twitter
    For Quick Alerts
    ALLOW NOTIFICATIONS  
    For Daily Alerts

    'ಅಸಹಿಷ್ಣುತೆ' ಹೇಳಿಕೆ: ಅಮೀರ್ ಖಾನ್‌ಗೆ ಹೈಕೋರ್ಟ್ ನೋಟಿಸ್

    |

    ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂಬ ಹೇಳಿಕೆ ನೀಡಿದ್ದ ಆರೋಪದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ಛತ್ತೀಸಗಡ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. 2015ರಲ್ಲಿ ಅಮೀರ್ ಖಾನ್ ಅಸಹಿಷ್ಣುತೆ ಕುರಿತಾದ ಚರ್ಚೆ ತೀವ್ರವಾಗಿದ್ದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದರು.

    Recommended Video

    ಕೊಟ್ಟ ಮಾತು ಉಳಿಸಿಕೊಂಡ ನವರಸನಾಯಕ | Jaggesh donates 1 Lakh for Nirbhaya hangman

    ದೀಪಕ್ ದಿವಾನ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿರಯವ ಹೈಕೋರ್ಟ್, ಛತ್ತೀಸಗಡ ಸರ್ಕಾರಕ್ಕೆ ಕೂಡ ನೋಟಿಸ್ ಜಾರಿ ಮಾಡಿದೆ.

    ದೂರುದಾರ ದೀಪಕ್ ದಿವಾನ್ ಪರ ಪ್ರಕಾರ, ದೇಶದಲ್ಲಿ ಅಸಹಿಷ್ಣುತೆ ಹೆಚ್ಚಳವಾಗುತ್ತಿದ್ದು, ಪತ್ನಿ ಕಿರಣ್ ರಾವ್ ಕೂಡ ತಾವಿಬ್ಬರೂ ಭಾರತದಿಂದ ಹೊರ ಹೋಗುವುದು ಸೂಕ್ತ ಎಂಬ ಸಲಹೆ ನೀಡಿದ್ದರು ಎಂದು ಅಮೀರ್ ಖಾನ್ ಹೇಳಿಕೆ ನೀಡಿದ್ದರು.

    ಮತ್ತೆ ಹಳೆಯದ್ದೆಲ್ಲವನ್ನೂ ಮರೆಯುತ್ತಾರಾ ಅಮೀರ್ ಖಾನ್? ಬಾಲಿವುಡ್‌ನಲ್ಲಿ ಹೀಗೊಂದು ಸುದ್ದಿ...ಮತ್ತೆ ಹಳೆಯದ್ದೆಲ್ಲವನ್ನೂ ಮರೆಯುತ್ತಾರಾ ಅಮೀರ್ ಖಾನ್? ಬಾಲಿವುಡ್‌ನಲ್ಲಿ ಹೀಗೊಂದು ಸುದ್ದಿ...

    ಎರಡು ಬಾರಿ ಅರ್ಜಿ ತಿರಸ್ಕಾರ

    ಎರಡು ಬಾರಿ ಅರ್ಜಿ ತಿರಸ್ಕಾರ

    ದೀಪಕ್ ದಿವಾನ್ ಅವರು ರಾಯ್ಪುರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಎರಡು ಬಾರಿ ತಿರಸ್ಕೃತವಾಗಿದ್ದವು. ಕೊನೆಗೆ ಅಮೀರ್ ಖಾನ್ ಹೇಳಿಕೆ ವಿರುದ್ಧ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು ಎಂದು ಅವರ ವಕೀಲ ಅಮಿಯಕಾಂತ್ ತಿವಾರಿ ತಿಳಿಸಿದ್ದಾರೆ.

    ಅರ್ಜಿ ಪರಿಗಣಿಸಿದ ಹೈಕೋರ್ಟ್

    ಅರ್ಜಿ ಪರಿಗಣಿಸಿದ ಹೈಕೋರ್ಟ್

    ಸಿಆರ್‌ಪಿಸಿ ಸೆಕ್ಷನ್ 196 (1) (a) ಅಡಿಯಲ್ಲಿ ಅರ್ಜಿಯನ್ನು ಸ್ವೀಕಾರ ಮಾಡಲು ಎಲ್ಲ ಅರ್ಹತೆ ಇದ್ದರೂ ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರಕರಣದಲ್ಲಿನ ಯಾವುದೇ ಅಂಶವನ್ನು ಪರಿಗಣಿಸದೆ ಅಥವಾ ವಾದವನ್ನು ದಾಖಲಿಸಿಕೊಳ್ಳದೆಯೇ ನೇರವಾಗಿ ವಜಾಗೊಳಿಸಿರುವಂತೆ ಕಾಣಿಸುತ್ತದೆ ಎಂದು ಹೈಕೋರ್ಟ್ ಹೇಳಿತು.

