ಕಾಲೇಜಿಗೆ ಗುಡ್ ಬೈ ಹೇಳಿದ ಖ್ಯಾತ ನಟ ಇರ್ಫಾನ್ ಪುತ್ರ ಬಾಬಿಲ್: ಕಾರಣವೇನು?

ಬಾಲಿವುಡ್ ಸಿನಿಮಾರಂಗದ ಖ್ಯಾತ ನಟ ಇರ್ಫಾನ್ ಖಾನ್ ನಿಧನ ಹೊಂದಿ ಒಂದು ವರ್ಷ ಕಳೆಯಿತು. ಅದ್ಭುತ ನಟನ ಅಗಲಿಕೆಯ ನೋವು ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದವರಲ್ಲಿ ಹಸಿರಾಗೆ ಇದೆ. ಇರ್ಫಾನ್ ಖಾನ್ ಪತ್ನಿ ಮತ್ತು ಪುತ್ರ ಆಗಾಗ ಇರ್ಫಾನ್ ಖಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಪುತ್ರ ಬಾಬಿಲ್ ಕಡೆಯಿಂದ ಮತ್ತೊಂದು ಸುದ್ದಿ ಕೇಳಿಬಂದಿದೆ. ಬಾಬಿಲ್ ಕಾಲೇಜಿಗೆ ಗುಡ್ ಬೈ ಹೇಳಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಬಾಬಿಲ್ ನಿರ್ಧಾರ ಅಚ್ಚರಿ ಮೂಡಿಸಿದರೂ ಕಾರಣ ಇರ್ಫಾನ್ ಅಭಿಮಾನಿಗಳಿಗೆ ಸಂತಸ ತಂದಿದೆ. ಬಾಬಿಲ್ ಸಿನಿಮಾ ಜೀವನಕ್ಕಾಗಿ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳುತ್ತಿರುವುದು ಸಿನಿಮಾಗಾಗಿ. ಮುಂದೆ ಓದಿ...

ಅನುಷ್ಕಾ ಶರ್ಮಾ ನಿರ್ಮಾಣದ ಸಿನಿಮಾದಲ್ಲಿ ನಟನೆ

ಅನುಷ್ಕಾ ಶರ್ಮಾ ನಿರ್ಮಾಣದ ಸಿನಿಮಾದಲ್ಲಿ ನಟನೆ

ಇರ್ಫಾನ್ ಖಾನ್ ಪುತ್ರ ಬಾಬಿಲ್ ತಂದೆಯ ಪರಂಪರೆಯನ್ನು ಮುಂದೆ ಕೊಂಡೊಯ್ಯುವ ಗುರಿಹೊಂದಿದ್ದಾರೆ. ಹಾಗಾಗಿ ಕಾಲೇಜಿಗೆ ತೊರೆದು ಸಂಪೂರ್ಣವಾಗಿ ಸಿನಿಮಾರಂಗದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈಗಾಗಲೇ ಬಾಬಿಲ್ ನೆಟ್ ಫ್ಲಿಕ್ಸ್ ನ ಖಲಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅನ್ವಿತಾ ದತ್ ನಿರ್ದೇಶನ ಮಾಡುತ್ತಿದ್ದು, ನಟಿ ಅನುಷ್ಕಾ ಶರ್ಮಾ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

ಸಿನಿಮಾರಂಗದಲ್ಲೇ ಮುಂದುವರೆಯಲು ನಿರ್ಧಾರ

ಸಿನಿಮಾರಂಗದಲ್ಲೇ ಮುಂದುವರೆಯಲು ನಿರ್ಧಾರ

ಈ ಸಿನಿಮಾ ಬಳಿಕ ಬಾಬಿಲ್ ಮತ್ತೊಂದು ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಸಂಪೂರ್ಣವಾಗಿ ತನ್ನನ್ನು ಸಿನಿಮಾರಂಗದಲ್ಲೇ ತೊಡಿಗಿಸಿಕೊಳ್ಳಲು ನಿರ್ಧರಿಸಿರುವ ಬಾಬಿಲ್ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಬಾಬಿಲ್ ಸ್ನೇಹಿತರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಸ್ನೇಹಿತರ ಬಗ್ಗೆ ಭಾವುಕ ಪೋಸ್ಟ್

