ಬೆಂಗಳೂರು ಮೂಲದ ಕಿರಣ್ ರಾವ್ ಜೊತೆ ಆಮೀರ್ ಪ್ರೀತಿ ಪ್ರಾರಂಭವಾಗಿದ್ದೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಹಾಗೂ ಕಿರಣ್ ರಾವ್ ತಮ್ಮ 16 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಿದ್ದಾರೆ. ಮಗ ಅಜಾದ್ ರಾವ್ ಖಾನ್ ರನ್ನು ಒಟ್ಟಿಗೇ ಪೋಷಣೆ ಮಾಡಲು ನಿಶ್ಚಯಿಸಿದ್ದಾರೆ.

ಕಿರಣ್ ರಾವ್ ಜೊತೆ 2ನೇ ಮದುವೆಯಾಗಿದ್ದ ಆಮೀರ್ ಖಾನ್ ಸಂತೋಷದ ಜೀವನ ನಡೆಸುತ್ತಿದ್ದರು. ಇದೀಗ ದಿಢೀರ್ ಅಂತ ವಿಚ್ಛೇದನ ಘೋಷಣೆ ಮಾಡಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಜಂಟಿ ಹೇಳಿಕೆ ಬಿಡುಗಡೆ ಮಾಡುವ ಮೂಲಕ ವಿಚ್ಛೇದನದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಆಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ ಪಡೆದರೂ ಮಗನಿಗಾಗಿ ಸಹ ಪೋಷಕರಾಗಿರಲು ನಿರ್ಧರಿಸಿದ್ದಾರೆ. ಜೊತೆಗೆ ವೃತ್ತಿಪರ ರಂಗದಲ್ಲಿ ಪಾಲುದಾರಿಗಳನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.

ನಟ ಆಮೀರ್ ಖಾನ್ 1986ರಲ್ಲಿ ರೀನಾ ದತ್ತ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ರೀನಾ ಜೊತೆಗಿನ 16 ವರ್ಷದ ದಾಂಪತ್ಯ ಜೀವನ ಕಡಿದುಕೊಂಡು 2002ರಲ್ಲಿ ದೂರ ಆದರು. ಬಳಿಕ 2005ರಲ್ಲಿ ಬೆಂಗಳೂರು ಮೂಲದ ಕಿರಣ್ ರಾವ್ ಜೊತೆ 2ನೇ ಮದುವೆಯಾದರು. ಅಷ್ಟಕ್ಕೂ ಆಮೀರ್ ಖಾನ್ ಮೊದಲು ಕಿರಣ್ ರಾವ್ ರನ್ನು ಭೇಟಿಯಾಗಿದ್ದೆಲ್ಲಿ? ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ..

'ಲಗಾನ್' ಸೆಟ್ ನಲ್ಲಿ ಮೊದಲ ಭೇಟಿ

'ಲಗಾನ್' ಸೆಟ್ ನಲ್ಲಿ ಮೊದಲ ಭೇಟಿ

ನಟ ಆಮೀರ್ ಖಾನ್, ಕಿರಣ್ ರಾವ್ ಅವರನ್ನು ಮೊದಲು ಭೇಟಿಯಾಗಿದ್ದು ಬ್ಲಾಕ್ ಬಸ್ಟರ್ ಹಿಟ್ 'ಲಗಾಮ್' ಸಿನಿಮಾ ಸೆಟ್ ನಲ್ಲಿ. ಈ ಸಮಯದಲ್ಲಿ ಆಮೀರ್ ಖಾನ್ ನಾಯಕ ನಟನಾಗಿದ್ದರು. ಕಿರಣ್ ರಾವ್ ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ಸಹಾಯಕ ನಿರ್ದೇಶಕಿಯಾಗಿ ವೃತ್ತಿ ಜೀವನ ಪ್ರಾರಂಭ

