ಇವನೊಬ್ಬ ಖ್ಯಾತ ಗಾಯಕ, ಸೆಲ್ಪಿ ಕೇಳಿದ ಅಭಿಮಾನಿಯ ಜೊತೆ ಲಿಪ್‌ಲಾಕ್ ಮಾಡಿದ ಉದಿತ್ ನಾರಾಯಣ್..!
ಸೆಲೆಬ್ರೆಟಿ ಎಂದು ಕರೆಸಿಕೊಂಡವರು ಸಮಾಜಕ್ಕೆ ಮಾದರಿಯಾಗಿರಬೇಕು. ಇವರ ನಡೆ ನುಡಿ ಹಾವ ಭಾವದ ಮೇಲೆ ಸಮಾಜ ಸದಾ ಒಂದು ಕಣ್ಣಿಟ್ಟಿರುತ್ತೆ. ಇನ್ನೂ ಇವರ ಅಭಿಮಾನಿಗಳು ತಮ್ಮ ಇಷ್ಟದ ನಾಯಕ-ಗಾಯಕ-ನಾಯಕಿಯ ಹೆಜ್ಜೆಯನ್ನೇ ಅನುಸರಿಸುತ್ತೆ. ಹೀಗಾಗಿ ಸಾಧ್ಯವಾದಷ್ಟು ಸಮಾಜಕ್ಕೆ ಮಾದರಿ ವ್ಯಕ್ತಿಯಾಗುವ ಪ್ರಯತ್ನವನ್ನು ಮಾಡಬೇಕೆ ಹೊರತು ಬೇಲಿಯೇ ಎದ್ದು ಹೊಲ ಮೇಯ್ದಂತೆ ವರ್ತಿಸಬಾರದು. ಇದಕ್ಕೆ ಉದಿತ್ ನಾರಾಯಣ್ ಸದ್ಯದ ಜ್ವಲಂತ ಸಾಕ್ಷಿ.
ಹೌದು, ತನ್ನ ಚಿನ್ನದ ಕಂಠದಿಂದನೇ ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಹೆಸರುವಾಸಿಯಾದವರು ಉದಿತ್ ನಾರಾಯಣ್. ಕಳೆದ ಮೂರುವರೆ ದಶಕಗಳಿಂದ ಒಂದಕ್ಕಿಂತ ಒಂದು ಸುಮಧುರ ಹಾಡುಗಳಿಗೆ ಧ್ವನಿಯಾದವರು ಇವರು. ಇಂಥಾ ಉದಿತ್ ನಾರಾಯಣ್ ಸೆಲ್ಫೀ ಕೇಳಲು ಬಂದ ಯುವತಿಯ ತುಟಿಗೆ ಕಿಸ್ ಮಾಡಿದ್ದಾರೆ. ಈ ಮೂಲಕ ಭಾರತದೆಲ್ಲೆಡೆ ಈಗ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಹೌದು, ಉದಿತ್ ನಾರಾಯಣ್ ಲೈವ್ ಕಾರ್ಯಕ್ರಮ ನೀಡುತ್ತಿದ್ದ ಸಮಯದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಅನೇಕ ಮಹಿಳಾ ಅಭಿಮಾನಿಗಳು ಬಂದಿದ್ದಾರೆ. ಆಗ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಅಭಿನಯದ ಮೊಹರಾ ಚಿತ್ರದ ಟಿಪ್ ಟಿಪ್ ಬರ್ಸಾ ಪಾನಿ ಹಾಡನ್ನು ಹಾಡುತ್ತಿದ್ದ ಉದಿತ್ ನಾರಾಯಣ್ ಬಂದ ಎಲ್ಲರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಸೆಲ್ಫಿಗೆ ಫೋಸ್ ನೀಡಲು ಕೆಳಗಡೆ ಕುಳಿತುಕೊಳ್ಳುತ್ತಾರೆ. ಈ ಸಮಯದಲ್ಲಿ ಮಹಿಳೆಯರ ಕೆನ್ನೆಗಳಿಗೆ ಉದಿತ್ ನಾರಾಯಣ್ ಚುಂಬಿಸುತ್ತಾರೆ.
