For Quick Alerts
  ALLOW NOTIFICATIONS  
  For Daily Alerts

  ಕಣ್ಣೀರು ತರಿಸದೇ ಇರದು ಇರ್ಫಾನ್ ಖಾನ್ ಪತ್ನಿ ಬರೆದ ಭಾವುಕ ಪತ್ರ

  |

  ನಟ ಇರ್ಫಾನ್ ಖಾನ್ ಅಗಲಿ ಎರಡು ದಿನವಾಗಿದೆ. ಕುಟುಂಬದವರ, ಅಭಿಮಾನಿಗಳ ಕಣ್ಣೀರ ಪಸೆ ಇನ್ನೂ ಮಾಸಿಲ್ಲ. ಈ ಮಧ್ಯೆ ಇರ್ಫಾನ್ ಪತ್ನಿ ಸುತಾಪಾ ಬರೆದ ಪತ್ರ ತೇಲಿ ಬಂದಿದೆ. ಭಾರವಾದ ಮನಸ್ಸುಗಳನ್ನು ಇನ್ನಷ್ಟು ಭಾರಗೊಳಿಸುತ್ತಿದೆ ಈ ಪತ್ರ.

  ಕನ್ನಡ ಚಿತ್ರ ಒಂದರಲ್ಲಿ ನಟಿಸಬೇಕಿತ್ತು ಇರ್ಫಾನ್ , ಕಥೆ ಕೂಡ ಇಷ್ಟ ಪಟ್ಟಿದ್ದರು | Irrfan khan

  'ಸುತಾಪಾ ಪುತ್ರರಾದ ಬಾಬಿಲ್ ಮತ್ತು ಅಯಾನ್ ಕಡೆಯಿಂದ' ಎನ್ನುವ ಒಕ್ಕಣೆಯೊಂದಿಗೆ ಇರ್ಫಾನ್ ಅವರ ಟ್ವಿಟ್ಟರ್ ಖಾತೆಯಿಂದಲೇ ಈ ಬಹಿರಂಗ ಪತ್ರ ಪೋಸ್ಟ್ ಆಗಿದೆ.

  ಇರ್ಫಾನ್ ಗೆ ಕ್ಯಾನ್ಸರ್ ಪತ್ತೆ ಆದಾಗಿನಿಂದ ಆರಂಭವಾದ ಅವರ ನೋವಿನ ಪಯಣದ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಪಯಣದಲ್ಲಿ ಎದುರಿಗೆ ಸಿಕ್ಕವರು, ಕೈಹಿಡಿದು ನಡೆಸಿದವರೆಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

  ಇಡೀಯ ಜಗತ್ತೇ ನಮ್ಮ ದುಖಃದಲ್ಲಿ ಭಾಗಿಯಾಗಿ ಇದು ಅವರಿಗಾದ ವೈಯಕ್ತಿಕ ನಷ್ಟ ಎಂದುಕೊಳ್ಳುತ್ತಿರುವಾಗ ಇದನ್ನು ಕುಟುಂಬದ ಹೇಳಿಕೆ ಎಂದು ಹೇಗೆ ಸೀಮಿತಗೊಳಿಸಲಿ. ನಾನು ಒಬ್ಬಂಟಿಯಾದೆ ಎಂದು ಹೇಗೆ ಹೇಳಲಿ, ಇಷ್ಟೋಂದು ಮಂದಿ ನಮ್ಮ ಕುಟುಂಬದವರು ಜೊತೆಗಿರುವಾಗ ಎಂದಿದ್ದಾರೆ ಸುತಾಪಾ.

  ಇಂಥಹಾ ಸಂದರ್ಭವನ್ನು ವಿಸ್ಮಯ ಎನ್ನುತ್ತಿದ್ದರು ಇರ್ಫಾನ್

  ಇಂಥಹಾ ಸಂದರ್ಭವನ್ನು ವಿಸ್ಮಯ ಎನ್ನುತ್ತಿದ್ದರು ಇರ್ಫಾನ್

  'ಇರ್ಫಾನ್ ಇಲ್ಲ ಎನ್ನುವುದು ನಮಗೆ ನಂಬಲಾಗದಂತಹಾ ಸಂದರ್ಭ. ಇಂಥಹಾ ಸಂದರ್ಭವನ್ನು ಇರ್ಫಾನ್ ಮಾತಲ್ಲೇ ಹೇಳಬೇಕೆಂದರೆ 'ವಿಸ್ಮಯ ಘಳಿಗೆ'. ಇರ್ಫಾನ್ ಗೆ ಒಂದೇ ಆಯಾಮದ ವಾಸ್ತವ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಈ ರೀತಿಯ ವಿಸ್ಮಯಗಳನ್ನು ಆತ ಇಷ್ಟಪಡುತ್ತಿದ್ದ' ಎಂದು ನೋವಿನಲ್ಲೂ ತಮಾಷೆಯಾಗಿ ಬರೆದಿದ್ದಾರೆ ಸುತಾಪಾ.

