ನೆಪೋಟಿಸಂ ವಿರುದ್ಧ ಹೋರಾಡಿ, ಆದರೆ ಸುಶಾಂತ್ ಹೆಸರು ಬಳಕೆ ಬೇಡ: ಇರ್ಫಾನ್ ಖಾನ್ ಮಗನ ಮನವಿ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತದ ಕುರಿತಾಧ ಚರ್ಚೆಯ ವಿಚಾರವಾಗಿ ಇತ್ತೀಚೆಗೆ ನಿಧನರಾದ ನಟ ಇರ್ಫಾನ್ ಖಾನ್ ಮಗ ಬಾಬಿಲ್ ಖಾನ್ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದಾರೆ.
Recommended Video
ಸುಶಾಂತ್ ಸಾವಿನ ಕಾರಣದಿಂದ ನಡೆಯುತ್ತಿರುವ ದೂಷಾರೋಪಣೆ ನಿರರ್ಥಕ ಪ್ರಯತ್ನ ಎಂದಿರುವ ಅವರು, ಅದು ನಡೆಯುತ್ತಿರುವ ರೀತಿ ಸರಿಯಾಗಬೇಕಿದೆ ಎಂದಿದ್ದಾರೆ.
ತಿಂಗಳ ಅಂತರದಲ್ಲಿ ನಡೆದ ತಂದೆ ಇರ್ಫಾನ್ ಖಾನ್ ಮತ್ತು ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮಾತನಾಡಿರುವ ಅವರು, 'ಅದರಿಂದ ಇನ್ನೂ ಹೊರಬರಲು ಆಗಿಲ್ಲ. ನಾವು ಇಬ್ಬರು ಪ್ರಾಮಾಣಿಕ ವ್ಯಕ್ತಿಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ಸ್ಫೂರ್ತಿದಾಯಕ ಬದುಕಿಗೆ ಪ್ರಾಮಾಣಿಕತೆಯೇ ಕೀಲಿಕೈ. ಸುಶಾಂತ್ ಅವರು ನಿರ್ಗಮಿಸಿದ ಬಗೆ ನಂಬಲಾಗದ ಆಘಾತ' ಎಂದು ಹೇಳಿದ್ದಾರೆ. ಮುಂದೆ ಓದಿ...

ಆಪಾದನೆ ಹೊರಿಸುವುದು ಸಾಮಾನ್ಯ
'ನಾವು ಯಾವುದನ್ನಾದರೂ ಅಥವಾ ಯಾರ ಮೇಲಾದರೂ ಹೊರಿಸುವ ಪ್ರವೃತ್ತಿ ನಡೆಸುವುದು ಸಾಮಾನ್ಯ. ಅದು ಅತ್ಯಂತ ನಿರರ್ಥಕ ಕೆಲಸ. ಏಕೆಂದರೆ ದೂಷಣೆಯ ಕಾರ್ಯದ ಮೂಲಕ ಶಾಂತಿ ಅರಸುವುದು ಪ್ರಾಮಾಣಿಕತೆಯಲ್ಲ. ಅದು ಸುಳ್ಳಿನ ಪ್ರತಿಫಲನವಾಗುತ್ತದೆಯಷ್ಟೇ.

ಈ ರೀತಿ ಅನಿಶ್ಚಿತತೆ ಸಹಜ
ಈಗ ಆಗುತ್ತಿರುವ ದುರದೃಷ್ಟಕರ ಘಟನೆಗಳಿಗೆ ಯಾರನ್ನೋ ಅಥವಾ ಯಾವುದನ್ನೋ ದೂರದಂತೆ ನಿಮಗೆ ಮನವಿ ಮಾಡುತ್ತೇನೆ. ಯಾವುದೇ ವಿವರಣೆ ಅಥವಾ ತಿಳಿವಳಿಕೆ ಒದಗಿಸುವ ಮೊದಲೇ ಲೆಗ್ ಸ್ಪಿನ್ ಎಸೆತಗಳು ಆಫ್ ಸ್ಪಿನ್‌ನ ಬೌನ್ಸ್‌ನಂತೆ ಬರುವುದನ್ನು ನೀವು ಒಪ್ಪಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ.

ನಿಮ್ಮ ತನಿಖೆಯಿಂದ ದುಃಖವೇ ಹೆಚ್ಚು
ಕಾರಣಗಳನ್ನು ತನಿಖೆ ಮಾಡುವುದನ್ನು ದಯವಿಟ್ಟು ನಿಲ್ಲಿಸಿ. ಏಕೆಂದರೆ ಈ ಘಟನೆಯಿಂದ ನೋವು ಅನುಭವಿಸುತ್ತಿರುವವರ ದುಃಖ ಮತ್ತಷ್ಟು ಹೆಚ್ಚುತ್ತದೆ. ಈ ಪ್ರಾಮಾಣಿಕ ವ್ಯಕ್ತಿಗಳ ಬೆಳವಣಿಗೆಯನ್ನು ಸಂಭ್ರಮಿಸಿ. ನಮ್ಮ ಬದುಕಿನ ಯಾವುದಾದರೂ ಮಾರ್ಗದಲ್ಲಿ ಅವರ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳೋಣ. ಈ ಮೂಲಕ ಅವರ ನೆನಪುಗಳ ದೀವಿಗೆಯನ್ನು ನಮ್ಮ ಸೂಕ್ಷ್ಮ ಮನಸಿನೊಳಗೆ ಬೆಳಗಿಸೋಣ.

ಸುಶಾಂತ್ ಕಾರಣವಾಗಬಾರದು
ಅಂದರೆ, ನಾನು ಹೇಳುತ್ತಿರುವುದು ನೀವು ಸ್ವಜನಪಕ್ಷಪಾತದ ವಿರುದ್ಧ ಸಿಡಿದೇಳಬೇಕು ಎಂದುಕೊಂಡಿದ್ದರೆ ಅದಕ್ಕೆ ಸುಶಾಂತ್ ಸಿಂಗ್ ಅವರ ಸಾವನ್ನು ಬಳಸಿಕೊಳ್ಳದೆಯೇ ಸರಿಯಾದ ವಿಚಾರದ ಪರ ಎದ್ದು ನಿಲ್ಲಿ. ಆದರೆ ಈಗ ನೀವು ಏನು ಮಾಡುತ್ತಿದ್ದೀರೋ ಅದಕ್ಕೆ ಸುಶಾಂತ್ ಅವರನ್ನು ಕಾರಣವನ್ನಾಗಿಸಿಕೊಳ್ಳಬೇಡಿ. ಯಾವುದೇ ವಿಚಾರದಲ್ಲಿ ಏನೇ ಆದರೂ ಸರಿಯಾದ ವಿಚಾರದ ಪರ ಎದ್ದು ನಿಲ್ಲಿ ಎಂದು ಬಾಬಿಲ್ ಸಲಹೆ ನೀಡಿದ್ದಾರೆ.


Click it and Unblock the Notifications











