Ira-Nupur Reception: ಇರಾ ಖಾನ್ - ನೂಪುರ್ ಶಿಖರೆ ಮದುವೆ ಆರತಕ್ಷತೆಯಲ್ಲಿ ಬಾಲಿವುಡ್ ಖಾನ್‌ಗಳ ಸಮಾಗಮ
ಇತ್ತೀಚೆಗೆ ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಸರಳವಾಗಿ ಮದುವೆಯಾಗಿದ್ದರು. ಇದಾದ ನಂತರ ದೊಡ್ಡ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಬಾಲಿವುಡ್ ನಟ ನಟಿಯರು ಅಲ್ಲದೇ ರಾಜಕೀಯ ಗಣ್ಯರು ಭಾಗಿಯಾಗಿ ವಧು ವರರನ್ನು ಹರಸಿದ್ದಾರೆ.
ಅಮಿರ್ ಖಾನ್ ಮಗಳು ಇರಾ ಖಾನ್ ಮತ್ತು ಅಳಿಯ ನೂಪುರ್ ಶಿಖರೆ ಅವರ ವಿವಾಹದ ಆರತಕ್ಷತೆಯಲ್ಲಿ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ನಟ ಶಾರುಖ್ ಖಾನ್ ಅವರ ಪತ್ನಿ, ಇಂಟೀರಿಯರ್ ಡಿಸೈನರ್ ಗೌರಿ ಖಾನ್ ಅವರೊಂದಿಗೆ ಬಂದಿದ್ದರು. ನಟ ಸಲ್ಆಮನ್ ಖಾನ್ ಎಂದಿನಂತೆ ಒಬ್ಬರೇ ಗ್ರಾಂಡ್ ಎಂಟ್ರಿ ನೀಡಿದ್ದರು.

ಇರಾ ಆರತಕ್ಷತೆಯಲ್ಲಿ ಶಾರುಖ್ ಮತ್ತು ಗೌರಿ
ಇರಾ ಖಾನ್ ಮತ್ತು ನೂಪುರ್ ಶಿಖರೆ ಆರತಕ್ಷತೆಯಲ್ಲಿ ಶಾರುಖ್ ಮತ್ತು ಗೌರಿ ಖಾನ್ ಕೂಡ ಅಮೀರ್ ಜೊತೆ ಪೋಸ್ ಕೊಟ್ಟಿದ್ದಾರೆ. ಆರತಕ್ಷತೆಯಲ್ಲಿ ಶಾರುಖ್ ಖಾನ್, ಅಮೀರ್ ಖಾನ್ ಜೊತೆಯಲ್ಲಿ ಕೆಲ ಹೊತ್ತು ಮಾತು ಕತೆ ನಡೆಸಿದ್ದಾರೆ. ಆರತಕ್ಷತೆಯಲ್ಲಿ ಶಾರುಖ್ ಖಾನ್ ಬಿಳಿ ಶರ್ಟ್, ಕಪ್ಪು ವೇಸ್ಟ್ ಕೋಟ್, ಮ್ಯಾಚಿಂಗ್ ಜಾಕೆಟ್ ಮತ್ತು ಪ್ಯಾಂಟ್ ಧರಿಸಿದ್ದರು.
ಗೌರಿ ಖಾನ್ ಮೆರೂನ್ ಮತ್ತು ಗೋಲ್ಡನ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅಮೀರ್ ಕಪ್ಪು ಶೆರ್ವಾನಿ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದರು. ವಧು ಇರಾ ಖಾನ್ ತಮ್ಮ ಮದುವೆಯ ಬಟ್ಟೆಗಳಿಂದಲೇ ಸದ್ದು ಮಾಡಿದ್ದರು. ಆರತಕ್ಷತೆಯಲ್ಲಿ ಕೆಂಪು ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ನೂಪುರ್ ಶಿಖರ್ ತನ್ನ ಮಾವ ಅಮೀರ್ ಖಾನ್ ಅವರಂತೆಯೇ ಟ್ವಿನ್ನಿಂಗ್ ಮಾಡಿದ್ದರು.

