For Quick Alerts
  ALLOW NOTIFICATIONS  
  For Daily Alerts

  ಶೆರ್ಲಿನ್ ಚೋಪ್ರಾ ಬಗ್ಗೆ ಕೆಲವು ಸೀಕ್ರೆಟ್ ಸಂಗತಿಗಳು

  By ರವಿಕಿಶೋರ್
  |

  ಶೆರ್ಲಿನ್ ಚೋಪ್ರಾ ನಟಿಸಿದ್ದು ಕೇವಲ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ. ಆದರೂ ಯಾರಿಗೂ ಸಿಗದಷ್ಟು ಪ್ರಚಾರ ಪಡೆದರು. ಇದಕ್ಕೆ ಕಾರಣವಾಗಿದ್ದು ಕಾಮಸೂತ್ರ 3D ಎಂಬ ಕಾಮಪ್ರಚೋದಕ ಚಿತ್ರ. ಈ ಚಿತ್ರದ ಹಾಟ್ ಫೊಟೋಗಳು ಬಿಡುಗಡೆಯಾಗುತ್ತಿದ್ದಂತೆ ಶೆರ್ಲಿನ್ ಚೋಪ್ರಾ ವಿಶ್ವವ್ಯಾಪಿ ಖ್ಯಾತಿ ಗಳಿಸಿದರು.

  ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅರೆಬರೆ ನಗ್ನ ಚಿತ್ರಗಳನ್ನು ಪ್ರಸಾರ ಮಾಡಿ ಬೇಳೆ ಬೇಯಿಸಿಕೊಂಡ ತಾರೆಗಳಲ್ಲಿ ಶೆರ್ಲಿನ್ ಚೋಪ್ರಾ ಸಹ ಒಬ್ಬರು. ಇನ್ನೇನು ಅವರ ಕಾಮಸೂತ್ರ 3D ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಪಡ್ಡೆಗಳಿಗೆ ಇನ್ನೇನು ಅನಾಹುತ ಕಾದಿದೆಯೋ ಏನೋ? ಎಂದು ಬಾಲಿವುಡ್ ಚಿತ್ರರಂಗ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದೆ.

  ಇಲ್ಲಿವೆ ನೋಡಿ ಶೆರ್ಲಿನ್ ಚೋಪ್ರಾ ಬಗೆಗಿನ ಸೀಕ್ರೆಟ್ ಸಂಗತಿಗಳು. ಹೀಗ್ಯಾಕೆ ಇವೆಲ್ಲವನ್ನೂ ಹೇಳುತ್ತಿದ್ದೀರಾ ಎಂಬುದು ತಾನೆ ನಿಮ್ಮ ಡೌಟು. ಅಂದಹಾಗೆ ಇಂದು (ಫೆಬ್ರವರಿ 11) ಶೆರ್ಲಿನ್ ಜನುಮ ದಿನ. ಇಪ್ಪತ್ತೊಂಬತ್ತು ವಸಂತಗಳನ್ನು ದಾಟಿ ಮೂವತ್ತಕ್ಕೆ ಅಡಿಯಿಟ್ಟಿದ್ದಾರೆ. ಸ್ಲೈಡ್ ನಲ್ಲಿ ಮತ್ತಷ್ಟು ವಿವರಗಳು.

  ಟೀನೇಜ್ ನಲ್ಲಿ ಆವರೇಜ್ ಬೆಡಗಿ ಶೆರ್ಲಿನ್

  ಟೀನೇಜ್ ನಲ್ಲಿ ಆವರೇಜ್ ಬೆಡಗಿ ಶೆರ್ಲಿನ್

  ಎಲ್ಲರೂ ಟೀನೇಜ್ ನಲ್ಲಿ ಚೆನ್ನಾಗಿ ಕಾಣಿಸಿದರೆ ಶೆರ್ಲಿನ್ ಮಾತ್ರ ಆವರೇಜ್ ಆಗಿ ಕಾಣುತ್ತಿದ್ದರು. ಇನ್ನೊಂದು ಬೆಚ್ಚಿ ಬೀಳಿಸುವ ಸಂಗತಿ ಎಂದರೆ ಯಾವ ಹುಡುಗನೂ ಶೆರ್ಲಿನ್ ಕಡೆಗೆ ಮೂಸಿಯೂ ನೋಡುತ್ತಿರಲಿಲ್ಲ ಎಂಬುದು.