  ವೈದ್ಯರ ಚಿತ್ರಕತೆಗೆ ಇರ್ಫಾನ್ ಅಭಿನಯಿಸುತ್ತಿದ್ದಾರೆ ಎನಿಸುತ್ತಿತ್ತು

  ವೈದ್ಯರ ಚಿತ್ರಕತೆಗೆ ಇರ್ಫಾನ್ ಅಭಿನಯಿಸುತ್ತಿದ್ದಾರೆ ಎನಿಸುತ್ತಿತ್ತು

  'ನಮ್ಮ ಜೀವನ ಒಂದು ಸುಂದರವಾದ ಸಿನಿಮಾ, ಯಾವಾಗ ಕ್ಯಾನ್ಸರ್ ಎಂಬ ಕರೆಯದೇ ಬಂದ ಅತಿಥಿಯ ಪಾತ್ರ ಪ್ರವೇಶವಾಯಿತೋ ಆಗ ನೋವಲ್ಲೂ ಪ್ರೀತಿಯನ್ನು ಕಾಣಲು ಪ್ರಾರಂಭಿಸಿದೆ ನಾನು. ವೈದ್ಯರು ಹೇಳುತ್ತಿದ್ದೆಲ್ಲಾ ಚಿತ್ರಕತೆಯಂತೆ ಭಾಸವಾಗಲು ಆರಂಭವಾಯಿತು. ಅವರ ಚಿತ್ರಕತೆಗೆ ತಕ್ಕಂತೆ ಇರ್ಫಾನ್ ನಟಿಸುತ್ತಾರೆನಿಸುತ್ತಿತ್ತು' ಕ್ಯಾನ್ಸರ್ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಸುತಾಪಾ.

  ಕೆಲವು ಅದ್ಭುತ ವ್ಯಕ್ತಿಗಳನ್ನು ನಾವು ಭೇಟಿಯಾದೆವು

  ಕೆಲವು ಅದ್ಭುತ ವ್ಯಕ್ತಿಗಳನ್ನು ನಾವು ಭೇಟಿಯಾದೆವು

  ಈ ಪಯಣದಲ್ಲಿ ನಾವು ಕೆಲವು ಅದ್ಭುತ ವ್ಯಕ್ತಿಗಳನ್ನು ಭೇಟಿಯಾದೆವು. ನಮ್ಮ ಕೈಹಿಡಿದು ನಡೆಸಿದ ಡಾ.ನಿತೇಶ್ ರೊಹ್ಟಗಿ, ಲಂಡನ್‌ನ ಡಾ.ಡಾನ್ ಕ್ರೆಲ್ ಮತ್ತು ಡಾ.ಶಿದ್ರವಿ. ನನ್ನ ಹೃದಯಬಡಿತ ನನ್ನನ್ನು ಕತ್ತಲಲ್ಲಿ ನಡೆಸಿದ ಬೆಳಕು ಡಾ.ಸೇವಂತಿ ಲಿಮಾಯೆ ಇವರನ್ನೆಲ್ಲಾ ಮರೆಯುವಂತಿಲ್ಲ. ಈ ಪಯಣ ಎಷ್ಟು ನೋವು, ಉತ್ಸಾವ, ದುಖಃ, ಆಶ್ಚರ್ಯ ತುಂಬಿದ್ದು ಎಂದು ಹೇಳಲಸಾಧ್ಯ ಎಂದಿದ್ದಾರೆ ಸುತಾಪಾ.

  ''ಜೀವನ ಸಿನಿಮಾ ಅಲ್ಲ, ಇಲ್ಲಿ ರೀಟೇಕ್ಸ್ ಇರುವುದಿಲ್ಲ''

  ''ಜೀವನ ಸಿನಿಮಾ ಅಲ್ಲ, ಇಲ್ಲಿ ರೀಟೇಕ್ಸ್ ಇರುವುದಿಲ್ಲ''

