»   » ಫೊಟೋ ಗ್ಯಾಲರಿ: IPL ಉದ್ಘಾಟನೆಯಲ್ಲಿ ಬಿಟೌನ್ ಸ್ಟಾರ್ ಗಳ ದರ್ಬಾರ್

ಫೊಟೋ ಗ್ಯಾಲರಿ: IPL ಉದ್ಘಾಟನೆಯಲ್ಲಿ ಬಿಟೌನ್ ಸ್ಟಾರ್ ಗಳ ದರ್ಬಾರ್

Posted By: ಸೋನು ಗೌಡ
Subscribe to Filmibeat Kannada

ಇಂಡಿಯನ್ ಪ್ರೀಮಿಯರ್ ಲೀಗ್ ಒಂಭತ್ತನೇ ಆವೃತ್ತಿಯ (IPL) ಕ್ರಿಕೆಟ್ ಪಂದ್ಯಾಟಕ್ಕೆ ಏಪ್ರಿಲ್ 8 ರಂದು ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಸಮಾರಂಭದಲ್ಲಿ ಅನೇಕ ಕ್ರಿಕೆಟ್ ದಿಗ್ಗಜರು ಹಾಗೂ ಕ್ರಿಕೆಟ್ ಅಭಿಮಾನಿಗಳು ಹಾಜರಿದ್ದರು.

ಅಂದಹಾಗೆ ಈ ಕಲರ್ ಫುಲ್ ಸಮಾರಂಭಕ್ಕೆ ನಮ್ಮ ಬಿಟೌನ್ ನ ಸ್ಟಾರ್ ನಟ-ನಟಿಯರು ತಮ್ಮ ಪರ್ಫಾಮೆನ್ಸ್ ನೀಡುವ ಮೂಲಕ ಇನ್ನಷ್ಟು ರಂಗು ತುಂಬಿದ್ದರು.[ಮದುವೆಯ ಸಂಭ್ರಮದಲ್ಲಿ ಬಾಲಿವುಡ್ ನ ಪ್ರಣಯ ಹಕ್ಕಿಗಳು]

ಬಾಲಿವುಡ್ ನಟಿ ಕತ್ರಿನಾ ಕೈಫ್, ರಣವೀರ್ ಸಿಂಗ್, ಜಾಕ್ವೆಲೀನ್ ಪೆರ್ನಾಂಡೀಸ್, ಯೋ ಯೋ ಹನಿಸಿಂಗ್, ಪ್ರೀತಿ ಜಿಂಟಾ, ಸಂಜಯ್ ದತ್ ಮತ್ತು ಇನ್ನಿತರು ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಮತ್ತಷ್ಟು ರಂಗೇರಿಸಿದರು.

IPL 2016 Inside Pictures: Katrina Kaif's SUPER-HOT Look

ಕತ್ರಿನಾ ಕೈಫ್ ಅವರು ತಮ್ಮ ಹಾಟ್ ಲುಕ್ ನಲ್ಲಿ 'ಧೂಮ್ 3', 'ಬ್ಯಾಂಗ್ ಬ್ಯಾಂಗ್', ಹಾಡುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರೆ, ಶ್ರೀಲಂಕದ ಬೆಡಗಿ ಜಾಕ್ವೆಲೀನ್ ಪೆರ್ನಾಂಡಿಸ್ ಅವರು 'ಪಾರ್ಟಿ ಆನ್ ಮೈಂಡ್', 'ಸೂರಜ್ ದೂಬಾ ಹೈ' ಮುಂತಾದ ಹಾಡುಗಳಿಗೆ ಸಹ ನೃತ್ಯ ಕಲಾವಿದರ ಜೊತೆ ಸಖತ್ತಾಗಿ ಸ್ಟೆಪ್ ಹಾಕಿದರು.[ಅಬ್ಬಾ! ಕೆಂಪು ಕೂದಲಿಗಾಗಿ ಅರ್ಧ ಕೋಟಿ ಖರ್ಚು ಮಾಡಿದ್ರಾ ಕ್ಯಾಟ್]

ರಣವೀರ್ ಸಿಂಗ್ ಕೂಡ ಸಖತ್ ಡ್ಯಾನ್ಸ್ ಮಾಡಿದ್ದು, ಗಾಯಕ ಯೋ ಯೋ ಹನಿಸಿಂಗ್ ಅವರು ತಮ್ಮ ಗಾಯನದ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಐಪಿಎಲ್ ಉದ್ಘಾಟನಾ ಸಮಾರಂಭದ ಕಲರ್ ಫುಲ್ ಫೊಟೋ ಗ್ಯಾಲರಿ ನೋಡಲು ಕೆಳಗಿನ ಸ್ಲೈಡ್ಸ್ ಗಳತ್ತ ಕಣ್ಣಾಡಿಸಿ...

-
-
-
-
-
-
-
-
-
-
-
-
-
-
-
-
-
-
-
-
-
English summary
The ninth edition of Indian Premier League (IPL) got off to a colorful start with a star-studded and glittering opening ceremony at the National Sports Club Of India (NSCI) on yesterday (March 8, 2016). Bollywood stars including Katrina Kaif, Ranveer Singh, Jacqueline Fernandez, Yo Yo Honey Singh, Preity Zinta, Sanjay Dutt and others were also present.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada