ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಇರ್ಫಾನ್ ಖಾನ್ ಬರೆದ ನೋವಿನ ಪತ್ರ
Recommended Video

ಬಾಲಿವುಡ್ ನಟ ಇರ್ಫಾನ್ ಖಾನ್ ಕ್ಯಾನ್ಸರ್ (ನ್ಯೂರೊಎಂಡ್ರೊಕ್ರೈನ್ ಟ್ಯೂಮರ್) ಕಾಯಿಲೆಯಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿರುವ ನಟ ಈಗ ಜೀವನ ಗೆಲ್ಲಲು ಹೋರಾಡುತ್ತಿರುವುದು ವಿಧಿಯ ಘೋರ ಅಪಹಾಸ್ಯವೇ ಸರಿ.
ಈ ಮಾರಕ ಕ್ಯಾನ್ಸರ್ ಕಾಯಿಲೆ ಇರ್ಫಾನ್ ಅವರನ್ನ ಕುಗ್ಗಿಸಿಲ್ಲ, ಬದಲಾಗಿ ಅವರ ಹೋರಾಟದ ಕಿಚ್ಚನ್ನು ಹೆಚ್ಚಿಸಿದೆಯಂತೆ. ಈ ಕುರಿತು ಖಾಸಗಿ ಮಾಧ್ಯಮದೊಂದಿಗೆ ಮನ ಬಿಚ್ಚಿ ಮಾತನಾಡಿರುವ ಅವರು, 'ನ್ಯೂರೋಎಂಡ್ರೋಸಿನ್ ಎಂಬ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಮುಂದುವರೆಯುತ್ತಿದೆ ಎಂದು ಹೇಳಿದ್ದಾರೆ.
ಬಹಳ ನೋವಿನ ಚಿಕಿತ್ಸೆಯನ್ನು ತಾವು ಎದುರಿಸುತ್ತಿದ್ದು, ಮಕ್ಕಳಿಗಾಗಿ ಈ ನೋವನ್ನು ಸಹಿಸಿಕೊಂಡು ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕ್ಯಾನ್ಸರ್ ಕುರಿತು ಮಾಹಿತಿ ಗೊತ್ತಾದಾಗ ಅದರಿಂದಾದ ಆಘಾತ ಅಷ್ಟಿಷ್ಟಲ್ಲ'' ಎಂದು ಇರ್ಫಾನ್ ನೋವಿನಿಂದ ಹೇಳಿದ್ದಾರೆ. ಹಾಗಿದ್ರೆ, ಇರ್ಫಾನ್ ಖಾನ್ ಬರೆದಿರುವ ಪತ್ರದಲ್ಲಿ ಏನಿದೆ.?

ನಮ್ಮ ಸ್ಥಳ ಬಂದಿಲ್ಲದಿದ್ದರೂ ಕೆಲವೊಮ್ಮೆ ಇಳಿಯಬೇಕಾಗುತ್ತೆ
''ನಾನು ಬೇರೆಯೇ ಆಟದಲ್ಲಿದ್ದೆ. ವೇಗದ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಕನಸುಗಳು, ಯೋಜನೆಗಳು, ಗುರಿಗಳಿದ್ದವು. ಅವುಗಳಲ್ಲಿಯೇ ಮಗ್ನನಾಗಿದ್ದೆ. ಆಗ ಥಟ್ಟನೇ ಯಾರೋ ನನ್ನ ಭುಜ ತಟ್ಟಿದಾಗ ನಾನು ತಿರುಗಿ ನೋಡಿದೆ. ಆಗ ಟಿಸಿ, 'ನೀವು ತಲುಪುಬೇಕಾದ ಸ್ಥಳ ಬರಲಿದೆ ಕೆಳಗಿಳಿಯಿರಿ' ಎನ್ನುತ್ತಾನೆ. ನನಗೆ ಗೊಂದಲ, 'ಇಲ್ಲ ಇಲ್ಲ ನಾನು ತಲುಪಬೇಕಾದ ಸ್ಥಳ ಬಂದಿಲ್ಲ' ಎನ್ನುತ್ತೇನೆ.. ಆದರೇ, 'ಇದುವೆ ಅದು, ಕೆಲವೊಮ್ಮ ಹಾಗೇಯೇ ಆಗುತ್ತದೆ' ಎಂದು ಆತ ಹೇಳುತ್ತಾನೆ.

