International Emmy Awards 2023: ಪ್ರತಿಷ್ಠಿತ ಪ್ರಶಸ್ತಿಗೆ ನಾಮಿನೇಟ್ ಆದ ಶೆಫಾಲಿ ಷಾ, ಜಿಮ್ ಸರ್ಭ್, ವೀರ್ ದಾಸ್

ಇಂಟರ್ನ್ಯಾಷನಲ್ ಎಮ್ಮಿ ಅವಾರ್ಡ್ಸ್ 2023 ನಾಮನಿರ್ದೇಶನಗಳ ಪಟ್ಟಿಯನ್ನು ಸೆಪ್ಟೆಂಬರ್ 26ರ ಮಂಗಳವಾರ ಬಿಡುಗಡೆ ಮಾಡಲಾಗಿದೆ. 20 ವಿವಿಧ ದೇಶಗಳಿಂದ ಸುಮಾರು 56 ಸ್ಪರ್ಧಿಗಳು ಈ ವರ್ಷ 14 ವಿವಿಧ ವಿಭಾಗಗಳಲ್ಲಿ ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿಗಳನ್ನು ಪಡೆಯುವ ಸ್ಪರ್ಧೆಯಲ್ಲಿದ್ದಾರೆ.

ನಿರೀಕ್ಷೆಯಂತೆ ಭಾರತೀಯ ಸಿನಿರಂಗವೂ ಕೂಡ ಹಲವು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಇಂಟರ್‌ನ್ಯಾಶನಲ್ ಎಮ್ಮಿ ಅವಾರ್ಡ್ಸ್ 2023 ರ ನಾಮನಿರ್ದೇಶನಗಳ ಪಟ್ಟಿಯಲ್ಲಿ ಪ್ರತಿಭಾನ್ವಿತ ನಟಿ ಶೆಫಾಲಿ ಷಾ, ನಟ ಜಿಮ್ ಸರ್ಭ್, ಪ್ರಸಿದ್ಧ ಹಾಸ್ಯನಟ ವೀರ್ ದಾಸ್ ಕೂಡ ಸ್ಥಾನ ಪಡೆದಿದ್ದಾರೆ. ಪ್ರತಿಷ್ಠಿತ ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಸಮಾರಂಭವನ್ನು ಈ ವರ್ಷ ನವೆಂಬರ್ 20 ರಂದು ನ್ಯೂಯಾರ್ಕ್ ನಗರದಲ್ಲಿ ಆಯೋಜಿಸಲಾಗಿದೆ.

International Emmy Awards 2023: Shefali Shah, Vir Das, Jim Sarbh Nominated

ದೆಹಲಿ ಕ್ರೈಮ್ ಅಭಿನಯಕ್ಕೆ ಶೆಫಾಲಿ ಷಾ ನಾಮಿನೇಟ್

ನಟಿ ಶೆಫಾಲಿ ಷಾ ಮತ್ತು ನಟ ಜಿಮ್ ಸರ್ಭ್ ಇಬ್ಬರೂ ಅತ್ಯುತ್ತಮ ನಟ, ನಟಿ ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದಾರೆ. ನಟಿ ಶೆಫಾಲಿ ಷಾ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಪ್ರದರ್ಶನವಾದ ಥ್ರಿಲ್ಲರ್ ಸರಣಿ ದೆಹಲಿ ಕ್ರೈಮ್‌ನಲ್ಲಿ ಡಿಸಿಪಿ ವರ್ತಿಕಾ ಚತುರ್ವೇದಿ ಐಪಿಎಸ್ ಅವರ ಪಾತ್ರ ಮಾಡಿದ್ದರು. ಅವರ ಅದ್ಭುತ ಅಭಿನಯದ ಕಾರಣ ಅವರು ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

ಈ ಕೆಟಗರಿಯಲ್ಲಿ ಹಿರಿಯ ನಟಿ ಡೆನ್ಮಾರ್ಕ್‌ನ ಕೋನಿ ನೀಲ್ಸನ್, ಯುಕೆಯ ಬಿಲ್ಲಿ ಪೈಪರ್ ಮತ್ತು ಮೆಕ್ಸಿಕೊದ ಕಾರ್ಲಾ ಸೌಜಾ ಕೂಡ ಇದ್ದು, ಶೆಫಾಲಿ ಷಾ ಇವರೊಂದಿಗೆ ಸ್ಪರ್ಧೆ ನೀಡಲಿದ್ದಾರೆ.

