IPL 2025 Opening Ceremony; ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ತಾರಾ ಮೆರಗು,ಕಿಕ್ಕೇರಿಸಲು ಬರುತ್ತಿದ್ದಾರೆ ಸ್ಟಾರ್ಸ್

ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇಂಥಾ ಎರಡು ಉದ್ಯಮಗಳು ನಾಳೆ { ಶನಿವಾರ } ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲಿವೆ.

ಹೌದು, ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿಗೆ ಈ ಮಾರ್ಚ್ 22ಕ್ಕೆ ಚಾಲನೆ ಸಿಗಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯದಿಂದ ಈ ಬಾರಿಯ ಐಪಿಎಲ್ ಶುರುವಾಗಲಿದೆ.

IPL 2025 Opening Ceremony Full list of Bollywood stars performing at the curtain-raiser event

ಇನ್ನು, ಮೊದಲಿಂದ ಕೂಡ ಐಪಿಎಲ್‌ನ ಓಪನಿಂಗ್ ಸೆರಮನಿಗೆ ತಾರೆಯರನ್ನು ಕರೆಯುವ ಸಂಪ್ರದಾಯ ಇದೆ. ಮೊದಲ ದಿನ ಮೈದಾನದಲ್ಲಿ ಸೆಲೆಬ್ರಿಟಿಗಳು ಎಲ್ಲರೆದುರು ಕುಣಿಯದಿದ್ದರೆ ಐಪಿಎಲ್‌ ಅಪೂರ್ಣವೆನಿಸುತ್ತದೆ. ಹೀಗಾಗಿಯೇ ಈ ಬಾರಿ ಕೂಡ ಹಲವರನ್ನು ಉದ್ಘಾಟನಾ ಸಮಾರಂಭಕ್ಕೆ ಕರೆಯಲಾಗಿದೆ. ಶ್ರೇಯಾ ಘೋಷಾಲ್ ತಮ್ಮ ಚಿನ್ನದ ಕಂಠದಿಂದ ಎಲ್ಲರನ್ನು ಕುಂತಲ್ಲೆ ಕುಣಿಸುವ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದರೆ, ಪಂಜಾಬ್‌ನ ಗಾಯಕ ಕರಣ್ ಔಜ್ಲಾ ಕೂಡ ತಮ್ಮ ಕಂಠವನ್ನು ಕುಣಿಸಲಿದ್ದಾರೆ. ಖ್ಯಾತ ಗಾಯಕ ಅರ್ಜಿತ್ ಸಿಂಗ್ ಕೂಡ ಸಂಗೀತ ಸುಧೆ ಹರಿಸಲಿದ್ದಾರೆ.

2023ರಲ್ಲಿ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಥೈ ಥಕ ಥೈ ಎಂದು ಕುಣಿದಿದ್ದರೆ, ಕಳೆದ ವರ್ಷ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಡ್ಯಾನ್ಸ್ ಮಾಡಿದ್ದರು. ಈ ಜವಾಬ್ಧಾರಿಯನ್ನು ಈ ಬಾರಿ ಬಾಲಿವುಡ್‌ನ ಬಳಕುವ ಬಳ್ಳಿ ದಿಶಾ ಪಠಾಣಿಗೆ ವಹಿಸಲಾಗಿದೆ. ಕಿಕ್ಕಿರಿದ ಜನಸ್ತೋಮಕ್ಕೆ ದಿಶಾ ಪಠಾಣಿ ಡ್ಯಾನ್ಸ್ ಕಣ್ತುಂಬಿಕೊಳ್ಳುವ ಸೌಭಾಗ್ಯ ಈ ಮೂಲಕ ಸಿಗಲಿದೆ. ಕೇವಲ ದಿಶಾ ಪಠಾಣಿ ಮಾತ್ರವಲ್ಲ ವರುಣ್ ಧವನ್ ಮತ್ತು ಶ್ರದ್ಧಾ ಕಪೂರ್ ಕೂಡ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಹೆಜ್ಜೆ ಹಾಕಲಿದ್ದಾರೆ.

ಇನ್ನು, ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಇದೇ 28ರಂದು ತೆರೆಗೆ ಬರಲಿದೆ. ಈ ಹಿನ್ನೆಲೆ ತಮ್ಮ ಚಿತ್ರದ ಪ್ರಚಾರವನ್ನು ಮಾಡಲು ಸಲ್ಮಾನ್ ಖಾನ್ ಕೂಡ ಬರುವ ನಿರೀಕ್ಷೆ ಇದೆ. ಸಲ್ಲು ಮೈದಾನಕ್ಕೆ ಬರುತ್ತಾರಾ ಅಥವಾ ಸ್ಟುಡಿಯೋಗೆ ತೆರಳಿ ಕಾಮೆಂಟೆಟರ್‌ಗಳ ಜೊತೆ ಕುಳಿತು ತಮ್ಮ ಚಿತ್ರದ ಕುರಿತು ಮಾತನಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಸಲ್ಮಾನ್ ಖಾನ್‌ಗೆ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ಜೋಡಿಯಾದ ಹಿನ್ನೆಲೆ ರಶ್ಮಿಕಾ ಕೂಡ ಬರಬಹುದು.

ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಶಾರುಖ್ ಖಾನ್ ಒಡೆತನದ ಫ್ರಾಂಚೈಸಿ. ಹೀಗಾಗಿ ಸಹಜವಾಗಿ ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಕೂಡ ಮೈದಾನದಲ್ಲಿ ಇರಲಿದ್ದಾರೆ. ಶಾರುಖ್ ಮಕ್ಕಳಾದ ಸುಹಾನಾ ಖಾನ್, ಆರ್ಯನ್ ಖಾನ್ ಮತ್ತು ಪತ್ನಿ ಗೌರಿ ಖಾನ್ ಕೂಡ ಮೊದಲ ಪಂದ್ಯವನ್ನು ನೋಡಲು ಬರುವ ಸಾಧ್ಯತೆ ಇದೆ.

ಇವರಷ್ಟೇ ಅಲ್ಲದೇ ಶಾರುಖ್ ಖಾನ್ ಮನೋಬಲ ಹೆಚ್ಚಿಸಲು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಹುರಿದುಂಬಿಸಲು ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಸಂಜಯ್ ದತ್, ತೃಪ್ತಿ ದಿಮ್ರಿ, ಅನನ್ಯಾ ಪಾಂಡೆ, ಮಾಧುರಿ ದೀಕ್ಷಿತ್ ಸೇರಿ ಬಾಲಿವುಡ್‌ನ ಹಲವು ತಾರೆಯರು ಕ್ರೀಡಾಂಗಣಕ್ಕೆ ಬರುವ ಸಾಧ್ಯತೆ ಇದೆ. ನಾಳೆ ಅರ್ಧಕರ್ದ ಬಾಲಿವುಡ್‌ ಮೈದಾನದಲ್ಲಿ ಇರಲಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.

More from Filmibeat

Read more about: ipl 2025 cricket filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X