For Quick Alerts
  ALLOW NOTIFICATIONS  
  For Daily Alerts

  ಕ್ಯಾಟ್ ನ ಬಿಟ್ಟಿದ್ದೇ ತಡ ಇನ್ನೊಬ್ರ ಜೊತೆ ರಣಬೀರ್ ಗೆ ಕುಛ್ ಕುಛ್?

  By ಸೋನು ಗೌಡ
  |

  ಬಾಲಿವುಡ್ ನಟ-ನಟಿಯರು ಎಷ್ಟು ಬೇಗ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೋ, ಅಷ್ಟೇ ಬೇಗ ಇನ್ನೊಬ್ಬ ಪ್ರಿಯತಮೆ ಅಥವಾ ಪ್ರಿಯತಮನನ್ನು ಕ್ಯಾಚ್ ಮಾಡಿಕೊಳ್ಳುತ್ತಾರೆ. ಅವರಿಗೆ ಹಳೇ ಪ್ರೀತಿಯಿಂದ ನೋವಾಗೋದು, ಅದಕ್ಕೆ ಅವರು ಸೀನ್ ಕ್ರಿಯೇಟ್ ಮಾಡೋದು ಇಂತಹ ಪ್ರಸಂಗ ಯಾರಿಗೂ ಬರೋದಿಲ್ಲ.

  ಲವರ್ ಬಿಟ್ಟು ಹೋದ್ರೆ ಏನಂತೆ, ಇನ್ನೊಬ್ಬ ಅಥವಾ ಇನ್ನೊಬ್ಬಳು ಸಿಗುತ್ತಾರೆ ಅಂತ ಆರಾಮಾಗಿ ಇರುತ್ತಾರೆ. ಇದೀಗ ಈ ವಿಚಾರ ಬಾಲಿವುಡ್ ನ ಖ್ಯಾತ ನಟ ರಣಬೀರ್ ಕಪೂರ್ ಅವರಿಗೆ ಅನ್ವಯಿಸುತ್ತದೆ.

  ಯಾಕೆಂದರೆ ಬಾರ್ಬಿಡಾಲ್ ಕತ್ರಿನಾ ಕೈಫ್ ಅವರ ಜೊತೆ ಬ್ರೇಕ್ ಅಪ್ ಮಾಡಿಕೊಂಡ ನಂತರ, 'ರಾಕ್ ಸ್ಟಾರ್' ನಟ ರಣಬೀರ್ ಕಪೂರ್ ಅವರ ಹೆಸರು ದಕ್ಷಿಣ ಭಾರತದ ಖ್ಯಾತ ನಟಿಯ ಹೆಸರಿನ ಜೊತೆ ತಳುಕು ಹಾಕಿಕೊಂಡಿದೆ.[ಕತ್ರಿನಾ ಜೊತೆ ಲಿಪ್ ಲಾಕ್ ಗೆ ಒಲ್ಲೆ ಎಂದ ರಣಬೀರ್ ಕಪೂರ್]

  ಇದು ಎಷ್ಟು ನಿಜ, ಎಷ್ಟು ಸುಳ್ಳೋ ಗೊತ್ತಿಲ್ಲ ಆದರೆ ಹೊಸ ಜೋಡಿಯ ಬಗ್ಗೆ ಬಿಟೌನ್ ನಲ್ಲಿ ಭಾರಿ ಗುಲ್ಲೆದ್ದಿದ್ದು ಅಂತೂ ಸತ್ಯ. ರಣಬೀರ್ ಕಪೂರ್ ಗೆ ಸಿಕ್ಕ 'ಆ' ಹೊಸ ಗರ್ಲ್ ಫ್ರೆಂಡ್ ಯಾರು?, ಏನ್ಕತೆ, ನೋಡಲು ಮುಂದೆ ಓದಿ.....

  ಹಾಸನ್ ಮನೆತನದ ಬೆಡಗಿ

  ಹಾಸನ್ ಮನೆತನದ ಬೆಡಗಿ

  ಖ್ಯಾತ ನಟ ಕಮಲ್ ಹಾಸನ್ ಅವರ ಮುದ್ದು ಮಗಳು, ನಟಿ ಶ್ರುತಿ ಹಾಸನ್ ಮತ್ತು ಕಪೂರ್ ಮನೆತನದ ರಣಬೀರ್ ಕಪೂರ್ ನಡುವೆ, ಏನೋ 'ಕುಛ್ ಕುಛ್' ಹೋತಾ ಹೈ ಎನ್ನುತ್ತಿವೆ ಬಾಲಿವುಡ್ ಮೂಲಗಳು. ಅಷ್ಟಕ್ಕೂ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡಿಲ್ಲ, ಅಂದಮ್ಯಾಕೆ ಉತ್ತರಕ್ಕೂ-ದಕ್ಷಿಣಕ್ಕೂ ಎತ್ತಣದಿಂದೆತ್ತಣ್ಣಕ್ಕೆ ಸಂಬಂಧವಯ್ಯ ಅಂತ ಎಲ್ಲರಿಗೂ ಅನುಮಾನ ಬರೋದು ಸಹಜ ಬಿಡಿ.['ಮೊಹೆಂಜೋದಾರೊ' ನಟಿ ಪೂಜಾದ್ದು ರಣಬೀರ್ ದ್ದು ಹಳೇ ಪರಿಚಯ]