International Emmy Awards 2023: Shefali Shah, Vir Das, Jim Sarbh Nominated

ರಾಕೆಟ್ ಬಾಯ್ಸ್ ಅಭಿನಯಕ್ಕೆ ಜಿಮ್ ಸರ್ಭ್ ನಾಮಿನೇಟ್

ಮತ್ತೊಂದೆಡೆ, ಜಿಮ್ ಸರ್ಭ್ ಸೋನಿ LIVನಲ್ಲಿ ಪ್ರದರ್ಶನವಾದ ರಾಕೆಟ್ ಬಾಯ್ಸ್ ವೆಬ್ ಸೀರಿಸ್‌ನಲ್ಲಿನ ನಟನೆಗಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. 'ಭಾರತೀಯ ಪರಮಾಣು ಕಾರ್ಯಕ್ರಮದ ಪಿತಾಮಹ' ಎಂದು ಕರೆಯಲ್ಪಡುವ ಡಾ. ಹೋಮಿ ಜಹಾಂಗೀರ್ ಬಾಬಾ ಅವರ ಪಾತ್ರದಲ್ಲಿ ಜಿಮ್ ಸರ್ಭ್ ಅದ್ಭುತ ನಟನೆ ಮಾಡಿದ್ದರು. ಈ ಪಟ್ಟಿಯಲ್ಲಿ ಅರ್ಜೆಂಟೀನಾದ ಗುಸ್ಟಾವೊ ಬಸ್ಸಾನಿ, ಯುಕೆ ಮಾರ್ಟಿನ್ ಫ್ರೀಮನ್ ಮತ್ತು ಸ್ವೀಡನ್‌ನ ಜೋನಾಸ್ ಕಾರ್ಲ್ಸನ್ ಕೂಡ ನಾಮಿನೇಟ್ ಆಗಿದ್ದಾರೆ.

ವೀರ್ ದಾಸ್: ಲ್ಯಾಂಡಿಂಗ್‌

ದೇಶದ ಅತ್ಯಂತ ಪ್ರಸಿದ್ಧ ಹಾಸ್ಯನಟರಲ್ಲಿ ಒಬ್ಬರಾಗಿರುವ ವೀರ್ ದಾಸ್ ಅವರ ಪ್ರಸಿದ್ಧ ನೆಟ್‌ಫ್ಲಿಕ್ಸ್ ಶೋ, ವೀರ್ ದಾಸ್: ಲ್ಯಾಂಡಿಂಗ್‌ಗಾಗಿ 2023 ರ ಇಂಟರ್ನ್ಯಾಷನಲ್ ಎಮ್ಮಿ ಅವಾರ್ಡ್ಸ್‌ನಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಇವರ ಜೊತೆಗೆ ಯುಕೆಯ ಶೋ ಡೆರ್ರಿ ಗರ್ಲ್ಸ್ ಸೀಸನ್ 3, ಫ್ರಾನ್ಸ್‌ನ ಲೆ ಫ್ಲಾಂಬ್ಯೂ ಮತ್ತು ಅರ್ಜೆಂಟೀನಾದಿಂದ ಎಲ್ ಎನ್‌ಕಾರ್ಗಾಡೊ ಶೋಗಳು ರೇಸ್‌ನಲ್ಲಿವೆ.

ನಾಮಿನೇಟ್ ಆಗಿರುವುದಕ್ಕೆ ಸಂಭ್ರಮಿಸಿದ ತಾರೆಯರು

ಪ್ರತಿಷ್ಠಿತ ಎಮ್ಮಿ ಪ್ರಶಸ್ತಿಗೆ ನಾಮಿನೇಟ್ ಆಗಿರುವುದಕ್ಕೆ ಶೆಫಾಲಿ ಶಾ ಮತ್ತು ಜಿಮ್ ಸರ್ಭ್ ಇಬ್ಬರೂ ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. "ನನ್ನ ಭಾವನೆಯನ್ನು ವಿವರಿಸಲು ನನಗೆ ಪದಗಳು ಸಿಗುತ್ತಿಲ್ಲ. ಡೆಲ್ಲಿ ಕ್ರೈಮ್ ನನಗೆ ವಿಶೇಷ ಪ್ರಾಜೆಕ್ಟ್, ದೆಲ್ಲಿ ಕ್ರೈಮ್ ಮೊದಲ ಸೀಸನ್ 2020 ರಲ್ಲಿ ಪ್ರಶಸ್ತಿಯನ್ನು ತಂದರೆ, ಸೀಸನ್ ಎರಡು ನನ್ನನ್ನು ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಮಾಡಿದೆ" ಎಂದು ಹೇಳಿದ್ದಾರೆ.

ಜಿಮ್ ಸರ್ಭ್ ಕೂಡ "ರಾಕೆಟ್ ಬಾಯ್ಸ್‌ನಲ್ಲಿ ಡಾ ಹೋಮಿ ಬಾಬಾ ಅವರ ಪಾತ್ರ ಮಾಡಿದಕ್ಕಾಗಿ ನಾನು ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿರುವುದು ಸಂತಸ ತಮದಿದೆ. ಪ್ರಪಂಚದಾದ್ಯಂತದ ಅಂತಹ ಪ್ರತಿಭಾವಂತ ವ್ಯಕ್ತಿಗಳ ನಡುವೆ ಗುರುತಿಸಿಕೊಳ್ಳುವುದು ಗೌರವ" ಎಂದಿದ್ದಾರೆ.

More from Filmibeat

English summary
International Emmy Awards 2023: Shefali Shah, Vir Das, Jim Sarbh nominated.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X