ಸಹಾಯಕ ನಿರ್ದೇಶಕಿಯಾಗಿ ವೃತ್ತಿ ಜೀವನ ಪ್ರಾರಂಭ

ಲಗಾನ್ ಸಿನಿಮಾದಲ್ಲಿ ಆಮೀರ್ ನಾಯಕನಾಗಿ ನಟಿಸುವ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಈ ಸಿನಿಮಾ ಆಮೀರ್ ಖಾನ್ ವೃತ್ತಿ ಜೀವನಕ್ಕೆ ಮತ್ತಷ್ಟು ಮೈಲೇಜ್ ತಂದು ಕೊಟ್ಟ ಚಿತ್ರವಾಗಿದೆ. ಲಗಾನ್ ಸಿನಿಮಾ ಆಸ್ಕರ್ ಅಂಗಳಕ್ಕೂ ಲಗ್ಗೆ ಇಟ್ಟಿತ್ತು. ಈ ಸಿನಿಮಾದಲ್ಲಿ ಮೊದಲು ಆಮೀರ್ ಖಾನ್ ಮತ್ತು ಕಿರಣ್ ರಾವ್ ಭೇಟಿಯಾದರು.

ಕಿರಣ್ ರಾವ್ ಮೂಲತಃ ಬೆಂಗಳೂರಿನವರು

ಕಿರಣ್ ರಾವ್ ಮೂಲತಃ ಬೆಂಗಳೂರಿನವರು

ಕಿರಣ್ ರಾವ್ ಮೂಲತಃ ಬೆಂಗಳೂರಿನವರಾದ ಕಿರಣ್ ರಾವ್ ಬೆಳೆದಿದ್ದು ಕೊಲ್ಕತ್ತಾದಲ್ಲಿ. ಕಿರಣ್ ರಾವ್ ಪೋಷಕರು ಕೊಲ್ಕತ್ತಾ ಬಿಡುವ ನಿರ್ಧಾರ ಮಾಡಿದ ನಂತರ ಕಿರಣ್ ರಾವ್ ಮುಂಬೈಗೆ ಬಂದು ನೆಲೆಸಿದರು. ಮುಂಬೈನಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಕಿರಣ್ ರಾವ್ ಹೆಚ್ಚಿನ ವಿದ್ಯಾಭ್ಯಾಸಕ್ಕೆ ದೆಹಲಿಗೆ ತೆರಳಿದರು. ದೆಹಲಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ನಿರ್ಮಾಪಕಿ, ನಿರ್ದೇಶಕಿ ಮತ್ತು ನಟಿ

ನಿರ್ಮಾಪಕಿ, ನಿರ್ದೇಶಕಿ ಮತ್ತು ನಟಿ

2000ರಲ್ಲಿ ಕಿರಣ್ ರಾವ್ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಸಹಾಯಕ ನಿರ್ದೇಶಕಿಯಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಕಿರಣ್ ರಾವ್ ಬಳಿಕ ಖ್ಯಾತ ನಿರ್ಮಾಪಕಿಯಾಗಿ ಗುರುತಿಸಿಕೊಂಡರು. ಒಂದು ಸಿನಿಮಾ ನಿರ್ದೇಶನವನ್ನು ಮಾಡಿದ್ದಾರೆ. ಜೊತೆಗೆ ಪೋಷಕನಟಿಯಾಗಿ ಆಮೀರ್ ಖಾನ್ ಜೊತೆ ಒಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಲಗಾನ್ ಬಳಿಕ ಕಿರಣ್ ರಾವ್ ಅನೇಕ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು.

'ಲಗಾನ್' ಸಿನಿಮಾದಲ್ಲಿ ಸ್ನೇಹಿತರಾಗಿರಲಿಲ್ಲ- ಆಮೀರ್ ಖಾನ್

'ಲಗಾನ್' ಸಿನಿಮಾದಲ್ಲಿ ಸ್ನೇಹಿತರಾಗಿರಲಿಲ್ಲ- ಆಮೀರ್ ಖಾನ್

'ಲಗಾನ್' ಸಿನಿಮಾದಲ್ಲಿ ಇಬ್ಬರೂ ಭೇಟಿಯಾಗಿದ್ದರು ಇಬ್ಬರ ನಡುವೆ ಯಾವುದೇ ಸ್ನೇಹ ಬಾಂಧವ್ಯ ಇರಲಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಆಮೀರ್ ಖಾನ್ ಬಹಿರಂಗ ಪಡಿಸಿದ್ದರು. "ಆ ಸಮಯದಲ್ಲಿ ನಮಗೆ ಯಾವುದೇ ಸಂಬಂಧವಿರಲಿಲ್ಲ. ಸ್ನೇಹಿತರು ಆಗಿರಲಿಲ್ಲ. ಟೀಂನಲ್ಲಿ ಒಬ್ಬರಾಗಿದ್ದರು. ಮೊದಲ ಪತ್ನಿಯಿಂದ ಬೇರೆ ಆದ ಬಳಿಕ ಮತ್ತೆ ಅವಳನ್ನು ಭೇಟಿಯಾದೆ" ಎಂದಿದ್ದರು.

