twitter
    For Quick Alerts
    ALLOW NOTIFICATIONS  
    For Daily Alerts

    ಇನ್‌ಸ್ಟಾಗ್ರಾಂ ವಿಡಿಯೋದಿಂದ ಕೆಲಸ ಕಳೆದುಕೊಂಡ ಮಹಿಳಾ ಕಾನ್‌ಸ್ಟೇಬಲ್‌ಗೆ ಒಲಿಯಿತು ಅದೃಷ್ಟ

    By ಫಿಲ್ಮಿಬೀಟ್ ಡೆಸ್ಕ್
    |

    ಕೆಲವು ದಿನಗಳ ಹಿಂದೆ ಮಹಿಳಾ ಕಾನ್‌ಸ್ಟೇಬಲ್ ಒಬ್ಬರ ಇನ್‌ಸ್ಟಾಗ್ರಾಂ ವಿಡಿಯೋ ಒಂದರ ಸುದ್ದಿ ಹಲವೆಡೆ ಹರಿದಾಡಿತ್ತು. ಆ ಮಹಿಳಾ ಕಾನ್‌ಸ್ಟೇಬಲ್‌ಗೆ ಈಗ ಅದೃಷ್ಟ ಖುಲಾಯಿಸಿದೆ.

    ಉತ್ತರ ಪ್ರದೇಶ ಆಗ್ರಾದ ಮಹಿಳಾ ಕಾನ್‌ಸ್ಟೇಬಲ್ ಪ್ರಿಯಾಂಕಾ ಶರ್ಮಾ ಬಂದೂಕು ಹಿಡಿದು ವಿಡಿಯೋ ಮಾಡಿ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಬಹಳ ವೈರಲ್ ಆಗಿತ್ತು. ಕೊನೆಗೆ ಆ ಕಾನ್‌ಸ್ಟೇಬಲ್ ಅನ್ನು ಕೆಲಸದಿಂದ ಅಮಾನತು ಮಾಡಲಾಯ್ತು.

    ಇನ್‌ಸ್ಟಾಗ್ರಾಂನಲ್ಲಿ ಸದಾ ಸಕ್ರಿಯವಾಗಿರುತ್ತಿದ್ದ ಪ್ರಿಯಾಂಕಾ ಮಿಶ್ರಾ, ಪೊಲೀಸ್ ಸಮವಸ್ತ್ರದಲ್ಲಿಯೇ ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದರು. ಅದರಲ್ಲಿ ಒಮ್ಮೆ ಸರ್ವೀಸ್‌ ಪಿಸ್ತೂಲು ಹಿಡಿದುಕೊಂಡು, 'ಉತ್ತರ ಪ್ರದೇಶದಲ್ಲಿ ಐದು ವರ್ಷದ ಹುಡುಗರು ಸಹ ಪಿಸ್ತೂಲು ಚಲಾಯಿಸುತ್ತಾರೆ'' ಎಂದು ಸ್ಟೈಲ್‌ ಆಗಿ ವಿಡಿಯೋ ಒಂದನ್ನು ಮಾಡಿದ್ದರು. ಇದು ಉತ್ತರ ಪ್ರದೇಶ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿ ಪ್ರಿಯಾಂಕಾ ಮಿಶ್ರಾರನ್ನು ಅಮಾನತು ಮಾಡಲಾಯ್ತು.

    ಇದರಿಂದ ಬೇಸರಗೊಂಡ ಪ್ರಿಯಾಂಕಾ ಮಿಶ್ರಾ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ಅಲ್ಲಿಗೂ ಸುಮ್ಮನಾಗದ ಪೊಲೀಸ್ ಇಲಾಖೆ, ಪ್ರಿಯಾಂಕಾ ಮಿಶ್ರಾರ ಪೊಲೀಸ್ ತರಬೇತಿಗೆ ಖರ್ಚು ಮಾಡಲಾಗಿದ್ದ 1.50 ಲಕ್ಷ ಹಣವನ್ನು ಹಿಂತಿರುಗಿಸುವಂತೆ ಹೇಳಿತು. ಅಂತೆಯೇ ಪ್ರಿಯಾಂಕಾ ಮಿಶ್ರಾ ಸಹ ಹಣವನ್ನು ಹಿಂತಿರುಗಿಸಿದರು. ಆದರೆ ಈಗ ಹಠಾತ್ತನೆ ಈಗ ಪ್ರಿಯಾಂಕಾ ಮಿಶ್ರಾಗೆ ಅದೃಷ್ಟ ಖುಲಾಯಿಸಿದೆ.

