For Quick Alerts
  ALLOW NOTIFICATIONS  
  For Daily Alerts

  'ಮತ್ತೆ ಸಿಗೋಣ, ಮಾತನಾಡೋಣ...': ಇರ್ಫಾನ್ ಖಾನ್ ನೆನಪಲ್ಲಿ ಪತ್ನಿಯ ಹೃದಯಸ್ಪರ್ಶಿ ಬರಹ

  |

  ಬಾಲಿವುಡ್‌ ಅಲ್ಲದೆ, ಹಾಲಿವುಡ್‌ನಲ್ಲಿಯೂ ಮಿಂಚಿದ್ದ ಖ್ಯಾತ ನಟ ಇರ್ಫಾನ್ ಖಾನ್ ನಮ್ಮನ್ನು ಅಗಲಿ ಒಂದು ತಿಂಗಳು ಕಳೆದಿದೆ. ಏಪ್ರಿಲ್ 29ರಂದು ಇರ್ಫಾನ್ ಕೊನೆಯುಸಿರೆಳೆದಿದ್ದರು. ಅವರ ಹಠಾತ್ ನಿಧನಕ್ಕೆ ಇಡೀ ಚಿತ್ರರಂಗ ಮತ್ತು ಸಿನಿಮಾ ಪ್ರಿಯರು ಕಂಬನಿ ಮಿಡಿದಿದ್ದರು. ಜಗತ್ತಿನಾದ್ಯಂತ ಅವರ ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದರು.

  ಕನ್ನಡ ಚಿತ್ರ ಒಂದರಲ್ಲಿ ನಟಿಸಬೇಕಿತ್ತು ಇರ್ಫಾನ್ , ಕಥೆ ಕೂಡ ಇಷ್ಟ ಪಟ್ಟಿದ್ದರು | Irrfan khan

  ಪತಿಯನ್ನು ಕಳೆದುಕೊಂಡ ಅವರ ಪತ್ನಿ ಸುತಾಪಾ ಸಿಕ್ದರ್, ಭಾವುಕ ಬರಹದ ಮೂಲಕ ಅವರನ್ನು ನೆನಪಿಸಿಕೊಂಡಿದ್ದರು. ಇರ್ಫಾನ್ ಅವರಿಲ್ಲದೆ ಒಂದು ತಿಂಗಳು ಕಳೆದ ಅವರು ಶುಕ್ರವಾರ ಎರಡು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಮತ್ತೊಂದು ಹೃದಯಸ್ಪರ್ಶಿ ಬರಹವೊಂದನ್ನು ಬರೆದಿದ್ದಾರೆ. ಇದು ಇರ್ಫಾನ್ ಖಾನ್ ಅವರನ್ನು ಸುತಾಪಾ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ, ಅವರ ನೆನಪಲ್ಲಿ ಕೊರಗುತ್ತಿದ್ದಾರೆ ಎಂಬುದನ್ನು ಈ ಬರಹವೇ ಸೂಚಿಸುತ್ತಿದೆ. ಮುಂದೆ ಓದಿ...

  ಅಲ್ಲಿ ಭೇಟಿ ಮಾಡುತ್ತೇನೆ...

  ಅಲ್ಲಿ ಭೇಟಿ ಮಾಡುತ್ತೇನೆ...

  'ತಪ್ಪು ಮಾಡುವುದು ಮತ್ತು ಸರಿ ಮಾಡುವುದು ಈ ಪರಿಕಲ್ಪನೆಗಳಾಚೆ ಒಂದು ಜಾಗವಿದೆ. ನಾನು ನಿಮ್ಮನ್ನು ಅಲ್ಲಿ ಭೇಟಿ ಮಾಡುತ್ತೇನೆ' ಎಂದು ತಮ್ಮ ಮೂರು ಸಾಲಿನ ಪುಟ್ಟ ಬರಹವನ್ನು ಸುತಾಪಾ ಪ್ರಾರಂಭಿಸಿದ್ದಾರೆ. ಅವರು ಹಂಚಿಕೊಂಡಿರುವ ಎರಡು ಫೋಟೊಗಳಲ್ಲಿ ಒಂದರಲ್ಲಿ ಇರ್ಫಾನ್ ಖಾನ್ ಹಸಿರು ಹುಲ್ಲು ಹಾಸಿನ ಮೇಲೆ ಮಲಗಿ ಕ್ಯಾಮೆರಾ ಕಡೆ ದಿಟ್ಟಿಸುತ್ತಿರುವಂತಿದೆ.