ಪ್ರೀತಿ ಪ್ರಾರಂಭವಾಗಿದ್ದು ಹೇಗೆ?

ಪ್ರೀತಿ ಪ್ರಾರಂಭವಾಗಿದ್ದು ಹೇಗೆ?

2002ರಲ್ಲಿ ಮೊದಲ ಪತ್ನಿ ರೀನಾ ದತ್ತರಿಂದ ವಿಚ್ಛೇದನ ಪಡೆದ ಆಮೀರ್ ಖಾನ್ ಏಕಾಂಗಿಯಾಗಿದ್ದರು. ಆ ಸಮಯದಲ್ಲಿ ಆಮೀರ್ ಜೀವನಕ್ಕೆ ಎಂಟ್ರಿಯಾದವರು ಕಿರಣ್ ರಾವ್. ಇಬ್ಬರ ಪ್ರೀತಿ ಪ್ರಾರಂಭವಾದ ಬಗ್ಗೆ ಸಂದರ್ಶನದಲ್ಲಿ ಆಮೀರ್ ಖಾನ್ ವಿವರಿಸಿದ್ದರು. "ಒಂದು ದಿನ ಕಿರಣ್ ರಾವ್ ಫೋನ್ ಬಂತು. ನಾನು ಅವಳ ಜೊತೆ ಅರ್ಧ ಗಂಟೆ ಫೋನಿನಲ್ಲಿ ಮಾತನಾಡಿದೆ. ಮಾತನಾಡಿ ಫೋನ್ ಇಟ್ಟಾಗ, ಓ ದೇವರೆ! ನಾನು ಅವಳೊಂದಿಗೆ ಮಾತನಾಡುವಾಗ ನನಗೆ ತುಂಬಾ ಸಂತಷವಾಗಿದ್ದೆ. ಆ ಕ್ಷಣದಲ್ಲಿ ನಾನು ಅವಳ ಜೊತೆ ಮಾತನಾಡುವಾಗ ತುಂಬಾ ಸಂತಸಗೊಂಡಿದ್ದೆ" ಎಂದು ಬಹಿರಂಗ ಪಡಿಸಿದ್ದರು.

Recommended Video

ಅಸಲಿಗೆ Dvitva ಪದದ ಅರ್ಥ ಹೇಳಿದ ನಿರ್ದೇಶಕ | Filmibeat Kannada
2005ರಲ್ಲಿ ಮದುವೆ, 2021ರಲ್ಲಿ ವಿಚ್ಛೇದನ

2005ರಲ್ಲಿ ಮದುವೆ, 2021ರಲ್ಲಿ ವಿಚ್ಛೇದನ

ಫೋನ್ ಕಾಲ್ ನಿಂದ ಪ್ರಾರಂಭವಾದ ಪ್ರೀತಿ ಬಳಿಕ ಇಬ್ಬರನ್ನು ಪತಿ-ಪತ್ನಿಯರಾಗಿ ಮಾಡಿತ್ತು. 2005 ಡಿಸೆಂಬರ್ 28ರಂದು ಆಮೀರ್ ಖಾನ್ ಮತ್ತು ಕಿರಣ್ ರಾವ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2011ರಲ್ಲಿ ಬಾಡಿಗೆ ತಾಯಿ ಮೂಲಕ ಮಗ ಅಜಾದ್ ರಾವ್ ಖಾನ್ ರನ್ನು ಸ್ವಾಗತಿಸಿದರು. 15 ವರ್ಷಗಳ ಸುಂದರ ದಾಂಪತ್ಯ ನಡೆಸಿದ ಆಮೀರ್ ಮತ್ತು ಕಿರಣ್ ರಾವ್ ಈಗ ಬೇರೆ ಆಗುವ ನಿರ್ಧಾರ ಮಾಡಿರುವುದು ನಿಜಕ್ಕೂ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

More from Filmibeat

English summary
Interesting Facts About Aamir Khan and Kiran Rao's 15 Year Old Love Story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X