ಬಿಕಿನಿಯಲ್ಲಿ ಕೇಕ್ ಕಟ್ ಮಾಡಿ ಕುಣಿದ ಆಮೀರ್ ಖಾನ್ ಪುತ್ರಿ ; ಇದೇನಾ ಸಭ್ಯತೆ, ಇದೇನಾ ಸಂಸ್ಕ್ರತಿ ಎಂದ ಜನ..!
ಅಪ್ಪ ಸ್ಟಾರ್ ಆದರೆ ಮಗನೂ ಸ್ಟಾರಾಗುವುದು, ಅಪ್ಪ ರಾಜಕಾರಣಿಯಾದರೆ ಮಗನೂ ರಾಜಕಾರಣಿಯಾಗುವುದು ಕಾಮನ್ನು. ಅದರಲ್ಲಿ ಎದ್ದವರೆಷ್ಟು..? ಬಿದ್ದವರೆಷ್ಟು..? ಎಂಬ ವಿಚಾರ ಬೇರೆಯಾದರೂ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರ ಮಗಳು ತನ್ನ ತಂದೆಯ ಹಾದಿಯನ್ನು ಹಿಡಿಯದೇ ತನ್ನದೇ ಕನಸಿನ ಬೆನ್ನು ಹತ್ತಿದ್ದಾರೆ. ಬದುಕಿನಲ್ಲಿ ನೊಂದು-ಬೆಂದವರಿಗೆ ಸಾಂತ್ವಾನ ಹೇಳುವ ಕೆಲಸ ಮಾಡುತ್ತಿದ್ದಾರೆ. ಮಾನಸಿಕ ಒತ್ತಡ .. ನಿರ್ವಹಣೆ .. ನಿವಾರಣೆ ಹೇಗೆ ಎನ್ನುವ ಪಾಠವನ್ನ ಮಾಡುತ್ತಿದ್ದಾರೆ. ಮಾನಸಿಕ ಖಿನ್ನತೆಗೊಳಗಾದವರಿಗಾಗಿಯೇ ''ಅಗಸ್ತು ಫೌಂಡೇಶನ್'' ಶುರು ಮಾಡಿದ್ದಾರೆ.
ಆದರೆ ವಿಪರ್ಯಾಸ ಇರಾ ಖಾನ್ ಅವರ ಈ ಕೆಲಸ ಮಾಡುತ್ತಿರುವ ಕಾರ್ಯದ ಬಗ್ಗೆ ಮಾತನಾಡದ, ಮೆಚ್ಚಿಕೊಳ್ಳದ ಜನ.. ಇರಾ ಖಾನ್ ಅವರನ್ನ ಸದಾ ಕಾಲ ಟ್ರೋಲ್ ಮಾಡ್ತಾನೇ ಇರ್ತಾರೆ. ಇದಕ್ಕೆ ಇರಾ ಖಾನ್ ಸೆಲೆಬ್ರಿಟಿಯ ಮಗಳು ಅನ್ನುವುದು ಒಂದು ಕಾರಣವಾದರೆ, ಇರಾ ಖಾನ್ ಅವರ ಜೀವನ ಶೈಲಿ ಮತ್ತು ಅವರು ಹಾಕಿಕೊಳ್ಳುವ ಬಟ್ಟೆ ಮತ್ತೊಂದು ಕಾರಣ. ಇದಕ್ಕೆ ಕೈಗನ್ನಡಿ ಎಂಬಂತೆ ಇರಾ ಖಾನ್ ಅವರನ್ನ ಮತ್ತೊಮ್ಮೆ ಬಟ್ಟೆಯ ವಿಚಾರಕ್ಕೆ ಟ್ರೋಲ್ ಮಾಡಲಾಗುತ್ತಿದೆ.