    ಇನ್‌ಸ್ಟಾಗ್ರಾಂ ವಿಡಿಯೋಗಳಿಂದ ಖ್ಯಾತರಾದ ಪ್ರಿಯಾಂಕಾ ಮಿಶ್ರಾಗೆ ಈಗ ವೆಬ್ ಸರಣಿ ಮತ್ತು ಮಾಡೆಲಿಂಗ್‌ನ ಅವಕಾಶಗಳು ಅರಸಿ ಬಂದಿವೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಣಯವನ್ನು ಪ್ರಿಯಾಂಕಾ ಮಿಶ್ರಾ ತೆಗೆದುಕೊಂಡಿಲ್ಲ.

    ಟ್ರೋಲ್ ಮಾಡಿದಾಗ ಬೇಸರವಾಯ್ತು: ಪ್ರಿಯಾಂಕಾ

    ಟ್ರೋಲ್ ಮಾಡಿದಾಗ ಬೇಸರವಾಯ್ತು: ಪ್ರಿಯಾಂಕಾ

    ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ ಮಿಶ್ರಾ, ನಾನು ನನ್ನ ಖುಷಿಗಾಗಿ ವಿಡಿಯೋಗಳನ್ನು ಮಾಡುತ್ತಿದ್ದೆ. ಆದರೆ ಒಮ್ಮೆಲೆ ಆ ಬಂದೂಕಿನ ವಿಡಿಯೋ ವೈರಲ್ ಆಯಿತು. ನನ್ನನ್ನು ಬಹಳ ಮಂದಿ ಟ್ರೋಲ್ ಮಾಡಿದರು. ನಾನು ತಪ್ಪು ಮಾಡಿದೆ ಎಂದು ಎಲ್ಲೆಡೆ ಸುದ್ದಿಗಳು ಪ್ರಕಟವಾದವು. ಇದರಿಂದ ಮಾನಸಿಕವಾಗಿ ನಾನು ಬಹಳ ನೊಂದು ಬಿಟ್ಟೆ. ಕೆಲಸದಿಂದ ವಿಆರ್‌ಎಸ್‌ ತೆಗೆದುಕೊಳ್ಳಲು ಯತ್ನಿಸಿದೆ ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ರಾಜೀನಾಮೆಯನ್ನೇ ಕೊಟ್ಟುಬಿಟ್ಟೆ. ಆದರೆ ಈಗ ತಪ್ಪು ಮಾಡಿದೆ ಎನಿಸುತ್ತಿದೆ'' ಎಂದಿದ್ದಾರೆ.

    ಸಾಕಷ್ಟು ಅವಕಾಶಗಳು ಬರುತ್ತಿವೆ: ಪ್ರಿಯಾಂಕಾ

    ಸಾಕಷ್ಟು ಅವಕಾಶಗಳು ಬರುತ್ತಿವೆ: ಪ್ರಿಯಾಂಕಾ

    ಅವಕಾಶಗಳ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಮಿಶ್ರಾ, ''ಕೆಲಸಕ್ಕೆ ರಾಜೀನಾಮೆ ಕೊಟ್ಟ ಬಳಿಕ ವೆಬ್ ಸರಣಿ ಹಾಗೂ ಮಾಡೆಲಿಂಗ್‌ನ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ಜೀವನದಲ್ಲಿ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚೆನ್ನಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ವೆಬ್ ಸರಣಿಯಲ್ಲಿ ನಟಿಸುವುದಕ್ಕೆ ಈಗಿನ್ನೂ ಒಪ್ಪಿಗೆ ಕೊಟ್ಟಿಲ್ಲ'' ಎಂದಿದ್ದಾರೆ.