  ದಪ್ಪ ಕನ್ನಡಕ ಹಾಕಿಕೊಳ್ಳುತ್ತಿದ್ದ ಶೆರ್ಲಿನ್

  ದಪ್ಪ ಕನ್ನಡಕ ಹಾಕಿಕೊಳ್ಳುತ್ತಿದ್ದ ಶೆರ್ಲಿನ್

  ಮೊದಲೇ ನೋಡಲು ಅಷ್ಟಷ್ಟು ಮಾತ್ರವೇ ಇದ್ದರು. ಅದರ ಜೊತೆಗೆ ಕಣ್ಣಿಗೆ ದಪ್ಪ ಕನ್ನಡಕ ಬೇರೆ ಹಾಕಿಕೊಂಡು ಎಲ್ಲರೂ ಸೋಡಾ ಗ್ಲಾಸ್ ಎಂದು ಹಂಗಿಸುವಷ್ಟರ ಮಟ್ಟಿಗೆ ಇದ್ದರು.

  ಪುಸ್ತಕದ ಹುಳುವಾಗಿದ್ದ ಶೆರ್ಲಿನ್ ಚೋಪ್ರಾ

  ಪುಸ್ತಕದ ಹುಳುವಾಗಿದ್ದ ಶೆರ್ಲಿನ್ ಚೋಪ್ರಾ

  ಸದಾ ಪುಸ್ತಕಗಳ ನಡುವೆ ಕಳೆದುಹೋಗುತ್ತಿದ್ದ ಶೆರ್ಲಿನ್ ಚೋಪ್ರಾ ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಸಭೆ ಸಮಾರಂಭಗಳಿಂದ ಸದಾ ದೂರ ಉಳಿಯುತ್ತಿದ್ದರು. ಈಗ ಮಾತ್ರ ಸಂಪೂರ್ಣ ಬದಲಾಗಿದ್ದಾರೆ.

  ಶೆರ್ಲಿನ್ ಅಪ್ಪ ಕ್ರಿಶ್ಚಿಯನ್ ಅಮ್ಮ ಮುಸ್ಲಿಂ

  ಶೆರ್ಲಿನ್ ಅಪ್ಪ ಕ್ರಿಶ್ಚಿಯನ್ ಅಮ್ಮ ಮುಸ್ಲಿಂ

  ಶೆರ್ಲಿನ್ ಚೋಪ್ರಾ ಅವರ ತಂದೆ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾದರೆ ತಾಯಿ ಮುಸ್ಲಿಂ ಧರ್ಮದವರಾಗಿದ್ದರು. ಆದರೆ ಶೆರ್ಲಿನ್ ಮಾತ್ರ ಎರಡೂ ಧರ್ಮಗಳನ್ನು ಸಮ ಪ್ರಮಾಣದಲ್ಲಿ ಸ್ವೀಕರಿಸಿದ್ದಾರೆ.

  ಪ್ಲೇಬಾಯ್ ನಿಯತಕಾಲಿಗೆ ಅಡಿಯಿಟ್ಟ ತಾರೆ

  ಪ್ಲೇಬಾಯ್ ನಿಯತಕಾಲಿಗೆ ಅಡಿಯಿಟ್ಟ ತಾರೆ

  ಪ್ಲೇಬಾಯ್ ನಿಯತಕಾಲಿಕೆಯಲ್ಲಿ ಮೊದಲ ಬಾರಿ ತಮ್ಮ ದೇಹವನ್ನು ಅನಾವರಣಗೊಳಿಸಿದ ಭಾರತೀಯ ಮಾಡೆಲ್ ಶೆರ್ಲಿನ್ ಚೋಪ್ರಾ.

  ಶೆರ್ಲಿನ್ ಚೋಪ್ರಾ ಅಸಲಿ ಹೆಸರೇನು?

  ಶೆರ್ಲಿನ್ ಚೋಪ್ರಾ ಅಸಲಿ ಹೆಸರೇನು?

  ಶೆರ್ಲಿನ್ ಚೋಪ್ರಾ ಅಸಲಿ ಹೆಸರು ಮೋನಾ ಚೋಪ್ರಾ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ಶೆರ್ಲಿನ್ ಹೇಳುವಂತೆ ಅವರ ಅಸಲಿ ನಾಮ್ ಶೆರ್ಲಿನ್ ಅಂತೆ. ಆದರೆ ಚಿತ್ರರಂಗಕ್ಕೆ ಅಡಿಯಿಟ್ಟಾಗ ಮೋನಾ ಚೋಪ್ರಾ ಎಂದು ಹೆಸರು ಬದಲಾಯಿಸಿಕೊಂಡಿದ್ದರಂತೆ.

  English summary
  Sherlyn Chopra, born on February 11, 1984 celebrates her 30th birthday today. She is hot, sensuous and has young boys vying for her attention. Sherlyn Chopra has posted many bare body pictures on social networking site to get noticed and her endeavour has worked for her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X