ಅಗಲಿದ ನಟ ಇರ್ಫಾನ್ ಖಾನ್ ಆಡಿದ ಕೊನೆಯ ಮಾತುಗಳಿವು

ನಟ ಇರ್ಫಾನ್ ಖಾನ್ ಇಂದು ಅಗಲಿದ್ದಾರೆ. ಭಾರತೀಯ ಸಿನಿ ಉದ್ಯಮವೇ ಪ್ರತಿಭಾವಂತ ನಟನ ಅಗಲಿಕೆಗೆ ಮರುಕಪಟ್ಟಿದೆ. ನ್ಯೂರೋಇಂಡ್ರೋಕ್ರೈನ್ ಎಂಬ ಹೊಸ ಮಾದರಿಯ ಕ್ಯಾನ್ಸರ್ ಖಾಯಿಲೆ ಅವರನ್ನು ಇಂಚಿಂಚಾಗಿ ತಿಂದುಬಿಟ್ಟಿತು. ಎರಡು ವರ್ಷ ಖಾಯಿಲೆ ವಿರುದ್ಧ ಹೋರಾಡಿದ ಇರ್ಫಾನ್ ಖಾನ್ ಇಂದು ಸಾವನ್ನಪ್ಪಿದರು.

ಇರ್ಫಾನ್ ಖಾನ್ ತಾಯಿ ಸಯೀದಾ ಬೇಗಂ ನಾಲ್ಕು ದಿನಗಳ ಹಿಂದಷ್ಟೆ ಶನಿವಾರ (ಏಪ್ರಿಲ್ 25) ದಂದು ನಿಧನರಾಗಿದ್ದರು. ತಾಯಿಯ ಸೆರಗು ಹಿಡಿದು ಇರ್ಫಾನ್ ಖಾನ್ ಸಹ ಹೋಗಿಬಿಟ್ಟಿದ್ದಾರೆ.

ನಟ ಇರ್ಫಾನ್ ಖಾನ್ ಅವರಿಗೆ ಖಾಯಿಲೆಯ ತೀವ್ರತೆ ಬಗ್ಗೆ ಮೊದಲೇ ಅರಿವಿತ್ತು. ಖಾಯಿಲೆಯಿಂದ ಪಾರಾಗುವುದು ಸುಲಭವಲ್ಲ ಎಂಬುದು ಸಹ ಅರಿವಿತ್ತು. ಲಂಡನ್‌ ನಲ್ಲಿ ಚಿಕಿತ್ಸೆ ಪಡೆಯುವಾಗಲೇ ಅವರು ಖಾಯಿಲೆ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದರು. ಅದರಲ್ಲಿಯೇ ಅವರು ಅಂತ್ಯದತ್ತ ಹೋಗುತ್ತಿರುವ ಸುಳಿವು ನೀಡಿದ್ದರು.

ಪತ್ನಿಯೊಂದಿಗೆ ಆಡಿದ ಮಾತುಗಳ ಬಗ್ಗೆ ವರದಿ

ಪತ್ನಿಯೊಂದಿಗೆ ಆಡಿದ ಮಾತುಗಳ ಬಗ್ಗೆ ವರದಿ

ಇರ್ಫಾನ್ ಖಾನ್ ಸಾಯುವ ಮುನ್ನಾ ಪತ್ನಿಯೊಂದಿಗೆ ಆಡಿದ ಮಾತುಗಳನ್ನು ಆಂಗ್ಲ ವೆಬ್‌ಪೋರ್ಟಲ್ ಒಂದು ವರದಿ ಮಾಡಿದೆ. ಐಸಿಯುನಲ್ಲಿದ್ದ ಇರ್ಫಾನ್ ಖಾನ್ ಇಂದು ಬೆಳಿಗ್ಗೆ ಐಸಿಯುನಲ್ಲಿದ್ದಾಗ ತನ್ನ ತಾಯಿಯ ಬಗ್ಗೆ ಮಾತನಾಡಿದರಂತೆ.

'ಅಮ್ಮ ನನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ'

'ಅಮ್ಮ ನನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ'

'ಅಮ್ಮ ನನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಆಕೆ ನನ್ನ ಪಕ್ಕದಲ್ಲಿಯೇ ನಿಂತಿದ್ದಾರೆ' ಎಂದು ಇರ್ಫಾನ್ ಪತ್ನಿ ಸುತಾಪಾ ಬಳಿ ಹೇಳಿದರಂತೆ. ಮಾತುಗಳನ್ನಾಡುತ್ತಾ ಜೋರಾಗಿ ಅತ್ತು ಬಿಟ್ಟರಂತೆ ಇರ್ಫಾನ್ ಖಾನ್.

ಶನಿವಾರವಷ್ಟೆ ಇರ್ಫಾನ್ ತಾಯಿ ನಿಧನಹೊಂದಿದ್ದರು

ಶನಿವಾರವಷ್ಟೆ ಇರ್ಫಾನ್ ತಾಯಿ ನಿಧನಹೊಂದಿದ್ದರು

ಇರ್ಫಾನ್ ಖಾನ್ ತಾಯಿ ಶನಿವಾರವಷ್ಟೆ ನಿಧನಹೊಂದಿದ್ದರು. ಕೊರೊನಾ ಲಾಕ್‌ಡೌನ್‌ನಿಂದಾಗಿ ತಾಯಿಯ ಅಂತಿಮದರ್ಶನಕ್ಕೆ ಇರ್ಫಾನ್‌ ಗೆ ಹೋಗಲಾಗಿರಲಿಲ್ಲ. ವಿಡಿಯೋ ಮೂಲಕ ಆಕೆಯ ಅಂತಿಮ ದರ್ಶನ ಪಡೆದಿದ್ದ ಇರ್ಫಾನ್ ಅತೀವ ದುಖಃದಲ್ಲಿದ್ದರಂತೆ.

ನಟನೆಯಿಂದ ಜಗತ್ತನ್ನೇ ಗೆದ್ದಿದ್ದ ಇರ್ಫಾನ್

ನಟನೆಯಿಂದ ಜಗತ್ತನ್ನೇ ಗೆದ್ದಿದ್ದ ಇರ್ಫಾನ್

ನಿನ್ನೆ ತಡರಾತ್ರಿ ಐಸಿಯು ಗೆ ದಾಖಲಾಗಿದ್ದ ಇರ್ಫಾನ್ ಖಾನ್ ಹೆಚ್ಚು ಹೊತ್ತ ಜೀವನ ಹಿಡಿದಿಟ್ಟುಕೊಳ್ಳಲಾಗಲಿಲ್ಲ. ನಟನೆ ಮೂಲಕ ಜಗತ್ತನ್ನೇ ಗೆದ್ದಿದ್ದ ನಟ, ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಸೋತುಬಿಟ್ಟರು.

More from Filmibeat

English summary
Actor Irrfan Khan passed away today. A magazine reported his last words with his wife Sutapa in the hospital ICU.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X