twitter
    For Quick Alerts
    ALLOW NOTIFICATIONS  
    For Daily Alerts

    ಸಿಕ್ಸ್ ಪ್ಯಾಕ್ ಹೀರೋಗಳ ಎದುರು ನನ್ನಪ್ಪ ಸೋತು ಹೋದ: ಇರ್ಫಾನ್ ಖಾನ್ ಮಗನ ಭಾವುಕ ಮಾತು

    |

    ಅದ್ಭುತ ನಟನೆಯ ಮೂಲಕ ಗಮನ ಸೆಳೆದಿದ್ದವರು ಬಾಲಿವುಡ್ ನಟ ಇರ್ಫಾನ್ ಖಾನ್. ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಅವರು, ವಿಶಿಷ್ಟ ಕಥೆಯ ಗಂಭೀರ ಪಾತ್ರಗಳಲ್ಲಿ ನಾಯಕ ನಟನಾಗಿಯೂ ಅಭಿನಯಿಸಿದ್ದರು. ಅಂತಹ ಚಿತ್ರಗಳು ವಿಮರ್ಶಕರ ಪ್ರಶಂಸೆ ಪಡೆದುಕೊಂಡು, ಪ್ರಶಸ್ತಿಗಳನ್ನು ಬಾಚಿದರೂ ಬಾಕ್ಸಾಫೀಸ್‌ನಲ್ಲಿ ದೊಡ್ಡ ಯಶಸ್ಸು ಪಡೆದಿರಲಿಲ್ಲ.

    Recommended Video

    DK Shivakumar meets Shivarajkumar | Filmibeat Kannada

    ದಿವಂಗತ ನಟ ಇರ್ಫಾನ್ ಖಾನ್ ಅವರ ಸಿನಿಮಾ ಪ್ರಯಾಣದ ಬಗ್ಗೆ ಮಾತನಾಡಿರುವ ಅವರ ಬಗ ಬಾಬಿಲ್, ಹಿಂದಿ ಸಿನಿಮಾಗಳ ಗುಣಮಟ್ಟ ಸುಧಾರಿಸುವ ಇರ್ಫಾನ್ ಖಾನ್ ಅವರ ಪ್ರಯತ್ನಗಳನ್ನು ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ. ಅವರು ಕಮರ್ಷಿಯಲ್ ಸಿನಿಮಾಗಳ ಗುಂಗಿನಿಂದ ಹೊರಬರಲು ನಿರಾಕರಿಸಿದ್ದರು ಎಂದಿದ್ದಾರೆ.

    'ಮತ್ತೆ ಸಿಗೋಣ, ಮಾತನಾಡೋಣ...': ಇರ್ಫಾನ್ ಖಾನ್ ನೆನಪಲ್ಲಿ ಪತ್ನಿಯ ಹೃದಯಸ್ಪರ್ಶಿ ಬರಹ'ಮತ್ತೆ ಸಿಗೋಣ, ಮಾತನಾಡೋಣ...': ಇರ್ಫಾನ್ ಖಾನ್ ನೆನಪಲ್ಲಿ ಪತ್ನಿಯ ಹೃದಯಸ್ಪರ್ಶಿ ಬರಹ

    ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಬಾಬಿಲ್, ನಾಟಕೀಯವಾಗಿ ಒಂದು ಸಾಲಿನ ಜೋಕ್‌ಗಳನ್ನು ಹೇಳುವ ಹಾಗೂ ಭೌತಶಾಸ್ತ್ರ ಮತ್ತು ವಾಸ್ತವದ ನಿಯಮಗಳನ್ನು ಮರೆಯುವ ಸಿಕ್ಸ್ ಪ್ಯಾಕ್ ಆಬ್ಸ್ ಹೊಂದಿರುವ ಜನರಿಂದ ಬಾಕ್ಸಾಫೀಸ್‌ನಲ್ಲಿ ಇರ್ಫಾನ್ ಖಾನ್ ಸೋಲು ಅನುಭವಿಸಿದ್ದರು ಎಂದು ಹೇಳಿದ್ದಾರೆ. ಮುಂದೆ ಓದಿ...

    ನಿನ್ನನ್ನು ನೀನು ಪ್ರೂವ್ ಮಾಡು

    ನಿನ್ನನ್ನು ನೀನು ಪ್ರೂವ್ ಮಾಡು

    ಸಿನಿಮಾದ ವಿದ್ಯಾರ್ಥಿಯಾಗಿ ನನ್ನಪ್ಪ ನನಗೆ ಹೇಳಿಕೊಟ್ಟ ಅತ್ಯಂತ ಮಹತ್ವದ ಸಂಗತಿಗಳು ಏನು ಗೊತ್ತೇ? ನಾನು ಸಿನಿಮಾ ಶಾಲೆಗೆ ಹೋಗುವ ಮುನ್ನ, ಸಿನಿಮಾ ಜಗತ್ತಿನಲ್ಲಿ ಬಾಲಿವುಡ್ ಕಡಿಮೆ ಗೌರವ ಹೊಂದಿರುವ ಕಾರಣದಿಂದ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಬೇಕು ಎಂದು ಎಚ್ಚರಿಸಿದ್ದರು. ಈ ಸಮಯದಲ್ಲಿ ನಮ್ಮ ನಿಯಂತ್ರಿತ ಬಾಲಿವುಡ್‌ನಾಚೆಗಿನ ಭಾರತೀಯ ಸಿನಿಮಾದ ಬಗ್ಗೆ ನಿಮ್ಮೊಂದಿಗೆ ನಾನು ಮಾಹಿತಿಯನ್ನು ಹೇಳಲೇಬೇಕು.

    ನೆಪೋಟಿಸಂ ವಿರುದ್ಧ ಹೋರಾಡಿ, ಆದರೆ ಸುಶಾಂತ್ ಹೆಸರು ಬಳಕೆ ಬೇಡ: ಇರ್ಫಾನ್ ಖಾನ್ ಮಗನ ಮನವಿನೆಪೋಟಿಸಂ ವಿರುದ್ಧ ಹೋರಾಡಿ, ಆದರೆ ಸುಶಾಂತ್ ಹೆಸರು ಬಳಕೆ ಬೇಡ: ಇರ್ಫಾನ್ ಖಾನ್ ಮಗನ ಮನವಿ

    ಬಾಲಿವುಡ್ ಎಂದರೆ ನಗುತ್ತಾರೆ

    ಬಾಲಿವುಡ್ ಎಂದರೆ ನಗುತ್ತಾರೆ

    ಬಾಲಿವುಡ್‌ಗೆ ಗೌರವವಿಲ್ಲ. ನಮಗೆ 60ರ-90ರ ದಶಕದ ಭಾರತೀಯ ಸಿನಿಮಾಗಳ ಅರಿವು ಇಲ್ಲ. ಅಭಿಪ್ರಾಯದ ವಿಶ್ವಾಸಾರ್ಹತೆಯೂ ಇಲ್ಲ. ವಿಶ್ವ ಸಿನಿಮಾದಲ್ಲಿ ಭಾರತೀಯ ಸಿನಿಮಾ ಎಂದು ಕರೆಯಲಾಗುವ ಬಾಲಿವುಡ್ ಮತ್ತು ಅದರಾಚೆ ಒಂದೇ ಒಂದು ಉಪನ್ಯಾಸ ನಡೆಯುತ್ತದೆ. ಅದೂ ಇಡೀ ತರಗತಿ ಮುಸಿಮುಸಿ ನಗುತ್ತಾ ತುಂಬಿಕೊಂಡಿರುತ್ತದೆ. ಸತ್ಯಜಿತ್ ರೇ ಮತ್ತು ಕೆ. ಆಸಿಫ್ ಅವರಂತಹ ನೈಜ ಭಾರತೀಯ ಸಿನಿಮಾಗಳ ಕುರಿತು ಸಂವೇದನಾತ್ಮಕ ಮಾತುಕತೆಯನ್ನೂ ಕೇಳುವುದು ಕಷ್ಟ. ಇದು ಏಕೆ ಎಂದು ನಿಮಗೆ ಗೊತ್ತೇ?