ಆದರೆ ಇಷ್ಟಕ್ಕೆ ಸುಮ್ಮನಾಗದ 69 ವರ್ಷದ ಹಿರಿಯ ಗಾಯಕ ಉದಿತ್ ನಾರಾಯಣ್ ಮಹಿಳೆಯೊಬ್ಬರ ತುಟಿಗೆ ತುಟಿ ಸೇರಿಸುತ್ತಾರೆ. ಉದಿತ್ ನಾರಾಯಣ್ ಅವರಿಂದ ಈ ವರ್ತನೆ ನಿರೀಕ್ಷೆ ಮಾಡದ ಆ ಅಭಿಮಾನಿ ಅರೆ ಕ್ಷಣ ಅವಕ್ಕಾಗಿ ನಿಲ್ಲುತ್ತಾರೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉದಿತ್ ನಾರಾಯಣ್ ವಿರುದ್ದ ಆಕ್ರೋಶದ ಅಲೆ ಕೂಡ ಎದ್ದಿದೆ.
ಅನೇಕರು ಇದು ಎಐ ತಂತ್ರಜ್ಞಾನದ ಸಹಾಯದಿಂದ ಮಾಡಲಾದ ವಿಡಿಯೋ ಆಗಿರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಉದಿತ್ ನಾರಾಯಣ್ ಹೀಗೆ ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಒಂದು ವೇಳೆ ಉದಿತ್ ನಾರಾಯಣ್ ನಿಜಕ್ಕೂ ಆ ಮಹಿಳೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದರೆ ತಮ್ಮ ಗತಕಾಲದ ಪರಂಪರೆ ಮಾಡಿದ್ದ ಹೆಸರನ್ನೆಲ್ಲ ಉದಿತ್ ನಾರಾಯಣ್ ತಾವೇ ಮಣ್ಣು ಪಾಲು ಮಾಡಿದಂತೆ ಆಗುತ್ತೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಖ್ಯಾತ ಗಾಯಕರಾದವರು ಸಾರ್ವಜನಿಕವಾಗಿ ತನ್ನ ನಡೆಗಳ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಎಂಬ ಬುದ್ದಿ ಮಾತನ್ನು ಕೂಡ ಅನೇಕರು ಈಗ ಉದಿತ್ ನಾರಾಯಣ್ ಗೆ ಹೇಳುತ್ತಿದ್ದಾರೆ. ನಿಮ್ಮ ಮೇಲಿದ್ದ ಅಭಿಮಾನ ಈ ವಿಡಿಯೋ ನೋಡಿದ ಕೂಡಲೇ ಸತ್ತು ಹೋಯಿತು ಎಂದು ತಮ್ಮ ಮನದ ನೋವು ಬೇಸರವನ್ನು ಕೂಡ ಅನೇಕರು ಹೊರ ಹಾಕುತ್ತಿದ್ದಾರೆ.
ಅಂದ್ಹಾಗೇ 69 ವರ್ಷದ ಉದಿತ್ ನಾರಾಯಣ್ ಹಿಂದಿ, ತೆಲುಗು, ಕನ್ನಡ, ತಮಿಳು,ಮಲಯಾಳಂ, ಬಂಗಾಲಿ, ಸಿಂಧಿ, ಓಡಿಯಾ, ಭೋಜ್‌ಪುರಿ, ನೇಪಾಳಿ, ಅಸ್ಸಾಮಿ, ಭಾಘೇಲಿ ಮತ್ತು ಮೈಥಿಲಿ ಸೇರಿದಂತೆ ವಿವಿದ ಭಾಷೆಗಳಲ್ಲಿ ಹಾಡನ್ನು ಹಾಡಿದ್ದಾರೆ. ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2009ರಲ್ಲಿ ಪದ್ಮಶ್ರೀ ಮತ್ತು 2016ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಇಂಥಾ ಗಾಯಕ ಮಹಿಳಾ ಅಭಿಮಾನಿಯ ತುಟಿಗೆ ಕಿಸ್ ಮಾಡುವ ಮೂಲಕ ಈಗ ವಿವಾದದ ಕೇಂದ್ರಬಿಂದುವಾಗಿರುವುದು ದುರ್ದೈವ. ತಮ್ಮ 69ನೇ ವಯಸ್ಸಿನಲ್ಲಿ ಉದಿತ್ ನಾರಾಯಣ್‌ಗೆ ಇದೆಲ್ಲ ಬೇಕಿತ್ತಾ ? ಉತ್ತರ ಉದಿತ್ ನಾರಾಯಣ್ ಅವರೇ ಕೊಡಬೇಕು.


Click it and Unblock the Notifications











