ತನಗಿಂತ 24 ವರ್ಷ ಚಿಕ್ಕವಳ ಜೊತೆ ಎರಡನೇ ಮದುವೆಯಾಗುತ್ತಾರಾ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್..!

ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಅರ್ಥವೂ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪಾರ್ಟ್ ಟೈಮ್ ಪ್ರೀತಿ.. ಫುಲ್ ಟೈಮ್ ಪ್ರೀತಿ.. ಟೈಮ್ ಟು ಟೈಮ್ ಪ್ರೀತಿ.. ಟೈಮ್ ಬೈ ಟೈಮ್ ಪ್ರೀತಿ ಅಂತೆಲ್ಲ ನಾನಾ ವೆರೈಟಿಗಳು ಕೂಡ ಪ್ರೀತಿಯಲ್ಲಿ ಬಂದಿವೆ.

ಇನ್ನೂ ಬಣ್ಣದ ಪ್ರಪಂಚದಲ್ಲಿ ಸಂಬಂಧ ಬಟ್ಟೆ ಬದಲಿಸಿದಷ್ಟೇ ಸುಲಭ. ಇವತ್ತು ಖುಷಿ ಖುಷಿಯಾಗಿ ಮದುವೆಯಾದರು ಆ ನಂತರ ವಿಚ್ಛೇದನ ಪಡೆದು, ಬೇರೆಯವರ ಜೊತೆ ಓಡಾಡುತ್ತಾರೆ. ಇನ್ನೂ ಕೆಲವರು ಮದುವೆ ವಯಸ್ಸಿಗೆ ಬಂದ ಮಕ್ಕಳು ಇದ್ದರೂ ಕೂಡ ತಾವು ಮತ್ತೊಂದು ಮದುವೆಯಾಗಲು ಹಾತೊರೆಯುತ್ತಾರೆ. ಈ ಸಾಲಿಗೆ ಈಗ ಸೊಹೈಲ್ ಖಾನ್ ಸೇರಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

introducing-shefali-bagga-the-tv-anchor-and-biggboss-13-fame-rumoured-to-be-sohail-khans-girlfriend

ಹೌದು, ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ 24 ವರ್ಷದ ಹಿಂದೆ ಸೀಮಾ ಸಜ್ದೇಹ್ ಅವರನ್ನು ಮದುವೆಯಾಗಿದ್ದರು. 20 ವರ್ಷ ಸುಖ ದುಃಖ ಹಂಚಿಕೊಂಡರು. ಆದರೆ ಆ ನಂತರ ಈ ಜೋಡಿಯ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. 2017ರಿಂದ ಸೊಹೈಲ್ ಖಾನ್ ಅವರಿಂದ ಸೀಮಾ ಅವರಿಂದ ದೂರವಾದರು. ಸೊಹೈಲ್ ಮನೆಯಿಂದ ಹೊರ ಬಂದು ಸೀಮಾ ಪ್ರತ್ಯೇಕವಾಗಿ ವಾಸ ಮಾಡಲು ಶುರು ಮಾಡಿದರು. 2022ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು.

ಹೀಗೆ ದೂರವಾದ ಇಬ್ಬರು ಸದ್ಯ ತಮ್ಮ ತಮ್ಮ ಬದುಕಿನಲ್ಲಿ ನೆಮ್ಮದಿಯಾಗಿ ಇದ್ದಾರೆ. ಸೊಹೈಲ್ ಖಾನ್ ಅವರನ್ನು ಮದುವೆಯಾಗುವ ಮುನ್ನ ತಾವು ಪ್ರೀತಿಸಿದ್ದ ಹುಡುಗ ವಿಕ್ರಂ ಅಹುಜಾ ಜೊತೆ ಸೀಮಾ ಸಜ್ದೇಹ್ ಸದ್ಯ ಸುತ್ತಾಡುತ್ತಿದ್ದಾರೆ. ಎದೆಯೆತ್ತರಕ್ಕೆ ಬೆಳೆದ 24 ವರ್ಷದ ಮಗ ನಿರ್ವಾನ್ ಒಪ್ಪಿಗೆಯನ್ನು ಪಡೆದು ವಿಕ್ರಂ ಜೊತೆ ಮದುವೆಯಾಗುವ ಆಲೋಚನೆಯಲ್ಲಿದ್ದಾರೆ.