ಸಲ್ಮಾನ್ ಖಾನ್, ರಣಬೀರ್ ಕಪೂರ್, ಕತ್ರಿನಾ ಕೈಫ್, ಸಾಯಿರಾ ಬಾನು, ರೇಖಾ ಭಾಗಿ
ಶಾರುಖ್ ಖಾನ್ ಮತ್ತು ಗೌರಿ ಹೊರತುಪಡಿಸಿ, ಸಲ್ಮಾನ್ ಖಾನ್, ರಣಬೀರ್ ಕಪೂರ್, ಕತ್ರಿನಾ ಕೈಫ್, ಜಯಾ ಬಚ್ಚನ್, ಶ್ವೇತಾ ಬಚ್ಚನ್, ಸುಶ್ಮಿತಾ ಸೇನ್, ನಾಗ ಚೈತನ್ಯ, ಫರ್ಹಾನ್ ಅಖ್ತರ್, ಜೆನಿಲಿಯಾ- ರಿತೇಶ್ ದೇಶ್‌ಮುಖ್, ಸಿದ್ಧಾರ್ಥ್ - ಅದಿತಿ ಹೈದರಿ, ಅನಿಲ್ ಕಪೂರ್, ಎಆರ್ ರೆಹಮಾನ್, ಜಾವೇದ್ ಜಾಫ್ರಿ ಮತ್ತು ದಿಲೀಪ್ ಜೋಶಿ ಕೂಡ ಇರಾ ಮತ್ತು ನೂಪುರ್ ಅವರ ವಿವಾಹದ ನಂತರದ ಬ್ಯಾಷ್‌ಗೆ ಹಾಜರಾಗಿದ್ದರು.
ಹಿರಿಯ ನಟಿ ಹೇಮಾ ಮಾಲಿನಿ, ರೇಖಾ, ಸಾಯಿರಾ ಬಾನು, ಸೋನಾಲಿ ಬೇಂದ್ರೆ, ಧರ್ಮೇಂದ್ರ, ಇಶಾ ಡಿಯೋಲ್ ಕೂಡ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) ನಲ್ಲಿ ನಡೆದ ಮದುವೆಯ ಆರತಕ್ಷತೆಯ ರೆಡ್ ಕಾರ್ಪೆಟ್‌ನಲ್ಲಿ ವಾಕ್ ಮಾಡಿದ್ದಾರೆ. ಜೊತೆಗೆ ಕ್ಯಾಮೆರಾಗಳಿಗೆ ಸಕತ್ ಫೋಸ್ ನೀಡಿದ್ದಾರೆ.
ಆಮೀರ್ ಖಾನ್ ಮತ್ತು ಕುಟುಂಬ
ಆಮೀರ್ ಖಾನ್ ಮತ್ತು ಅವರ ಕುಟುಂಬ ಸದಸ್ಯರು ಒಟ್ಟಾಗಿ ಗ್ರೂಪ್ ಫೋಟೋಗೆ ಫೋಸ್ ನೀಡಿದ್ದಾರೆ. ಮದುವೆಯಲ್ಲಿ ಹೆಚ್ಚು ಲವಲವಿಕೆಯಿಂದ ಭಾಗಿಯಾಗಿದಗದ ಆಮೀರ್ ಮಾಜಿ ಪತ್ನಿ ಕಿರಣ್ ರಾವ್ ಆರತಕ್ಷತೆಗೆ ಬಂದಿರಲಿಲ್ಲ. ಇರಾ ಅವರ ಸೋದರಸಂಬಂಧಿ ಮತ್ತು ನಟ ಇಮ್ರಾನ್ ಖಾನ್ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆಮೀರ್ ಅವರ ಮಗ ಜುನೈದ್ ಖಾನ್, ಅವರ ಮೊದಲ ಪತ್ನಿ ರೀನಾ ದತ್ತಾ, ಸಹೋದರಿ ನಿಖತ್ ಖಾನ್, ಮಗ ಆಜಾದ್ ರಾವ್ ಖಾನ್ ಮತ್ತು ನೂಪುರ್ ಅವರ ಕುಟುಂಬದೊಂದಿಗೆ ಪೋಸ್ ನೀಡಿದ್ದಾರೆ.ಇರಾ ಮತ್ತು ನೂಪುರ್ ಇತ್ತೀಚೆಗೆ ಉದಯಪುರದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಜನವರಿ 3 ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್, ಬಾಂದ್ರಾದಲ್ಲಿ ರಿಜಿಸ್ಟರ್ ಮ್ಯಾರೆಜ್ ಮೂಲಕ ವಿವಾಹವಾದರು.


Click it and Unblock the Notifications