    ಎಂಎಂ ಗೇಟ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್

    ಎಂಎಂ ಗೇಟ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್

    ಪ್ರಿಯಾಂಕಾ ಮಿಶ್ರಾ ಆಗ್ರಾದ ಎಂಎಂ ಗೇಟ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಇನ್‌ಸ್ಟಾಗ್ರಾಂನ ಹವ್ಯಾಸವಿದ್ದ ಪ್ರಿಯಾಂಕಾ ಆಗೊಮ್ಮೆ, ಈಗೊಮ್ಮೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಪೊಲೀಸ್ ಸಮವಸ್ತ್ರದಲ್ಲಿದ್ದಾಗಲೂ ಪ್ರಿಯಾಂಕಾ ಇನ್‌ಸ್ಟಾಗ್ರಾಂ ವಿಡಿಯೋಗಳನ್ನು ಹಾಕುತ್ತಿದ್ದರು. ಇವು ಬಹಳ ವೈರಲ್ ಆಗುತ್ತಿದ್ದವು. ಅದರಲ್ಲಿಯೂ ಒಮ್ಮೆ 'ರಂಗ್‌ಬಾಜಿ' ಎಂಬ ವಿಡಿಯೋ ಹಾಕಿದ್ದರು. ಅದರಲ್ಲಿ ಬಿಹಾರ, ಹರ್ಯಾಣಕ್ಕಿಂತಲೂ ಉತ್ತರ ಪ್ರದೇಶ ಡೇಂಜರಸ್, ಇಲ್ಲಿನ ಐದು ವರ್ಷದ ಮಕ್ಕಳೇ ಬಂದೂಕು ಚಲಾಯಿಸುತ್ತಾರೆ ಎಂದು ಹೇಳಿದ್ದರು ಆ ವಿಡಿಯೋ ಬಹಳ ವೈರಲ್ ಆಯ್ತು. ನಂತರ ಅದೇ ವಿಡಿಯೋವನ್ನು ನಿಜವಾದ ಬಂದೂಕು ಹಿಡಿದುಕೊಂಡು ಹೇಳಿದರು. ಅದು ಇನ್ನೂ ವೈರಲ್ ಆಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿಬಿಟ್ಟಿತು.

    ಅಮಾನತು ಮಾಡಿದ ಇಲಾಖೆ

    ಅಮಾನತು ಮಾಡಿದ ಇಲಾಖೆ

    ಬಂದೂಕು ಹಿಡಿದು ಮಾಡಿದ್ದ ವಿಡಿಯೋ ವೈರಲ್ ಆದ ಬಳಿಕ ಪ್ರಿಯಾಂಕಾ ಮಿಶ್ರಾ ಅನ್ನು ಇಲಾಖೆಯು ಅಮಾನತು ಮಾಡಿತು. ಕೊನೆಗೆ ಪ್ರಿಯಾಂಕಾ ಮಿಶ್ರಾ ಕೆಲಸಕ್ಕೆ ರಾಜೀನಾಮೆ ನೀಡಿದರು. ತಮ್ಮ ತರಬೇತಿಗೆ ಪೊಲೀಸ್ ಇಲಾಖೆ ಖರ್ಚು ಮಾಡಿದ್ದ 1.50 ಲಕ್ಷ ಹಣವನ್ನು ಸಹ ಪ್ರಿಯಾಂಕಾ ಇಲಾಖೆಗೆ ವಾಪಸ್ ನೀಡಿದರು. ಮೇಲೆ ಅಮಾನತ್ತಾದಮೇಲೂ ಪ್ರಿಯಾಂಕಾ ಮಿಶ್ರಾ ಬಿಡದೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋಗಳನ್ನು ಹಾಕುತ್ತಲೇ ಇದ್ದಾರೆ. ಮೊದಲಿಗಿಂತಲೂ ಈಗ ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಾಗಿದೆ.

    English summary
    Instagram model police constable Priyanka Mishra getting offers from web series and model. Priyanka Mishra suspended for her Instagram video in which she shown duty gun.
    Friday, September 17, 2021, 18:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X