  'ನಮ್ಮದು ಮದುವೆಯಲ್ಲ, ಅದು ಒಂದಾಗುವಿಕೆ. ನನ್ನ ಕುಟುಂಬವು ಬೋಟ್ ಒಂದರಲ್ಲಿ ಹೋಗುತ್ತಿರುವುದನ್ನು ಕಲ್ಪನೆ ಮಾಡಿಕೊಳ್ಳುತ್ತೇನೆ. ಮಕ್ಕಳಾದ ಅಯಾನ್, ಬಾಬಿಲ್ ಅವರುಗಳು ಅಪ್ಪ ಇರ್ಫಾನ್ ಮಾರ್ಗದರ್ಶನದಲ್ಲಿ ಬೋಟನ್ನು ಮುನ್ನಡೆಸುವುದನ್ನು ಕಲ್ಪನೆ ಮಾಡಿಕೊಳ್ಳುತ್ತೇನೆ. ಅಪ್ಪ ಹೇಳುತ್ತಾರೆ 'ಹೇ ಅಲ್ಲಲ್ಲ ಇಲ್ಲಿ, ಹೀಗೆ ತಿರುಗಿಕೊಳ್ಳಿ, ಅಲ್ಲಿಗೆ ಹೋಗಬೇಡಿ'. ಆದರೇನು ಮಾಡುವುದು ಜೀವನ ಸಿನಿಮಾ ಅಲ್ಲ ಇಲ್ಲಿ ರೀಟೇಕ್ಸ್ ಇರುವುದಿಲ್ಲ''.

  ಅಪ್ಪ ಹೇಳಿಕೊಟ್ಟ ಪಾಠಗಳು ಮಕ್ಕಳಿಗೆ ಮನನವಾಗಿವೆ

  ಅಪ್ಪ ಹೇಳಿಕೊಟ್ಟ ಪಾಠಗಳು ಮಕ್ಕಳಿಗೆ ಮನನವಾಗಿವೆ

  ಅಪ್ಪ ಹೇಳಿಕೊಟ್ಟ ಪಾಠಗಳ ಬಗ್ಗೆ ನಾನು ಮಕ್ಕಳಿಗೆ ಕೇಳುತ್ತೇನೆ, ಬಾಬಿಲ್ ಹೇಳುತ್ತಾನೆ, ಅನಿಶ್ಚತತೆ ಒಪ್ಪಿಸಿಕೊಳ್ಳುವ ಬದಲಿಗೆ ನಿನ್ನ ಮೇಲೆ ನಂಬಿಕೆ ಇಡು ಎಂದು ಅಪ್ಪ ಹೇಳಿಕೊಟ್ಟಿದ್ದಾರೆ ಎನ್ನುತ್ತಾನೆ. ಆಯನ್, ಯೋಚನೆಯನ್ನು ನೀನು ನಿಯಂತ್ರಿಸು ಅದು ನಿನ್ನನ್ನು ನಿಯಂತ್ರಿಸಲು ಬಿಡಬೇಡ ಎನ್ನುತ್ತಾನೆ ಎಂದು ಅಪ್ಪ ಹೇಳಿಕೊಟ್ಟ ಪಾಠಗಳನ್ನು ಹೇಳಿದ್ದಾರೆ ಸುತಾಪಾ.

  ರಾತ್‌ ಕಿ ರಾಣಿ ಮರದ ಪರಿಮಳ ತಾಗುತ್ತದೆ

  ರಾತ್‌ ಕಿ ರಾಣಿ ಮರದ ಪರಿಮಳ ತಾಗುತ್ತದೆ

  ಇರ್ಫಾನ್‌ ಅನ್ನು ಮಣ್ಣಾಗಿಸಿದ ಜಾಗದಲ್ಲಿ ಆತನ ಇಷ್ಟದ 'ರಾತ್‌ ಕಿ ರಾನಿ' ಸಸಿ ನೆಡುವಾಗ ಕಣ್ಣೀರು ತಡೆಯಲಾಗಲಿಲ್ಲ. ಸ್ವಲ್ಪ ಸಮಯ ಹಿಡಿಯುತ್ತದೆ, ಆದರೆ ಆ ಗಿಡ ಬೆಳೆದು ಅದರ ಪರಿಮಳ ಸುತ್ತಲೂ ಹರಡಿ ಅವರ ಅಭಿಮಾನಿಗಳಾದ ನಮ್ಮ ಕುಟುಂಬದವರನ್ನು ತಾಕುತ್ತದೆ ಎಂದು ಭಾವನಾತ್ಮಕ ಪತ್ರವನ್ನು ಅಂತ್ಯಮಾಡಿದ್ದಾರೆ ಸುತಾಪಾ.

  English summary
  Irrfan Khan's wife Sutapa writes emotional letter about his husband and their journey of this 2 and half year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X