ಸ್ನೇಹಿತರ ಬಗ್ಗೆ ಭಾವುಕ ಪೋಸ್ಟ್

ತನ್ನ ಸ್ನೇಹಿತರ ಬಗ್ಗೆ ಬಾಬಿಲ್ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. "ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಅದ್ಭುತ ಸ್ನೇಹಿತರು. ನಾನು ಮುಂಬೈನಲ್ಲಿ ಟೈಟ್ ಸರ್ಕಲ್ ಹೊಂದಿದ್ದೇನೆ. ಅದರಲ್ಲೂ 2-3 ಸ್ನೇಹಿತರು. ನೀವೆಲ್ಲರ ಮನದಲ್ಲಿ ನನಗೆ ಉತ್ತಮ ಜಾಗ ನೀಡಿದ್ದೀರಿ. ಧನ್ಯವಾದಗಳು. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನಾನು ನನ್ನ ಬಿ ಎ ತರಗತಿಯಿಂದ ನಿರ್ಗಮಿಸುತ್ತಿದ್ದೇನೆ. ವೆಸ್ಟ್ ಮಿನ್ಸ್ಟರ್ ವಿಶ್ವವಿದ್ಯಾಲಯಕ್ಕೆ ಗುಡ್ ಬೈ ಹೇಳುತ್ತಿದ್ದೇನೆ. ನನ್ನ ಪ್ರಾಣ ಸ್ನೇಹಿತರನ್ನು ತುಂಬಾ ಪ್ರೀತಿಸುತ್ತೇನೆ" ಎಂದು ದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದು ಸ್ನೇಹಿತರ ಹೆಸರನ್ನು ಟ್ಯಾಗ್ ಮಾಡಿದ್ದಾರೆ.

ತಂದೆಯ ಬಗ್ಗೆ ಪೋಸ್ಟ್

ತಂದೆಯ ಬಗ್ಗೆ ಪೋಸ್ಟ್

ಕಳೆದ ವಾರವಷ್ಟೆ ಬಾಬಿಲ್ ತಂದೆಯ ಜೊತೆಗೆರುವ ಸುಂದರ ಫೋಟೋಗಳನ್ನು ಶೇರ್ ಮಾಡಿ, "ನಾನು ಕಷ್ಟಪಟ್ಟು ಇಲ್ಲಿ ಕೆಲಸ ಮಾಡುತ್ತೇನೆ. ನೀವು ಸಾಕ್ಷಿಯಾಗಬೇಕು" ಎಂದು ಬರೆದುಕೊಂಡಿದ್ದರು. ಸದ್ಯ ಸಿನಿಮಾರಂಗದಲ್ಲಿ ಅಪ್ಪನಂತೆ ದೊಡ್ಡ ಮಟ್ಟದ ಹೆಸರು ಮಾಡುವ ಕನಸು ಕಂಡಿರುವ ಬಾಬಿಲ್ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

Recommended Video

ನಯನತಾರ ಮದುವೆ ವಿಳಂಬಕ್ಕೆ ಕಾರಣ ಕೊಟ್ಟ ಬಾಯ್ ಫ್ರೆಂಡ್ | Filmibeat Kannada
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರ ಜೊತೆ 2ನೇ ಸಿನಿಮಾ

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರ ಜೊತೆ 2ನೇ ಸಿನಿಮಾ

ಮೊದಲ ಸಿನಿಮಾ ಬಿಡುಗಡೆಗೂ ಮೊದಲೇ ಬಾಬಿಲ್ ಎರಡನೇ ಸಿನಿಮಾಗೆ ಸಹಿ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶೂಜಿತ್ ಸರ್ಕಾರ್ ಸಿನಿಮಾದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಅಪ್ಪನಂತೆ ಮಗ ಕೂಡ ಅದ್ಭುತ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿ ಎನ್ನುವುದು ಅಭಿಮಾನಿಗಳ ಆಶಯ.

More from Filmibeat

English summary
Bollywood late Actor Irrfan Khan son Babil Khan drops out college for focus on Acting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X