    ಸಿಕ್ಸ್ ಪ್ಯಾಕ್‌ನಿಂದ ಸೋತರು

    ಸಿಕ್ಸ್ ಪ್ಯಾಕ್‌ನಿಂದ ಸೋತರು

    ಏಕೆಂದರೆ ನಾವು, ಭಾರತೀಯ ಪ್ರೇಕ್ಷಕರು, ಬೆಳವಣಿಗೆ ಹೊಂದಲು ನಿರಾಕರಿಸಿದ್ದೇವೆ. ಬಾಲಿವುಡ್‌ನ ನಿಷ್ಪ್ರಯೋಜಕ ವೈಪರಿತ್ಯ ಪರಿಸ್ಥಿತಿಯ ನಡುವೆಯೂ ನನ್ನ ತಂದೆ ಅಭಿನಯದ ಕಲೆಯನ್ನು ವಿಕಸನಗೊಳಿಸಲು ಪ್ರಯತ್ನಸಲು ತಮ್ಮ ಜೀವ ನೀಡಿದರು. ಆದರೆ ತಮ್ಮ ಬಹುತೇಕ ಪಯಣದಲ್ಲಿ ಅವರು ನಾಟಕೀಯವಾಗಿ ಸಂಭಾಷಣೆ ಹೇಳುವ, ಭೌತಶಾಸ್ತ್ರ ಮತ್ತು ವಾಸ್ತವದ ಕಾನುನುಗಳನ್ನು ಧಿಕ್ಕರಿಸುವ ಸಿಕ್ಸ್ ಪ್ಯಾಕ್ ಆಬ್ಸ್ ಹಂಕ್‌ಗಳಿಂದ ಬಾಕ್ಸಾಫೀಸ್‌ನಲ್ಲಿ ಸೋಲು ಅನುಭವಿಸಿದರು. ಫೋಟೊಶಾಪ್ ಮಾಡಿದ ಐಟಮ್ ಸಾಂಗ್‌ಗಳಿಂದ ಕೇವಲ ಸೆಕ್ಸಿಸಂ ಬಿಂಬಿಸುವ ಮತ್ತು ದೇಶಪ್ರೇಮದ ಅದೇ ಹಳೆಯ ಸಾಂಪ್ರದಾಯಿಕ ಪ್ರಾತಿನಿಧ್ಯದಿಂದ ಸೋತರು (ನೀವು ಅರ್ಥ ಮಾಡಿಕೊಳ್ಳಬೇಕು, ಬಾಕ್ಸ್ ಆಫೀಸ್‌ನಲ್ಲಿ ಸೋಲು ಎಂದರೆ ಬಾಲಿವುಡ್‌ನಲ್ಲಿನ ಬಹುಪಾಲು ಹೂಡಿಕೆಯು ನಮ್ಮನ್ನು ವಿಷವರ್ತುಲದಲ್ಲಿ ಸುತ್ತುವರಿದಿರುವ ವಿಜಯಶಾಲಿಗಳ ಮೇಲೆಯೇ ಆಗಿರುತ್ತದೆ).

    ಹಳ್ಳಿಯ ಪ್ರದೇಶಕ್ಕೆ ದಿವಂಗತ ನಟ ಇರ್ಫಾನ್ ಖಾನ್ ಹೆಸರು ಇಟ್ಟ ಗ್ರಾಮಸ್ಥರುಹಳ್ಳಿಯ ಪ್ರದೇಶಕ್ಕೆ ದಿವಂಗತ ನಟ ಇರ್ಫಾನ್ ಖಾನ್ ಹೆಸರು ಇಟ್ಟ ಗ್ರಾಮಸ್ಥರು

    ನಮಗೆ ಮನರಂಜನೆ ಬೇಕಷ್ಟೇ!

    ನಮಗೆ ಮನರಂಜನೆ ಬೇಕಷ್ಟೇ!