ಜೀವನದ ಜೊತೆ ನಿಜವಾದ ಹೋರಾಟ
''ಸಾಗರದಲ್ಲಿ ತೇಲುತ್ತಿರುವ ಮರದ ತೊಗಟೆಯಂತಿರುವ ನಿಮಗೆ ಅಲ್ಲಿನ ಅಲೆಗಳು ಹೇಗಿರಬಹುದೆಂದು ಊಹಿಸಲು ಅಸಾಧ್ಯವಾಗುತ್ತದೆ ಹಾಗೂ ಅವುಗಳನ್ನು ನಿಯಂತ್ರಿಸಲು ನೀವು ಹತಾಶರಾಗಿ ಪ್ರಯತ್ನಿಸುತ್ತೀರಿ. ಇಂತಹ ಒಂದು ಹೆದರಿಕೆ ಹುಟ್ಟಿಸುವ ಸನ್ನಿವೇಶದಲ್ಲಿ ಆಸ್ಪತ್ರೆಯಲ್ಲಿದಾಗ ನಾನು ನನ್ನ ಪುತ್ರನ ಬಳಿ 'ಈಗಿನ ರೀತಿಯಲ್ಲಿ ಈ ಕಷ್ಟವನ್ನು ಎದುರಿಸದಂತೆ ಮಾಡುವುದನ್ನೇ ನಾನು ನನ್ನಿಂದ ನಿರೀಕ್ಷಿಸುತ್ತಿದ್ದೇನೆ. ನಾನು ನನ್ನ ಕಾಲುಗಳ ಮೇಲೆ ನಿಲ್ಲಬೇಕಿದೆ. ಭೀತಿ ಮತ್ತು ಭಯ ನನ್ನುನ್ನು ಆಕ್ರಮಿಸಬಾರದು'' ಎನ್ನುತ್ತೇನೆ.

ನೋವಿನ ತೀವ್ರತೆ ಹೇಗಿರಲಿದೆ...
''ಇಷ್ಟರವರೆಗೆ ನೀವು ನೋವಿನ ಬಗ್ಗೆ ತಿಳಿದಿದ್ದರೆ ಈಗ ಅದರ ಸ್ವರೂಪ ಹಾಗೂ ತೀವ್ರತೆಯ ಅನುಭವ ನಿಮಗಾಗುತ್ತದೆ. ಯಾವುದೇ ಸಮಾಧಾನ, ಪ್ರೇರಣಯು ಕೆಲಸ ಮಾಡುತ್ತಿಲ್ಲ. ಇಡೀ ಜಗತ್ತೇ ನೋವು ಹಾಗೂ ಈ ನೋವು ದೇವರಿಗಿಂತಲೂ ದೊಡ್ಡದಾಗಿದೆ ಎಂದು ಅನಿಸಿದೆ'' ಎಂದು ಇರ್ಫಾನ್ ಹೇಳಿದ್ದಾರೆ.

ನಂಬಿಕೆ ಬಿಡಲ್ಲ
''ಫಲಿತಾಂಶ ಏನಾಗಬಹುದೆಂದು ಯೋಚಿಸಿದೆ, ಇದು ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗಬಹುದೆಂದೂ ಯೋಚಿಸಿದೆ. ಈಗಿನಿಂದ ನಾಲ್ಕು ಎಂಟು ತಿಂಗಳು ಅಥವಾ ಎರಡು ವರ್ಷ. ಮೊದಲು ಬಾರಿಗೆ ಸ್ವಾತಂತ್ರ್ಯ ಏನೆಂದು ನನಗೆ ತಿಳಿಯಿತು. ಅದೊಂದು ಸಾಧನೆಯಂತೆ. ನಾನು ಜೀವನವನ್ನು ಮೊದಲ ಬಾರಿ ಅನುಭವಿಸುವಂತೆ ಆಗಿತ್ತು. ನನ್ನ ಪ್ರತಿಯೊಂದು ಕಣಕಣದಲ್ಲೂ ನಂಬಿಕೆ ಇದೆ. ಅದು ಉಳಿಯುವುದೋ ಎಂಬುದನ್ನು ಸಮಯವೇ ಹೇಳಲಿದೆ'' ಎಂದು ಇರ್ಫಾನ ಖಾನ್ ಹೇಳಿಕೊಂಡಿದ್ದಾರೆ.


Click it and Unblock the Notifications