    ಅಮೀರ್ ಖಾನ್ ಮತ್ತು ಛತ್ತೀಸಗಡ ಸರ್ಕಾರಕ್ಕೆ ನ್ಯಾಯಮೂರ್ತಿ ಸಂಜಯ್ ಕೆ. ಅಗರವಾಲ್ ನೋಟಿಸ್‌ಗಳನ್ನು ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 17ಕ್ಕೆ ನಿಗದಿಗೊಳಿಸಿದ್ದಾರೆ.

    ದೇಶ ಸುರಕ್ಷಿತವಾಗಿಲ್ಲ ಎಂದಿದ್ದ ಕಿರಣ್

    ದೇಶ ಸುರಕ್ಷಿತವಾಗಿಲ್ಲ ಎಂದಿದ್ದ ಕಿರಣ್

    2015ರಲ್ಲಿ ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಅವಾರ್ಡ್ಸ್ ಸಮಾರಂಭದಲ್ಲಿ ಅಮೀರ್ ಖಾನ್, ಪತ್ನಿ ಕಿರಣ್ ದೇಶಬಿಟ್ಟು ಹೋಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ ಎಂದಿದ್ದರು. ನಮ್ಮ ಸುತ್ತಲಿನ ವಾತಾವರಣ ಹಾಗೂ ಅದರಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಭಯವಾಗುತ್ತಿದೆ ಎಂದು ಕಿರಣ್ ಹೇಳಿದ್ದಳು. ಸುದ್ದಿಪತ್ರಿಕೆಗಳನ್ನು ನೋಡುವುದಕ್ಕೂ ಆಕೆ ಭಯಪಡುತ್ತಿದ್ದಾಳೆ. ನಾವೆಲ್ಲರೂ ನಮ್ಮ ಬದುಕನ್ನು ಭಾರತದಲ್ಲಿಯೇ ಕಳೆಯುತ್ತಿದ್ದೇವೆ. ಆದರೆ ಈಗಿನ ಪರಿಸ್ಥಿತಿ ಎಚ್ಚರಿಕೆಯ ಗಂಟೆಯಾಗಿದೆ ಮತ್ತು ಅಪಾಯಕಾರಿಯಾಗಿದೆ ಎಂದು ಆಕೆ ಅಭಿಪ್ರಾಯ ಪಟ್ಟಿದ್ದಾಳೆ ಎಂದು ಅಮೀರ್ ಹೇಳಿದ್ದರು.

    ರಾಷ್ಟ್ರೀಯತೆಗೆ ಧಕ್ಕೆ ತರುವ ಆರೋಪ

    ರಾಷ್ಟ್ರೀಯತೆಗೆ ಧಕ್ಕೆ ತರುವ ಆರೋಪ

    ಈ ಹೇಳಿಕೆಯ ವಿರುದ್ಧ ದೀಪಕ್ ದಿವಾನ್ ಕೋರ್ಟ್ ಮೆಟ್ಟಿಲೇರಿದ್ದರು. ಅಮೀರ್ ಖಾನ್ ಮೇಲೆ ಐಪಿಸಿ ಸೆಕ್ಷನ್ 153 (A) ಅಡಿ ಧರ್ಮದ ಆಧಾರದಲ್ಲಿ ವಿಭಿನ್ನ ಗುಂಪುಗಳ ನಡುವೆ ವೈರತ್ವ ಬೆಳೆಸುವುದು, 153 (B) ಅಡಿ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವುದು ಪ್ರಕರಣಗಳನ್ನು ದಾಖಲಿಸುವಂತೆ ಕೋರಿದ್ದರು. ಆದರೆ ಅವರ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ತಿರಸ್ಕರಿಸಿತ್ತು.

    English summary
    Chhattisgarh High Court has issued notice to Bollywood actor Aamir Khan and Chhattisgarh government over his Intolerance Remark.
    Friday, March 20, 2020, 11:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X