ಹೌದು, ಅಸಲಿಗೆ ನೂಪುರ್ ಶಿಖರೆ ಅವರನ್ನ ಮದುವೆಯಾಗುವ ಮುನ್ನ, 2022ರಲ್ಲಿ.. ಇರಾ ಖಾನ್ ತಮ್ಮ ಜನ್ಮದಿನವನ್ನ ಸಂಭ್ರಮದಿಂದ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಿಕಿನಿ ಧರಿಸಿ ಕ್ಯಾಮರಾಗಳಿಗೆ ಫೋಸ್ ಕೊಟ್ಟಿದ್ದರು. ಪೂಲ್ ಪಾರ್ಟಿಯಲ್ಲಿ ನೂಪುರ್ ಶಿಖರೆ ಜೊತೆ ಮಿಂದೆದ್ದಿದ್ದರು. ಬಿಕಿನಿಯಲ್ಲಿಯೇ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು.
ಈ ಸಂದರ್ಭದಲ್ಲಿ ಇರಾ ಖಾನ್ ಪ್ರಿಯಕರ ಮತ್ತು ಆಗ ಭಾವಿ ಪತಿಯಾಗಿದ್ದ ನೂಪುರ್ ಶಿಖರೆ ಪಕ್ಕದಲ್ಲಿ ಇದ್ದರು. ಆಮೀರ್ ಖಾನ್ ಕೂಡ ಸ್ವಿಮ್ಮಿಂಗ್ ಡ್ರೆಸ್ನಲ್ಲಿ ಇರಾ ಹಿಂದೆ ಇದ್ದರು. ಪಕ್ಕದಲ್ಲಿ ಇರಾ ಅವರ ತಾಯಿ ರೀನಾ ದತ್ತ ಕೂಡ ಇದ್ದರು.

ಇರಾ ಅವರ ಬರ್ತ್‌ಡೇಯ ಈ ಭಾವಚಿತ್ರಗಳು ಮತ್ತು ವಿಡಿಯೋ ಆ ಕಾಲದಲ್ಲಿ ಕೂಡ ವೈರಲ್ ಆಗಿದ್ದವು. ತಂದೆಯ ಮುಂದೆ ಬಿಕಿನಿಯಲ್ಲಿ ಓಡಾಡಲು ನಾಚಿಕೆಯಾಗಲ್ವಾ ಎಂಬ ಅಭಿಪ್ರಾಯಗಳು ಕೂಡ ಆಗ ವ್ಯಕ್ತವಾಗಿದ್ದವು. ಈಗ ಸರಿಯಾಗಿ ಎರಡು ವರ್ಷ ಒಂದು ತಿಂಗಳಿನ ನಂತರ ಇರಾ ಖಾನ್ ಅವರ ಬರ್ತ್‌ಡೇಯ ವಿಡಿಯೋ ಇನ್ನೊಮ್ಮೆ ವೈರಲ್ ಆಗಿವೆ. ತಾರೆಯರಿಗೆ ನೀತಿ ಪಾಠ ಹೇಳುವ ಒಂದು ವರ್ಗ ಮತ್ತೊಮ್ಮೆ ಇರಾ ಖಾನ್ ಅವರ ಮೇಲೆ ಮುಗಿ ಬಿದ್ದಿದೆ. ಇರಾ ಖಾನ್ ಅವರನ್ನ ತೀರಾ ಕೆಟ್ಟದಾಗಿ ಟ್ರೋಲ್ ಮಾಡುತ್ತಿದೆ.
ಒಟ್ನಲ್ಲಿ ಸೆಲೆಬ್ರಿಟಿಗಳು ಅಂದ ಮಾತ್ರಕ್ಕೆ ಟ್ರೋಲ್ ಮಾಡುವುದು .. ವಿಭಿನ್ನ ರೀತಿಯಲ್ಲಿ ಕಮೆಂಟ್ ಹಾಕೋದು .. ಕೆಲವು ಸಲ ಅವಹೇಳನ ಮಾಡಿ ಮಾತನಾಡೋದೆಲ್ಲಾ ಸಿನಿಮಾ ರಂಗದಲ್ಲಿ ಮಾಮೂಲು ಎಂದು ಅನೇಕರು ಅಂದುಕೊಂಡಿದ್ದಾರೆ. ಇದಕ್ಕೆ ಇರಾ ಖಾನ್ ಅವರ ಮೇಲೆ ಸದ್ಯಕ್ಕೆ ನಡೆಯುತ್ತಿರುವ ಕೆಳ ಮಟ್ಟದ ವ್ಯೆಯಕ್ತಿಕ ದಾಳಿಯೇ ಸಾಕ್ಷಿ


Click it and Unblock the Notifications