    ಏಕೆಂದರೆ ನಾವು ಪ್ರೇಕ್ಷಕರು ಅದನ್ನೇ ಬಯಸುತ್ತೇವೆ, ಅದನ್ನು ಎಂಜಾಯ್ ಮಾಡಿದ್ದೇವೆ. ನಾವು ಕೇಳುತ್ತಿರುವುದು ಬರಿ ಮನರಂಜನೆ ಮತ್ತು ಆಲೋಚನೆಯ ಸುರಕ್ಷತೆ. ಹೀಗಾಗಿ ವಾಸ್ತವದೆಡೆಗಿನ ನಮ್ಮ ದುರ್ಬಲ ಕಲ್ಪನೆಗಳನ್ನು ಛಿದ್ರಗೊಳಿಸಲು ಹೆದರುತ್ತೇವೆ. ಈ ಕಾರಣದಿಂದ ನಮ್ಮ ಗ್ರಹಿಕೆಯಲ್ಲಿ ಬದಲಾವಣೆಯನ್ನು ಸ್ವೀಕರಿಸುವುದಿಲ್ಲ. ಸಿನಿಮಾದ ಸಮೃದ್ಧಿಯನ್ನು ಹೊರತೆಗೆಯುವ ಮತ್ತು ಮಾನವೀಯತೆ ಹಾಗೂ ಅಸ್ತಿತ್ವವಾದದ ಮೇಲೆ ಅದನ್ನು ಅಳವಡಿಸುವ ಎಲ್ಲ ಪ್ರಯತ್ನಗಳನ್ನೂ ಸಾಧ್ಯವಾದಷ್ಟೂ ಅಲಕ್ಷಿಸಲಾಗಿದೆ.

    ಹೊಸ ಪರಿಮಳ ಬರುತ್ತಿದೆ...

    ಹೊಸ ಪರಿಮಳ ಬರುತ್ತಿದೆ...

    ಈಗ ಒಂದು ಅವಕಾಶವಿದೆ. ಗಾಳಿಯಲ್ಲಿ ಹೊಸ ಘಮಲು ಇದೆ. ಹೊಸ ಯುವಜನತೆ ಹೊಸ ಅರ್ಥ ಹುಡುಕುತ್ತಿದ್ದಾರೆ. ನಾವು ನಮ್ಮ ನೆಲಕ್ಕೆ ಅಂಟಿಕೊಳ್ಳಬೇಕು. ಈ ಆಳವಾದ ಅರ್ಥವನ್ನು ಹೆಕ್ಕುವ ದಾಹವನ್ನು ಮತ್ತೆ ಹತ್ತಿಕ್ಕುವಂತಾಗಬಾರದು. ಕಲ್ಕಿ (ಕಲ್ಕಿ ಕೊಚಿನ್) ತಮ್ಮ ಕೂದಲುಗಳನ್ನು ಚಿಕ್ಕದಾಗಿ ಕತ್ತರಿಸಿಕೊಂಡಾಗ ಹುಡುಗನಂತೆ ಕಾಣಿಸುತ್ತಾರೆ ಎಂದು ಟ್ರೋಲ್ ಮಾಡಿದಾಗ ಕೆಟ್ಟ ಬೇಸರ ಮೂಡಿತ್ತು. ಇದು ಸಾಮರ್ಥ್ಯವೊಂದರ ಪರಿಶುದ್ಧ ಹತ್ತಿಕ್ಕುವಿಕೆ.

    ಸುಶಾಂತ್ ಸಾವಿನ ಹಿನ್ನೆಲೆಯಲ್ಲಿ

    ಸುಶಾಂತ್ ಸಾವಿನ ಹಿನ್ನೆಲೆಯಲ್ಲಿ

    ಸುಶಾಂತ್ ಅವರ ಸಾವು ರಾಜಕೀಯ ಚರ್ಚೆಯ ಸಡಗರವಾಗಿಬಿಟ್ಟಿದೆ ಎಂದು ನನಗೆ ಕೋಪವುಂಟಾಗಿದ್ದರೂ ದಾವೋಯಿಸಂನ ಮಾರ್ಗದಲ್ಲಿ ನಮಗೆ ಅದರಲ್ಲಿ ಸಕಾರಾತ್ಮಕ ಬದಲಾವಣೆ ಕಂಡರೆ ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಾದ-ವಿವಾದ ಚರ್ಚೆಗಳ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ.

    English summary
    Demised bollywood actor Irrfan Khan's son Babil Khan in Instagram wrote that, my father was defeated at box office by hunks with six-pack abs.
    Saturday, July 11, 2020, 9:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X