ನನ್ನನ್ನ್ಯಾರು ಹೊರ ಹಾಕ್ತಾರೆ ; ಅಹಂ..ಹಣದ ದಾಹ- ಕಲ್ಕಿ 2 ಚಿತ್ರತಂಡಕ್ಕೆ ದೀಪಿಕಾ ಹೇಗೆಲ್ಲಾ ಕಾಡಿದ್ಧಾರೆ ಗೊತ್ತಾ ?

ದಕ್ಷಿಣದಿಂದ ವಲಸೆ ಹೋಗಿ ಬಾಲಿವುಡ್ ನಲ್ಲಿ ಬದುಕು ಕಟ್ಟಿಕೊಂಡವರು ದೀಪಿಕಾ ಪಡುಕೋಣೆ. ಓಂ ಶಾಂತಿ ಓಂ ಚಿತ್ರದ ಮೂಲಕ, ಹಿಂದಿ ಚಿತ್ರರಂಗವನ್ನ ಪ್ರವೇಶಿಸಿದ ದೀಪಿಕಾ ಅದಕ್ಕೂ ಮುನ್ನ ಮಾಡೆಲ್ ಆಗಿ ಮಿಂಚು ಹರಿಸಿದವರು. ಬಿಕಿನಿಯಲ್ಲಿ ವರೈಟಿ ವರೈಟಿ ಫೋಸ್ ಕೊಟ್ಟು ಕಣ್ಮನ ಸೆಳೆದವರು. ಇಷ್ಟೇ ಅಲ್ಲ.. ಸೈಕಲ್ ಗ್ಯಾಪ್‌ನಲ್ಲಿ ಆಲ್ಬಂ ಹಾಡುಗಳಿಗೆ ಕೂಡ ಸೊಂಟ ಬಳುಕಿಸಿದವರು ದೀಪಿಕಾ ಪಡುಕೋಣೆ.

ಇಂಥಾ ದೀಪಿಕಾ ಪಡುಕೋಣೆ ಅವರ ಕಾರ್ಯವೈಖರಿ ತಾಯಿಯಾದ ನಂತರ ಬದಲಾಗಿದೆ. ದೀಪಿಕಾ ಪಡುಕೋಣೆ ಅವರನ್ನು ಈ ಮೊದಲಿನಂತೆ ಚಿತ್ರಕ್ಕೆ ಆಯ್ಕೆ ಮಾಡಲು ಸಾಧ್ಯ ಇಲ್ಲ. ದೀಪಿಕಾ ಅವರ ಹತ್ತು ಹಲವು ಷರತ್ತು ಪೂರೈಸಬೇಕಾಗುತ್ತೆ.

IRREPLACEABLE SHOCKER Deepika Padukone Shot 20 Days For Kalki 2 Then Quit Over Massive Fee Hike

ಇನ್ನು ಮೊದಲೆಲ್ಲಾ ಪಾತ್ರಕ್ಕೆ ಜೀವ ತುಂಬಲು ಹಗಲಿರುಳು ಬೆವರು ಸುರಿಸುತ್ತಿದ್ದ ದೀಪಿಕಾ ಈಗ ಕೆಲಸ ಮಾಡುವುದು ಕೇವಲ 8 ತಾಸು ಮಾತ್ರ. ಸಂಭಾವನೆ ಕೂಡ ಗಗನಕ್ಕೇರಿದೆ. ಈ ಎಲ್ಲಾ ವಿಚಾರಗಳು ಹಲವರ ಕಿರಿಕಿರಿಗೆ ಕಾರಣವಾಗಿವೆ.

ಹೀಗಾಗಿ ದೀಪಿಕಾ ಪಡುಕೋಣೆಯ ಜೊತೆ ಕೆಲಸ ಮಾಡಲು ಅನೇಕರು ಹಿಂದೆ ಮುಂದೆ ಯೋಚನೆ ಮಾಡುತ್ತಿದ್ದಾರೆ. ತಮ್ಮ ಚಿತ್ರಗಳಿಂದ ದೀಪಿಕಾ ಅವರಿಗೆ ಗೇಟ್ ಪಾಸ್ ಕೂಡ ನೀಡುತ್ತಿದ್ದಾರೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ''ಕಲ್ಕಿ'' ಮೊದಲ ಭಾಗದಲ್ಲಿ ಸುಮತಿಯಾಗಿ ಮಿಂಚಿದ್ದ ದೀಪಿಕಾ ಅವರನ್ನು ತೀರಾ ಇತ್ತೀಚೆಗೆ ''ಕಲ್ಕಿ 2'' ಚಿತ್ರದಿಂದ ಹೊರಗಡೆ ಕಳುಹಿಸಲಾಗಿದೆ. "ಕಲ್ಕಿ 2898AD'' ಸೀಕ್ವೆಲ್‌ನಲ್ಲಿ ದೀಪಿಕಾ ಪಡುಕೋಣೆ ನಟಿಸುವುದಿಲ್ಲ. ಎಲ್ಲ ವಿಷಯಗಳನ್ನು ಚರ್ಚಿಸಿ ಪರಿಗಣಿಸಿದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದೇವೆ. ಮೊದಲ ಚಿತ್ರದ ಸುದೀರ್ಘ ಪಯಣದ ನಂತರ ಕೂಡ ಸೀಕ್ವೆಲ್‌ನಲ್ಲಿ ನಾವು ಜೊತೆಗೆ ಇರಲು ಆಗುತ್ತಿಲ್ಲ. ''ಕಲ್ಕಿ 2898 AD'' ಸಿನಿಮಾ ಹೆಚ್ಚಿನ ಶ್ರಮ, ಶ್ರದ್ಧೆ ಬೇಡುತ್ತದೆ. ದೀಪಿಕಾಳ ಮುಂದಿನ ಸಿನಿಮಾಗಳಿಗೆ ಒಳ್ಳೆದಾಗಲಿ ಎಂದು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಸಂಸ್ಥೆ ಹೇಳಿದೆ.

