For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗದ ಕಾರಣಕ್ಕೆ ನಿರ್ದೇಶಕನನ್ನು ತುಂಡು ತುಂಡಾಗಿಸಿ ಬರ್ಬರ ಹತ್ಯೆ ಮಾಡಿದ ಪೋಷಕರು

  |

  ಲಂಡನ್ ಮೂಲದ ಇರಾನಿನ ನಿರ್ದೇಶಕ ಬಾಬಕ್ ಖೊರಮದ್ದೀನ್ ಅವರನ್ನು ತುಂಡು ತುಂಡಾಗಿಸಿ ಬರ್ಬರ ಹತ್ಯೆ ಮಾಡಲಾಗಿದೆ. ಪಶ್ಚಿಮ ಟೆಹ್ರಾನ್ ನ ಎಕ್ಬಟಾನ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಕೊಲೆ ಮಾಡಿ ದೇಹದ ಭಾಗಗಳನ್ನು ಕಸದ ಚೀಲ ಮತ್ತು ಸೂಟ್ ಕೇಸ್ ನಲ್ಲಿ ತುಂಬಿ ಎಸೆಯಲಾಗಿದೆ.

  ಮದುವೆ ವಿಚಾರಕ್ಕೆ ಬಾಬಕ್ ಅವರನ್ನು ಪೋಷಕರೇ ಹತ್ಯೆಮಾಡಿರುವುದಾಗಿ ವರದಿಯಾಗಿದೆ. ಅವಿವಾಹಿತರಾಗಿದ್ದ ಬಾಬಕ್ ಅವರನ್ನು ಪೋಷಕರು ಮದುವೆ ಆಗುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಮದುವೆ ಒಪ್ಪದ ಬಾಬಕ್ ಅವರನ್ನು ಸಂತ ಪೋಷಕರೆ ಕೊಲೆ ಮಾಡಿದ್ದಾರೆ. ಮಗನನ್ನು ಕೊಲೆ ಮಾಡಿರುವುದಾಗಿ ಪೋಷಕರು ಒಪ್ಪಿಕೊಂಡಿದ್ದಾರೆ.

  ಬಾಬಕ್ ಕೊಲೆ ಸುದ್ದಿ ವೈರಲ್ ಆಗುತ್ತಿದ್ದಂತೆ ಮರ್ಯಾದಗೇಡು ಹತ್ಯೆ ಎಂದು ಹೇಳುತ್ತಿದ್ದಾರೆ. ಸಮಾಜದಲ್ಲಿ ತಮ್ಮ ಮರ್ಯಾದೆ, ಗೌರವ ಉಳಿಸಿಕೊಳ್ಳಲು ಕೊಲೆ ಮಾಡಿರುವುದಾಗಿ ಪೋಷಕರು ಹೇಳಿದ್ದಾರೆ. ಬಾಬಕ್ ಅವರ ತಂದೆ ಪ್ರತಿಕ್ರಿಯೆ ನೀಡಿದ್ದು, ಕೊಲೆ ಮಾಡುವ ಮೊದಲು ಮಾದಕ ವಸ್ತು ನೀಡಿ ಬಳಿಕ ಕೊಲೆ ಮಾಡಿ ಮಾಡಿ ತುಂಡು ತುಂಡಾಗಿ ಕತ್ತರಿಸಿರುವುದಾಗಿ ಹೇಳಿದ್ದಾರೆ.

  ಈ ಬಗ್ಗೆ ತನಿಖೆ ನಡೆಸುತ್ತಿರುವ ಇರಾನಿನ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಪೋಷಕರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇರಾನಿ ವೆಬ್ ಸೈಟ್ ಪ್ರಸಾರ ಮಾಡಿರುವ ವರದಿಯಲ್ಲಿ ಬಾಬಕ್ ತಂದೆ 'ನನ್ನ ಮಗ ಒಬ್ಬನೆ. ಅವನು ಕಿರುಕುಳ ನೀಡುತ್ತಿದ್ದನು. ನಮ್ಮ ಜೀವ ಅಪಾಯದಲ್ಲಿದೆ. ನಾವು ಸುರಕ್ಷಿತವಾಗಿಲ್ಲ. ನಾನು ಮತ್ತು ಅವನ ತಾಯಿ ಇನ್ಮುಂದೆ ಅವನಿಂದ ತೊಂದರೆ ಆಗದಂತೆ ಅವನನ್ನು ತಡೆದಿದ್ದೀವಿ' ಎಂದು ಹೇಳಿದ್ದಾರೆ.

  ಈ ಬಗ್ಗೆ ಮಾತನಾಡಿರುವ ಬಾಬಕ್ ತಂದೆ ಈ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

  ಚಿರು ನಂತರ ಮನೆಯಲ್ಲಿದ್ದ ಮತ್ತೊಬ್ಬ ಆಪ್ತನನ್ನು ಕಳೆದುಕೊಂಡ ಮೇಘನಾ ರಾಜ್ | Filmibeat Kannada

  ನಿರ್ದೇಶಕ ಬಾಬಕ್ 2009ರಲ್ಲಿ ಟೆಹ್ರಾನ್ ವಿಶ್ವವಿದ್ಯಾಲಯದಲ್ಲಿ ಸಿನಿಮಾದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2010ರಲ್ಲಿ ಲಂಡನ್ ನಗೆ ಮರಳಿದ್ದ ಬಾಬಕ್ ಮತ್ತೆ ವಿದ್ಯಾರ್ಥಿಗಳಿಗೆ ಟೀಚ್ ಮಾಡುವ ಉದ್ದೇಶದಿಂದ ಮತ್ತೆ ಇರಾನ್ ಗೆ ಮರಳಿದ್ದರು. ನಿರ್ದೇಶಕ ಬಾಬಕ್ ಕಿರುಚಿತ್ರ ಮತ್ತು ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

  English summary
  Iranian director Babak Khorramdin killed by his parents for being unmarried.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X