ಇನ್ನು ಸೊಹೈಲ್ ಖಾನ್ ಮೊನ್ನೆವರೆಗೆ ತಾವಾಯ್ತು, ತಮ್ಮ ಕೆಲಸವಾಯ್ತು ಎಂದುಕೊಂಡು ಇದ್ದರು. ಆದರೆ ಈಗ ಸೊಹೈಲ್ ಖಾನ್‌ಗೆ ಮತ್ತೊಮ್ಮೆ ಪ್ರೇಮಾಂಕುರವಾಗಿದೆ, ಎರಡನೇ ಮದುವೆಗೆ ಸೊಹೈಲ್ ಖಾನ್ ಸಿದ್ಧರಾದಂತೆ ಇದೆ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಖ್ಯಾತ ನಿರೂಪಕಿ ಶೆಫಾಲಿ ಬಗ್ಗಾ ಜೊತೆ ಸೊಹೈಲ್ ಖಾನ್ ಅವರ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಹೌದು, ಇಡೀ ದೇಶವನ್ನು ಸದ್ಯ ಐಪಿಎಲ್ ಜ್ವರ ಆವರಿಸಿಕೊಂಡಿದೆ. ಸೆಲೆಬ್ರಿಟಿಗಳು ಕೂಡ ಇದರಿಂದ ಹೊರತಾಗಿಲ್ಲ. ಸಮಯ ಸಿಕ್ಕಾಗೆಲ್ಲ ಮೈದಾನಕ್ಕೆ ಬಂದು ತಮ್ಮ ನೆಚ್ಚಿನ ತಂಡವನ್ನು ಅನೇಕರು ಬೆಂಬಲಿಸುತ್ತಿದ್ದಾರೆ. ಇದಕ್ಕೆ ಒಂದು ಉದಾಹರಣೆ ಎನ್ನುವಂತೆ ಸೊಹೈಲ್ ಖಾನ್ ಮೊನ್ನೆ ಮುಂಬೈನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಮ್ಯಾಚ್ ಕಣ್ತುಂಬಿಕೊಳ್ಳಲು ವಾಂಖೆಡೆ ಸ್ಟೇಡಿಯಂಗೆ ತೆರಳಿದ್ದರು. ಇದೇ ಸಮಯದಲ್ಲಿ ಶೆಫಾಲಿ ಬಗ್ಗಾ ಕೂಡ ಕ್ರೀಡಾಂಗಣದಲ್ಲಿ ಇದ್ದರು. ಜೊತೆಯಲ್ಲಿಯೇ ಮ್ಯಾಚ್ ನೋಡಿದರು. ಆ ನಂತರ ಫೋಟೊಗಳನ್ನು ಕೂಡ ಕ್ಲಿಕಿಸಿಕೊಂಡರು.

ಇಷ್ಟೇ ಆಗಿದ್ದರೆ ಇಬ್ಬರ ಮೇಲೆ ಅನುಮಾನ ಬರುತ್ತಿರಲಿಲ್ಲ. ಯಾಕೆಂದರೆ ಶೆಫಾಲಿ ಬಗ್ಗಾ ಸುದ್ದಿ ನಿರೂಪಕಿ ಮಾತ್ರವಲ್ಲ. ಕ್ರಿಕೆಟ್‌ನ ವರದಿಗಾರ್ತಿ ಕೂಡ ಹೌದು. ಇಷ್ಟೇ ಅಲ್ಲ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ, ಸಿಸಿಎಲ್, ವುಮೆನ್ಸ್ ಕ್ರಿಕೆಟ್ ಲೀಗ್, ಸೇರಿ ಅನೇಕ ಪಂದ್ಯಾವಳಿಗಳ ನಿರೂಪಣೆಯನ್ನು ಶೆಫಾಲಿ ಮಾಡಿದ್ದಾರೆ. ಭಾರತ ಕ್ರಿಕೆಟ್ ತಂಡದವರ ಜೊತೆ ಮಾತ್ರ ಅಲ್ಲ ದೇಶ ವಿದೇಶದ ಅನೇಕ ಕ್ರಿಕೆಟ್ ಪ್ಲೇಯರ್ಸ್‌ಗಳಿಗೆ ಕೂಡ ಶೆಫಾಲಿ ಚಿರಪರಿಚಿತ.