  ಜಾಹೀರಾತಿನಲ್ಲಿ ಕಮಾಲ್ ಮಾಡಿದ ಜೋಡಿ

  ಜಾಹೀರಾತಿನಲ್ಲಿ ಕಮಾಲ್ ಮಾಡಿದ ಜೋಡಿ

  ಅಂದಹಾಗೆ ಶ್ರುತಿ ಹಾಸನ್ ಮತ್ತು ರಣಬೀರ್ ಕಪೂರ್ ಅವರು ಫಿಲಿಪ್ಸ್ ಬಲ್ಬ್ ಜಾಹೀರಾತಿನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ತದನಂತರ ಇವರಿಬ್ಬರು ಹೆಚ್ಚು ಕ್ಲೋಸ್ ಆಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದರು.['ದಿ ಕಪೂರ್ಸ್' ಖಾನ್ದಾನ್ ನಿಂದ ಕತ್ರೀನಾ ಕಿಕ್ ಔಟ್.!]

  ಫೋನ್ ಗಳು, ಮೆಸೇಜುಗಳು, ಪಾರ್ಟಿಗಳು

  ಫೋನ್ ಗಳು, ಮೆಸೇಜುಗಳು, ಪಾರ್ಟಿಗಳು

  ಅಂದಹಾಗೆ ಇವರಿಬ್ಬರ ಸಂಬಂಧ ಅದ್ಯಾವಾಗ ಗಟ್ಟಿಯಾಯ್ತು, ಆ ದೇವರೇ ಬಲ್ಲ. ನಟಿ ಕತ್ರಿನಾ ಮತ್ತು ರಣಬೀರ್ ಸಂಬಂಧ ಮುರಿದು ಬಿದ್ದ ಮೇಲೆ, ಈ ಜೋಡಿ ಇನ್ನೂ ಹತ್ತಿರವಾಗಿದೆ. ಆಗಾಗ ಫೋನ್ ಕಾಲ್, ಮೆಸೇಜ್ ಗಳಲ್ಲಿ ಗಂಟೆಗಟ್ಟಲೆ ಚಾಟಿಂಗ್ ಮಾಡುತ್ತಾರೆ. ಅಂತ್ಹೆಲ್ಲಾ ಅವರಿಬ್ಬರ ಹತ್ತಿರದ ಮೂಲಗಳು ಪಿಸು-ಪಿಸು ಮಾತಾಡಿಕೊಳ್ಳುತ್ತಿದ್ದಾರೆ.

  ಡೇಟಿಂಗ್ ಮಾಡುತ್ತಿದೆಯಾ ಜೋಡಿ?

  ಡೇಟಿಂಗ್ ಮಾಡುತ್ತಿದೆಯಾ ಜೋಡಿ?

  ಇನ್ನು ಇವರಿಬ್ಬರು ಆಗಾಗ ಭೇಟಿಯಾಗುತ್ತಾರೆ, ಪಾರ್ಟಿ ಮಾಡುತ್ತಾರೆ, ಇತ್ಯಾತಿ ಇತ್ಯಾದಿ ಸುದ್ದಿಗಳು ಇವರಿಬ್ಬರ ಸಂಬಂಧಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿವೆ. ಸದ್ಯಕ್ಕೆ ಎಲ್ಲಾ ಕಡೇ ಬರೀ ಅಂತೆ-ಕಂತೆಗಳ ಸುದ್ದಿ ಹರಿದಾಡಿದ್ದು, ಒಟ್ನಲ್ಲಿ ಇವರಿಬ್ಬರ ಮಧ್ಯೆ ಅದ್ಯಾವ ಬೇಳೆ ಬೇಯುತ್ತಿದೆ ಅಂತ ಯಾರಿಗೂ ಗೊತ್ತಿಲ್ಲ.

  ರಣಬೀರ್ ಕಪೂರ್-ಶ್ರುತಿ ಹಾಸನ್

  ರಣಬೀರ್ ಕಪೂರ್-ಶ್ರುತಿ ಹಾಸನ್

  ಸದ್ಯಕ್ಕೆ ನಟ ರಣಬೀರ್ ಕಪೂರ್ ಅವರು 'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಪ್ರೊಮೋಷನ್ ನಲ್ಲಿ ಬಿಜಿಯಾಗಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ಕೊನೆಯ ವಾರದಲ್ಲಿ ತೆರೆ ಕಾಣಲಿದೆ. ಇನ್ನು ನಟಿ ಶ್ರುತಿ ಹಾಸನ್ ಅವರು 'ಪ್ರೇಮಂ' ಮುಗಿಸಿ, ರಿಲೀಸ್ ಗೆ ಕಾಯುತ್ತಿದ್ದು, 'ಸಿಂಗಂ 3' ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

  English summary
  According to the latest reports, the Kapoor lad, Ranbir Kapoor, has already found the new love of his life and she is none other than Actress Shruti Haasan. Not so long ago, Ranbir & Shruti worked together in an ad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X