For Quick Alerts
  ALLOW NOTIFICATIONS  
  For Daily Alerts

  ಏಪ್ರಿಲ್ 29, 11:11ಕ್ಕೆ ಗಡಿಯಾರ ನನ್ನ ಪಾಲಿಗೆ ನಿಂತಿದೆ; ಇರ್ಫಾನ್ ಖಾನ್ ಪತ್ನಿಯ ಹೃದಯಸ್ಪರ್ಶಿ ಪತ್ರ

  |

  ಬಾಲಿವುಡ್ ನ ಖ್ಯಾತ ನಟ ಇರ್ಫಾನ್ ಖಾನ್ ನಿಧನ ಹೊಂದಿ ಒಂದು ವರ್ಷ ಕಳೆದಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಖ್ಯಾತ ನಟ ಇರ್ಫಾನ್ ಖಾನ್ ಕಳೆದ ವರ್ಷ ಇದೇ ದಿನ ಅಪಾರ ಸಂಖ್ಯೆ ಅಭಿಮಾನಿಗಳು, ಸ್ನೇಹಿತರು ಹಾಗು ಕುಟುಂಬದವನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು.

  ಇರ್ಫಾನ್ ಖಾನ್ ಇಲ್ಲ ಎನ್ನುವುದನ್ನು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾವಿಗೂ ಮೊದಲು ಎರಡು ವರ್ಷಗಳಿಂದ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇರ್ಫಾನ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಖ್ಯಾತ ನಟ ಗುಣಮುಖರಾಗಿ ಬೇಗ ವಾಪಸ್ ಆಗಲಿ ಎನ್ನುವುದು ಕೋಟ್ಯಂತರ ಅಭಿಮಾನಿಗಳ ಹಾರೈಕೆಯಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು.

  ಬಾಫ್ಟಾ 2021: ರಿಷಿ ಕಪೂರ್, ಇರ್ಫಾನ್‌ಗೆ ಗೌರವ, 'ವೈಟ್‌ ಟೈಗರ್‌'ಗೆ ನಿರಾಸೆಬಾಫ್ಟಾ 2021: ರಿಷಿ ಕಪೂರ್, ಇರ್ಫಾನ್‌ಗೆ ಗೌರವ, 'ವೈಟ್‌ ಟೈಗರ್‌'ಗೆ ನಿರಾಸೆ

  ಇರ್ಫಾನ್ ಖಾನ್‌ನನ್ನು ಕಳೆದುಕೊಂಡು ಒಂದು ವರ್ಷವಾಗಿದೆ. ಈ ನೆನಪಿನಲ್ಲಿ ಇರ್ಫಾನ್ ಪತ್ನಿ ಸುತಾಪಾ ಸಿಕ್ದರ್ ಮತ್ತು ಮತ್ತು ಪುತ್ರ ಬಾಬಿಲ್ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಪತ್ರ ಹಂಚಿಕೊಂಡಿದ್ದಾರೆ. 'ನಿಮ್ಮ ಪ್ರೀತಿಯ ನೆನಪುಗಳೊಂದಿಗೆ ಹೋಗಬೇಕೆಂದು ನಾನು ಬಯಸುತ್ತಾನೆ. ಹಾಗಾಗಿ ನಾವು ಹಾಡುಗಳನ್ನು ಹಾಡಿದೆವು. ನೀವು ನಮ್ಮನ್ನು ಬಿಟ್ಟು ಮುಂದಿನ ನಿಲ್ದಾಣಕ್ಕೆ ಹೋದಾಗ ನಾನು ಇಲ್ಲದೆ ನೀವು ಎಲ್ಲಿ ಇಳಿಯಬೇಕು ಎನ್ನುವುದು ನಿಮಗೆ ತಿಳಿದಿದೆ. ನನ್ನ ಪಾಲಿಗೆ ಗಡಿಯಾರ ಏಪ್ರಿಲ್ 29, 11:11ಕ್ಕೆ ನಿಂತು ಹೋಯಿತು' ಎಂದಿದ್ದಾರೆ.

  ಇನ್ನು ತಂದೆಯ ಬಗ್ಗೆ ಪುತ್ರ ಬಾಬಿಲ್ ಕೂಡ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. ನೀವು ಜರ್ನಲ್‌ಗಳನ್ನು ಬರೆಯಲು ನಿಮ್ಮ ಸ್ವಂತ ಟೇಬಲ್ ಅನ್ನು ನೀವೆ ನೀವೇ ನಿರ್ಮಿಸಿಕೊಂಡಿದ್ರಿ. ಸರಳ ವಿಷಯಗಳಲ್ಲೂ ನೀವು ಸಂತೋಷ ಕಂಡುಕೊಂಡಿದ್ರಿ'

  ನವರಸಗಳನ್ನು ಅಭಿನಯಿಸಿ ನೆಟ್ಟಿಗರ ಗಮನಸೆಳೆದ ಆಶಾ ಭಟ್ | Filmibeat Kannada

  'ನಾನು ಅತ್ಯುತ್ತಮ ಸ್ನೇಹಿತ, ಒಡನಾಡಿ, ಸಹೋದರ, ತಂದೆಯನ್ನು ಹೊಂದಿದ್ದೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಬರೆದುಕೊಂಡಿದ್ದಾರೆ.

  English summary
  Irrfan Khan Death Anniversary: Irrfan khan wife pens heartwarming notes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X