷ್ಟೆ ಎಂದ ಕಂಗನಾ

  ಕೊರೊನಾ ಸಣ್ಣ ಜ್ವರ ಅಷ್ಟೆ ಎಂದ ಕಂಗನಾ

  ಕೊರೊನಾ ಎರಡನೇ ಅಲೆ ಭೀಕರತೆಗೆ ಇಡೀ ದೇಶ ತತ್ತರಿಸಿ ಹೋಗಿದೆ. ಅನೇಕ ಸಿನಿಮಾ ಸೆಲೆಬ್ರಿಟಿಗಳಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇತ್ತೀಚಿಗೆ ನಟಿ ಕಂಗನಾಗೂ ಕೊರೊನಾ ಸೋಂಕು ತಗುಲಿದ್ದು, ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಬಹಿರಂಗ ಪಡಿಸಿದ್ದರು. 'ಕೊರೊನಾ ಒಂದು ಸಣ್ಣ ಜ್ವರ' ಅಷ್ಟೆ ಎಂದು ಕಂಗನಾ ಬರೆದು ಕೊಂಡಿದ್ದರು.

  ಕಂಗನಾರನ್ನು ತರಾಟೆ ತೆಗೆದುಕೊಂಡ ನೆಟ್ಟಿಗರು

  ಕಂಗನಾರನ್ನು ತರಾಟೆ ತೆಗೆದುಕೊಂಡ ನೆಟ್ಟಿಗರು

  ದೇಶದಲ್ಲಿ ಕೊರೊನಾದಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸಮಯದಲ್ಲಿ ಕೊರೊನಾ ಸಣ್ಣ ಜ್ವರ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಕಾಮೆಂಟ್‌ಗಳ ಮೂಲಕ ಕಂಗನಾರನ್ನು ತರಾಟೆ ತೆಗೆದುಕೊಂಡಿದ್ದರು. ಕೆಲವೇ ಕ್ಷಣದಲ್ಲಿ ಇನ್ಸ್ಟಾಗ್ರಾಮ್ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ.

  ಕಂಗನಾ ಟ್ವಿಟ್ಟರ್ ಖಾತೆ ಅಮಾನತಾದ ಬೆನ್ನಲ್ಲೇ ವೈರಲ್ ಆಗಿರುವ ಟ್ರೋಲ್‌ಗಳಿವುಕಂಗನಾ ಟ್ವಿಟ್ಟರ್ ಖಾತೆ ಅಮಾನತಾದ ಬೆನ್ನಲ್ಲೇ ವೈರಲ್ ಆಗಿರುವ ಟ್ರೋಲ್‌ಗಳಿವು

  ಒಂದು ವಾರ ಉಳಿಯುವುದು ಅನುಮಾನ

  ಒಂದು ವಾರ ಉಳಿಯುವುದು ಅನುಮಾನ

  ಈ ಬಗ್ಗೆ ಕಂಗನಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ನಾನು ಕೋವಿಡ್ ನಾಶಮಾಡುತ್ತೇನೆ ಎಂದು ಹಾಕಿದ್ದ ಪೋಸ್ಟ್‌ನಿಂದ ಅನೇಕರಿಗೆ ಅಸಮಾಧಾನವಾಗಿದೆ. ಅದರಿಂದ ನನ್ನ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ ಡಿಲೀಟ್ ಮಾಡಿದೆ. ಟ್ವಿಟ್ಟರ್‌ನಲ್ಲಿ ಭಯೋತ್ಪಾದಕರು ಮತ್ತು ಕಮ್ಯುನಿಸ್ಟ್ ಗಳಿಗೆ ಬೆಂಬಲ ಕೊಡುವುದನ್ನು ನೋಡಿದ್ದೆ. ಆದರೆ ಇನ್ಸ್ಟಾಗ್ರಾಮ್‌ನಲ್ಲೂ ಕೋವಿಡ್ ಫ್ಯಾನ್ ಕ್ಲಬ್ ಇರುವುದು ಅದ್ಭುತ. ನಾನು ಇನ್ಸ್ಟಾಗ್ರಾಮ್‌ಗೆ ಬಂದು 2 ದಿನಗಳಾಯ್ತು. ಇಲ್ಲಿ ಒಂದು ವಾರಕ್ಕಿಂತ ಹೆಚ್ಚು ಕಾಲ ಇರುತ್ತೇನೆ ಎಂದು ನನಗೆ ಅನಿಸುತ್ತಿಲ್ಲ' ಎಂದು ಹೇಳಿದ್ದಾರೆ.

  ಕನ್ನಡ ಚಿತ್ರರಂಗಕ್ಕೆ ಬಹಿರಂಗ ಪತ್ರ ಬರೆದ ಮಾಲಾಶ್ರೀ | Filmibeat Kannada
  ಟ್ವಿಟ್ಟರ್ ನಿಯಮದ ವಿರುದ್ಧ ಕಂಗನಾ ಟ್ವೀಟ್

  ಟ್ವಿಟ್ಟರ್ ನಿಯಮದ ವಿರುದ್ಧ ಕಂಗನಾ ಟ್ವೀಟ್

  ಇತ್ತೀಚಿಗೆ ಕಂಗನಾ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ಗಳನ್ನು ಮಾಡಿದ್ದರು. ಪ.ಬಂಗಾಳದ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಟಿ ಕಂಗನಾ, ಮಮತಾ ಬ್ಯಾನರ್ಜಿಯನ್ನು ಟೀಕಿಸಿದ್ದರು. ಸಾಲು ಸಾಲು ಆಕ್ಷೇಪಾರ್ಹ ಟ್ವೀಟ್‌ಗಳನ್ನು ಮಾಡುತ್ತಿದ್ದ ಕಂಗನಾ ಟ್ವಿಟ್ಟರ್ ಖಾತೆಯನ್ನು ಟ್ವಿಟ್ಟರ್ ಸಂಸ್ಥೆ ಅಮಾನತು ಮಾಡಿದೆ.

  English summary
  Instagram deletes Kangana Ranaut's post calling corona is small time flu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X