ಆದರೆ.. ನಿಖರವಾದ ಕಾರಣವನ್ನು ನಿರ್ಮಾಣ ಸಂಸ್ಥೆ ಹೇಳಿರಲಿಲ್ಲ. ಈಗ ಈ ವಿಚಾರದ ಕುರಿತು ಚರ್ಚೆ ಶುರುವಾಗಿದೆ. ಇದಕ್ಕೆ ಪೂರಕವಾಗಿ ''ನ್ಯೂಸ್ 18'' ವರದಿಯನ್ನು ಕೂಡ ಮಾಡಿದ್ದು ''ಕಲ್ಕಿ 2'' ಚಿತ್ರದಿಂದ ದೀಪಿಕಾ ಅವರನ್ನು ಚಿತ್ರತಂಡ ಹೊರ ದಬ್ಬಲು ಅವರ ಅಹಂ ಮತ್ತು ಹಣದ ಮೋಹವೇ ಕಾರಣವೆಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

IRREPLACEABLE SHOCKER Deepika Padukone Shot 20 Days For Kalki 2 Then Quit Over Massive Fee Hike

20 ದಿನ ಈಗಾಗಲೇ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ದೀಪಿಕಾ

''ನ್ಯೂಸ್ 18'' ವರದಿಯ ಪ್ರಕಾರ ದೀಪಿಕಾ ಪಡುಕೋಣೆ, ಕಲ್ಕಿ ಮೊದಲ ಭಾಗದ ಚಿತ್ರೀಕರಣದ ಸಮಯದಲ್ಲಿಯೇ ''ಕಲ್ಕಿ 2'' ಚಿತ್ರಕ್ಕೆ 20 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ''ಕಲ್ಕಿ'' ಚಿತ್ರದ ಗೆಲುವು.. ತಮ್ಮ ಪಾತ್ರಕ್ಕೆ ಇರುವ ಮಹತ್ವ.. ಇವೆಲ್ಲವನ್ನು ಗಮನಿಸಿದ್ದ ದೀಪಿಕಾ ತಾನು ಇಲ್ಲದೇ ''ಕಲ್ಕಿ 2'' ನಡೆಯಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದರು. ''ಕಲ್ಕಿ 2'' ಚಿತ್ರತಂಡಕ್ಕೆ ನಾನು ಅನಿವಾರ್ಯ ಎಂದು ಭಾವಿಸಿದ್ದರು.

ಹೀಗಾಗಿಯೇ ವರಸೆ ಬದಲಿಸಿದ ದೀಪಿಕಾ ''ಕಲ್ಕಿ 2'' ಚಿತ್ರಕ್ಕೆ ಹೆಚ್ಚಿನ ಸಂಭಾವನೆಯನ್ನು ಕೇಳಲು ಶುರು ಮಾಡಿದರು. ''ನ್ಯೂಸ್ 18''ಗೆ ಚಿತ್ರತಂಡದವರೇ ನೀಡಿರುವ ಮಾಹಿತಿಯಂತೆ ದೀಪಿಕಾ ಮೊದಲ ಭಾಗಕ್ಕಿಂತ ಶೇಕಡಾ 25ರಷ್ಟು ಹೆಚ್ಚಿನ ಸಂಭಾವನೆ ನೀಡುವಂತೆ ಹಠ ಹಿಡಿದು ಕುಂತಿದ್ದರು.

25 % ಸಂಭಾವನೆ ಹೆಚ್ಚಳದ ಜೊತೆ 25 ಜನ ಸಿಬ್ಬಂದಿಯ ಖರ್ಚು ವೆಚ್ಚ

ಕೇವಲ ಇಷ್ಟೇ ಅಲ್ಲ ತಮ್ಮ ಜೊತೆ ಬರುವ 25 ಜನ ಸಿಬ್ಬಂದಿಯ ಖರ್ಚು ವೆಚ್ಚವನ್ನು ನೋಡಿಕೊಳ್ಳುವುದರ ಜೊತೆ ಪಂಚತಾರಾ ಹೊಟೇಲ್‌ನಲ್ಲಿ ವಾಸ್ತವ್ಯದ ವೆಚ್ಚವನ್ನು ಕೂಡ ನಿರ್ಮಾಣ ಸಂಸ್ಥೆಯೇ ನೀಡಬೇಕೆಂದು ಹೇಳಿದ್ದರು ಎಂದು ''NDTV'' ವರದಿಯನ್ನು ಮಾಡಿದೆ. ದೀಪಿಕಾ ಪಡುಕೋಣೆ ಅವರ ಈ ಬೇಡಿಕೆಗಳಿಂದ ಬೇಸತ್ತು ಚಿತ್ರತಂಡ ದೀಪಿಕಾ ಪಡುಕೋಣೆ ಅವರನ್ನು ಚಿತ್ರದಿಂದ ಹೊರಗಡೆ ಕಳುಹಿಸಿತು ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.

More from Filmibeat

English summary
The real reason behind Deepika Padukone's controversial exit from the Kalki 2 sequel revealed! Reports claim she shot for 20 days before demanding a massive, irreplaceable salary increase.
Read more about: deepika padukone remuneration
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X