  ಹಳ್ಳಿಯ ಪ್ರದೇಶಕ್ಕೆ ದಿವಂಗತ ನಟ ಇರ್ಫಾನ್ ಖಾನ್ ಹೆಸರು ಇಟ್ಟ ಗ್ರಾಮಸ್ಥರುಹಳ್ಳಿಯ ಪ್ರದೇಶಕ್ಕೆ ದಿವಂಗತ ನಟ ಇರ್ಫಾನ್ ಖಾನ್ ಹೆಸರು ಇಟ್ಟ ಗ್ರಾಮಸ್ಥರು

  ನಾವು ಮತ್ತೆ ಸಿಗುವವರೆಗೂ...

  ನಾವು ಮತ್ತೆ ಸಿಗುವವರೆಗೂ...

  'ಆತ್ಮವು ಆ ಹುಲ್ಲಿನ ಮೇಲೆ ಮಲಗಿಕೊಂಡಾಗ ಜಗತ್ತು ಮಾತನಾಡಲು ಸಾಧ್ಯವಾಗದಷ್ಟು ಹಿರಿದಾಗುತ್ತದೆ. ಇದು ಕೇವಲ ಸಮಯದ ಸಂಗತಿಯಷ್ಟೇ. ಸಿಗೋಣ ಆಗ ಮಾತಾಡೋಣ. ನಾವು ಮತ್ತೆ ಭೇಟಿಯಾಗುವವರೆಗೂ...' ಎಂದು ಸುತಾಪಾ ಬರೆದಿದ್ದಾರೆ.

  ರೂಮಿ ಕವಿತೆಯ ಸಾಲುಗಳು

  ರೂಮಿ ಕವಿತೆಯ ಸಾಲುಗಳು

  ಖ್ಯಾತ ಪರ್ಷಿಯನ್ ಕವಿ ರೂಮಿ ಬರೆದ ಕವಿತೆಯ ಸಾಲುಗಳಿವು. ಈ ಸಾಲುಗಳ ಜತೆಗೆ ಸುತಾಪಾ ಮತ್ತೊಂದು ಫೋಟೊ ಕೂಡ ಶೇರ್ ಮಾಡಿದ್ದಾರೆ. ಅದು ಕೂಡ ಹುಲ್ಲಿನ ಹಿನ್ನೆಲೆ ಹೊಂದಿದ್ದು, ಮುನ್ನೆಲೆಯಲ್ಲಿ ಸುತಾಪಾ ಪತಿ ಇರ್ಫಾನ್ ಖಾನ್ ಅವರ ಜತೆಗೆ ಇದ್ದಾರೆ.

  ಕಣ್ಣೀರು ತರಿಸದೇ ಇರದು ಇರ್ಫಾನ್ ಖಾನ್ ಪತ್ನಿ ಬರೆದ ಭಾವುಕ ಪತ್ರಕಣ್ಣೀರು ತರಿಸದೇ ಇರದು ಇರ್ಫಾನ್ ಖಾನ್ ಪತ್ನಿ ಬರೆದ ಭಾವುಕ ಪತ್ರ

  ಸುದೀರ್ಘ ಬರಹ ಬರೆದಿದ್ದ ಸುತಾಪಾ

  ಸುದೀರ್ಘ ಬರಹ ಬರೆದಿದ್ದ ಸುತಾಪಾ

  ಇರ್ಫಾನ್ ಮೃತಪಟ್ಟ ಎರಡು ದಿನಗಳ ಬಳಿಕ ಸುತಾಪಾ, ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್ ಅವರನ್ನು ಕುರಿತು ಸುದೀರ್ಘ ಪತ್ರ ಬರೆದಿದ್ದರು. ನಮ್ಮದು ಮದುವೆಯಲ್ಲ, ಅದು ಒಂದಾಗುವಿಕೆ. ಜೀವನ ಸಿನಿಮಾ ಅಲ್ಲ, ಇಲ್ಲಿ ರೀಟೇಕ್ಸ್ ಇರುವುದಿಲ್ಲ ಎಂಬ ಸಾಲುಗಳು ಎಂತಹವರ ಕಣ್ಣುಗಳನ್ನೂ ಒದ್ದೆ ಮಾಡುವಂತಿದ್ದವು.

  ಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾದ ಇರ್ಫಾನ್ ಖಾನ್ ಅಭಿನಯದ ಪ್ರಮುಖ 15 ಚಿತ್ರಗಳುಆನ್‌ಲೈನ್‌ನಲ್ಲಿ ವೀಕ್ಷಿಸಬಹುದಾದ ಇರ್ಫಾನ್ ಖಾನ್ ಅಭಿನಯದ ಪ್ರಮುಖ 15 ಚಿತ್ರಗಳು

  English summary
  Sutapa Sikdar remembered her husband Irrfan Khan in an emotional note.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X