ಹೀಗಾಗಿಯೇ ಸೊಹೈಲ್ ಖಾನ್ ಮತ್ತು ಶೆಫಾಲಿ ಮೈದಾನದಲ್ಲಿ ಜೊತೆಯಾಗಿ ಕಾಣಿಸಿಕೊಂಡಾಗ ಯಾರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಪಂದ್ಯ ಮುಗಿದ ನಂತರ ಶೆಫಾಲಿ ಬಗ್ಗಾ ಮತ್ತು ಸೊಹೈಲ್ ಖಾನ್ ಒಂದೇ ಕಾರಿನಲ್ಲಿ ತೆರಳಿದ್ದಾರೆ. ಇಬ್ಬರ ಈ ಆತ್ಮೀಯತೆ ಈಗ ಹಲವರ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಹೀಗಾಗಿಯೇ ಸೊಹೈಲ್ ಮತ್ತು ಶೆಫಾಲಿ ನಡುವೆ ಪ್ರೇಮ ಅರಳಿದೆ ಎಂದು ಅನೇಕರು ಪುಕಾರು ಹಬ್ಬಿಸಿದ್ದಾರೆ. ಇಬ್ಬರ ಸಂಬಂಧದ ಕುರಿತು ಚರ್ಚೆಯನ್ನು ಕೂಡ ಮಾಡುತ್ತಿದ್ದಾರೆ.

ಅಂದ್ಹಾಗೇ ಶೆಫಾಲಿ ಬಗ್ಗಾ ಈ ಹಿಂದೆ ಸೊಹೈಲ್ ಖಾನ್ ಅವರ ಸಹೋದರ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ 13ನೇ ಸೀಸನ್‌ನಲ್ಲಿ ಸ್ಫರ್ಧಿಯಾಗಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಂಡಿದ್ದರು. ಹೀಗಾಗಿ ಶೆಫಾಲಿ ಬಗ್ಗಾ ಜೊತೆ ಮೊದಲಿಂದ ಸಲ್ಮಾನ್ ಕುಟುಂಬಕ್ಕೆ ಆತ್ಮೀಯತೆ ಇದೆ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸೊಹೈಲ್ ಖಾನ್‌ಗೆ ಈಗ 54 ವರ್ಷ. ಶೆಫಾಲಿಗೆ ಈಗ 30ರ ಹರೆಯ. ಇಬ್ಬರ ನಡುವೆ 24 ವರ್ಷಗಳ ಅಂತರ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಸೊಹೈಲ್‌ ಖಾನ್ 24 ವರ್ಷ ಹರೆಯದ ಮಗ ಇದ್ದಾನೆ. ಹೀಗಾಗಿ ಮಗಳ ವಯಸ್ಸಿನ ಶೆಫಾಲಿ ಜೊತೆ ಸೊಹೈಲ್ ಖಾನ್ ಪ್ರೀತಿಯಲ್ಲಿ ಬೀಳಲು ಸಾಧ್ಯ ಇಲ್ಲ, ಶೆಫಾಲಿ ಜೊತೆ ಮದುವೆಯಯಾಗುವ ಆಲೋಚನೆಯನ್ನು ಕೂಡ ಸೊಹೈಲ್ ಮಾಡಿರುವುದಿಲ್ಲ ಎನ್ನುವ ಅಭಿಪ್ರಾಯವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಸೊಹೈಲ್ ಖಾನ್ ಮತ್ತು ಶೆಫಾಲಿ ಬಗ್ಗಾ ಅವರ ಫೋಟೊ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮಾಧ್ಯಮಗಳಲ್ಲಿ ಕೂಡ ಇವರ ಕುರಿತು ಚರ್ಚೆಗಳಾಗುತ್ತಿವೆ. ಸೊಹೈಲ್ ಖಾನ್ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X